Close Menu
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ

Subscribe to Updates

Get the latest creative news from FooBar about art, design and business.

What's Hot

ಅನ್ಯಾಯವಾದವರಿಗೆ ನ್ಯಾಯ ಸಿಗುವಂತಾಗಬೇಕು :ಸುಣಗಾರ

ಬತಗುಣಕಿ: ಬಯಲಾಟ ಅಕಾಡೆಮಿಯಿಂದ ಕಲಾವಿದರ ಸಮೀಕ್ಷೆ

ಬೆಳೆ ಹಾನಿ ಜಂಟಿ ಸಮೀಕ್ಷೆಯ ರೈತರ ಯಾದಿ

Facebook X (Twitter) Instagram
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
Facebook X (Twitter) Instagram YouTube WhatsApp
udayarashminews.comudayarashminews.com
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
udayarashminews.comudayarashminews.com
Home»ವಿಶೇಷ ಲೇಖನ»ವೈಚಾರಿಕತೆಯ ವಿಂದ್ಯಾಚಲ ಬಸವಣ್ಣ
ವಿಶೇಷ ಲೇಖನ

ವೈಚಾರಿಕತೆಯ ವಿಂದ್ಯಾಚಲ ಬಸವಣ್ಣ

By Updated:No Comments2 Mins Read
Facebook Twitter Pinterest LinkedIn Telegram WhatsApp
Share
Facebook Twitter LinkedIn Email Telegram WhatsApp

ಸಂಗ್ರಹ
– ಸುಧಾ ಪಾಟೀಲ
ವಿಶ್ವಸ್ಥರು
ಬಸವ ತಿಳುವಳಿಕೆ ಮತ್ತು ಸಂಶೋಧನ ಕೇಂದ್ರ
ಪುಣೆ

ಉದಯರಶ್ಮಿ ದಿನಪತ್ರಿಕೆ

ನಮ್ಮ ವೇದಿಕೆಯಿಂದ ನಡೆಯು ತ್ತಿರುವ ಶರಣ ಮಾಸದ ಮೂರನೆಯ ದಿವಸದ ಅನುಭಾವದಲ್ಲಿ ಡಾ.ಅಶೋಕ ಆಲೂರ ಅವರು ಸಾಂಸ್ಕೃತಿಕ ನಾಯಕ ಬಸವಣ್ಣ ಅವರ ಬಗೆಗೆ ಅತ್ಯಂತ ಪ್ರಬುದ್ಧವಾಗಿ ಮಾತಾಡಿದರು.
ಬಸವಣ್ಣನವರು ಯುಗಾವತಾರಿ, ದಾರ್ಶನಿಕರು, ಸಂತರು, ನಿರಹಂಕಾರದ ನೀಲಾಂಜನ, ಶರಣ ಸ್ವಾಭಿಮಾನದ ಸ್ವರ್ಣ ಗೋಪುರ, ಒಲಿದಂತೆ ಹಾಡಿದ ಕವಿರತ್ನ ಚೈತನ್ಯ, ಬಂಡಾಯದ ಪ್ರಥಮ ಹರಿಕಾರ, ಜಾತಿಯೆಂಬ ಮೌಡ್ಯಕ್ಕೆ ಚಿಕಿತ್ಸೆ ನೀಡಿದ ವೈದ್ಯ ಭಾಸ್ಕರ, ಶರಣ ಸ್ವಾಭಿಮಾನದ ಸ್ವರ್ಣ ಗೋಪುರ, ಅದ್ಭುತವಾದ ವಿಸ್ಮಯ, ಸಂಘಟನೆಯ ಬೀಜ ಮಂತ್ರ, ದಾಸೋಹ ತತ್ವದ ಶ್ರೀಗಂಧದ ಪರಿಮಳ, ನಿರಹಂಕಾರದ ನೀಲಾಂಜನ, ಅಹಿಂಸೆಯ ಪರಮಾವತಾವಾದಿ, ಮೂಢನಂಬಿಕೆ ವಿರುದ್ಧ ಸಿಡಿದ ಸಿರಿಗುಂಡು, ಶೀಲ ಸಿಂಧು, ಮಹಾಮನೆಯ ದೇವರೂವಾರಿ, ಸಕಲ ಜೀವಾ ತ್ಮರಿಗೆ ಲೇಸನೇ ಬಯಸುವ ಮಾನವೀಯತೆಯ ಮಹಾ ಮೇರು, ದಯವಿಲ್ಲದ ಧರ್ಮವಾವುದಯ್ಯಾ ಎಂದು ಸಾರಿದ ಕರುಣಾಸಾಗರ, ಅಧ್ಯಾತ್ಮ ಶಿಲ್ಪಿ, ವೈಚಾರಿಕತೆಯ ವಿಂದ್ಯಾಚಲ, ಹೀಗೆ ಅಸಂಖ್ಯ ಬಿರುದುಗಳನ್ನು ಬಸವಣ್ಣನವರಿಗೆ ಕೊಡುವ ಮೂಲಕ ಬಸವಣ್ಣನವರು ಇಡೀ ವಿಶ್ವಕ್ಕೇ ಸಾಂಸ್ಕೃತಿಕ ನಾಯಕ ಎನ್ನುವುದನ್ನು ಸ್ಪಷ್ಟಪಡಿಸಿದರು.
ನಂತರ ಬಸವಣ್ಣನವರ ಬಾಲ್ಯದಿಂದ ಬಸವಕ್ರಾಂತಿಯವರೆಗೂ ಪ್ರತಿಯೊಂದು ಪ್ರಮುಖ ಘಟ್ಟಗಳನ್ನು ಉಳ್ಳವರು ಶಿವಾಲಯ ಮಾಡುವರು, ದಯವಿಲ್ಲದ ಧರ್ಮ ವಾವುದಯ್ಯ, ಸತ್ಯದ ಬಲದಿಂದ ಅಸತ್ಯದ ಕೇಡು ನೋಡಯ್ಯ, ಹೊನ್ನಿನೊಳಗೊಂದೆಳೆಯ, ಉಳ್ಳವರು ಶಿವಾಲಯ ಮಾಡುವರು, ಎನ್ನುವ ಹಲವಾರು ವಚನಗಳ ಉಲ್ಲೇಖದೊಂದಿಗೆ ನಮ್ಮೊಂದಿಗೆ ಹಂಚಿಕೊಡರು.
ಇಡೀ ಭಾರತದಿಂದ ದುಂಬಿ ಹೂವು ಅರಸುವ ಹಾಗೆ ರಾಜ-ಮಹಾರಾಜರಿಂದ ಹಿಡಿದು ಸಾಮಾನ್ಯ ವರ್ಗದವರೆಗೆ ಜನರು ಹೇಗೆ ಬಸವಣ್ಣನವರನ್ನು ಹುಡುಕುತ್ತಾ ಬಂದರು. ಬಸವಣ್ಣನವರು ಕಟ್ಟಕಡೆಯ ವ್ಯಕ್ತಿಯನ್ನೂ ಸಹ ದೇವನನ್ನಾಗಿ ಮಾಡಿದ್ದು, ದೇವರು ಗುಡಿಯಲ್ಲಿ ಇಲ್ಲ ಅಂತರಾತ್ಮದಲ್ಲಿದ್ದಾನೆ ಎನ್ನುವ ತತ್ವ, ಇಷ್ಟಲಿಂಗದ ಪರಿಕಲ್ಪನೆಯನ್ನು ಕೊಟ್ಟಿದ್ದು, ಸ್ತ್ರೀಯರಿಗೆ ಸಮಾನ ಸ್ವಾತಂತ್ರ್ಯದ ಹಕ್ಕು ಕೊಟ್ಟಿದ್ದು, ಕಾಯಕ ಮತ್ತು ದಾಸೋಹದ ಮೂಲಕ ಆತ್ಮೋದ್ಧಾರ ಮಾಡಿದ್ದು, ಗುರುವಾದರೂ, ಲಿಂಗವಾದರೂ, ಜಂಗಮವಾದರೂ ಕಾಯಕ ದಾಸೋಹವೇ ಕಡ್ಡಾಯ, ಸುಳ್ಳು,ವಂಚನೆ, ಸುಲಿಗೆ, ಪ್ರಾಣಿ ಬಲಿ ಹೀಗೆ ಹಲವಾರು ಕೆಟ್ಟ ಕೆಲಸಗಳನ್ನು ಖಂಡನೆ ಮಾಡಿದ್ದು, ಕಾಯಕದ ಆರು ಆಯಾಮಗಳಾದ ದೈವಿಕ, ಕಡ್ಡಾಯ, ಐಚ್ಚಿಕ, ತಾರತಮ್ಯ ರಹಿತ, ಅಧಿಕಫಲ ಅನಪೇಕ್ಷಿತ,ದಾಸೋಹ ಚಿಂತನೆಯನ್ನು ಅತ್ಯಂತ ಸರಳ ರೀತಿಯಲ್ಲಿ ತಿಳಿಸಿ ಹೇಳಿದರು.
ಬಸವಣ್ಣನವರ ವೈಚಾರಿಕ ಚಿಂತನೆಯನ್ನು ಎಲ್ಲರೂ ಸೇರಿ ಪ್ರಚಾರ ಮಾಡೋಣ ಎನ್ನುವ ಕಿವಿ ಮಾತು ಹೇಳಿದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ
ಡಾ ಶಶಿಕಾಂತ ಪಟ್ಟಣ ಅಧ್ಯಕ್ಷರು ಬಸವ ತಿಳುವಳಿಕೆ ಮತ್ತು ಸಂಶೋಧನಾ ಕೇಂದ್ರ ಪುಣೆ ಇವರು ಬಸವಣ್ಣ ಜಗವು ಕಂಡ ಸರ್ವ ಶ್ರೇಷ್ಠ ಪರಿಪೂರ್ಣ ಜ್ಞಾನಿ,ದಾರ್ಶನಿಕ, ಕ್ರಾಂತಿಕಾರಿ, ಸಮಾಜ ಸುಧಾರಕ ಎಂದು ಬಣ್ಣಿಸಿದರು. ಇವತ್ತು ಅಮೆರಿಕಾ,ಬ್ರಿಟನ್, ಫ್ರಾನ್ಸ್ ಮುಂತಾದ ಮುಂದುವರೆದ ರಾಷ್ಟ್ರಗಳಲ್ಲಿ ಬಸವ ತತ್ವಕ್ಕೆ ಜನರು ಮಾರು ಹೋಗಿದ್ದಾರೆ,
ಶರಣರ ಕ್ರಾಂತಿ ಸಮಗ್ರ ಕ್ರಾಂತಿ ಎಂದು ಹೇಳುತ್ತಾ
ಡಾ ಅಶೋಕ ಆಲೂರ ಅವರ ಅಧ್ಯಯನ ಕಳಕಳಿಗೆ ಅನಂತ ಅಭಿಮಾನದ ಅಭಿನಂದನೆಗಳನ್ನು ಸಲ್ಲಿಸಿದರು. ವಚನಗಳು ಬಸವಣ್ಣ ಲಿಂಗಾಯತರ ಆಸ್ತಿ ,
ಅದರ ನಿಜವಾರಸುದಾರರು ನಾವಾಗಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಶರಣೆ ಪ್ರೇಮಕ್ಕ ಹೊರಟ್ಟಿ ಅವರ ವಚನ ಪ್ರಾರ್ಥನೆ,ಶರಣೆ ಸುಧಾ ಪಾಟೀಲ್ ಅವರ ಸ್ವಾಗತ, ಶರಣೆ ತ್ರಿವೇಣಿ ವಾರದ ಅವರ ಶರಣು ಸಮರ್ಪಣೆ, ಶರಣೆ ಮಂಗಲಾ ಪಾಟೀಲ್ ಅವರ ವಚನ ಮಂಗಳ ಮತ್ತು ಶರಣ ಶಂಕರ ಕುಪ್ಪಸ್ತ ಅವರ ಕಾರ್ಯಕ್ರಮ ನಿರ್ವಹಣೆಯ ಮೂಲಕ ಶರಣ ಮಾಸದ ಮೂರನೆಯ ದಿನದ ಗೂಗಲ್ ಮೀಟ್ ಸಾಂಗವಾಗಿ ಮುಕ್ತಾಯವಾಯ್ತು.

ಶಾರದಾ ಪಾಟೀಲ್ (ಮೇಟಿ ) ದತ್ತಿ ಉಪನ್ಯಾಸ

ವಚನ ಅಧ್ಯಯನ ವೇದಿಕೆ ಬಸವಾದಿ ಶರಣರ ಚಿಂತನ ಕೂಟ ಹಾಗೂ ಅಕ್ಕನ ಅರಿವು ಸಂಘಟನೆಗಳಿಂದ ಪ್ರೊ. ಶಾರದಾ ಪಾಟೀಲ್ (ಮೇಟಿ ) ಅವರ ಹೆಸರಿನಲ್ಲಿ ವಿಶೇಷ ದತ್ತಿ ಉಪನ್ಯಾಸ – 303

BIJAPUR NEWS public public news udaya rashmi Udayarashmi today newspaper udayarashminews.com
Share. Facebook Twitter Pinterest Email Telegram WhatsApp
  • Website

Related Posts

ಅನ್ಯಾಯವಾದವರಿಗೆ ನ್ಯಾಯ ಸಿಗುವಂತಾಗಬೇಕು :ಸುಣಗಾರ

ಬತಗುಣಕಿ: ಬಯಲಾಟ ಅಕಾಡೆಮಿಯಿಂದ ಕಲಾವಿದರ ಸಮೀಕ್ಷೆ

ಬೆಳೆ ಹಾನಿ ಜಂಟಿ ಸಮೀಕ್ಷೆಯ ರೈತರ ಯಾದಿ

ಕನ್ನಡ ರಾಜ್ಯೋತ್ಸವ ಅದ್ಧೂರಿಯಾಗಿ ಆಚರಿಸಲು ನಿರ್ಧಾರ

Add A Comment

Leave A Reply Cancel Reply

Categories
  • (ರಾಜ್ಯ ) ಜಿಲ್ಲೆ
  • Uncategorized
  • ಆರೋಗ್ಯ
  • ಇತರೆ
  • ಕಾವ್ಯರಶ್ಮಿ
  • ಚಿಂತನ
  • ದಿನಪತ್ರಿಕೆ
  • ಪುಸ್ತಕ ಪರಿಚಯ
  • ಪ್ರೇಮಲೋಕ
  • ಭಾವರಶ್ಮಿ
  • ರಾಷ್ಚ್ರ
  • ವಿಜಯಪುರ
  • ವಿದ್ಯಾರ್ಥಿ ನಿಧಿ
  • ವಿಶೇಷ ಲೇಖನ
  • ಸಾಹಿತ್ಯ
  • ಸಿನಿಮಾ
  • ಹೊತ್ತಿಗೆ ಹೊರಣ
Recent Posts
  • ಅನ್ಯಾಯವಾದವರಿಗೆ ನ್ಯಾಯ ಸಿಗುವಂತಾಗಬೇಕು :ಸುಣಗಾರ
    In (ರಾಜ್ಯ ) ಜಿಲ್ಲೆ
  • ಬತಗುಣಕಿ: ಬಯಲಾಟ ಅಕಾಡೆಮಿಯಿಂದ ಕಲಾವಿದರ ಸಮೀಕ್ಷೆ
    In (ರಾಜ್ಯ ) ಜಿಲ್ಲೆ
  • ಬೆಳೆ ಹಾನಿ ಜಂಟಿ ಸಮೀಕ್ಷೆಯ ರೈತರ ಯಾದಿ
    In (ರಾಜ್ಯ ) ಜಿಲ್ಲೆ
  • ಕನ್ನಡ ರಾಜ್ಯೋತ್ಸವ ಅದ್ಧೂರಿಯಾಗಿ ಆಚರಿಸಲು ನಿರ್ಧಾರ
    In (ರಾಜ್ಯ ) ಜಿಲ್ಲೆ
  • ಪಕ್ಷದ ಬಲವರ್ಧನೆಗೆ ಮಹಿಳಾ ಕಾರ್ಯಕರ್ತೆಯರು ಶ್ರಮಿಸಬೇಕು
    In (ರಾಜ್ಯ ) ಜಿಲ್ಲೆ
  • ಆದೇಶ ಹಿಂಪಡೆಯದಿದ್ದರೆ ಬಬಲೇಶ್ವರದಿಂದಲೇ ಹೋರಾಟ
    In (ರಾಜ್ಯ ) ಜಿಲ್ಲೆ
  • ಬರಡೋಲ: ೧೨ ಜನರಿಗೆ ಪಿಂಚಣಿ ಪ್ರಮಾಣ ಪತ್ರ ವಿತರಣೆ
    In (ರಾಜ್ಯ ) ಜಿಲ್ಲೆ
  • ಪೊಲೀಸರ ಗುಂಡಿಗೆ ರೌಡಿ ಶೀಟರ್ ಬಲಿ
    In (ರಾಜ್ಯ ) ಜಿಲ್ಲೆ
  • ಮಹಿಳೆಯರು ಅಗತ್ಯ ಕೌಶಲ್ಯಗಳನ್ನು ಪಡೆಯುವುದು ಅತ್ಯವಶ್ಯ :ಪ್ರೊ.ಸೋನಾರ
    In (ರಾಜ್ಯ ) ಜಿಲ್ಲೆ
  • ಬಾಲಕಿ ನೇಣಿಗೆ ಶರಣು
    In (ರಾಜ್ಯ ) ಜಿಲ್ಲೆ
Editors Picks
Top Reviews
udayarashminews.com
Facebook X (Twitter) Instagram Pinterest Vimeo YouTube
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
© 2025 udayarashminews.com. Designed by udayarashmi news .

Type above and press Enter to search. Press Esc to cancel.