ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಕರ್ನಾಟಕ ದ್ರಾಕ್ಷಿ ಬೆಳೆಗಾರರ ಸಂಘ ಪ್ರಾದೇಶಿಕ ಕಚೇರಿ ವಿಜಯಪುರ ಇದರ ನೂತನ ಅಧ್ಯಕ್ಷ ಉಪಾಧ್ಯಕ್ಷ ಪ್ರಧಾನ ಕಾರ್ಯದರ್ಶಿ ಮತ್ತು ಸದಸ್ಯರ ಆಯ್ಕೆಯನ್ನು ಕರ್ನಾಟಕ ರಾಜ್ಯ ದ್ರಾಕ್ಷಿ ಬೆಳೆಗಾರರ ಸಂಘ ಬೆಂಗಳೂರು ರಾಜ್ಯಾಧ್ಯಕ್ಷ ಅಭಯ್ ಕುಮಾರ್ ಎಸ್. ನಾಂದ್ರೇಕರ ಇವರು ಘೋಷಿಸಿದ್ದಾರೆ.
ಅಧ್ಯಕ್ಷರಾಗಿ ಮಲ್ಲಿಕಾರ್ಜುನ್ ಎಸ್. ಲೋಣಿ, ಉಪಾಧ್ಯಕ್ಷರಾಗಿ ಬರತೇಶ ಜಮಖಂಡಿ, ಪ್ರಧಾನ ಕಾರ್ಯದರ್ಶಿಯಾಗಿ ಸಿದಗೊಂಡ ಆರ್.ರುದ್ರಗೌಡರ ಇವರನ್ನು ಆಯ್ಕೆ ಮಾಡಿರುತ್ತಾರೆ. ಇನ್ನುಳಿದ ಸದಸ್ಯರನ್ನು ಆಯ್ಕೆ ಮಾಡಲು ಅಧ್ಯಕ್ಷರು ಉಪಾಧ್ಯಕ್ಷರು ಮತ್ತು ಪ್ರಧಾನ ಕಾರ್ಯದರ್ಶಿಯವರಿಗೆ ಅಧಿಕಾರವನ್ನು ವಹಿಸಿರುತ್ತಾರೆ. ಅದರಂತೆ ಸದಸ್ಯರುಗಳಾಗಿ. ಭೀಮರಾವ ಸಿ.ಮಸಳಿ, ಯಾಕುಬ್ ಜತ್ತಿ, .ಪ್ರಕಾಶ ಎಸ್.ಆಯತವಾಡ. ಗುರುಲಿಂಗ ಮಾಳಿ, ಶರಣು ಅವಟಿ, ಜೆ. ಎಂ. ಕೊರಬು ಇವರನ್ನು ಆಯ್ಕೆ ಮಾಡಿರುತ್ತಾರೆ.
ಈ ಸಂದರ್ಭದಲ್ಲಿ ಹಿರಿಯರಾದ ಎಂ.ಎಸ್. ರುದ್ರಗೌಡರ, ಎಸ್.ಎಚ್ . ನಾಡಗೌಡ, ಕೆ. ಎಚ್.ಮುಂಬಾರೆಡ್ಡಿ, ಎಚ್. ಆರ್. ಉಟಗಿ, ಭೀಮಸೇನ ಕೊಖರೆ, ಜಿ.ಎಂ. ಪಾಟೀಲ ಬಿಜ್ಜರಗಿ ಮತ್ತು ಅನೇಕ ರೈತರು ಉಪಸ್ಥಿತರಿದ್ದರು.

