ಉದಯರಶ್ಮಿ ದಿನಪತ್ರಿಕೆ
ಆಲಮೇಲ: ಕಳೆದ ಐದಾರು ದಿನಗಳಿಂದ ಆಲಮೇಲ ಪಟ್ಟಣದಲ್ಲಿ ರಸ್ತೆ ತೆರವು ಗೊಳಿಸುವಂತೆ ಆಗ್ರಹಿಸಿ ನಡೆಯುತ್ತಿರುವ ಅನಿರ್ದಿಷ್ಟಾವಧಿ ಹೋರಾಟಕ್ಕೆ ಮಾಜಿ ಶಾಸಕ ರಮೇಶ್ ಭೂಸನೂರ ಹೋರಾಟದಲ್ಲಿ ಪಾಲ್ಗೊಂಡು ತಮ್ಮ ಬೆಂಬಲವನ್ನು ವ್ಯಕ್ತಪಡಿಸಿದ್ದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು ಹಿಂದಿನ ಹಲವಾರು ಹೋರಾಟಗಳಲ್ಲಿ ನಾನು ಭಾಗವಹಿಸಿ ನನ್ನ ಬೆಂಬಲ ವ್ಯಕ್ತಪಡಿಸಿದ್ದಲ್ಲದೆ ಆಲಮೇಲ ಪಟ್ಟಣವನ್ನು ತಾಲೂಕು ಮಾಡಲು ಮತ್ತು ತಾಲೂಕು ಕಚೇರಿಗಳನ್ನು ತೆರೆಯಲು ನನ್ನ ಅಧಿಕಾರ ಅವಧಿಯಲ್ಲಿ ಸಾಧ್ಯವಾದಷ್ಟು ಪ್ರಯತ್ನವನ್ನು ಮಾಡಿದ್ದೇನೆ ಈಗಲೂ ಕೂಡ ಆಲಮೇಲದ ಜನತೆಯ ಜೊತೆಗೆ ಹೋರಾಟದಲ್ಲಿ ಪಾಲ್ಗೊಳ್ಳುವ ಮೂಲಕ ನನ್ನ ನೈತಿಕ ಬೆಂಬಲವನ್ನು ವ್ಯಕ್ತಪಡಿಸಿದ್ದೇನೆ ಇಲ್ಲಿನ ಜನರ ಬೇಡಿಕೆಯಾಗಿರುವ ರಸ್ತೆ ಅಗಲೀಕರಣ ಮತ್ತು ರಸ್ತೆ ನಿರ್ಮಾಣ ಮಾಡುವುದಕ್ಕಾಗಿ ನಡೆಯುತ್ತಿರುವ ಹೋರಾಟದಲ್ಲಿ ನಾನು ನಿಮ್ಮೊಂದಿಗೆ ಸದಾ ಇರುತ್ತೇನೆ ಎಂದರು.
ಈ ಸಂದರ್ಭದಲ್ಲಿ ಹರೀಶ ಎಂಟಮಾನ, ಸಂಜು ಎಂಟಮಾನ, ಸೋಮನಾಥ ಮೇಲಿನಮನಿ, ಅಪ್ಪು ಶೆಟ್ಟಿ, ಪಿ.ಟಿ.ಪಾಟೀಲ, ಗುಂಡು ಮೇಲಿನಮನಿ, ಮದನ ರಜಪೂತ, ಶ್ರೀಶೈಲ ಭೋವಿ ಇದ್ದರು.

