ಉದಯರಶ್ಮಿ ದಿನಪತ್ರಿಕೆ
ಇಂಡಿ: ಪಶು ಸಂಗೋಪನಾ ಇಲಾಖೆ ಅಡಿಯಲ್ಲಿ ಜಾನುವಾರುಗಳಿಗೆ ಕಾಲು ಬಾಯಿ ಬೇನೆ ನಿಯಂತ್ರಣಕ್ಕೆ ನಗರ ಸೇರಿದಂತೆ ತಾಲೂಕಿನಲ್ಲಿ ೯ ನೇ ಸುತ್ತಿನ ಲಸಿಕಾ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗಿದೆ ಎಂದು ಹಿರಿಯ ಪಶು ವೈದ್ಯಾಧಿಕಾರಿ ಡಾ. ರಾಜಕುಮಾರ ಅಡಕಿ ತಿಳಿಸಿದ್ದಾರೆ.
ಆಸ್ಪತ್ರೆಯ ಆವರಣದಲ್ಲಿ ಲಸಿಕಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು ೪೭೪೪೩ ಜಾನುವಾರುಗಳಿಗೆ ಲಸಿಕೆ ನೀಡುವ ಗುರಿ ಹೊಂದಲಾಗಿದೆ . ಇಂಡಿ ತಾಲೂಕಿನಲ್ಲಿ ಜಾನುವಾರುಗಳ ಆರೋಗ್ಯದ ದೃಷ್ಟಿಯಿಂದ ಏ. ೨೩ ರಿಂದಲೇ ಲಸಿಕೆ ನೀಡವ ಕಾರ್ಯ ಆರಂಭವಾಗಿದ್ದು ಮೇ ೨೨ ರ ವರೆಗೆ ನಡೆಯಲಿದೆ ಎಂದರು.
ಲಸಿಕೆ ನೀಡಲು ಇಂಡಿ ತಾಲೂಕಿನಲ್ಲಿ ಒಟ್ಟು ೧೨ ಸುಪರವಾಯಿಜರ ಮತ್ತು ೪೮ ಲಸಿಕೆದಾರರು ಕಾರ್ಯನಿರ್ವಹಿಸುವರು.
ಲಸಿಕೆದಾರರು ಗ್ರಾಮೀಣ ಭಾಗದಲ್ಲಿ ಮನೆ ಮನೆ ತೆರಳಿ ತೋಟ ಮತ್ತು ಹೊಲ ಗದ್ದೆ ರೈತರ ವಸತಿ ಕೇಂದ್ರಕ್ಕೆ ಸಂಪರ್ಕಿಸಿ ಲಸಿಕೆ ನೀಡಿ ಅಭಿಯಾನ ಯಶಸ್ವಿಗೊಳಿಸುವರು. ಸಿಬ್ಬಂದಿಗೆ ಲಸಿಕೆ ನೀಡುವ ಕುರಿತು ತರಬೇತಿ ನೀಡಲಾಗಿದ್ದು ನೂರಕ್ಕೆ ನೂರರಷ್ಟು ಗುರಿ ಹೊಂದಲಾಗಿದೆ ಎಂದರು. ಲಸಿಕೆ ನೀಡಲು ಸಿಬ್ಬಂದಿಗೆ ಹಳದಿ ಬಣ್ಣದ ಟಿ ಶರ್ಟ ನೀಲಿ ಬಣ್ಣದ ಟೊಪ್ಪಿಗೆ ವಿತರಣೆ ಮಾಡಲಾಗಿದೆ. ರೈತರು ಸಾಕಿದ ಪ್ರತಿ ಜಾನುವಾರುಗಳಿಗೆ ಕಡ್ಡಾಯ ಲಸಿಕೆ ನೀಡಿ ಅವುಗಳ ಆರೋಗ್ಯ ರಕ್ಷಣೆ ಮತ್ತು ಕೃಷಿಕರ ಜೀವನೋಪಾಯ ಸಂರಕ್ಷಿಸಲು ಯಾವದೇ ತೊಂದರೆಯಾಗದಂತೆ ದಾಸ್ತಾನು ಸಂಗ್ರಹಿಸಲಾಗಿದೆ ಎಂದರು.
ಡಾ. ಪ್ರಕಾಶ ಮಿರ್ಜಿ, ಡಾ. ರವಿ ಖಂಡೆಕರ, ರಾಮಣ್ಣ ಉಪ್ಪಾರ, ಜಾವೇದ ಬಾಗವಾನ, ಬಸವರಾಜ ಮುಂಜಿ, ಶ್ರೀಕಾಂತ ಮೂಡಲಗಿ, ಡಾ. ಪ್ರಶಾಂತ ಬಳುಂಡಗಿ, ಡಾ. ಲಕ್ಷೀಶ ಕಟ್ಟಿಮನಿ,ಸಂತೋಷ ಚವ್ಹಾಣ ಮತ್ತಿತರಿದ್ದರು.

