Subscribe to Updates
Get the latest creative news from FooBar about art, design and business.
Author: editor.udayarashmi@gmail.com
ನೆನೆಗುದಿಗೆ ಬಿದ್ದ ಮನೆ ಮನೆ ಗಂಗೆ ಯೋಜನೆ | ಪ್ರಧಾನಿ ಮಹತ್ವಾಕಾಂಕ್ಷಿ ಯೋಜನೆಗೆ ಗುನ್ನ | ಅಧಿಕಾರಿ-ಗುತ್ತಿಗೆದಾರರ ಒಳಒಪ್ಪಂದದ ಜುಗಲ್‌ಬಂದಿ ಉದಯರಶ್ಮಿ ದಿನಪತ್ರಿಕೆ ಕಲಬುರಗಿ: ಜಿಲ್ಲೆಯ ಆಫ್ಜಲ್ಪುರ್ ತಾಲೂಕಿನ ರಾಮನಗರ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಬರುವ ದಯಾನಂದ ನಗರದಲ್ಲಿ ಪೂರ್ಣಗೊಳ್ಳದ ಜಲ ಜೀವನ ಮಿಷನ್ ಯೋಜನೆಯ ನೀರಿನ ಟ್ಯಾಂಕ್ ಬೀಳುವ ಹಂತಕ್ಕೆ ಬಂದು ತಲುಪಿದೆ.”ಮನೆ ಮನೆಗೆ ಗಂಗೆ ಇಲ್ಲ, ಅಧಿಕಾರಿಗಳಿಗೆ ಚಿಂತೆ ಇಲ್ಲ” ಎನ್ನುವಂತೆ ಆಗಿದೆ. ಪ್ರತಿ ಮನೆಗೂ ಶುದ್ಧ ಕುಡಿಯುವ ನೀರು ಒದಗಿಸುವ ಮಹತ್ವಾಕಾಂಕ್ಷೆಯ ‘ಜಲ ಜೀವನ್ ಮಿಷನ್’ (ಜೆಜೆಎಂ) ಯೋಜನೆ ಗ್ರಾಮೀಣ ಭಾಗದಲ್ಲಿ ಸಂಪೂರ್ಣ ಹಳ್ಳ ಹಿಡಿದಿದೆ. ಮನೆಗಳ ಮುಂದೆ ಕೇವಲ ಶೋಕಿಗಾಗಿ ನಲ್ಲಿಗಳನ್ನು (ಟ್ಯಾಪ್) ಅಳವಡಿಸಲಾಗಿದ್ದು, ಅವುಗಳಲ್ಲಿ ಹನಿ ನೀರೂ ಬಾರದೆ ಜನರು ಪರದಾಡುತ್ತಿದ್ದಾರೆ. ಗುತ್ತಿಗೆದಾರರ ಅತಿಯಾದ ನಿರ್ಲಕ್ಷ್ಯ ಮತ್ತು ಅಧಿಕಾರಿಗಳ ಜಾಣಕುರುಡಿನಿಂದಾಗಿ ಯೋಜನೆಯು ಅರ್ಧಕ್ಕೇ ನಿಂತು ಅಪೂರ್ಣಗೊಂಡಿದೆ.ಕಾಮಗಾರಿಗೆ ಬಳಸಲಾದ ಪೈಪ್‌ಗಳು ಹಾಗೂ ಸಾಮಗ್ರಿಗಳು ಅತ್ಯಂತ ಕಳಪೆ ಗುಣಮಟ್ಟದ್ದಾಗಿದ್ದು, ಈಗಾಗಲೇ ಹಲವೆಡೆ ಒಡೆದು ಹಾಳಾಗಿವೆ. ಕೋಟ್ಯಂತರ ರೂಪಾಯಿ…
ಉದಯರಶ್ಮಿ ದಿನಪತ್ರಿಕೆ ತಾಳಿಕೋಟೆ: ಗ್ರಾಮೀಣ ಪ್ರದೇಶದ ಜನರಿಗೆ ಸ್ಥಳೀಯವಾಗಿಯೇ ಅಕುಶಲ ಉದ್ಯೋಗಾವಕಾಶ ಕಲ್ಪಿಸುವ ಉದ್ದೇಶದಿಂದ ವಿಕಸಿತ ಭಾರತ ಉದ್ಯೋಗ ಖಾತರಿ ಹಾಗೂ ಜೀವನೋಪಾಯ ಅಭಿಯಾನ (ಗ್ರಾಮೀಣ) (ವಿಬಿ-ಜಿರಾಮ್-ಜಿ) ಯೋಜನೆಯಡಿ ಆಗಸ್ಟ್ ೧೫ರಿಂದ ಸೆಪ್ಟೆಂಬರ್ ೧೫ರವರೆಗೆ ತಾಲೂಕಿನ ಎಲ್ಲಾ ಗ್ರಾಮ ಪಂಚಾಯಿತಿಗಳಲ್ಲಿ ಜಾಬ್ ಕಾರ್ಡ್ ಮೇಳ ಹಮ್ಮಿಕೊಳ್ಳಲಾಗಿದೆ ಎಂದು ತಾಳಿಕೋಟೆ ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಶ್ರೀಮತಿ ಅನುಸೂಯಾ ಚಲವಾದಿ ಹೇಳಿದರು.ಅವರು ತಾಲೂಕಿನ ಬ.ಸಾಲವಡಗಿ ಗ್ರಾಮ ಪಂಚಾಯಿತಿಯಲ್ಲಿ ಜಾಬ್ ಕಾರ್ಡ್ ಮೇಳಕ್ಕೆ ಚಾಲನೆ ನೀಡಿ ಮಾತನಾಡಿದರು. ಪ್ರಸ್ತುತ ಬರ ಪರಿಸ್ಥಿತಿಯಿಂದ ಗ್ರಾಮೀಣ ಪ್ರದೇಶದಲ್ಲಿ ನಿರೀಕ್ಷಿತ ಪ್ರಮಾಣದಲ್ಲಿ ಕೃಷಿ ಚಟುವಟಿಕೆಗಳು ನಡೆಯದೆ, ಸ್ಥಳೀಯ ಉದ್ಯೋಗಾವಕಾಶಗಳು ಕಡಿಮೆಯಾಗಿವೆ. ಇದರಿಂದ ಗ್ರಾಮೀಣ ಜನರ ಜೀವನೋಪಾಯದ ಮೇಲೆ ವ್ಯತಿರಿಕ್ತ ಪರಿಣಾಮ ಉಂಟಾಗಿದೆ. ಈ ಹಿನ್ನೆಲೆಯಲ್ಲಿ ವಿಬಿ-ಜಿರಾಮ್-ಜಿ ಯೋಜನೆಯಡಿ ಅರ್ಹ ಗ್ರಾಮೀಣ ಜನರಿಗೆ ಸ್ವಗ್ರಾಮದಲ್ಲಿಯೇ ಉದ್ಯೋಗಾವಕಾಶ ಕಲ್ಪಿಸಿ, ಕೆಲಸಕ್ಕಾಗಿ ನಗರ ಪ್ರದೇಶಗಳಿಗೆ ವಲಸೆ ಹೋಗುವುದನ್ನು ತಡೆಯುವ ಉದ್ದೇಶದಿಂದ ಜಾಬ್ ಕಾರ್ಡ್ ನೀಡಲಾಗುತ್ತಿದೆ ಎಂದು ಅವರು ತಿಳಿಸಿದರು.ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಸಹಾಯಕ ನಿರ್ದೇಶಕರು…
ವಿಜಯಪುರ ಜಿಲ್ಲಾ 371(ಜೆ) ಹೋರಾಟ ಸಮಿತಿ ಮುಖಂಡರಿಂದ ಇಂಡಿ ಶಾಸಕ ಯಶವಂತರಾಯಗೌಡ ಪಾಟೀಲ ರಿಗೆ ಮನವಿ ಉದಯರಶ್ಮಿ ದಿನಪತ್ರಿಕೆ ಇಂಡಿ: ವಿಜಯಪುರ ಜಿಲ್ಲೆಯನ್ನು ಸಂವಿಧಾನದ 371(ಜೆ) ವಿಧಿಯ ಮೀಸಲಾತಿಗೆ ಸೇರ್ಪಡೆಗೊಳಿಸಲು ಕೇಂದ್ರ ಸರ್ಕಾರಕ್ಕೆ ರಾಜ್ಯ ಸರ್ಕಾರದಿಂದ ಪ್ರಸ್ತಾವನೆ ಕಳುಹಿಸುವಂತೆ ಆಗ್ರಹಿಸಿ ವಿಜಯಪುರ ಜಿಲ್ಲಾ 371(ಜೆ) ಹೋರಾಟ ಸಮಿತಿ ಮುಖಂಡರು ಇಂಡಿ ಶಾಸಕ ಯಶವಂತರಾಯಗೌಡ ಪಾಟೀಲ ಅವರಿಗೆ ಮನವಿ ಸಲ್ಲಿಸಿದರು.ಸಂವಿಧಾನದ 371(ಜೆ) ವಿಧಿಗೆ ತಿದ್ದುಪಡಿ ತಂದು ವಿಜಯಪುರ ಜಿಲ್ಲೆಯನ್ನು ಮೀಸಲಾತಿ ವ್ಯಾಪ್ತಿಗೆ ಸೇರ್ಪಡೆಗೊಳಿಸುವ ಕುರಿತು ಮುಖ್ಯಮಂತ್ರಿ ಅವರ ಮನವೊಲಿಸಿ, ರಾಜ್ಯ ಸರ್ಕಾರದ ಮೂಲಕ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಕಳುಹಿಸಿಕೊಡಬೇಕು ಎಂದು ಹೋರಾಟ ಸಮಿತಿ ಮುಖಂಡರು ಒತ್ತಾಯಿಸಿದರು.ಜಿಲ್ಲೆ 371(ಜೆ) ವ್ಯಾಪ್ತಿಗೆ ಸೇರ್ಪಡೆಯಾಗುವವರೆಗೆ ತಾತ್ಕಾಲಿಕವಾಗಿ ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿಯ ಸೌಲಭ್ಯಗಳನ್ನು ವಿಜಯಪುರ ಜಿಲ್ಲೆಗೂ ವಿಸ್ತರಿಸಬೇಕು ಎಂದು ಆಗ್ರಹಿಸಿದರು.ಮನವಿ ಸ್ವೀಕರಿಸಿದ ಶಾಸಕ ಯಶವಂತರಾಯಗೌಡ ಪಾಟೀಲ ಅವರು ಹೋರಾಟ ಸಮಿತಿಯ ಬೇಡಿಕೆಗೆ ಸಕಾರಾತ್ಮಕವಾಗಿ ಸ್ಪಂದಿಸಿ, ವಿಜಯಪುರ ಜಿಲ್ಲೆಗೆ 371(ಜೆ) ಮೀಸಲಾತಿ ದೊರಕಿಸಲು ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಭರವಸೆ…
ಜಿಪಂ ಉಪ ಕಾರ್ಯದರ್ಶಿ ಪ್ರಕಾಶ ವಡ್ಡರ ಸೂಚನೆ | ಯೋಜನೆಯಡಿ ಕೂಲಿ ಕಾರ್ಮಿಕರ ಸಂಖ್ಯೆ ಹೆಚ್ಚಿಸಲು ಸಲಹೆ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ವಿಬಿಜಿ–ರಾಮ್–ಜಿ ಯೋಜನೆಯಡಿ ಹೆಚ್ಚಿನ ಸಂಖ್ಯೆಯಲ್ಲಿ ಕೂಲಿ ಕಾರ್ಮಿಕರನ್ನು ಕಾಮಗಾರಿಗಳಲ್ಲಿ ತೊಡಗಿಸಿಕೊಂಡು ಗರಿಷ್ಠ ೨೦೦ ಕೂಲಿ ಕಾರ್ಮಿಕರಿಗೆ ಪ್ರತಿದಿನ ಉದ್ಯೋಗ ಕಲ್ಪಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿಗಳಾದ ಪ್ರಕಾಶ ವಡ್ಡರ ಅವರು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಿಗೆ ಸೂಚನೆ ನೀಡಿದರು. ಬಸವನಬಾಗೇವಾಡಿ ತಾಲೂಕಿನ ಉಕ್ಕಲಿ ಮತ್ತು ಇಂಗಳೇಶ್ವರ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಗ್ರಾಮೀಣ ಅರ್ಹ ಕುಟುಂಬಗಳಿಗೆ ಹೆಚ್ಚಿನ ಉದ್ಯೋಗಾವಕಾಶ ಕಲ್ಪಿಸುವ ಹಾಗೂ ಗ್ರಾಮೀಣ ಪ್ರದೇಶದಲ್ಲಿ ಶಾಶ್ವತ ಆಸ್ತಿಗಳನ್ನು ಸೃಜಿಸುವ ಉದ್ದೇಶದಿಂದ ಅನುಷ್ಠಾನಗೊಳ್ಳುತ್ತಿರುವ ವಿಕಸಿತ ಭಾರತ–ಗ್ಯಾರಂಟಿ ಫಾರ್ ರೋಜ್ಗಾರ್ ಅಂಡ್ ಆಜೀವಿಕ ಮಿಷನ್–ಗ್ರಾಮೀಣ (ವಿಬಿಜಿ–ರಾಮ್–ಜಿ) ಯೋಜನೆಯಡಿ ನಡೆಯುತ್ತಿರುವ ಕಾಮಗಾರಿಗಳಿಗೆ ಭೇಟಿ ನೀಡಿ ಅವರು ಮಾತನಾಡಿದರು.ಈ ಯೋಜನೆಯಡಿ ಕಾರ್ಯನಿರ್ವಹಿಸುವ ಪ್ರತಿಯೊಬ್ಬ ಕೂಲಿ ಕಾರ್ಮಿಕರ ಹಾಜರಾತಿಯನ್ನು ಪ್ರತಿದಿನ ಎನ್‌ಎಂಎಂಎಸ್ ಆ್ಯಪ್ ಮೂಲಕ ಕಡ್ಡಾಯವಾಗಿ ದಾಖಲಿಸಬೇಕು ಹಾಗೂ ಹಾಜರಾತಿ ಮತ್ತು…
ವಿಜಯಪುರ ನಗರ ಗ್ರಂಥಾಲಯ ಪ್ರಾಧಿಕಾರದ ಸಭೆಯಲ್ಲಿ ನಗರ ಗ್ರಂಥಾಲಯ ಪ್ರಾಧಿಕಾರದ ಅಧ್ಯಕ್ಷ ಕರಡಿ ಸಲಹೆ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಮಹಾನಗರ ವ್ಯಾಪ್ತಿಯ ಪ್ರತಿ ವಾರ್ಡನಲ್ಲಿ ಸಂಬಂಧಿಸಿದ ಪ್ರಾಧಿಕಾರದ ವತಿಯಿಂದ ಗ್ರಂಥಾಲಯ ಕಟ್ಟಡ ಕಟ್ಟಲಿಕ್ಕೆ ಬೇಕಾಗಿರುವ ನಿವೇಶನ ಪಡೆದು ಸುಸಜ್ಜಿತ ಗ್ರಂಥಾಲಯ ಕಟ್ಟಡ ನಿರ್ಮಿಸಲು ಕ್ರಮ ಕೈಗೊಳ್ಳಬೇಕು ಎಂದು ನಗರ ಗ್ರಂಥಾಲಯ ಪ್ರಾಧಿಕಾರದ ಅಧ್ಯಕ್ಷರೂ ಆಗಿರುವ ಮಹಾನಗರ ಪಾಲಿಕೆಯ ಪೂಜ್ಯ ಮಹಾಪೌರರಾದ ಎಂ.ಎಸ್. ಕರಡಿ ಅವರು ಹೇಳಿದರು.ನಗರ ಕೇಂದ್ರ ಗ್ರಂಥಾಲಯದ ಉಪನಿರ್ದೇಶಕರ ಕಚೇರಿಯಲ್ಲಿ ಮಂಗಳವಾರ ನಡೆದ ನಗರ ಗ್ರಂಥಾಲಯ ಪ್ರಾಧಿಕಾರದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.ನಗರ ಕೇಂದ್ರ ಗ್ರಂಥಾಲಯ ಆವರಣದಲ್ಲಿ ಲಭ್ಯವಿರುವ ಖುಲ್ಲಾ ನಿವೇಶನದಲ್ಲಿ ಲೋಕಸಭಾ ಸದಸ್ಯರ ಮತ್ತು ವಿಧಾನ ಸಭೆ ಸದಸ್ಯರ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರ ಅನುದಾನದಲ್ಲಿ ಗ್ರಂಥಾಲಯ ಕಟ್ಟಡ ಕಟ್ಟಲು ನೀಲನಕ್ಷೆ ಹಾಗೂ ಅಂದಾಜು ಪತ್ರಿಕೆ ತಯಾರಿಸಬೇಕು ಎಂದೂ ಸೂಚಿಸಿದರು. ಗ್ರಂಥಾಲಯಗಳು ಜನ ಸಾಮಾನ್ಯರ ವಿಶ್ವವಿದ್ಯಾಲಯಗಳಿದ್ದಂತೆ. ನಗರದ ಪ್ರತಿಯೊಬ್ಬ ನಾಗರಿಕನಿಗೂ ಕೂಡ ಗ್ರಂಥಾಲಯ ಸೇವೆ ಪಡೆಯಲು ಪ್ರೇರೆಪಿಸಿ…
ವಿಜಯಪುರ ತಾಲ್ಲೂಕಿನ ಗ್ರಾಪಂಗಳಿಗೆ ಸಿಇಒ ರಿಷಿ ಆನಂದ ದಿಢೀರ್ ಭೇಟಿ | ಬೆಳಗ್ಗೆಯಿಂದಲೇ ಕ್ಷೇತ್ರ ಪರಿಶೀಲನೆ | ಸಿಬ್ಬಂದಿ ಹಾಜರಾತಿ, ವಿಬಿ–ಜಿ ರಾಮ್–ಜಿ ಕಾಮಗಾರಿಗಳ ಪರಿಶೀಲನೆ | ಗ್ರಾಮೀಣ ಅಭಿವೃದ್ಧಿಗೆ ವೇಗ ನೀಡಲು ಕಟ್ಟುನಿಟ್ಟಿನ ಸೂಚನೆ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಜಿಲ್ಲಾ ಪಂಚಾಯತಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗ ರಿಷಿ ಆನಂದ ಅವರು ಸೋಮವಾರ ಬೆಳ್ಳಂಬೆಳಗ್ಗೆ ೮ ಗಂಟೆಯಿಂದಲೇ ಕ್ಷೇತ್ರ ಭೇಟಿ ಆರಂಭಿಸಿ, ವಿಜಯಪುರ ತಾಲ್ಲೂಕಿನ ಐನಾಪುರ, ಮದಭಾವಿ, ಹೊನ್ನುಟಗಿ ಹಾಗೂ ಆಹೇರಿ ಗ್ರಾಮ ಪಂಚಾಯತಿಗಳಿಗೆ ದಿಢೀರ್ ಭೇಟಿ ನೀಡಿ, ಪಂಚಾಯಿತಿ ಆಡಳಿತ, ಅಧಿಕಾರಿ–ಸಿಬ್ಬಂದಿ ಹಾಜರಾತಿ, ಸಾರ್ವಜನಿಕ ಸೇವೆ, ವಿಬಿ–ಜಿ ರಾಮ್–ಜಿ ಯೋಜನೆಯ ಅನುಷ್ಠಾನ ಹಾಗೂ ವಿವಿಧ ಗ್ರಾಮೀಣ ಅಭಿವೃದ್ಧಿ ಕಾಮಗಾರಿಗಳ ಪ್ರಗತಿಯನ್ನು ಸ್ಥಳದಲ್ಲಿಯೇ ಪರಿಶೀಲಿಸಿದರು.ಸಿಇಒ ಅವರು ಕಚೇರಿ ವೇಳೆಯ ಆರಂಭಕ್ಕೂ ಮುನ್ನವೇ ಕ್ಷೇತ್ರಕ್ಕೆ ತೆರಳಿ ಗ್ರಾಮ ಪಂಚಾಯಿತಿಗಳ ಕಾರ್ಯನಿರ್ವಹಣೆ ಹಾಗೂ ಅಭಿವೃದ್ಧಿ ಕಾಮಗಾರಿಗಳ ವಾಸ್ತವ ಸ್ಥಿತಿಯನ್ನು ಪರಿಶೀಲಿಸಿರುವುದು, ಗ್ರಾಮೀಣ ಅಭಿವೃದ್ಧಿ ಕಾರ್ಯಗಳಿಗೆ ಅವರು ನೀಡುತ್ತಿರುವ ಆದ್ಯತೆ ಹಾಗೂ ಆಡಳಿತದಲ್ಲಿ ಸಮಯಪಾಲನೆ ಮತ್ತು…
ಬ್ರಹ್ಮಕುಮಾರಿ ಈಶ್ವರಿಯ ವಿಶ್ವವಿದ್ಯಾಲಯದ ಬಿ.ಕೆ.ಶೈಲಾ ಅಭಿಮತ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ದೇಶದ ಭವಿಷ್ಯವಾಗಿರುವ ಯುವ ಸಮೂಹವನ್ನು ಮಾದಕ ವಸ್ತುಗಳ ವ್ಯಸನದಿಂದ ದೂರಾಗಿಸಲು ಮತ್ತು ಸುಸ್ಥಿರ ಮತ್ತು ಆರೋಗ್ಯಯುತ ಸಮಾಜವನ್ನು ನಿರ್ಮಿಸಲು ನಶಾ ಮುಕ್ತ ಭಾರತ ಅಭಿಯಾನ ರಾಷ್ಟ್ರೀಯ ಆಂದೋಲನವಾಗಿದೆ ಎಂದು ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ಬಿ.ಕೆ.ಶೈಲಾ ಅವರು ಅಭಿಪ್ರಾಯಪಟ್ಟರು.ಅವರು ನಗರದ ಅಥಣಿ ರಸ್ತೆಯಲ್ಲಿರುವ ಅಲ್-ಅಮೀನ್ ಆಸ್ಪತ್ರೆಯ ಎದುರಿಗೆ ಇರುವ ಎನ್.ಜಿ.ಓ. ಕಾಲನಿಯ ಆಂಜನೇಯ ದೇವಸ್ಥಾನದಲ್ಲಿ ನಶಾ ಮುಕ್ತ ಭಾರತ ಅಭಿಯಾನದಲ್ಲಿ ಅವರು ಮಾತನಾಡುತ್ತಿದ್ದರು.ನಶಾ ಮುಕ್ತ ಭಾರತ ಅಭಿಯಾನವು ಕೇವಲ ಸರ್ಕಾರದ ಜವಾಬ್ದಾರಿಯಲ್ಲ. ಇದು ಪ್ರತಿಯೊಬ್ಬ ನಾಗರೀಕರ ಕರ್ತವ್ಯ. ಸಮಾಜದಿಂದ ಮದ್ಯ ಮತ್ತು ಮಾದಕ ವ್ಯಸನವನ್ನು ಸಂಪೂರ್ಣವಾಗಿ ತೊಡೆದು ಹಾಕಿದರೆ ಮಾತ್ರ ದೇಶವು ಆರ್ಥಿಕವಾಗಿ ಮತ್ತು ಬೌದ್ಧಿಕವಾಗಿ ಪ್ರಗತಿ ಸಾಧಿಸಲು ಸಾಧ್ಯ. ಇಂದು ಯುವ ಜನತೆ ಮತ್ತು ಸಾರ್ವಜನಿಕರಲ್ಲಿ ಮಾದಕ ದ್ರವ್ಯಗಳ ಬಳಕೆಯಿಂದ ಉಂಟಾಗುವ ದುಷ್ಪರಿಣಾಮಗಳ ಬಗ್ಗೆ ಜಾಗೃತಿ ಮೂಡಿಸಬೇಕಾಗಿದೆ. ಸರ್ಕಾರ, ಸರ್ಕಾರೇತರ, ಸಂಘ-ಸಂಸ್ಥೆಗಳ ಸಹಭಾಗಿತ್ವದಲ್ಲಿ ಡ್ರಗ್ಸ್ ಮುಕ್ತ ಪರಿಸರ ನಿರ್ಮಿಸುವುದು ಅಗತ್ಯವಾಗಿದೆ…
ಇಂದು (ಅಗಷ್ಟ ೧೯, ಬುಧವಾರ) “ವಿಶ್ವ ಮಾನವೀಯತೆ ದಿನ” ದ ಪ್ರಯುಕ್ತ ಈ ವಿಶೇಷ ಲೇಖನ ಲೇಖನ- ಮಲ್ಲಪ್ಪ. ಸಿ. ಖೊದ್ನಾಪೂರ (ತಿಕೋಟಾ)ಉಪನ್ಯಾಸಕರುವಿಜಯಪುರ ಉದಯರಶ್ಮಿ ದಿನಪತ್ರಿಕೆ ಶಿವರಾಂ ಕಾರಂತ ಅವರು “ಬಾಳ್ವೆ ಇರುವುದು ಕಲಿಯುವುದಕ್ಕೆ , ಕಲಿತು ತಿದ್ದಿಕೊಳ್ಳುವುದಕ್ಕೆ. ತಿದ್ದಿ ತೃಪ್ತಿ ಪಡುವುದಕ್ಕೆ, ಬಾಳ್ವೆ ಇರುವುದು ಬದುಕುವುದಕ್ಕಾಗಿ, ಬದುಕಿ ಬೆಳೆಯುವುದಕ್ಕಾಗಿ” ಎಂದು ಹೇಳಿದ್ದಾರೆ.ಮಾನವ ಧರ್ಮ ಮತ್ತು ಮನುಷ್ಯತ್ವವೇ ಶ್ರೇಷ್ಠವಾದುದು. ಈ ಜಗತ್ತಿನಲ್ಲಿ ಯಾರೇ ಸಂಕಷ್ಟದಲ್ಲಿದ್ದವರಿಗೆ ಅವರಿಗೆ ಸಹಾಯ ಹಸ್ತ ಮತ್ತು ನೊಂದವರ ಕಣ್ಣೀರು ಒರೆಸುವ ಮತ್ತು ಸಾಂತ್ವನದೊಂದಿಗೆ ಸಹಾಯ-ಸಹಕಾರ ನೀಡಬೇಕು. ಪರಸ್ಪರ ಪ್ರೀತಿ ಹಂಚಿಕೊಂಡು ಆತ್ವವಿಶ್ವಾಸದಿಂದೊಂದಿಗೆ ಬದುಕುತ್ತಾ, ಮಾನವೀಯತೆಯನ್ನು ಮೆರೆಯೋಣ ಮತ್ತು ಉಳಿಸಿ-ಬೆಳೆಸೋಣ. ತಮ್ಮ ಜೀವನವನ್ನೇ ಸದಾ ಮನುಕುಲದ ಸೇವೆಗಾಗಿ ಮುಡಿಪಾಗಿಟ್ಟ ಮತ್ತು ನಿಸ್ವಾರ್ಥತೆಯಿಂದ ಶ್ರಮಿಸುವ ಮತ್ತು ಸಂಕಷ್ಟದಲ್ಲಿರುವವರಿಗೆ ಮಾನವೀಯತೆ ಮತ್ತು ಸಹಾಯ ಮಾಡುವವರನ್ನು ಸ್ಮರಿಸುವ ಉದ್ಧೇಶದಿಂದ ಪ್ರತಿವರ್ಷ ಅಗಷ್ಟ ೧೯ ರಂದು ವಿಶ್ವ ಮಾನವೀಯತೆ ದಿನವೆಂದು ಆಚರಿಸಲಾಗುತ್ತದೆ. ಈ ದಿನದ ಆಚರಣೆಯ ಉದ್ಧೇಶಪ್ರಕೃತಿ ವಿಕೋಪ, ಯುದ್ಧದ ಸಂದರ್ಭ, ತೀವ್ರ ಬಿಕಟ್ಟು…
ಇಂದು (೧೯ ಆಗಸ್ಟ್ ಬುದವಾರ) ಮಾನವೀಯತೆಯ ಬೆಳಕು ಹಂಚಿದ ಖ್ಯಾತ ಸಾಹಿತಿ ಹಾಗೂ ರಾಜ್ಯಸಭಾ ಸದಸ್ಯೆ ಡಾ.ಸುಧಾಮೂರ್ತಿ ಅವರ ಜನ್ಮದಿನದ ಪ್ರಯುಕ್ತ ಈ ವಿಶೇಷ ಲೇಖನ ಲೇಖನ- ಡಾ.ರಾಜಶೇಖರ ನಾಗೂರ.ಸಂಚಾಲಕರು’ನಮ್ಮ ಕಥಾ ಅರಮನೆ’ ಉದಯರಶ್ಮಿ ದಿನಪತ್ರಿಕೆ ಒಂದು ಸಾಹಿತ್ಯ ಕೃತಿ, ಒಂದು ಹೆಣ್ಣಿನ ಜೀವನವನ್ನೇ ಬದಲಾಯಿಸಿದ ಕಥೆಯಿದು. ಒಬ್ಬ ಸಹೃದಯಿ ಲೇಖಕಿಯ ಸಾಹಿತ್ಯಕ್ಕಿರುವ ಶಕ್ತಿ ಎಂಥದ್ದು ಎಂಬುದನ್ನು ತಿಳಿಸುವ ಮನಮುಟ್ಟುವ ಘಟನೆ ಇದು.ಸುಧಾ ಮೂರ್ತಿಯವರು ಮಮತಾಮೂರ್ತಿ ಎಂಬುದು ಎಲ್ಲರಿಗೂ ಗೊತ್ತಿರುವ ಸಂಗತಿ. ಅವರು ಇನ್ಫೋಸಿಸ್ ಧರ್ಮದರ್ಶಿಯಾಗಿದ್ದ ಸಂದರ್ಭದಲ್ಲಿ ನಡೆದ ಒಂದು ಸತ್ಯ ಘಟನೆಯನ್ನು ತಮ್ಮ ‘ಮನದ ಮಾತು’ ಕೃತಿಯಲ್ಲಿ ಹಂಚಿಕೊಂಡಿದ್ದಾರೆ.ಸಾಮಾನ್ಯವಾಗಿ ಯಾವುದೇ ಮದುವೆ ಸಮಾರಂಭಗಳಿಗೆ ಸುಧಾ ಮೂರ್ತಿಯವರು ಹೋಗುತ್ತಿರಲಿಲ್ಲ. ಆದರೆ ಒಂದು ದಿನ ಅವರ ಮುಂದೆ ಬಂದ ಸಾವಿರಾರು ಪತ್ರಗಳ ನಡುವೆ ಒಂದು ಮದುವೆಯ ಕರೆಯೋಲೆ ಇತ್ತು. ಆ ಕರೆಯೋಲೆಯ ಮೇಲೆ ಒಂದು ವಾಕ್ಯ ಸ್ಪಷ್ಟವಾಗಿ ಹೀಗೆ ಬರೆಯಲಾಗಿತ್ತು:“ನೀವು ನಮ್ಮ ಮದುವೆಗೆ ಬರದಿದ್ದರೆ, ನಾವು ದುರದೃಷ್ಟವಂತರು ಎಂದು ಭಾವಿಸುತ್ತೇವೆ.”ಆ ಮದುವೆಯ ಕರೆಯೋಲೆಯನ್ನು…
