ಗಣೇಶ ವಿಸರ್ಜನೆಯಲ್ಲಿ ಸಾವಿಗೀಡಾದ ಶುಭಂ ಸಂಕಪಾಳ ಈತನ ಕುಟುಂಬಕ್ಕೆ ನ್ಯಾಯ ಹಾಗೂ ನೌಕರಿ ನೀಡುವಂತೆ ಜಾಗೃತ ಹಿಂದೂ ಮಂಚ ಆಗ್ರಹ
ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ೭ನೇ ದಿನದ ಗಣೇಶೋತ್ಸವ ನಿಮಿತ್ಯವಾಗಿ ಗಣೇಶ ವಿಸರ್ಜನೆ ಸಮಯದಲ್ಲಿ ಆದಂತಹ ಅವಗಢ ಹಾಗೂ ಹೆಸ್ಕಾಂ ಇಲಾಖೆಯ ನಿರ್ಲಕ್ಷ್ಯತನದಿಂದ ಆದ ಅನಾಹುತಕ್ಕೆ ಹಾಗೂ ಸಾವಿಗೀಡಾದ ಯುವಕನಾದ ಶುಭಂ ಸಂಕಪಾಳ ಇವರ ಕುಟುಂಬಕ್ಕೆ ಸರಕಾರಿ ನೌಕರಿ ನೀಡುವಂತೆ ಆಗ್ರಹಿಸಿ ಜಾಗೃತ ಹಿಂದೂ ಮಂಜ್, ವಿಜಯಪುರ ವತಿಯಿಂದ ಮನವಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಜಾಗೃತ ಹಿಂದೂ ಮಂಜ್ ಅಧ್ಯಕ್ಷರಾದ ಶಿವಾನಂದ ಭುಯ್ಯಾರ ಮಾತನಾಡಿ, ನೊಂದ ಕುಟುಂಬಕ್ಕೆ ನ್ಯಾಯ ಸಿಗುವವರೆಗೂ ಹೋರಾಟ ಮಾಡುವುದಾಗಿ ಶಿವಾನಂದ ತಿಳಿಸಿದರು ನಿನ್ನೆ ನಡೆದ ಗಣೇಶ್ ವಿಸರ್ಜನೆ ವೇಳೆ ಮೆರವಣಿಗೆಯಲ್ಲಿ ವಿದ್ಯುತ್ಪರ್ಷದಿಂದ ೨೨ ವಯಸ್ಸಿನ ಹದಿ ಹರೆಯದ ಯುವಕ ಬಲಿಯಾಗಿದ್ದು ಹೆಸ್ಕಾಂ ನಿರ್ಲಕ್ಷತನದಿಂದ ಮನೆಯ ಬೆಳಗುವ ಹೆಸ್ಕಾಂ ಅಧಿಕಾರಿಗಳು ಇಡೀ ಜಿಲ್ಲೆ ಇಡೀ ನಗರದಲ್ಲಿ ನಿನ್ನೆ ಕತ್ತಲೆ ಕತ್ತಲೆ ಆವರಿಸಿ ದಂತಾಯಿತು ಮಗನ್ನ ಕಳೆದುಕೊಂಡ ಕುಟುಂಬಕ್ಕೆ ಬದುಕೆ ಕತ್ತಲಾಯಿತು ಕಾರಣ ತಂದೆ ತಾಯಿಯ ಸಲಹುವೇ ಜವಾಬ್ದಾರಿ ಹೊತ್ತ ಮಗ ಕಳೆದುಕೊಂಡ ಕುಟುಂಬ ಕಂಗಾಲಾಗಿದೆ ಮಾನ್ಯ ಜಿಲ್ಲಾ ಉಸ್ತುವಾರಿ ಸಚಿವರು ಮತ್ತು ಜಿಲ್ಲಾಡಳಿತ ಹೆಸ್ಕಾಂ ಅಧಿಕಾರಿಗಳ ಮೇಲೆ ಕಾನೂನು ಕ್ರಮ ಕೈಗೊಂಡು ಕುಟುಂಬದ ಸಹೋದರಿಗೆ ನೌಕರಿ ಕೊಡಿಸಬೇಕೆಂಬ ಆಗ್ರಹಪಡಿಸಿದರು.
ಜಾಗೃತ ಹಿಂದೂ ಮಂಚ್ ಕಾರ್ಯದರ್ಶಿ ಶರಣು ಸಬರದ ಮಾತನಾಡಿ, ಜನಸಂದಣಿಯಲ್ಲಿ ಹೆಸ್ಕಾಂ ಇಲಾಖೆಯು ಹೈಪವರ್ ವಿದ್ಯುತ್ ದೀಪ ಅಳವಡಿಸಿದ್ದರ ಕಾರಣ ಈ ಅನಾಹುತ ಆಗಿದ್ದು, ಇದರ ಸಂಪೂರ್ಣ ಜವಾಬ್ದಾರಿ ಹಾಗೂ ಹೊಣೆಯನ್ನು ಹೆಸ್ಕಾಂ ಇಲಾಖೆ ಹೊತ್ತುಕೊಳ್ಳಬೇಕು. ಹಾಗೂ ಅನಾಹುತದಲ್ಲಿ ಮೈತ ಹೊಂದಿದ ಯುವಕನಿಗೆ ನ್ಯಾಯ ಕೊಡಿಸುವ ಕಾರ್ಯ ಅಗಬೇಕಾಗಿದೆ. ಹೆಸ್ಕಾಂ ಇಲಾಖೆಯ ಈ ರೀತಿಯ ಕಾರ್ಯವೈಖರಿಯಿಂದ ಒಂದು ಕುಟುಂಬದ ಜವಾಬ್ದಾರಿಯುತ ಯುವಕನ ಸಾವಾಗಿದ್ದು ಬಹಳ ದು:ಖಕರ ಸಂಗತಿಯಾಗಿದೆ. ಆದ್ದರಿಂದ ಇದಲ್ಲಿ ಯಾವುದೇ ತರಹದ ರಾಜಕೀಯ ಮಾಡದೇ ಕುಟುಂಬಕ್ಕೆ ನ್ಯಾಯ ಒದಗಿಸುವಂತೆ ಮನವಿ ಮಾಡಿಕೊಂಡರು.
ಈ ಸಂದರ್ಭಧಲ್ಲಿ ಹಿಂದೂ ಮುಖಂಡ ರಾಘವ ಅಣ್ಣಿಗೇರಿ ಮಾತನಾಡಿದರು.
ಈ ಸಂದರ್ಭದಲ್ಲಿ ರಾಜು ಹಿರೇಮಠ, ವಿವೇಕಹರಕಾರಿ, ಮಹೇಶ ಬಿದನೂರ, ಸಾಗರ ಪಾತ್ರೋಟ, ಸಚೀನ ಸವನಳ್ಳಿ, ಸಂತೋಷ ಯಂಕಪ್ಪಗೋಳ, ಸಂತೋಷ ಪವಾರ, ಗುರು ಗೋಲಗೇರಿ, ಅಪ್ಪು ಪೆಡ್ಡಿ, ಸತೀಶ ಗಾಯಕವಾಡ, ಕಿರಣ ತಂಗಾ, ಸುನೀಲ ಜತ್ತಿ, ನಾಗು ಇನ್ನಿತರರು ಇದ್ದರು.