Author: editor.udayarashmi@gmail.com

ಉದಯರಶ್ಮಿ ದಿನಪತ್ರಿಕೆ ಕೆಂಭಾವಿ: ಕಾಂಗ್ರೆಸ್ ಪಕ್ಷದ ಜಿಲ್ಲಾ ಹಾಗೂ ಬ್ಲಾಕ್ ಮಟ್ಟದ ವಿವಿಧ ಸಮಿತಿಗಳಿಗೆ ನೂತನವಾಗಿ ಆಯ್ಕೆಯಾದ ಮಹಿಪಾಲರೆಡ್ಡಿ ಡಿಗ್ಗಾವಿ ( ಯಾದಗಿರಿ ಜಿಲ್ಲಾ ಬ್ಲಾಕ ಕಾಂಗ್ರೆಸ್ ಉಪಾಧ್ಯಕ್ಷ) ಲಾಡ್ಲೆ ಪಟೇಲ್ ಹೆಗನದೊಡ್ಡಿ (ಅಲ್ಪಸಂಖ್ಯಾತರ ಹೋಬಳಿ ಘಟಕದ ಕೆಂಭಾವಿ) ಶಿವರಾಜ ಬೂದೂರ (ಯಾದಗಿರಿ ಜಿಲ್ಲಾ ಬ್ಲಾಕ್ ಕಾಂಗ್ರೆಸ್ ಪ್ರ. ಕಾರ್ಯದರ್ಶಿ) ರಹೇಮಾನ್ ಪಟೇಲ್ ಯಲಗೋಡ (ಪುರಸಭೆ ಅಧ್ಯಕ್ಷರು ಕೆಂಭಾವಿ) ಸಾಹೇಬ್ ಲಾಲ್ ಆಂದೇಲಿ (ಕೆಂಭಾವಿ ಹೋಬಳಿ ಬ್ಲಾಕ್ ಕಾಂಗ್ರೆಸ್ ಕಾರ್ಯಧ್ಯಕ್ಷ) ಇವರುಗಳಿಗೆ ಶನಿವಾರ ” ಮೆಕ್ಕಾ ಮಸ್ಜಿದ್ ಕಮಿಟಿ” ವತಿಯಿಂದ ಅಭಿನಂದಿಸಿ ಗೌರವಿಸಲಾಯಿತು.ಸನ್ಮಾನ ಸ್ವೀಕರಿಸಿ ಮಾತನಾಡಿದ ಕಾಂಗ್ರೆಸ್ ಅಲ್ಪಸಂಖ್ಯಾತರ ಹೋಬಳಿ ಘಟಕದ ಅಧ್ಯಕ್ಷ ಲಾಡ್ಲೆ ಪಟೇಲ್, ಹೆಗನದೊಡ್ಡಿ ಕಾಂಗ್ರೆಸ್ ಪಕ್ಷವು ಸಾಮಾಜಿಕ ನ್ಯಾಯ, ಶಿಕ್ಷಣ, ಮತ್ತು ಸಮುದಾಯ ವಿಕಾಸಕ್ಕಾಗಿ ನಿರಂತರವಾಗಿ ಕೆಲಸ ಮಾಡುತ್ತಿದೆ. ಈಗಾಗಲೇ ಪಂಚ ಗ್ಯಾರಂಟಿ ಯೋಜನೆಗಳು ಜಾರಿಯಲ್ಲಿದ್ದು ಹಲವಾರು ಬಡ ಜನರಗೆ ಗ್ಯಾರಂಟಿ ಯೋಜನೆಗಳು ಅನುಕೂಲವಾಗಿದೆ. “ಜಾತಿ ಮತ್ತು ಧರ್ಮವು ಮನೆಯೊಳಗಿನ ಆಚರಣೆಯಾಗಲಿ” ಎಂಬ ನೀತಿಯನ್ನು ಸಿದ್ದರಾಮಯ್ಯ ನೇತೃತ್ವದ…

Read More

ಸಂಗ್ರಹ- ಸುಧಾ ಪಾಟೀಲವಿಶ್ವಸ್ಥರುಬಸವ ತಿಳುವಳಿಕೆ ಮತ್ತು ಸಂಶೋಧನ ಕೇಂದ್ರಪುಣೆ ಉದಯರಶ್ಮಿ ದಿನಪತ್ರಿಕೆ ಶರಣ ಮಾಸದ ಎರಡನೆಯ ದಿವಸದ ಗೂಗಲ್ ಮೀಟ್ ಕಾರ್ಯಕ್ರಮದಲ್ಲಿಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯ ನಿವೃತ್ತ ಜಂಟಿ ನಿರ್ದೇಶಕರಾದ ಡಾ. ಸದಾಶಿವ ಮರ್ಜಿ ಅವರು ಕರ್ನಾಟಕ ಏಕೀಕರಣಕ್ಕೆ ಧಾರವಾಡ ಜಿಲ್ಲೆಯ ಲಿಂಗಾಯತರ ಕೊಡುಗೆ ಎನ್ನುವ ವಿಷಯದ ಬಗೆಗೆ ಅತ್ಯಂತ ಪ್ರಬುದ್ಧ ತೆಯಿಂದ ಎಳೆ ಎಳೆಯಾಗಿ ನಮಗೆಲ್ಲರಿಗೂ ತಿಳಿಸಿಕೊಟ್ಟರು. ಇದೊಂದು ಹರಿದು ಹಂಚಿ ಹೋಗಿದ್ದ ಕರ್ನಾಟಕವನ್ನು ಒಂದುಗೂಡಿಸಿ ಅಖಂಡ ಕರ್ನಾಟಕವನ್ನು ಹುಟ್ಟುಹಾಕಿದ ಚಳುವಳಿಯೆಂದು ವರ್ಣಿಸಿದರು.ಕನ್ನಡವನ್ನು ಬೆಳೆಸುವ ಮತ್ತು ಕಾಪಾಡುವ ಕಾರ್ಯ ಇದರಿಂದ ಸಾಧ್ಯವಾಯಿತು. ಮರಾಠಿ, ಉರ್ದು, ಪರ್ಷಿಯನ್, ಇಂಗ್ಲಿಷ್ ಪ್ರಭಾವದಿಂದ ಕಳಾ ಹೀನವಾಗಿದ್ದ ಕನ್ನಡದ ಅಸ್ಮಿತೆಯ ಮತ್ತು ಅಸ್ತಿತ್ವದ ಹೋರಾಟವಿದು ಎಂದು ಅಭಿಪ್ರಾಯ ಪಟ್ಟರು. ಕನ್ನಡ ಕಲಿಯಲು ತೋರುವ ಅನಾದರ,ಅಸಡ್ಡೆ, ಮೂಲಭೂತ ಸೌಕರ್ಯ ಇಲ್ಲದೆ ಕನ್ನಡ ಶಾಲೆ ಮುಚ್ಚುವಿಕೆ, ಬೇರೆ ಭಾಷೆಗಳ ಪ್ರಾಬಲ್ಯ, ಹೀಗೆ ನಾನಾ ವಿಷಯಗಳಿಂದ ನೊಂದು ಕರ್ನಾಟಕ ಏಕೀಕರಣದ ಹೋರಾಟ ಹುಟ್ಟಲು ಕಾರಣ ವಾಯ್ತು…

Read More

ಸಹಕಾರ ಭಾರತಿ ಕರ್ನಾಟಕ, ವಿಜಯಪುರ ಜಿಲ್ಲಾ ಘಟಕದ ವಿವಿಧ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಸಹಕಾರ ಭಾರತಿ ಒಂದು ರಾಷ್ಟ್ರೀಯ ಸಂಘಟನೆಯಾಗಿದೆ. ಅಲ್ಲದೆ ಸಹಕಾರಿ ಕ್ಷೇತ್ರದಿಂದ ದೇಶದ ಸಮೃದ್ಧಿ ಸಾಧಿಸಬಹುದಾಗಿದೆ ಎಂದು ಸಂಸದ ರಮೇಶ ಜಿಗಜಿಣಗಿ ತಿಳಿಸಿದರು.ಅವರು ಸಹಕಾರ ಭಾರತಿ ಕರ್ನಾಟಕ, ವಿಜಯಪುರ ಜಿಲ್ಲಾ ಘಟಕದ ವಿವಿಧ ಪದಾಧಿಕಾರಿಗಳ ಹಾಗೂ ಜಿಲ್ಲಾ ಅಧ್ಯಕ್ಷ, ಸಂಘಟನಾ ಕಾರ್ಯದರ್ಶಿ, ಪ್ರಧಾನ ಕಾರ್ಯದರ್ಶಿ ಗಳ ಪದಗ್ರಹಣ ಕಾರ್ಯಕ್ರಮ ನಗರದ ಬಾವಸಾರ ಸಾಂಸ್ಕೃತಿಕ ಭವನದಲ್ಲಿ ಜರುಗಿದ ಸಮಾರಂಭವನ್ನು ಉದ್ಘಾಟಿಸಿ ಮಾತನಾಡುತ್ತ, ಸಹಕಾರ ಸಂಘಗಳಲ್ಲಿ ಜನರು ತೊಡಗಿಸಿದ ಹಣ ಅದು ಸಾರ್ವಜನಿಕ ಹಣ ಆ ಹಣವನ್ನು ಕಾಯುವ ಜವಾಬ್ದಾರಿ ಪ್ರತಿಯೊಬ್ಬ ನಿರ್ದೇಶಕರ ಜವಾಬ್ದಾರಿ ಅಧಿಕಾರ ಇದೆ ಎಂದು ಸಾರ್ವಜನಿಕ ದುಡ್ಡನ್ನು ಭಿಕಾಬಿಟ್ಟೆ ಸಾಲ ನೀಡಿದರೆ ಸಹಕಾರಿ ಸಂಘಗಳು ಮಹತ್ವ ಕಳೆದು ಕೊಳ್ಳುತ್ತವೇ ಎಂದರು.ಇದೆ ಸಂದರ್ಭದಲ್ಲಿ ಕೇಂದ್ರ ಸರಕಾರ ತಂದ ಹೊಸ ಸಹಕಾರ ನೀತಿಯ ಮಾಹಿತಿ ಇರುವ ಕರಡನ್ನು ಸಹಕಾರ ಭಾರತಿ ರಾಜಾಧ್ಯಕ್ಷರಿಗೆ ನೀಡಿದರು.ಮುಖ್ಯ ಅತಿಥಿಗಳಾದ ಸಹಕಾರ…

Read More

ಉದಯರಶ್ಮಿ ದಿನಪತ್ರಿಕೆ ವಿಜಯಪುರ: ರಾಜ್ಯ ಚುನಾವಣಾ ಆಯೋಗದ ಮಾರ್ಗದರ್ಶನದಂತೆ ಜಿಲ್ಲೆಯ ನಿಡಗುಂದಿ ಪಟ್ಟಣ ಪಂಚಾಯತ್ ವಾರ್ಡ-೦೫ರ ಉಪ ಚುನಾವಣೆಗೆ ಸಂಬಂಧಿಸಿದಂತೆ ಅಂತಿಮ ಮತದಾರರ ಪಟ್ಟಿಯನ್ನು ಜುಲೈ ೨೫ ರಂದು ಪ್ರಕಟಿಸಲಾಗಿದೆ ಎಂದು ಅಪರ ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.ಕರಡು ಮತದಾರರ ಪಟ್ಟಿಗೆ ಜುಲೈ ೨೪ರವರೆಗೆ ಸ್ವೀಕೃತವಾದ ಆಕ್ಷೇಪಣೆಗಳನ್ನು ಇತ್ಯರ್ಥಪಡಿಸಿ ಜುಲೈ ೨೫ರಂದು ಅಂತಿಮ ಮತದಾರರ ಪಟ್ಟಿಯನ್ನು ಪ್ರಕಟಿಸಲಾಗಿದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Read More

ಉದಯರಶ್ಮಿ ದಿನಪತ್ರಿಕೆ ಮುದ್ದೇಬಿಹಾಳ: ತಾಲೂಕಿನ ಬಿದರಕುಂದಿ ಆದರ್ಶ ವಿದ್ಯಾಲಯದಲ್ಲಿ ನೂತನ ಎಸ್.ಡಿ.ಎಂ.ಸಿ ರಚನೆ ಮಾಡಲಾಯಿತು.ಅಧ್ಯಕ್ಷೆಯಾಗಿ ಪೂರ್ಣಿಮಾ ಬೆಳಗಲ್ ಉಪಾಧ್ಯಕ್ಷರಾಗಿ ಸಂಗನಗೌಡ ಪಾಟೀಲ ಇವರನ್ನ ಆವಿರೊದ ಆಯ್ಕೆ ಮಾಡಲಾಯಿತು. ಎಸಿ೧ ಯಲ್ಲಪ್ಪ ಮ್ಯಾಗೇರಿ, ಎಸ್ ಟಿ೧ ಶರಣಪ್ಪ ಸುತಗೊಂಡ ಅವರನ್ನ ಚೀಟಿ ಎತ್ತುವ ಮೂಲಕ ಆಯ್ಕೆ ಮಾಡಲಾಯಿತು. ಅಲ್ಪಸಂಖ್ಯಾತರ ಕೋಟಾದಲ್ಲಿ ಬಂದೇನವಾಜ ಕುಮಸಿ ಅವರನ್ನು ಆವಿರೊಧವಾಗಿ ಆಯ್ಕೆ ಮಾಡಲಾಯಿತು. ಮುಖ್ಯಗುರು ಅನಿಲ್ ಕುಮಾರ್ ರಾಠೋಡ ಅವರು ಖಜಾಂಚಿ ಹಾಗೂ ಕಾರ್ಯದರ್ಶಿಯಾಗಿ ಆಯ್ಕೆಯಾದರು.ಈ ಸಂದರ್ಭದಲ್ಲಿ ಅಕ್ಷರ ದಾಸೋಹದ ಸಹಾಯಕ ನಿರ್ದೇಶಕ ಎಂ.ಎಂ.ಬೆಳಗಲ್, ಸೋಮನಗೌಡ ಪಾಟೀಲ್, ಗುಂಡಪ್ಪ ಕೋಟಿಗಿ, ಮಹಮ್ಮದ್ ರಸೂಲ್ ಮುಲ್ಲಾ ಸೇರಿದಂತೆ ಹಲವರು ಇದ್ದರು.

Read More

ಉದಯರಶ್ಮಿ ದಿನಪತ್ರಿಕೆ ಆಲಮೇಲ: ತೆರವು ಹಾಗೂ ವಿವಿದ ಸಮುದಾಯಗಳ ಬೇಡಿಕೆಗಳನ್ನು ಇಡೇರಿಸುವಂತೆ ಆಗ್ರಹಿಸಿ ಅನಿರ್ಧಿಷ್ಟಾವಧಿ ಸತ್ಯಾಗ್ರಹ ಶುಕ್ರವಾರ ೩ನೇ ದಿನ ಪೂರ್ಣಗೊಳಿಸಿ ಶನಿವಾರ ನಾಲ್ಕನೇ ದಿನಕ್ಕೆ ಅರೆಬೆತ್ತಲೆ ಮೆರವಣಿಗೆ ಮೂಲಕ ಮುಂದುವರೆಯಲಿದೆ.ಪಟ್ಟಣದ ಬಸವೇಶ್ವರ ಸರ್ಕಲ್ ಬಳಿ ಹಮ್ಮಿಕೊಂಡಿರುವ ಅನಿರ್ಧಿಷ್ಟಾವಧಿ ಧರಣಿ ಸತ್ಯಾಗ್ರಹಹಕ್ಕೆ ಶುಕ್ರವಾರ ವಿವಿದ ಸಮುದಾಯದ ಮುಖಂಡರು ಬೆಂಬಲ ವ್ಯಕ್ತಪಡಿಸಿದರು.ಹೋರಾಟದ ನೇತೃತ್ವ ವಹಿಸಿದ ಹರಿಶ ಎಂಟಮಾನ ಮಾತನಾಡಿ, ಧರಣಿ ಸತ್ಯಾಗ್ರಹ ಆರಂಭಗೊಂಡು ಮೂರು ದಿನಗಳಾದರು ಯಾವದೆ ಅಧಿಕಾರಿಗಳು ಸ್ಪಂದಿಸಿಲ್ಲ. ಸರಕಾರಿ ಅಧಿಕಾರಿಗಳು ಸರ್ಕಾರದ ಪರ ಸಾರ್ವಜನಿಕ ಕೆಲಸ ಮಾಡದೆ ಪ್ರಭಾವಿ ವೇಕ್ತಿಗಳ ಕೈಗೊಂಬೆಯಂತೆ ಕೆಲಸ ಮಾಡುತ್ತಿದ್ದಾರೆ. ನಮ್ಮ ಬೇಡಿಕೆಗಳಿಗಾಗಿ ಕಾನೂನು ರೀತಿ ಶಾಂತಿ ರೀತಿಯಿಂದ ಹೋರಾಟ ನಡೆಸುತ್ತಿದ್ದು ನಮ್ಮ ಬೇಡಿಕೆಗೆ ಸ್ಪಂದಿಸದಿದ್ದರೆ ಹೋರಾಟದ ಸ್ವರೂಪ ಬದಲಾಗುತ್ತೆ ಮುಂದುನ ಆಗು ಹೋಗುಗಳಿಗೆ ಅಧಿಕಾರಿಗಳೆ ಹೋನೆ ಎಂದು ಎಚ್ಚರಿಕೆ ನೀಡಿದರಲ್ಲದೆ, ಶನಿವಾರ ಅರೆಬೆತ್ತಲೆ ಮೇರವಣಿಗೆ ಮೂಲಕ ಹೋರಾಟ ಮಾಡಲಾಗುವದು ಎಂದು ತಿಳಿಸಿದರು.ಮೂರನೆ ದಿನದ ಧರಣಿಯಲ್ಲಿ ಮಾಗಣಗೇರಿಯ ಶ್ರೀಶೈಲಗೌಡ ಬಿರಾದಾರ, ಬ್ಲಾಕ ಕಾಂಗ್ರೇಸ್ ಮಾಜಿ ಅಧ್ಯಕ್ಷ,…

Read More

ಉದಯರಶ್ಮಿ ದಿನಪತ್ರಿಕೆ ಇಂಡಿ: ಪ್ರತಿಯೊಬ್ಬ ಮಕ್ಕಳಲ್ಲಿ ಒಂದಿಲ್ಲ ಒಂದು ಪ್ರತಿಭೆ ಇರುತ್ತದೆ. ಅದನ್ನು ಹೊರತರುವ ವೇದಿಕೆ ಸೃಷ್ಠಿಸಬೇಕಿದೆ. ಆಗ ಮಕ್ಕಳ ಪ್ರತಿಭೆ ಹೊರಬರಲು ಸಾಧ್ಯ ಎಂದು ಇಂಡಿ ತಾಲ್ಲೂಕು ಶಿಶು ಅಭಿವೃದ್ಧಿ ಅಧಿಕಾರಿ ರೇಷ್ಮಾ ಚವ್ಹಾಣ ಹೇಳಿದರು.ಗುರುವಾರ ಇಂಡಿ ಪಟ್ಟಣದ ಸರ್ಕಾರಿ ಕನ್ನಡ ಹೆಣ್ಣುಮಕ್ಕಳ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಬಾಲ ಭವನ ಸೋಸೈಟಿ ಬೆಂಗಳೂರು, ಜಿಲ್ಲಾ ಬಾಲ ಭವನ ಸಮಿತಿ ವಿಜಯಪುರ, ತಾಲ್ಲೂಕು ಬಾಲ ಭವನ ಸಮಿತಿ ಇಂಡಿ ಹಾಗೂ ಕೆಜಿಎಸ್ ಶಾಲೆ ಇಂಡಿ ಇವರ ಸಹಯೋಗದಲ್ಲಿ ಕೆಜಿಎಸ್ ಶಾಲೆಯಲ್ಲಿ ಆಯೋಜಿಸಿದ್ದ ಮಕ್ಕಳ ಕಲಾ ಪ್ರತಿಭೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.ಇಂತಹ ಕಾರ್ಯಕ್ರಮಗಳು ಆಗಾಗ ಆಯೋಜನೆ ಮಾಡಿದರೆ ಮಕ್ಕಳಲ್ಲಿಯ ಕಲೆ ಹೊರತರಲು ಸಾಧ್ಯವಾಗುತ್ತದೆ ಎಂದರು.ದೈಹಿಕ ಶಿಕ್ಷಣ ಶಿಕ್ಷಕ ದಶರಥ ಕೋರಿ ಮಾತನಾಡಿ, ರವೀಂದ್ರನಾಥ ಟ್ಯಾಗೋರ ಅವರು ನೋಬೆಲ್ ಪ್ರಶಸ್ತಿ ಪಡೆಯಲು ಅವರಲ್ಲಿರುವ ಸಾಹಿತ್ಯ ಪ್ರತಿಭೆಯೇ ಕಾರಣವಾಯಿತು. ಹೀಗೆ ಮಹಾನ್ ಸಾಧಕರು ತಮ್ಮಲ್ಲಿರುವ ಪ್ರತಿಭೆಯಿಂದಲೇ ಪ್ರಶಸ್ತಿಗಳನ್ನು ಪಡೆದುಕೊಂಡಿದ್ದಾರೆ. ಅಂತವರ ಹೆಸರು ಅಜರಾಮರವಾಗಿ ಉಳಿದಿದೆ.…

Read More

ಸಾರ್ವಜನಿಕರಿಗೆ ಹಾಗೂ ವಾಹನ ಸವಾರರಿಗೆ ಸಂಚಾರಕ್ಕೆ ಸಂಚಕಾರ ತಂದಿರುವ ರಸ್ತೆಗಳು ಉದಯರಶ್ಮಿ ದಿನಪತ್ರಿಕೆ ವರದಿ: ಸಿದ್ರಾಮ ಮಾಳಿಚಡಚಣ: ಶಿರಾಡೋಣದಿಂದ ರೇವತಗಾಂವ ಮಾರ್ಗವಾಗಿ ಉಮರಜ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಹದೆಗೆಟ್ಟು ೧೦ ವರ್ಷಗಳೇ ಕಳೆದಿದ್ದರೂ ಅಧಿಕಾರಿಗಳ ಹಾಗೂ ರಾಜಕಾರಣಿಗಳು ದುರಸ್ಥಿಗೆ ಮುಂದಾಗದ ಕಾರಣ ರಸ್ತೆ ಮಧ್ಯ ಹೊಂಡ ಹಾಗೂ ಗುಂಡಿಗಳು ಸೃಷ್ಟಿಯಾಗಿವೆ. ಇದರಿಂದಾಗಿ ಮಳೆಯಾದಾಗಲೆಲ್ಲ ರಸ್ತೆ ಗದ್ದೆಯಂತಾಗಿ ಸಾರ್ವಜನಿಕರಿಗೆ, ವಾಹನ ಸವಾರರಿಗೆ ಅನಾನುಕೂಲವನ್ನುಂಟು ಮಾಡುತ್ತಿದೆ.ರಸ್ತೆ ಸಂಪೂರ್ಣವಾಗಿ ಹದೆಗೆಟ್ಟಿರುವ ಕಾರಣ ವಾಹನ ಸವಾರರು, ನಾಗರಿಕರು, ವಿದ್ಯಾರ್ಥಿಗಳು, ಮಹಿಳೆಯರು ಮತ್ತು ಆಸ್ಪತ್ರೆಗೆಂದು ತೆರಳುವ ರೋಗಿಗಳು ಅಧಿಕಾರಿಗಳು ಹಾಗೂ ರಾಜಕಾರಣಿಗಳಿಗೆ ಹಿಡಿ ಶಾಪ ಹಾಕುತ್ತಿದ್ದಾರೆ.ರಸ್ತೆಯ ಮಧ್ಯ ಭಾಗದಲ್ಲಿ ಸುಮಾರು ಮೊಣಕಾಲುದ್ದ ಗುಂಡಿಗಳು ನಿರ್ಮಾಣವಾಗಿವೆ. ಮಳೆ ನೀರು ಗುಂಡಿಗಳಲ್ಲಿ ನಿಂತು ರಸ್ತೆ ಯಾವುದು, ಗುಂಡಿ ಯಾವುದು ಎಂಬ ಪರಿಸ್ಥಿತಿ ನಿರ್ಮಾಣವಾಗಿದೆ. ಪಕ್ಕದ ಮಹಾರಾಷ್ಟ್ರ ಹಾಗೂ ಚಡಚಣ ಪಟ್ಟಣ ಸೇರಿದಂತೆ ಕಾರ್ಮಿಕರು, ವಿದ್ಯಾರ್ಥಿಗಳು ಶಾಲಾ-ಕಾಲೇಜುಗಳಿಗೆ ತೆರಳಲು ಇದೇ ಮಾರ್ಗದ ಮೂಲಕ ಪ್ರಯಾಣಿಸುತ್ತಾರೆ.ಆದರೆ ರಸ್ತೆಯಲ್ಲಿ ಗುಂಡಿಗಳು ಬಿದ್ದಿರುವುದರಿಂದ ಅನೇಕ ದ್ವಿಚಕ್ರ…

Read More

ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಯುವಕರಲ್ಲಿ ಹೃದಯ ಸಂಬಂಧಿ ಕಾಯಿಲೆಗಳು ಹೆಚ್ಚುತ್ತಿರುವುದರಿಂದ ಮುಂಜಾಗೃತ ಕ್ರಮವಾಗಿ ಮಕ್ಕಳ ಆರೋಗ್ಯ ಕಡೆ ಹೆಚ್ಚು ನಿಗಾ ವಹಿಸಬೇಕು ಎಂದು ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಅಧ್ಯಕ್ಷ ಕೆ. ನಾಗಣ್ಣಗೌಡ ಹೇಳಿದರು.ಶುಕ್ರವಾರದ ನಗರದ ಅಲ್ಪ ಸಂಖ್ಯಾತರ ವಸತಿ ಶಾಲೇಜು, ಎಸ್.ಎಸ್. ಪಿ.ಯು ಕಾಲೇಜು ಹಾಗೂ ಸೇಂಟ್ ಜೊಸೆಪ್ ಶಾಲೆಗಳಿಗೆ ಅನಿರೀಕ್ಷವಾಗಿ ಭೇಟಿ ನೀಡಿ ಪರಿಶೀಲನೆ ನಡೆಸಿದ ಅವರು ಠಕ್ಕೆ ಹತ್ತಿರ ವಿರುವ ಅಲ್ಪ ಸಂಖ್ಯಾತರ ವಸತಿ ಕಾಲೇಜಿಗೆ ಭೇಟಿ ನೀಡಿ ಆವರಣದಲ್ಲಿರುವ ಹೆಣ್ಣು ಮಕ್ಕಳ ವಾಸಿಸುವ ಕೊಠಡಿಯಲ್ಲಿ ಅವಶ್ಯಕ್ಕಿಂತ ಹೆಚ್ಚು ಮಕ್ಕಳ ವಾಸಿಸುತ್ತಿರುವುದನ್ನು ಕಂಡು ಹೆಚ್ಚುವರಿ ಮಕ್ಕಳಿಗೆ ಪರ್ಯಾಯ ವ್ಯವಸ್ಥ ಕಲ್ಪಿಸಬೇಕು, ಮೂಲಭೂತ ಸೌಕರ್ಯಗಳಾದ ಶೌಚಾಲಯ, ಕುಡಿಯುವ ನೀರು, ಉತ್ತಮ ಆಹಾರ ಹಾಗೂ ಸುವ್ಯವಸ್ಥಿತ ವಸತಿ ಕಲ್ಪಿಸುವಂತೆ ಹಾಗೂ ಸ್ವಚ್ಚತೆಗೆ ಹೆಚ್ಚು ಗಮನ ಹರಿಸಬೇಕು ಎಂದು ಅವರು ಹೇಳಿದರು.ಯುವಕರಲ್ಲಿ ಹೆಚ್ಚು ಹೃದಯಕ್ಕೆ ಸಂಬಂಧಿತ ಕಾಯಿಲೆಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಶಾಲಾ ಮಕ್ಕಳಿಗೆ ಶಿಕ್ಷಣದೊಂದಿಗೆ ಯೋಗ, ಪಿಜಿಕಲ್ ಎಜುಕೇಶನ್…

Read More

ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಅಧ್ಯಕ್ಷ ಕೆ.ನಾಗಣ್ಣಗೌಡ ಅಧಿಕಾರಿಗಳಿಗೆ ಸೂಚನೆ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಮಕ್ಕಳ ರಕ್ಷಣೆ ಮತ್ತು ಅವರ ಉಜ್ವಲ ಭವಿಷ್ಯಕ್ಕಾಗಿ ಸರ್ಕಾರ ವಿವಿಧ ಇಲಾಖೆಗಳ ಮೂಲಕ ಹಲವು ಯೋಜನೆಗಳನ್ನು ಜಾರಿಗೊಳಿಸಿದ್ದು ಈ ಯೋಜನೆಗಳನ್ನು ಅಧಿಕಾರಿಗಳು ಸಮರ್ಪಕವಾಗಿ ಅನುಷ್ಠಾನಗೊಳಿಸುವ ಮೂಲಕ ಮಕ್ಕಳ ರಕ್ಷಣೆಗೆ ಮುಂದಾಗಬೇಕು ಎಂದು ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಅಧ್ಯಕ್ಷ ಕೆ.ನಾಗಣ್ಣಗೌಡ ಅವರು ಹೇಳಿದರು.ಮಕ್ಕಳ ನಿರ್ದೇಶನಾಲಯ ಬೆಂಗಳೂರು, ವಿಜಯಪುರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಹಾಗೂ ವಿವಿಧ ಭಾಗಿದಾರ ಇಲಾಖೆಗಳು, ಸ್ವಯಂ ಸೇವಾ ಸಂಸ್ಥೆಗಳ ಸಂಯುಕ್ತಾಶ್ರಯದಲ್ಲಿ ಶುಕ್ರವಾರ ನಗರದ ಮಹಾನಗರ ಪಾಲಿಕೆ ಸಭಾಂಗಣದಲ್ಲಿ ನಡೆದ ಆರ್‌ಟಿಇ-೨೦೦೯ ಪೋಕ್ಸೋ-೨೦೧೨ ಹಾಗೂ ಬಾಲ ನ್ಯಾಯ ಕಾಯ್ದೆ ೨೦೧೫ ಅನುಷ್ಠಾನ ಹಾಗೂ ಮಕ್ಕಳಿಗೆ ಸಂಬಂಧಿಸಿದ ಕಾರ್ಯಕ್ರಮ-ಯೋಜನೆಗಳ ಕುರಿತು ನಡೆದ ಜಿಲ್ಲಾ ಮಟ್ಟದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.ಮಕ್ಕಳ ಹಕ್ಕುಗಳ ರಕ್ಷಣೆಗಾಗಿ…

Read More