Author: editor.udayarashmi@gmail.com

ಉದಯರಶ್ಮಿ ದಿನಪತ್ರಿಕೆ ಜಮಖಂಡಿ: ತಾಲೂಕಿನ ಸಿದ್ದಾಪುರ ಗ್ರಾಮದ ಮುಧೋಳ ಹೆದ್ದಾರಿಯಲ್ಲಿ ಚಲಿಸುತ್ತಿದ್ದ ಸಿಮೆಂಟ್ ಲಾರಿ ಟ್ಯಾಂಕರ್ ಟೈರಗಳು ಕಾಯ್ದು ಆಕಸ್ಮಿಕವಾಗಿ ಬೆಂಕಿ ಹತ್ತಿ ಲಾರಿಯ ಮುಂದಿನ ಭಾಗ ಸುಟ್ಟು ಕರಕಲಾಗಿದೆ.ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ ಎಂದು ಮಾಹಿತಿ ತಿಳಿದು ಬಂದಿದೆ.ಬೆಳಗಾವಿ ಜಿಲ್ಲೆಯ ಹಿರೇಬಾಗೇವಾಡಿ ತಾಲೂಕಿನ ಚಾಲಕ ಜಗದೀಶ ಗುರಪ್ಪ ಪಾಟೀಲ ಸಿಮೆಂಟ್ ಟ್ಯಾಂಕರ್ ಲಾರಿಯನ್ನು ಲೋಕಾಪೂರ ಕಡೆಯಿಂದ ಮುಧೋಳ ಹಾಗೂ ಜಮಖಂಡಿ ಮಾರ್ಗವಾಗಿ ಮಹಾರಾಷ್ಟ್ರಕ್ಕೆ ಹೋಗುವ ಸಂಧರ್ಭದಲ್ಲಿ ಸಿದ್ದಾಪೂರ ಗ್ರಾಮದ ರಸ್ತೆ ಮೇಲೆ ಅಕಸ್ಮಿಕವಾಗಿ ಲಾರಿಗೆ ಬೆಂಕಿ ಹೊತ್ತಿಕೊಂಡಿದೆ ಎಂದು ತಿಳಿದುಬಂದಿದೆ.ಸ್ಥಳಕ್ಕೆ ಅಗ್ನಿಶಾಮಕ ದಳ ಸಿಬ್ಬಂದಿಗಳು ಆಗಮಿಶಿ ಬೆಂಕಿಯನ್ನು ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ.ಸುದ್ದಿ ತಿಳಿದ ತಕ್ಷಣ ಸ್ಥಳಕ್ಕೆ ಜಮಖಂಡಿ ಗ್ರಾಮೀಣ ಪೊಲೀಸ್ ಠಾಣೆಯ ಪೋಲಿಸರು ಭೇಟಿ ನೀಡಿ, ಪರಿಶೀಲನೆ ನಡೆಸಿ ತನಿಖೆ ಕೈಗೊಂಡಿದ್ದಾರೆ.

Read More

ಶಿಕ್ಷಕರ ದಿನಾಚರಣೆ ಆಚರಿಸಿದ ಈ ಸಂದರ್ಭದಲ್ಲಿ ಗುರುವಿನ ಮಹತ್ವ ಕುರಿತ ಈ ಲೇಖನ ನಿಮಗಾಗಿ.. ಲೇಖನ- ಡಾ ಎಂ.ಎಸ್.ಆಲಮೇಲಯಡ್ರಾಮಿಜಿಲ್ಲಾ ಕಲಬುರ್ಗಿಮೋ. 9740499814 ಉದಯರಶ್ಮಿ ದಿನಪತ್ರಿಕೆ ಗುರುಬ್ರಹ್ಮ, ಗುರುವಿಷ್ಣು, ಗುರುದೇವೋ ಮಹೇಶ್ವರಃ ಗುರುಸಾಕ್ಷಾತ್ ಪರಬ್ರಹ್ಮ ತಸ್ಮೈ ಶ್ರೀ ಗುರುವೇ ನಮಃ.ಅನಾದಿ ಕಾಲದಿಂದಲೂ ನಾವು, ಗುರುವರ್ಯರನ್ನು ದೇವರ ಸ್ಥಾನದಲ್ಲಿ ಆರಾಧಿಸುತ್ತ ಬಂದಿದ್ದೇವೆ.ಗುರುಬ್ರಹ್ಮಇಲ್ಲಿ ಗುರುವನ್ನು ಬ್ರಹ್ಮದೇವನಿಗೆ ಹೋಲಿಸಲಾಗಿದೆ. ಕಾರಣ, ಬ್ರಹ್ಮದೇವ ಹೇಗೆ ಜಗದ ಸೃಷ್ಠಿಕರ್ತನೋ ಹಾಗೆ ಗುರುವು, ಜ್ಞಾನದ ಸೃಷ್ಟಿಕರ್ತ, ಅಂದರೆ ಹೊಸತನ್ನು ಕಲಿಸಿಕೊಡುವವನು.ಗುರುವಿಷ್ಣುಇಲ್ಲಿ ಗುರುವಿಷ್ಣು ಕಲಿತ ವಿದ್ಯೆಯನ್ನುಪಾಲಿಸುವಂತೆಅಂದ್ರೆ ಸಮರ್ಪಕವಾಗಿ ಉಪಯೋಗಿಸಲು ದಾರಿ ತೋರುವನು.ಗುರುದೇವೋ ಮಹೇಶ್ವರಃಮಹಾದೇವ ಶಿವನು ಅಧರ್ಮ, ಅಂಧಕಾರ,ಅಜ್ಞಾನದ ಸಂಹಾರಕ ಲಯಕಾರನು, ಅಲ್ಪಮತಿಯನು ಅಳಿಸಿಹಾಕಿ ಜ್ಞಾನದ ಜ್ಯೋತಿ ಬೆಳಗಿಸುವ ಮಹಾಜ್ಞಾನಿ.ಗುರುಸಾಕ್ಷಾತ್ ಪರಬ್ರಹ್ಮಗುರುವೇ ಪರಬ್ರಹ್ಮನಿಗೆ ಸಮಾನವಾಗಿ ದೈವಸ್ಥಾನದಲ್ಲಿ ನಿಲ್ಲುವರೆಂದು ಹೇಳಲಾಗುತ್ತದೆ.ಅಂದ್ರೆ ನಮಗೆ ವಿದ್ಯೆ, ಬುದ್ಧಿ, ಸಿದ್ದಿ ಕಲಿಸಿಕೊಟ್ಟು ಅಜ್ಞಾನದಿಂದ ಸುಜ್ಞಾನದ ಕಡೆಗೆ ನಡೆಸುವ ಮಹಾಶಕ್ತಿ.ಗುರುವೆಂದರೆ ಥಟ್ಟಂತ ನೆನಪಿಗೆ ಬರುವವರು, ಆದಿಜಗದ್ಗುರು ಶ್ರೀ ಶಂಕರಾಚಾರ್ಯರು, ರಾಮಕೃಷ್ಣ ಪರಮಹಂಸರು ವೀರಸಂತ ಸ್ವಾಮಿ ವಿವೇಕಾನಂದರು, ಕರುನಾಡ ಮಹಾಜ್ಯೋತಿ, ಸಿದ್ದಗಂಗೆಯ ಡಾ.…

Read More

ಲೇಖನ- ಡಾ.ರಾಜಶೇಖರ ನಾಗೂರ”ನಮ್ಮ ಕಥಾ ಅರಮನೆ”ಬರಹಗಾರರು ಉದಯರಶ್ಮಿ ದಿನಪತ್ರಿಕೆ ಈ ಜೀವನ ಎನ್ನುವುದು ನಾವು ಹೆಜ್ಜೆ ಇಟ್ಟ ತಕ್ಷಣ ತೆರೆದುಕೊಳ್ಳುವ ಕೆಂಪು ಹಾಸಿಗೆ ( Red carpet) ಖಂಡಿತ ಅಲ್ಲಾ. ಇಲ್ಲಿ ಪ್ರತಿಯೊಂದು ಕ್ರಿಯೆಗೂ, ಪ್ರಕ್ರಿಯೆಗೂ, ಕಾರ್ಯಕ್ಕೂ ಸಮಯ ಬೇಕು. ಆ ಸಮಯ ಬರುವವರೆಗೆ ಕಾಯುವ ತಾಳ್ಮೆ ನಮಗಿರಬೇಕು. ಯಾರು ಈ ತಾಳ್ಮೆಯನ್ನು ಮೈಗೂಡಿಸಿಕೊಂಡು ಸಾಗುತ್ತಾರೋ ಅವರು ಮಾತ್ರ ಜೀವನದಲ್ಲಿ ಏನನ್ನಾದರೂ ಸಾಧಿಸಬಲ್ಲರು. ಏನನ್ನಾದರೂ ಪಡೆಯಬಲ್ಲರು.ತಾಯಿಯ ಗರ್ಭದಿಂದ ಮಗು ಜನಿಸಲು 9 ತಿಂಗಳು ತಾಳ್ಮೆಯಿಂದ ಕಾಯಬೇಕು. ಒಂದು ರಾತ್ರಿ, ಹಗಲಾಗಿ ಪರಿವರ್ತನೆ ಹೊಂದಲು 12 ಗಂಟೆಗಳು ಕಳೆಯಲೇ ಬೇಕು. ಒಂದು ಮತ ಚಲಾಯಿಸುವ ಹಕ್ಕು ಪಡೆಯಲು 18 ವರ್ಷದವನಾಗಲೇ ಬೇಕು. ಹೀಗೆ ಬದುಕಿನಲ್ಲಿ ತಾಳ್ಮೆಯೇ ಅಮೂಲ್ಯ ಸಂಪತ್ತು.ಈ ಬದುಕನ್ನು ಒಲಿಸಿ ಕೊಳ್ಳುವುದು ಎಂದರೆ ದೇವರನ್ನು ತಾಳ್ಮೆಯಿಂದ ಒಲಿಸಿಕೊಂಡಂತೆ. ತಾಳ್ಮೆ ಇಲ್ಲದ ವರ್ತನೆ ನಮ್ಮನ್ನು ಎಲ್ಲಿಯೂ ಕೊಂಡೊಯುವುದಿಲ್ಲ. ಈ ತಾಳ್ಮೆಯ ಮಹತ್ವವನ್ನು ಒಂದು ಘಟನೆಯ ಮೂಲಕ ಪ್ರಸ್ತುತಪಡಿಸುತ್ತೇನೆ. ಮಹಾಭಾರತದ ಅನುಷಾಸನ ಪರ್ವದಲ್ಲಿ ಭೀಷ್ಮ…

Read More

ಉದಯರಶ್ಮಿ ದಿನಪತ್ರಿಕೆ ಚಡಚಣ: ಚಡಚಣ ತಾಲೂಕಿನ ಲೋಣಿ ಗ್ರಾಮದ ಯುವಕ ಗುರುಬಾಳಯ್ಯ ತಂ.ಶ್ರೀಶೈಲ ಹಿರೇಮಠ ವ.೩೨. ಲೋಣಿ ಕ್ರಾಸ್ ಹತ್ತಿರ ಇರುವ ಚನ್ನಪ್ಪ ದಾಭಾ ದಿಂದ ಮರಳಿ ತನ್ನ ಊರಾದ ಲೋಣಿ ಬಿ.ಕೆ.ಗ್ರಾಮಕ್ಕೆ ಬುಧವಾರ ರಾತ್ರಿ ಸುಮಾರು ೧೨.೩೦ ರ ಸಮಯದಲ್ಲಿ ದ್ವೀಚಕ್ರ ವಾಹನದ ಮೇಲೆ ಹೋಗುತ್ತಿರುವ ಸಮಯಲ್ಲಿ ದ್ವೀಚಕ್ರ ವಾಹನದ ಟೈಯರ್‌ಗಳು ಸ್ಕಿಡ್ ಆಗಿ ಬಿದ್ದು ತಲೆಗೆ ಗಂಭೀರ ಗಾಯಗಳಾಗಿ ರಕ್ತಸ್ರಾವವಾಗಿ ಮೃತಪಟ್ಟಿದ್ದಾನೆ ಎಂದು ಚಡಚಣ ಪೋಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ ಎಂದು ಚಡಚಣ ಪಿಎಸ್‌ಐ ಪ್ರವೀಣಕುಮಾರ ಗರೇಬಾಳ ತಿಳಿಸಿದ್ದಾರೆ.

Read More

ಉದಯರಶ್ಮಿ ದಿನಪತ್ರಿಕೆ ಸಿಂದಗಿ: ಪಟ್ಟಣದ ರಾಂಪೂರ ರಸ್ತೆಯಲ್ಲಿರುವ ಸಮರ್ಥ ವಿದ್ಯಾವಿಕಾಸ ವಿವಿದೋದ್ಧೇಶಗಳ ಪ್ರೇರಣಾ ಸಮೂಹ ಶಿಕ್ಷಣ ಸಂಸ್ಥೆ ಮತ್ತು ಶಾಲಾ ಮಕ್ಕಳ ಸಹಯೋಗದಲ್ಲಿ ಸೆ.೦೫ ಶುಕ್ರವಾರದಂದು ಮದ್ಯಾಹ್ನ ೩:೩೦ಗಂಟೆಗೆ ಶಾಲಾ ಆವರಣದಲ್ಲಿ ಶಿಕ್ಷಕರ ದಿನಾಚರಣೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಸಂಸ್ಥೆಯ ಅಧ್ಯಕ್ಷ ಆರ್.ಡಿ.ಕುಲಕರ್ಣಿ ತಿಳಸಿದ್ದಾರೆ.ಕಾರ್ಯಕ್ರಮವನ್ನು ಮಾಜಿ ವಿಪ ಸದಸ್ಯ ಅರುಣ ಶಹಾಪೂರ ಉದ್ಘಾಟಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಬಿ.ಯಡ್ರಾಮಿ, ಸೋಮನಾಳ ಸರಕಾರಿ ಪ್ರೌಢಶಾಲೆಯ ಮುಖ್ಯಗುರು ಆರ್.ಎಸ್.ನೀರಲಗಿ ಆಗಮಿಸಲಿದ್ದಾರೆ. ಗೌರವ ಉಪಸ್ಥಿತಿಯನ್ನು ಸಂಸ್ಥೆಯ ನಿರ್ದೇಶಕ ಪಿ.ಡಿ.ಕುಲಕರ್ಣಿ, ಶಾಲಾ ಮುಖ್ಯಗುರುಮಾತೆ ಎಸ್.ಆಯ್.ಅಸ್ಕಿ ಹಾಗೂ ಎಂ.ಪಿ.ಬುಕ್ಕಾ ವಹಿಸಿಕೊಳ್ಳುವರು. ಅಧ್ಯಕ್ಷತೆಯನ್ನು ಸಂಸ್ಥೆಯ ಅಧ್ಯಕ್ಷ ಆರ್.ಡಿ.ಕುಲಕರ್ಣಿ ವಹಿಸುವರು ಎಂದು ಆಡಳಿತ ಮಂಡಳಿ ಪತ್ರಿಕಾ ಪ್ರಕಟಣೆಯ ಮೂಲಕ ತಿಳಿಸಿದೆ.

Read More

ಉದಯರಶ್ಮಿ ದಿನಪತ್ರಿಕೆ ಸಿಂದಗಿ: ಮಾನವನ ಪಂಚೇಂದ್ರಿಯಗಳಲ್ಲಿ ಕಣ್ಣು ಪ್ರಮುಖವಾದದ್ದು. ಕಣ್ಣು ದಾನ ಮಾಡುವ ಮೂಲಕ ಬೇರೊಬ್ಬರಿಗೆ ದೃಷ್ಟಿ ನೀಡಿ ಬಾಳು ಬೆಳಗಬೇಕು ಎಂದು ವಾರದ ಕಣ್ಣಿನ ಆಸ್ಪತ್ರೆಯ ಡಾ.ಸುಷ್ಮಾ ವಾರದ ಹೇಳಿದರು.ಸಿಂದಗಿ ಪಟ್ಟಣದ ಜಿ.ಪಿಪೋರವಾಲ ಕಲಾ ವಾಣಿಜ್ಯ ಹಾಗೂ ವಿ.ವಿ.ಸಾಲಿಮಠ ವಿಜ್ಞಾನ ಮಹಾವಿದ್ಯಾಲಯದ ಎನ್.ಎಸ್.ಎಸ್, ಎನ್.ಸಿಸಿ. ಹಾಗೂ ಯೂತ್ ರೆಡ್ ಕ್ರಾಸ್ ಘಟಕಗಳ ಅಡಿಯಲ್ಲಿ ವಾರದ್ ಕಣ್ಣಿನ ಆಸ್ಪತ್ರೆಯ ಸಹಯೋಗದಲ್ಲಿ ಅಂತರಾಷ್ಟ್ರೀಯ ನೇತ್ರದಾನ ಸಪ್ತಾಹ ಅಂಗವಾಗಿ ಹಮ್ಮಿಕೊಂಡ ಉಚಿತ ನೇತ್ರ ತಪಾಸಣಾ ಶಿಬಿರದಲ್ಲಿ ಭಾಗವಹಿಸಿ ಮಾತನಾಡಿದ ಅವರು, ನೇತ್ರದಾನ ಮಹಾದಾನ. ಮಾನವನ ದೇಹದ ಜೊತೆಗೆ ಮಣ್ಣಾಗುವ ಕಣ್ಣುಗಳನ್ನು ದಾನ ಮಾಡಬೇಕು. ಮಾನವನ ದೇಹಕ್ಕೆ ಸಾವು ಬರುತ್ತದೆ. ಆದರೆ ಕಣ್ಣಿಗೆ ಸಾವಿಲ್ಲ. ಕಣ್ಣುಗಳು ಅಮೂಲ್ಯ ಅಂಗಗಳು. ಕಣ್ಣುಗಳ ಆರೈಕೆಯಷ್ಟೇ ರಕ್ಷಣೆಯೂ ಮುಖ್ಯ.ಇತ್ತೀಚಿನ ದಿನಮಾನಗಳಲ್ಲಿ ಮೊಬೈಲ್‌ನ ಅತಿಯಾದ ಬಳಕೆಯಿಂದ ಮಕ್ಕಳು ಮತ್ತು ವಯೋವೃದ್ಧರಲ್ಲಿ ದೃಷ್ಟಿ ದೋಷ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ ಎಂದು ಕಳವಳ ವ್ಯಕ್ತಪಡಿಸಿದರು.ಈ ವೇಳೆ ಮಹಾವಿದ್ಯಾಲಯದ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳಿಗೆ ಉಚಿತ ನೇತ್ರ ತಪಾಸಣೆ…

Read More

ಸಿಂದಗಿಯಲ್ಲಿ ಪುರಸಭೆ ಅಧ್ಯಕ್ಷ ಡಾ.ಶಾಂತವೀರ ಮನಗೂಳಿ ನೇತೃತ್ವದಲ್ಲಿ ಸಂಭ್ರಮಾಚರಣೆ ಉದಯರಶ್ಮಿ ದಿನಪತ್ರಿಕೆ ಸಿಂದಗಿ: ಪಟ್ಟಣದ ಪುರಸಭೆಯನ್ನು ನಗರಸಭೆಯನ್ನಾಗಿ ಮೇಲ್ದರ್ಜೆಗೇರಿಸಲು ರಾಜ್ಯ ಸಚಿವ ಸಂಪುಟ ಅನುಮೋದನೆ ನೀಡಿದೆ. ಇದಕ್ಕಾಗಿ ಶಾಸಕ ಅಶೋಕ ಮನಗೂಳಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಸಚಿವ ಬೈರತಿ ಸುರೇಶ ಅವರಿಗೆ ಪಟ್ಟಣದ ಜನತೆ ಹಾಗೂ ಪುರಸಭೆಯಿಂದ ಅಭಿನಂದಿಸುವುದಾಗಿ ಪುರಸಭೆ ಅಧ್ಯಕ್ಷ ಡಾ.ಶಾಂತವೀರ ಮನಗೂಳಿ ಹೇಳಿದರು.ಸಿಂದಗಿ ಪಟ್ಟಣದ ಮುಖ್ಯ ರಸ್ತೆಯ ಜಗಜ್ಯೋತಿ ಬಸವೇಶ್ವರ ವೃತ್ತದಲ್ಲಿ ಬ್ಲಾಕ್ ಕಾಂಗ್ರೆಸ್ ಸಮಿತಿ ಸಿಂದಗಿ ಪುರಸಭೆಯನ್ನು ನಗರಸಭೆಯನ್ನಾಗಿ ರಾಜ್ಯ ಸರ್ಕಾರ ಸಚಿವ ಸಂಪುಟದಲ್ಲಿ ಅನುಮೋದನೆ ನೀಡಿದ ಹಿನ್ನೆಲೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಪುರಸಭೆಯ ಸದಸ್ಯರು ಬಸವೇಶ್ವರ ವೃತ್ತದಲ್ಲಿ ಪಟಾಕಿ ಸಿಡಿಸಿ ಸಂಭ್ರಮಾಚರಿಸಿ ಮಾತನಾಡಿದ ಅವರು, ಈ ದಿನ ಸಿಂದಗಿ ಇತಿಹಾಸದಲ್ಲಿ ಪುಟದಲ್ಲಿ ಸುವರ್ಣಾಕ್ಷರಗಳಿಂದ ಬರೆದಿಡಬಹುದಾದ ದಿನವಾಗಿದೆ. ಶಾಸಕರ ಸತತ ಪರಿಶ್ರಮ, ಹಿತಾಸಕ್ತಿ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಸಹಕಾರದಿಂದ ನಗರಸಭೆಯಾಗಿ ಮೇಲ್ದರ್ಜೆಗೆ ಏರಿದೆ. ಇದುವರೆಗೂ ಪಟ್ಟಣ ಎಂದು ಕರೆಯುತ್ತಿದ್ದ ನಾವು ಇಂದಿನಿಂದ ಸಿಂದಗಿ ನಗರವಾಗಿದೆ ಎಂದರು.ಈ ವೇಳೆ…

Read More

ಗಣೇಶ ವಿಸರ್ಜನೆಯಲ್ಲಿ ಸಾವಿಗೀಡಾದ ಶುಭಂ ಸಂಕಪಾಳ ಈತನ ಕುಟುಂಬಕ್ಕೆ ನ್ಯಾಯ ಹಾಗೂ ನೌಕರಿ ನೀಡುವಂತೆ ಜಾಗೃತ ಹಿಂದೂ ಮಂಚ ಆಗ್ರಹ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ೭ನೇ ದಿನದ ಗಣೇಶೋತ್ಸವ ನಿಮಿತ್ಯವಾಗಿ ಗಣೇಶ ವಿಸರ್ಜನೆ ಸಮಯದಲ್ಲಿ ಆದಂತಹ ಅವಗಢ ಹಾಗೂ ಹೆಸ್ಕಾಂ ಇಲಾಖೆಯ ನಿರ್ಲಕ್ಷ್ಯತನದಿಂದ ಆದ ಅನಾಹುತಕ್ಕೆ ಹಾಗೂ ಸಾವಿಗೀಡಾದ ಯುವಕನಾದ ಶುಭಂ ಸಂಕಪಾಳ ಇವರ ಕುಟುಂಬಕ್ಕೆ ಸರಕಾರಿ ನೌಕರಿ ನೀಡುವಂತೆ ಆಗ್ರಹಿಸಿ ಜಾಗೃತ ಹಿಂದೂ ಮಂಜ್, ವಿಜಯಪುರ ವತಿಯಿಂದ ಮನವಿ ಸಲ್ಲಿಸಲಾಯಿತು.ಈ ಸಂದರ್ಭದಲ್ಲಿ ಜಾಗೃತ ಹಿಂದೂ ಮಂಜ್ ಅಧ್ಯಕ್ಷರಾದ ಶಿವಾನಂದ ಭುಯ್ಯಾರ ಮಾತನಾಡಿ, ನೊಂದ ಕುಟುಂಬಕ್ಕೆ ನ್ಯಾಯ ಸಿಗುವವರೆಗೂ ಹೋರಾಟ ಮಾಡುವುದಾಗಿ ಶಿವಾನಂದ ತಿಳಿಸಿದರು ನಿನ್ನೆ ನಡೆದ ಗಣೇಶ್ ವಿಸರ್ಜನೆ ವೇಳೆ ಮೆರವಣಿಗೆಯಲ್ಲಿ ವಿದ್ಯುತ್ಪರ್ಷದಿಂದ ೨೨ ವಯಸ್ಸಿನ ಹದಿ ಹರೆಯದ ಯುವಕ ಬಲಿಯಾಗಿದ್ದು ಹೆಸ್ಕಾಂ ನಿರ್ಲಕ್ಷತನದಿಂದ ಮನೆಯ ಬೆಳಗುವ ಹೆಸ್ಕಾಂ ಅಧಿಕಾರಿಗಳು ಇಡೀ ಜಿಲ್ಲೆ ಇಡೀ ನಗರದಲ್ಲಿ ನಿನ್ನೆ ಕತ್ತಲೆ ಕತ್ತಲೆ ಆವರಿಸಿ ದಂತಾಯಿತು ಮಗನ್ನ ಕಳೆದುಕೊಂಡ ಕುಟುಂಬಕ್ಕೆ ಬದುಕೆ ಕತ್ತಲಾಯಿತು…

Read More

ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕರ್ನಾಟಕ ರಾಜ್ಯ ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿ, ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ ಬೆಂಗಳೂರು ಇವರ ಸಂಯುಕ್ತಾಶ್ರಯದಲ್ಲಿ ಇದೇ ಸೆಪ್ಟಂಬರ್ ೮ ರಿಂದ ೧೭ರವರೆಗೆ ನಗರದ ಇಂಡಿ ರಸ್ತೆಯಲ್ಲಿರುವ ಚಾಂದನಿ ಫಂಕ್ಷನ್ ಹಾಲ್‌ನಲ್ಲಿ ರಾಜ್ಯ ಮಟ್ಟದ ಖಾದಿ ಮತ್ತು ಗ್ರಾಮೋದ್ಯೋಗ ವಸ್ತು ಪ್ರದರ್ಶನ ಹಾಗೂ ಮಾರಾಟ ಮೇಳ ಹಮ್ಮಿಕೊಳ್ಳಲಾಗಿದೆ.ವಸ್ತು ಪ್ರದರ್ಶನದಲ್ಲಿ ಖಾದಿ ಮಂಡಳಿಯಿಂದ ಧನಸಹಾಯ ಪಡೆದ ಫಲಾನುಭವಿಗಳು ವಸ್ತು ಪ್ರದರ್ಶನದಲ್ಲಿ ಭಾಗವಹಿಸುತ್ತಿದ್ದು, ವಿಜಯಪುರ, ಬಾಗಲಕೋಟೆ, ಗದಗ, ಬೆಳಗಾವಿ, ಧಾರವಾಡ, ದಾವಣಗೆರೆ. ಚಿತ್ರದುರ್ಗ, ಕೋಲಾರ, ಚಿಕ್ಕಬಳ್ಳಾಪುರ, ರಾಮನಗರ, ತುಮಕೂರು, ಬಳ್ಳಾರಿ, ಕೊಪ್ಪಳ, ಬೀದರ, ಮಂಡ್ಯ ಮೈಸೂರು, ಹಾಗೂ ಹೊರ ರಾಜ್ಯಗಳಿಂದ ಅರಳೆ ಖಾದಿ, ಉಣ್ಣೆ ಖಾದಿ, ಪಾಲಿವಸ್ತ್ರ, ಶುದ್ಧ ಖಾದಿ ರೇಷ್ಮೆ ಸೀರೆಗಳು, ಕಸೂತಿ ಸೀರೆಗಳು, ಜಾಕೇಟ್, ಕರದಂಟು, ಸಿಹಿ ತಿಂಡಿಗಳು, ಡಿಜೈನ್ ಬ್ಯಾಗಗಳು, ಬಿದಿರು ಬೆತ್ತ, ರೆಡಿಮೇಡ್ ಶರ್ಟ್ಗಳು, ಪಾದರಕ್ಷೆಗಳಂತಹ ಖಾದಿ ಉತ್ಪನ್ನಗಳು ವಸ್ತು ಈ ಪ್ರದರ್ಶನದಲ್ಲಿ ಕಾಣಬಹುದಾಗಿದೆ.ವಿಜಯಪುರ ಜಿಲ್ಲೆಯ ನಾಗರಿಕರು ಈ…

Read More

ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಜಿಲ್ಲಾ ಕೃಷಿ ತರಬೇತಿ ಕೇಂದ್ರದ ವತಿಯಿಂದ ಜಿಲ್ಲೆಯ ರೈತ-ರೈತ ಮಹಿಳೆಯರಿಗೆ ಸೆ೮ರಿಂದ ೧೩ರವರೆಗೆ ಜಿಲ್ಲಾ ಕೃಷಿ ತರಬೇತಿ ಕೇಂದ್ರದಲ್ಲಿ ಹೈನುಗಾರಿಕೆ, ಕುರಿ-ಆಡು ಹಾಗೂ ಕೋಳಿ ಸಾಕಾಣಿಕ ತರಬೇತಿ ಆಯೋಜಿಸಲಾಗಿದೆ.೬ ದಿನಗಳ ಕಾಲ ನಡೆಯುವ ಈ ತರಬೇತಿಯಲ್ಲಿ ಭಾಗವಹಿಸುವ ಆಸಕ್ತ ರೈತರು ದಿನಾಂಕ : ೦೬-೦೯-೨೦೨೫ರೊಳಗೆ ನೊಂದಾಯಿಸಿಕೊಳ್ಳಬೇಕು. ನೊಂದಣಿ ಹಾಗೂ ಈ ಕುರಿತಂತೆ ಹೆಚ್ಚಿನ ಮಾಹಿತಿಗಾಗಿ ಕೃಷಿ ಅಧಿಕಾರಿ ಶ್ರೀಮತಿ ಗೀತಾ ಭಜಂತ್ರಿ ಮೊ: ೯೯೮೬೦೫೪೭೫೦ ಇವರನ್ನು ಸಂಪರ್ಕಿಸುವಂತೆ ಜಿಲ್ಲಾ ಕೃಷಿ ತರಬೇತಿ ಕೇಂದ್ರದ ಉಪ ಕೃಷಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Read More