Subscribe to Updates
Get the latest creative news from FooBar about art, design and business.
Author: editor.udayarashmi@gmail.com
ಉದಯರಶ್ಮಿ ದಿನಪತ್ರಿಕೆ ಆಲಮೇಲ: ಕಳೆದ ಐದಾರು ದಿನಗಳಿಂದ ಆಲಮೇಲ ಪಟ್ಟಣದಲ್ಲಿ ರಸ್ತೆ ತೆರವು ಗೊಳಿಸುವಂತೆ ಆಗ್ರಹಿಸಿ ನಡೆಯುತ್ತಿರುವ ಅನಿರ್ದಿಷ್ಟಾವಧಿ ಹೋರಾಟಕ್ಕೆ ಮಾಜಿ ಶಾಸಕ ರಮೇಶ್ ಭೂಸನೂರ ಹೋರಾಟದಲ್ಲಿ ಪಾಲ್ಗೊಂಡು ತಮ್ಮ ಬೆಂಬಲವನ್ನು ವ್ಯಕ್ತಪಡಿಸಿದ್ದರು.ಈ ಸಂದರ್ಭದಲ್ಲಿ ಮಾತನಾಡಿದ ಅವರು ಹಿಂದಿನ ಹಲವಾರು ಹೋರಾಟಗಳಲ್ಲಿ ನಾನು ಭಾಗವಹಿಸಿ ನನ್ನ ಬೆಂಬಲ ವ್ಯಕ್ತಪಡಿಸಿದ್ದಲ್ಲದೆ ಆಲಮೇಲ ಪಟ್ಟಣವನ್ನು ತಾಲೂಕು ಮಾಡಲು ಮತ್ತು ತಾಲೂಕು ಕಚೇರಿಗಳನ್ನು ತೆರೆಯಲು ನನ್ನ ಅಧಿಕಾರ ಅವಧಿಯಲ್ಲಿ ಸಾಧ್ಯವಾದಷ್ಟು ಪ್ರಯತ್ನವನ್ನು ಮಾಡಿದ್ದೇನೆ ಈಗಲೂ ಕೂಡ ಆಲಮೇಲದ ಜನತೆಯ ಜೊತೆಗೆ ಹೋರಾಟದಲ್ಲಿ ಪಾಲ್ಗೊಳ್ಳುವ ಮೂಲಕ ನನ್ನ ನೈತಿಕ ಬೆಂಬಲವನ್ನು ವ್ಯಕ್ತಪಡಿಸಿದ್ದೇನೆ ಇಲ್ಲಿನ ಜನರ ಬೇಡಿಕೆಯಾಗಿರುವ ರಸ್ತೆ ಅಗಲೀಕರಣ ಮತ್ತು ರಸ್ತೆ ನಿರ್ಮಾಣ ಮಾಡುವುದಕ್ಕಾಗಿ ನಡೆಯುತ್ತಿರುವ ಹೋರಾಟದಲ್ಲಿ ನಾನು ನಿಮ್ಮೊಂದಿಗೆ ಸದಾ ಇರುತ್ತೇನೆ ಎಂದರು.ಈ ಸಂದರ್ಭದಲ್ಲಿ ಹರೀಶ ಎಂಟಮಾನ, ಸಂಜು ಎಂಟಮಾನ, ಸೋಮನಾಥ ಮೇಲಿನಮನಿ, ಅಪ್ಪು ಶೆಟ್ಟಿ, ಪಿ.ಟಿ.ಪಾಟೀಲ, ಗುಂಡು ಮೇಲಿನಮನಿ, ಮದನ ರಜಪೂತ, ಶ್ರೀಶೈಲ ಭೋವಿ ಇದ್ದರು.
ಆಲಮೇಲ ಆರನೇ ದಿನಕ್ಕೆ ಕಾಲಿಟ್ಟ ಹೋರಾಟ | ಉಗ್ರ ಹೋರಾಟದ ಎಚ್ಚರಿಕೆ ಕೊಟ್ಟ ರಮೇಶ ಬಂಟನೂರ ಉದಯರಶ್ಮಿ ದಿನಪತ್ರಿಕೆ ಆಲಮೇಲ: ಸಾಹಿತ್ಯದ ನೆಲೆಬೀಡು, ದೇಸಗತಿ ಮನೆತನದಲ್ಲಿ ಬರುವ ಆಲಮೇಲ, ಹಲವಾರು ವರ್ಷಗಳ ಹಿಂದೆ ಕಲಾದಗಿ ಎಂಬ ಜಿಲ್ಲೆ ಇತ್ತು ಆವಾಗ ಆಲಮೇಲ ಪರಗಣವಾಗಿತ್ತು ಅಂದಿನ ಕಾಲದಲ್ಲಿ ಆಲಮೇಲ ನಗರಕ್ಕೆ ಅನೇಕ ದಾರಿಗಳು ಇದ್ದವು ಅವುಗಳಲ್ಲಿ ಕೆಲವು ದಾರಿಗಳು ರಾಜಕೀಯ ಇಚ್ಚಾಶಕ್ತಿಯ ಕೊರತೆ ಯಿಂದ ಮುಚ್ಚಿಹೋದವು ಎಂದು ಆಲಮೇಲ ಪಟ್ಟಣದ ನಾಗರಿಕ ವೇದಿಕೆಯ ಅಧ್ಯಕ್ಷ ರಮೇಶ ಬಂಟನೂರ ಹೇಳಿದರು.ಅರು ಪ್ರಗತಿಪರ ಸಂಘಟನೆಗಳ ಒಕ್ಕೂಟದಿಂದ ನಡೆಯುತ್ತಿರುವ ಅನಿಧಿಷ್ಟಾವಧಿ ಧರಣಿಯ 5ನೇ ದಿನದ ಸತ್ಯಾಗ್ರಹದಲ್ಲಿ ಭಾಗವಹಿಸಿ ಮಾತನಾಡಿದ ಅವರು ದೇಸಗತಿ ಮನೆತನದಲ್ಲಿ ಇದ್ದ ಈ ಪಟ್ಟಣವು ಊರಿನ ನಾಲ್ಕು ದಿಕ್ಕಿನಲ್ಲಿ ನಾಲ್ಕು ಅಗಸಿಗಳಿದ್ದವು ದೇವರ ಅಗಸಿ ಮೂಲಕ ಹೋಗುವ ರಸ್ತೆಗೆ ಊರಿನ ದಿಬ್ಬದ ಮೇಲೆ ಬಿಳಿಗುಡಿಯ ಆರಾದ್ಯದೈವ ಪೀರ ಗಾಲಿಸಾಬ ನೆಲೆಸಿದ್ದು ಈ ದರ್ಗಾಕ್ಕೆ ಹೋಗಲು ಆಗ ವಿಶಾಲವಾದ ರಸ್ತೆ ಇತ್ತು ಈಗ ಅದು ಒತ್ತುವರಿ…
ಚಂದ್ರಶೇಖರ ನುಗ್ಗಲಿ ಅವರಿಗೆ ಶಿಕ್ಷಕರ ಸಂಘದ ರಾಜ್ಯಾಧ್ಯಕ್ಷ ಪಟ್ಟ- ಅಭಿನಂದನಾ ಸಮಾರಂಭದಲ್ಲಿ ಸನ್ಮಾನದ ಝೇಂಕಾರ | ಬೈಕ್ ರ್ಯಾಲಿ ಹೋಂಕಾರ | ಮುಗಿಲು ಮುಟ್ಟಿದ ಶಿಕ್ಷಕ-ಅಭಿಮಾನಿಗಳ ಸಂಭ್ರಮ ಉದಯರಶ್ಮಿ ದಿನಪತ್ರಿಕೆ ನಿಡಗುಂದಿ: ಅವಳಿ ಜಿಲ್ಲೆಯ ಶಿಕ್ಷಕರ ಸಹಕಾರ, ರಾಜ್ಯದ ಶಿಕ್ಷಕರ ಸಮಸ್ಯೆಗಳಿಗೆ ಪ್ರಾಮಾಣಿಕ ಸ್ಪಂದನೆಯ ಕಾರಣ ರಾಜ್ಯದ ೧.೮೦ ಲಕ್ಷ ಸದಸ್ಯರುಳ್ಳ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಚುಕ್ಕಾಣಿ ಹಿಡಿಯಲು ಸಾಧ್ಯವಾಯಿತು ಎಂದು ಸಂಘದ ನೂತನ ರಾಜ್ಯ ಘಟಕದ ಅಧ್ಯಕ್ಷ ಚಂದ್ರಶೇಖರ ನುಗ್ಗಲಿ ಹೇಳಿದರು.ಪಟ್ಟಣದಲ್ಲಿ ಭಾನುವಾರ ನಿಡಗುಂದಿ ತಾಲ್ಲೂಕು ಶಿಕ್ಷಕರು, ವಿವಿಧ ಸಂಘ ಸಂಸ್ಥೆಗಳು ಏರ್ಪಡಿಸಿದ್ದ ಅಭಿನಂದನಾ ಸಮಾರಂಭದಲ್ಲಿ ೨೦೦ ಕ್ಕೂ ಹೆಚ್ಚು ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.ಶಿಕ್ಷಕರ ಬಹು ಬೇಡಿಕೆಯ ವೃಂದ ಮತ್ತು ನೇಮಕಾತಿ ನಿಯಮಾವಳಿ ತಿದ್ದುಪಡಿಯ ಸಮಸ್ಯೆಯನ್ನು ಇದೇ ಸೆ.೫ ಶಿಕ್ಷಕರ ದಿನಾಚರಣೆಯೊಳಗೆ ಬಗೆಹರಿಸಲಾಗುವುದು, ೫೮ ಸಾವಿರ ಪದವಿಧರ ಪಿ.ಎಸ್.ಟಿ ಶಿಕ್ಷಕರಿಗೆ ಒಂದು ವೇತನ ಬಡ್ತಿ ನೀಡುವಿಕೆ, ಎಲ್.ಬಿ.ಎ (ಪಠ್ಯ ಆಧಾರಿತ ಚಟುವಟಿಕೆ) ಯಲ್ಲಿನ ಘಟಕ ಪರೀಕ್ಷಾ…
ಲೇಖನ- ಡಾ.ಮಲ್ಲಿಕಾರ್ಜುನ ಎಸ್ ಆಲಮೇಲಯಡ್ರಾಮಿಕಲಬುರಗಿ ಜಿಲ್ಲೆ ಉದಯರಶ್ಮಿ ದಿನಪತ್ರಿಕೆ ಶ್ರಾವಣ ಮಾಸವು, ಅನಾದಿ ಕಾಲದಿಂದಲೂ ಹಿಂದುಗಳಿಗೆ ಪರಮ ಪವಿತ್ರವಾದ ಮಾಸ, ಒಂದೂ ಪೂಜೆ ಸಹ ನಡೆಯದ ದೇವಾಲಯಗಳಲ್ಲಿ ಭಕ್ತಿಯ ಜೇಂಕಾರ ಮೊಳಗುವದು, ಭಜನೆಗಳ ಗಾನಲಹರಿ ಹರಿಯುವದು, ಹಿಂದೂ ಪಂಚಾಂಗದ ಪ್ರಕಾರ ಎಲ್ಲಾ ಹಬ್ಬಗಳಿಗೆ ಮುನ್ನುಡಿಯಂತೆ ಬರುವ ಹಬ್ಬ ಅದು ನಾಗರ ಪಂಚಮಿ ಅಂದರೆ ತಪ್ಪಾಗಲಾರದು.ಶ್ರಾವಣ ಶುದ್ಧ ಪಂಚಮಿಯಿಂದ ಆಚರಿಸಲ್ಪುಡುವ ಈ ಹಬ್ಬ ಮುಂದೆ ಬರಲಿರುವ, ವರಮಹಾಲಕ್ಷ್ಮಿ ಶ್ರೀ ಕೃಷ್ಣಾಷ್ಟಮಿ, ತಾಯಿಗೌರಿ ಸಮೇತ ಬರುವ ವಿಘ್ನನಿವಾರಕ ಶ್ರೀ ಗಣೇಶ ಚತುರ್ಥಿ,ಗ್ರಾಮೀಣ ಭಾಗದಿ ಆಚರಿಸಲ್ಪಡುವ ಜೊಖ್ಯಾನ (ಜೋಕುಮಾರ) ಅನಂತನ ಹುಣ್ಣಿಮೆ, ತದನಂತರದಿ ಬರುವ ಆದಿಪರಾಶಕ್ತಿಯ ಆರಾಧಿಸಲ್ಪಡುವ ನವರಾತ್ರಿ ಉತ್ಸವ, ಬೆನ್ನಹಿಂದೆಯೇ ಧರೆಯೆಲ್ಲ ಜ್ಯೋತಿರ್ಮಯವಾಗಿಸಲು ಬರುವಳು ಶ್ರೀ ಮಹಾಲಕ್ಷ್ಮಿದೀಪಾವಳಿಗೆ ಹೀಗೆ ಊರಿನ ಜಾತ್ರೆಗಳಿಗೂ ಎಲ್ಲ ಶುಭ ಆಚರಣೆಗಳಿಗೂ ಮೊದಲ ಮೆಟ್ಟಿಲು ನಾಗರ ಪಂಚಮಿ.ನಾಗರ ಪಂಚಮಿಈ ಹಬ್ಬಕ್ಕೆ ಸಂಬಂಧಿಸಿದಂತೆ ಜನಪದ ಮತ್ತು ಪುರಾಣದಲ್ಲಿ ಹಲವು ಕಥೆಗಳಿವೆ. ಜನಪದ ಕಥೆಯ ಪ್ರಕಾರ ನಾಗರ ಪಂಚಮಿ ಬರುವುದು ಮುಂಗಾರಿನ ರಭಸದ…
ಸಂಗ್ರಹ- ಸುಧಾ ಪಾಟೀಲವಿಶ್ವಸ್ಥರುಬಸವ ತಿಳುವಳಿಕೆ ಮತ್ತು ಸಂಶೋಧನ ಕೇಂದ್ರಪುಣೆ ಉದಯರಶ್ಮಿ ದಿನಪತ್ರಿಕೆ ಶರಣ ಮಾಸದ ನಾಲ್ಕನೆಯ ದಿವಸದ ಅನುಭಾವ ಮಾಲಿಕೆಯಲ್ಲಿ ಡಾ. ಪ್ರಿಯದರ್ಶನಿ ಉಗಲವಾಟ, ಸ್ತ್ರೀರೋಗ ತಜ್ಞರು, ಶ್ರೀ ವೆಂಕಟೇಶ್ವರ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಬಾದಾಮಿ ಇವರು ಜುಲೈ 1 ನೆಯ ತಾರೀಕು ವೈದ್ಯರ ದಿನಾಚರಣೆ ಮತ್ತು ಬಿ.ಸಿ ರಾಯ್ ಅವರ ಜನ್ಮದಿನ ಮತ್ತು ಖ್ಯಾತ ಕ್ಯಾನ್ಸರ್ ತಜ್ಞೆ ಡಾ. ವಿಜಯಲಕ್ಷ್ಮಿ ದೇಶಮಾನೆ ಅವರನ್ನೂ ಸಹ ನೆನಪು ಮಾಡಿಕೊಳ್ಳುತ್ತಾ, ವೈದ್ಯರ ಪ್ರಾಮುಖ್ಯತೆಯೊಂದಿಗೆ ವೈದ್ಯ ಸಂಗಣ್ಣನವರ ಅನುಭಾವ ಮಾಲಿಕೆಯನ್ನು ಪ್ರಾರಂಭ ಮಾಡಿದರು.12 ನೆಯ ಶತಮಾನದ ವೈದ್ಯ ಸಂಗಣ್ಣನವರದು ವೈದ್ಯವೃತ್ತಿ. ಇವರ ಅಂಕಿತನಾಮ ಮರುಳ ಶಂಕರ ಪ್ರಿಯ ಸಿದ್ದರಾಮೇಶ್ವರ. ಇವರ 20 ವಚನಗಳು ಲಭ್ಯವಾಗಿವೆ. ಇವರ ವಚನಗಳಲ್ಲಿ ವೈದ್ಯ ವೃತ್ತಿಯ ಪರಿಭಾಷೆಯ ತತ್ವ, ನಾಡಿಗಳ ವಿವರ, ವ್ಯಾಧಿಗಳ ಬಗೆ, ಔಷಧಿಗಳ ಪ್ರಕಾರ ಎಲ್ಲವೂ ಲಭ್ಯವಾಗುತ್ತವೆ. ಇವೆಲ್ಲವೂ ಇವರ ವೈದ್ಯಶಾಸ್ತ್ರ ಪರಿಣಿತಿಯನ್ನು , ಅವುಗಳಿಗೆ ಇವರು ಜೋಡಿಸುವ ತಾತ್ವಿಕ ಪರಿವೇಶವನ್ನು ಏಕಕಾಲಕ್ಕೆ ಪ್ರಕಟಿಸುತ್ತವೆ. ವೈದ್ಯವೃತ್ತಿಯನ್ನು ತಮ್ಮ…
ಸಂಗ್ರಹ- ಸುಧಾ ಪಾಟೀಲವಿಶ್ವಸ್ಥರುಬಸವ ತಿಳುವಳಿಕೆ ಮತ್ತು ಸಂಶೋಧನ ಕೇಂದ್ರಪುಣೆ ಉದಯರಶ್ಮಿ ದಿನಪತ್ರಿಕೆ ನಮ್ಮ ವೇದಿಕೆಯಿಂದ ನಡೆಯು ತ್ತಿರುವ ಶರಣ ಮಾಸದ ಮೂರನೆಯ ದಿವಸದ ಅನುಭಾವದಲ್ಲಿ ಡಾ.ಅಶೋಕ ಆಲೂರ ಅವರು ಸಾಂಸ್ಕೃತಿಕ ನಾಯಕ ಬಸವಣ್ಣ ಅವರ ಬಗೆಗೆ ಅತ್ಯಂತ ಪ್ರಬುದ್ಧವಾಗಿ ಮಾತಾಡಿದರು.ಬಸವಣ್ಣನವರು ಯುಗಾವತಾರಿ, ದಾರ್ಶನಿಕರು, ಸಂತರು, ನಿರಹಂಕಾರದ ನೀಲಾಂಜನ, ಶರಣ ಸ್ವಾಭಿಮಾನದ ಸ್ವರ್ಣ ಗೋಪುರ, ಒಲಿದಂತೆ ಹಾಡಿದ ಕವಿರತ್ನ ಚೈತನ್ಯ, ಬಂಡಾಯದ ಪ್ರಥಮ ಹರಿಕಾರ, ಜಾತಿಯೆಂಬ ಮೌಡ್ಯಕ್ಕೆ ಚಿಕಿತ್ಸೆ ನೀಡಿದ ವೈದ್ಯ ಭಾಸ್ಕರ, ಶರಣ ಸ್ವಾಭಿಮಾನದ ಸ್ವರ್ಣ ಗೋಪುರ, ಅದ್ಭುತವಾದ ವಿಸ್ಮಯ, ಸಂಘಟನೆಯ ಬೀಜ ಮಂತ್ರ, ದಾಸೋಹ ತತ್ವದ ಶ್ರೀಗಂಧದ ಪರಿಮಳ, ನಿರಹಂಕಾರದ ನೀಲಾಂಜನ, ಅಹಿಂಸೆಯ ಪರಮಾವತಾವಾದಿ, ಮೂಢನಂಬಿಕೆ ವಿರುದ್ಧ ಸಿಡಿದ ಸಿರಿಗುಂಡು, ಶೀಲ ಸಿಂಧು, ಮಹಾಮನೆಯ ದೇವರೂವಾರಿ, ಸಕಲ ಜೀವಾ ತ್ಮರಿಗೆ ಲೇಸನೇ ಬಯಸುವ ಮಾನವೀಯತೆಯ ಮಹಾ ಮೇರು, ದಯವಿಲ್ಲದ ಧರ್ಮವಾವುದಯ್ಯಾ ಎಂದು ಸಾರಿದ ಕರುಣಾಸಾಗರ, ಅಧ್ಯಾತ್ಮ ಶಿಲ್ಪಿ, ವೈಚಾರಿಕತೆಯ ವಿಂದ್ಯಾಚಲ, ಹೀಗೆ ಅಸಂಖ್ಯ ಬಿರುದುಗಳನ್ನು ಬಸವಣ್ಣನವರಿಗೆ ಕೊಡುವ ಮೂಲಕ ಬಸವಣ್ಣನವರು…
ಬಿ.ಎಲ್.ಡಿ.ಇ ಸಂಸ್ಥೆಯ ಎಸ್.ಬಿ ಕಲಾ ಮತ್ತು ಕೆ.ಸಿ.ಪಿ ವಿಜ್ಞಾನ ಮಹಾವಿದ್ಯಾಲಯ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ನಗರದ ಬಿ.ಎಲ್.ಡಿ.ಇ ಸಂಸ್ಥೆಯ ಎಸ್ ಬಿ ಕಲಾ ಮತ್ತು ಕೆ.ಸಿಪಿ ವಿಜ್ಞಾನ ಮಹಾವಿದ್ಯಾಲಯ ಆವರಣದಲ್ಲಿ ಬಿ.ಎಲ್ ಡಿ ಈ ಸಂಸ್ಥೆಯನ್ನು ಕಟ್ಟಿ ಬೆಳೆಸಿದ ಡಾ.ಫ.ಗು ಹಳಕಟ್ಟಿ,ಬಂಥನಾಳ ಶಿವಯೋಗಿಗಳು,ಶ್ರೀ ಬಿ.ಎಂ.ಪಾಟೀಲ, ಹಾಗೂ ಬಂಗಾರಮ್ಮ ಸಜ್ಜನ ಸ್ಮರಣೆ ನಿಮಿತ್ತವಾಗಿ ಮಹಾವಿದ್ಯಾಲಯದಲ್ಲಿ ಹಸಿರುಸಿರಿ, ವೃಕ್ಷ ಅಭಿಯಾನ ಮತ್ತು ಅರಣ್ಯ ಇಲಾಖೆಯ ಸಹಯೋಗದಲ್ಲಿ ಒಟ್ಟು ೫೦ ಕ್ಕಿಂತ ಅಧಿಕ ಗಿಡಗಳು ನೆಟ್ಟು ಪೋಷಿಸಲಾಯಿತು.ಈ ಸಂದರ್ಭದಲ್ಲಿ ಆಡಳಿತಾಧಿಕಾರಿ ಪ್ರೊ.ವಿ.ಎಸ್. ಬಗಲಿ ಮಾತನಾಡಿ ಕೇವಲ ಸಸಿಗಳನ್ನು ನೆಡುವುದಷ್ಟೇ ಮುಖ್ಯವಲ್ಲ ಅದರೊಂದಿಗೆ, ಸಂರಕ್ಷಸಿ, ಪೋಷಿಸಿ ಬೆಳೆಸುವುದು ನಮ್ಮ ಮೂಲ ಕರ್ತವ್ಯವಾಗಿದೆ ಎಂದು ಹೇಳಿದರು.ಈ ಸಂದರ್ಭದಲ್ಲಿ ಪ್ರಾಚಾರ್ಯೆ ಡಾ.ಆರ್.ಎಂ.ಮಿರ್ಧೆ, ಉಪಪ್ರಾಚಾರ್ಯ ಡಾ.ಅನೀಲ ಭೀ.ನಾಯಕ, ಪಿಯುಸಿ ಪ್ರಾಚಾರ್ಯ ಪ್ರೊ.ಸಿ.ಬಿ ಪಾಟೀಲ, ಎಎಸ್‌ಪಿ ಕಾಲೇಜಿನ ಉಪ ಪ್ರಾಚಾರ್ಯ ಪ್ರೊ.ದಿಲೀಪ್ ಪಾಟೀಲ, ವೃಕ್ಷ ಅಭಿಯಾನ ಪ್ರತಿಷ್ಠಾನ ಸಂಯೋಜಕ ಪ್ರೊ.ಮುರುಗೇಶ ಪಟ್ಟಣಶೆಟ್ಟಿ, ಜಿಲ್ಲಾ ಅರಣ್ಯ ಅಧಿಕಾರಿಗಳು, ಹಸಿರುಸಿರಿ ಸಂಯೋಜಕ ಡಾ.ಕೃಷ್ಣಾ ಮಂಡ್ಲಾ, ನ್ಯಾಕ್…
ಇಟ್ಟಂಗಿಹಾಳ ಕೆರೆಗೆ ಸಚಿವ ಎಂ.ಬಿ.ಪಾಟೀಲ ಅವರಿಂದ ಬಾಗಿನ ಅರ್ಪಣೆ | ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ.ಪಾಟೀಲ ಭರವಸೆ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಅತಿ ಎತ್ತರದ ಪ್ರದೇಶವಾಗಿರುವ ಇಟ್ಟಂಗಿಹಾಳಕ್ಕೆ ನೀರು ಹರಿಸುವುದು ಕಷ್ಟಕರ ಹಾಗೂ ಕಷ್ಟಸಾಧ್ಯವಾಗಿರುವುದನ್ನು ಛಲದಿಂದ, ಮನಸ್ಸಿದ್ದರೆ ಮಾರ್ಗ ಎಂಬುದಕ್ಕೆ ಸಾಕ್ಷಿಯಾಗಿ ಈ ಪ್ರದೇಶದಲ್ಲಿ ನೀರು ಹರಿಸಿ ಇಟ್ಟಂಗಿಹಾಳ ಕೆರೆ ತುಂಬಿಸಿರುವುದು ಅತ್ಯಂತ ಸಂತಸ ತಂದಿದೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆ, ಮೂಲಸೌಲಭ್ಯ ಅಭಿವೃದ್ದಿ ಖಾತೆ ಸಚಿವರಾದ ವಿಜಯಪುರ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಬಿ.ಪಾಟೀಲ ಅವರು ಹೇಳಿದರು.ಜಲಸಂಪನ್ಮೂಲ ಇಲಾಖೆಯ ವತಿಯಿಂದ ತುಬಚಿ-ಬಬಲೇಶ್ವರ ಏತ ನೀರಾವರಿ ಯೋಜನೆ ವ್ಯಾಪ್ತಿಯಲ್ಲಿ ಬರುವ ಇಟ್ಟಂಗಿಹಾಳ ಕೆರೆಗೆ ಶನಿವಾರ ಗಂಗಾ ಪೂಜೆ ಹಾಗೂ ಬಾಗಿನ ಅರ್ಪಣೆ ಮಾಡಿ ಕಾರ್ಯಕ್ರಮವನ್ನುದ್ದೇಶಿಸಿ ಅವರು ಮಾತನಾಡಿದರು.ಅತಿ ಎತ್ತರದ ಪ್ರದೇಶವಾದ ಇಟ್ಟಂಗಿಹಾಳ ಹಾಗೂ ಜಾಲಗೇರಿ ಕೆರೆಗಳಿಗೆ ನೀರು ಬರುವುದು ಅತ್ಯಂತ ಕಷ್ಟಕರವಾಗಿತ್ತು. ತುಬಚಿ-ಬಬಲೇಶ್ವರ ಏತ ನೀರಾವರಿ ಯೋಜನೆಯಿಂದ ಇಟ್ಟಂಗಿಹಾಳ ಕೆರೆ ತುಂಬಿಸಲು ಯೋಜನೆ ರೂಪಿಸಿಕೊಂಡು, ಕಷ್ಟಕರವಾದ ಈ ಕಾರ್ಯವನ್ನು ೧,೧೫೦೦೦ ಎಚ್.ಪಿ.…
ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಕರ್ನಾಟಕ ದ್ರಾಕ್ಷಿ ಬೆಳೆಗಾರರ ಸಂಘ ಪ್ರಾದೇಶಿಕ ಕಚೇರಿ ವಿಜಯಪುರ ಇದರ ನೂತನ ಅಧ್ಯಕ್ಷ ಉಪಾಧ್ಯಕ್ಷ ಪ್ರಧಾನ ಕಾರ್ಯದರ್ಶಿ ಮತ್ತು ಸದಸ್ಯರ ಆಯ್ಕೆಯನ್ನು ಕರ್ನಾಟಕ ರಾಜ್ಯ ದ್ರಾಕ್ಷಿ ಬೆಳೆಗಾರರ ಸಂಘ ಬೆಂಗಳೂರು ರಾಜ್ಯಾಧ್ಯಕ್ಷ ಅಭಯ್ ಕುಮಾರ್ ಎಸ್. ನಾಂದ್ರೇಕರ ಇವರು ಘೋಷಿಸಿದ್ದಾರೆ.ಅಧ್ಯಕ್ಷರಾಗಿ ಮಲ್ಲಿಕಾರ್ಜುನ್ ಎಸ್. ಲೋಣಿ, ಉಪಾಧ್ಯಕ್ಷರಾಗಿ ಬರತೇಶ ಜಮಖಂಡಿ, ಪ್ರಧಾನ ಕಾರ್ಯದರ್ಶಿಯಾಗಿ ಸಿದಗೊಂಡ ಆರ್.ರುದ್ರಗೌಡರ ಇವರನ್ನು ಆಯ್ಕೆ ಮಾಡಿರುತ್ತಾರೆ. ಇನ್ನುಳಿದ ಸದಸ್ಯರನ್ನು ಆಯ್ಕೆ ಮಾಡಲು ಅಧ್ಯಕ್ಷರು ಉಪಾಧ್ಯಕ್ಷರು ಮತ್ತು ಪ್ರಧಾನ ಕಾರ್ಯದರ್ಶಿಯವರಿಗೆ ಅಧಿಕಾರವನ್ನು ವಹಿಸಿರುತ್ತಾರೆ. ಅದರಂತೆ ಸದಸ್ಯರುಗಳಾಗಿ. ಭೀಮರಾವ ಸಿ.ಮಸಳಿ, ಯಾಕುಬ್ ಜತ್ತಿ, .ಪ್ರಕಾಶ ಎಸ್.ಆಯತವಾಡ. ಗುರುಲಿಂಗ ಮಾಳಿ, ಶರಣು ಅವಟಿ, ಜೆ. ಎಂ. ಕೊರಬು ಇವರನ್ನು ಆಯ್ಕೆ ಮಾಡಿರುತ್ತಾರೆ.ಈ ಸಂದರ್ಭದಲ್ಲಿ ಹಿರಿಯರಾದ ಎಂ.ಎಸ್. ರುದ್ರಗೌಡರ, ಎಸ್.ಎಚ್ . ನಾಡಗೌಡ, ಕೆ. ಎಚ್.ಮುಂಬಾರೆಡ್ಡಿ, ಎಚ್. ಆರ್. ಉಟಗಿ, ಭೀಮಸೇನ ಕೊಖರೆ, ಜಿ.ಎಂ. ಪಾಟೀಲ ಬಿಜ್ಜರಗಿ ಮತ್ತು ಅನೇಕ ರೈತರು ಉಪಸ್ಥಿತರಿದ್ದರು.
ಉದಯರಶ್ಮಿ ದಿನಪತ್ರಿಕೆ ಇಂಡಿ: ಗ್ರಾಮೀಣ ಪೋಲಿಸ್ ಠಾಣಾ ಪಿ.ಎಸ್.ಐ ಸೋಮೇಶ ಗೆಜ್ಜಿ ಹಾಗೂ ಪೋಲಿಸ್ ಸಿಬ್ಬಂದಿ ಹಾಗೂ ಸಾರ್ವಜನಿಕರ ಮೇಲೆ ಕಾರು ಹಾಯಿಸಿ ಕೊಲೆಗೆ ಯತ್ನ ನಡೆಸಿರುವ ಘಟನೆ ತಾಲೂಕಿನ ಸಾತಲಗಾಂವ ಪಿ.ಐ ಗ್ರಾಮದಲ್ಲಿ ನಡೆದಿದೆ.ಸಾತಲಗಾಂವ ಗ್ರಾಮದ ದುಂಡಪ್ಪ ಶರಣಪ್ಪ ಮುಳಸಾವಳಗಿ ಇವರು ಪೋಲಿಸ್ ಠಾಣೆಗೆ ಕರೆ ಮಾಡಿ, ನಮ್ಮ ಕುಟುಂಬದ ಮೇಲೆ ಹಲ್ಲೆ ಮತ್ತು ಕೊಲೆ ಮಾಡಲು ಒಂದು ಗುಂಪು ನಾಲ್ಕು ವಾಹನಗಳು ತೆಗೆದುಕೊಂಡು ಬಂದಿದ್ದು, ಬೆದರಿಗೆ ಹಾಕುತ್ತಿದ್ದಾರೆ ಎಂದು ತಿಳಿಸಿದರು. ಆ ನಂತರ ಸ್ಥಳಕ್ಕೆ 112 ಪೋಲಿಸರು ಬೇಟಿ ನೀಡುತ್ತಿದ್ದಾಗ, ಆಗ ಅಲ್ಲಿ ಗ್ರಾಮದ ಜನರು ಸ್ವಿಪ್ಟ ಕಾರನ್ನು ನಿಲ್ಲಿಸಿ ಅವರ ಜೊತೆ ಬಾಯಿ ಮಾಡುತ್ತಿದ್ದರು. ಆಗ ಕಾರ ಹತ್ತಿರ ಹೋಗಿ ಅದರಲ್ಲಿದ್ದವರಿಗೆ ವಿಚಾರಿಸಲಾಗಿ ಅಫಜಲಪುರ ಗ್ರಾಮದವರಾಗಿದ್ದು ತಮ್ಮ ಹೆಸರು ರವಿ ಪೂಜಾರಿ, ಸಚೀನ ಸುತಾರ, ಈಶ್ವರ ಗಂಗಾವತಿ, ಪ್ರಕಾಶ ಸೀತನೂರ ಅಂತಾ ಹೇಳಿದ್ದಾರೆ.ಆಗ ಅವರಿಗೆ ಇನ್ನಷ್ಟು ವಿಚಾರಿಸಲು ಮಾತನಾಡುವಾಗ ಅಷ್ಟೊತ್ತಿಗೆ ಅಲ್ಲಿ ಒಂದು ಎರಟಿಗಾ ಕಾರು ಬಂದು,…
