Close Menu
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ

Subscribe to Updates

Get the latest creative news from FooBar about art, design and business.

What's Hot

ರಾಜ್ಯಮಟ್ಟದ ಜೀವನಾಡಿ ಕನ್ನಡ ಸಾಹಿತ್ಯ ಸ್ಪರ್ಧೆ-2026

ಬಿ.ವಿ.ಹಿರೇಮಠ ಗೆ ‘ಸಿಂದಗಿ ಸಿರಿ’ ಆದರ್ಶ ಶಿಕ್ಷಕ ಪ್ರಶಸ್ತಿ

ಉದಯರಶ್ಮಿ ಇಂದಿನ ದಿನಪತ್ರಿಕೆ ಜುಲೈ 22, 2026

Facebook X (Twitter) Instagram
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
Facebook X (Twitter) Instagram YouTube WhatsApp
udayarashminews.comudayarashminews.com
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
udayarashminews.comudayarashminews.com
Home»(ರಾಜ್ಯ ) ಜಿಲ್ಲೆ»ಇಚ್ಛಾಶಕ್ತಿಯೇ ಸಾಧನೆಗೆ ಮೆಟ್ಟಿಲಾಗಬೇಕು :ಡಾ.ಭಾರತಿ
(ರಾಜ್ಯ ) ಜಿಲ್ಲೆ

ಇಚ್ಛಾಶಕ್ತಿಯೇ ಸಾಧನೆಗೆ ಮೆಟ್ಟಿಲಾಗಬೇಕು :ಡಾ.ಭಾರತಿ

By No Comments2 Mins Read
Facebook Twitter Pinterest LinkedIn Telegram WhatsApp
Share
Facebook Twitter LinkedIn Email Telegram WhatsApp

ಉದಯರಶ್ಮಿ ದಿನಪತ್ರಿಕೆ

ವಿಜಯಪುರ: ಸ್ಟುಡೆಂಟ್ ಲೈಫ್ ಇಸ್ ಗೋಲ್ಡನ್ ಲೈಫ್ ಮತ್ತು ಅತ್ಯಂತ ಮಹತ್ವದ ಘಟ್ಟವಾಗಿದ್ದು, ವಿದ್ಯಾರ್ಥಿ ಜೀವನವು ಅಮೂಲ್ಯವಾದ ಘಟ್ಡವಾಗಿದ್ದು, ಉದಾತ್ತ ಗುರಿ ಹೊಂದುತ್ತಾ, ಆ ಗುರಿಯ ಸಾಧನೆಯತ್ತ ಕಠಿಣ ಪರಿಶ್ರಮ, ನಿರಂತರ ಅಧ್ಯಯನ, ಸಾಧಿಸಿಯೇ ತೀರುತ್ತೇನೆಂಬ ದೃಢ ಸಂಕಲ್ಪದೊಂದಿಗೆ ಹೆಜ್ಜೆಯಿಟ್ಟರೆ ಖಂಡಿತವಾಗಿಯೂ ಯಶಸ್ಸು ಗಳಿಸಬಹುದು ಎಂದು ಎ.ಎಸ್.ಪಿ. ಕಾಲೇಜಿನ ವಾಣಿಜ್ಯಶಾಸ್ತ್ರ ಪ್ರಾಧ್ಯಾಪಕಿ ಡಾ.ಭಾರತಿ ಮಠ ಅವರು ಅಭಿಪ್ರಾಯಪಟ್ಟರು.
ಅವರು ನಗರದ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ದಿನಾಂಕ:೨೩-೦೯-೨೦೨೫ ರಂದು ವಾಣಿಜ್ಯಶಾಸ್ತç ವಿಭಾಗದಿಂದ ಆಯೋಜಿಸಿದ ಶುಭ ಹಾರೈಕೆ (ಬಿ.ಕಾಂ ಅಂತಿಮ ವರ್ಷದ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭದಲ್ಲಿ ಅವರು ಮುಖ್ಯ ಅತಿಥಿಗಳಾಗಿ ಮಾತನಾಡುತ್ತಿದ್ದರು.
ವಿದ್ಯಾರ್ಥಿದೆಸೆಯಲ್ಲಿ ಎದುರಾಗುವ ಸಂಕಷ್ಟಗಳನ್ನು ಮೀರಿ ತಮ್ಮ ಕನಸುಗಳನ್ನು ನನಸಾಗಿಸಲು ಹಾಗೂ ಸಾಧನೆಯ ಮೇರು ಶಿಖರವನ್ನು ಮುಟ್ಟಲು ಅದಕ್ಕೆ ಬೇಕಾದ ಪೂರ್ವ ತಯಾರಿ, ಯೋಜನೆ, ಯೋಚನೆ ಮತ್ತು ಸದಾಲೋಚನೆ ಮತ್ತು ಸಮಯ ನಿರ್ವಹಣೆ ಮಾಡಬೇಕು. ನಾನು ಸಮರ್ಥ, ಸಶಕ್ತನೆಂಬ ಆತ್ಮವಿಶ್ವಾಸದೊಂದಿಗೆ ಮುನ್ನಡೆದರೆ ಅಧ್ಯಯನಶೀಲರಾದರೆ ಯಶಸ್ಸು ಕಟ್ಟಿಟ್ಟ ಬುತ್ತಿ. ಉನ್ನತ ಶಿಕ್ಷಣ ಪೂರೈಸಿದ ನಂತರ ಮುಂದೇನು ಎಂಬ ಆತಂಕಪಡದೇ ಸ್ಪರ್ಧಾತ್ಮಕ ಯುಗದಲ್ಲಿ ಉದ್ಯೋಗಾವಕಾಶ ಪಡೆಯಲು ಬೇಕಾದ ಸಂದರ್ಶನ ಕಲೆ, ಕೌಶಲ್ಯ, ನೈಪುಣ್ಯತೆ, ವಿಶ್ಲೇಷಣೆ-ತಾರ್ಕಿಕ ಶಕ್ತಿ ಮತ್ತು ಕಾರ್ಪೋರೇಟ್ ಜಗತ್ತು ಅಪೇಕ್ಷಿತವಾದ ಕೌಶಲ್ಯಗಳನ್ನು ಪಡೆದುಕೊಳ್ಳಬೇಕು. ವಾಣಿಜ್ಯ ಪದವಿ ನಂತರ ಚಾರ್ಟರ್ಡ ಅಕೌಂಟಂಟ್, ಕಂಪನಿ ಸೆಕ್ರೆಟರಿ, ಐ.ಸಿ.ಡಬ್ಲೂ.ಎ. ಫೈನಾನ್ಸಿಯಲ್ ಅನಾಲಿಸ್ಟ್, ಮಾರ್ಕೆಟಿಂಗ್ ಮ್ಯಾನೇಜರ್, ಐ.ಬಿ.ಪಿ.ಎಸ್. ನಂತರ ಸ್ಪರ್ಧಾತ್ಮಕ ಮತ್ತು ವೃತ್ತಿಪರ ಪರೀಕ್ಷೆಗಳಲ್ಲಿ ಸಾಫಲ್ಯ ಹೊಂದಿದರೆ ಉದ್ಯೋಗ ದೊರೆಕಲಿವೆ ಎಂದು ಕಿವಿಮಾತು ಹೇಳಿದರು.
ವಾಣಿಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಪ್ರೊ. ಎಂ.ಎಸ್.ಖೊದ್ನಾಪೂರ ಮಾತನಾಡುತ್ತಾ, ನಿಮ್ಮಲ್ಲಿರುವ ಭರವಸೆಯೇ ಜೀವನವನ್ನು ಮುನ್ನಡೆಸುವ ಇಂಧನವಾಗಬೇಕು. ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಪ್ರತಿಯೊಂದು ಕ್ಷೇತ್ರದಲ್ಲಿ ತೀವ್ರ ಪೈಪೋಟಿಯಿದ್ದು, ಎದುರಾಗುವ ಸವಾಲುಗಳನ್ನು ಸಮರ್ಥವಾಗಿ ಎದುರಿಸುವ ಆತ್ಮಸ್ಥೆೈರ್ಯವನ್ನು ಬೆಳೆಸಿಕೊಳ್ಳಬೇಕು. ವಿದ್ಯಾರ್ಥಿಗಳು ಉತೃಷ್ಟ ಗುಣಮಟ್ಟದ ಜ್ಞಾನ ಪಡೆದುಕೊಂಡು ತಮ್ಮ ಉನ್ನತ ವ್ಯಾಸಂಗ ಕೈಕೊಂಡು ಮತ್ತು ವಿದ್ಯಾರ್ಥಿಗಳ ಭಾವಿ ಭವಿಷ್ಯವು ಉಜ್ವಲವಾಗಲಿ, ಕಂಡ ಕನಸು ನನಸಾಗಲೆಂದು ಹಾರೈಸಿದರು.
ಹಿರಿಯ ಪ್ರಾಧ್ಯಾಪಕ ಡಾ. ಚಿದಾನಂದ ಆನೂರ ಮಾತನಾಡಿದರು.
ಸಮಾರಂಭದಲ್ಲಿ ಪ್ರಾಂಶುಪಾಲ ಡಾ, ಎ.ಐ.ಹಂಜಗಿ, ಡಾ. ಚಂದ್ರಕಾಂತ.ಬಿ, ಮತ್ತು ಡಾ. ಮಮತಾ ಬನ್ನೂರ, ಇನ್ನಿತರರು ಸಹ ವೇದಿಕೆಯ ಮೇಲಿದ್ದರು.
ಬಿ.ಕಾಂ ೬ ನೇಯ ಸೆಮೆಸ್ಟರ್‌ನ ಕವಿತಾ ಕಂಟೇನವರ, ಗೀತಾ ಮಿಸ್ಕಿನ್ ಮತ್ತು ಐಶ್ವರ್ಯ ಕುಂಬಾರ ಇವರು ತಮ್ಮ ಮೂರು ವರ್ಷಗಳ ವಿದ್ಯಾರ್ಥಿ ಜೀವನದ ಸವಿ ನೆನಪುಗಳ ಬಗ್ಗೆ ಅನಿಸಿಕೆ ಹಂಚಿಕೊಂಡರು.
ಕಾರ್ಯಕ್ರಮದಲ್ಲಿ ಡಾ. ದೇವೆಂದ್ರಗೌಡ ಪಾಟೀಲ, ಪ್ರೊ. ವಿಶ್ವನಾಥ ಕಲ್ಮೇಶರ, ಡಾ. ಎಸ್.ಡಿ.ಬಿರಾದಾರ ಇನ್ನಿತರರು ಉಪಸ್ಥಿತರಿದ್ದರು.
ಕವಿತಾ ಬಸರಿಗಿಡದ & ಮದೀನಾ ತುಂಬದ ಪ್ರಾರ್ಥಿಸಿದರು. ಅಂಬಿಕಾ ಮುಳಸಾವಳಗಿ ಸ್ವಾಗತಿಸಿ, ಅತಿಥಿಗಳ ಪರಿಚಯ ನಡೆಸಿಕೊಟ್ಟರು. ಗೌರಮ್ಮ ಲೋಗಾವಿ, ಲಕ್ಷ್ಮಿ ಕೋಳಿ ನಿರೂಪಿಸಿದರು. ಸಂಗಮೇಶ ಗುಡ್ಡದ ವಂದಿಸಿದರು.

BIJAPUR NEWS bjp public public news udaya rashmi Udayarashmi today newspaper udayarashminews.com
Share. Facebook Twitter Pinterest Email Telegram WhatsApp
  • Website

Related Posts

ರಾಜ್ಯಮಟ್ಟದ ಜೀವನಾಡಿ ಕನ್ನಡ ಸಾಹಿತ್ಯ ಸ್ಪರ್ಧೆ-2026

ಬಿ.ವಿ.ಹಿರೇಮಠ ಗೆ ‘ಸಿಂದಗಿ ಸಿರಿ’ ಆದರ್ಶ ಶಿಕ್ಷಕ ಪ್ರಶಸ್ತಿ

ಉದಯರಶ್ಮಿ ಇಂದಿನ ದಿನಪತ್ರಿಕೆ ಜುಲೈ 22, 2026

ಡಾ.ಸುರೇಖಾ ರಾಠೋಡ ಗೆ “ಸಾಹಿತ್ಯ ರತ್ನ” ಪ್ರಶಸ್ತಿ ಪ್ರದಾನ

Add A Comment
Leave A Reply Cancel Reply

Categories
  • (ರಾಜ್ಯ ) ಜಿಲ್ಲೆ
  • Helldivers
  • Typora
  • Uncategorized
  • Wemod
  • ಆರೋಗ್ಯ
  • ಇತರೆ
  • ಕಾವ್ಯರಶ್ಮಿ
  • ಚಿಂತನ
  • ದಿನಪತ್ರಿಕೆ
  • ಪುಸ್ತಕ ಪರಿಚಯ
  • ಪ್ರೇಮಲೋಕ
  • ಭಾವರಶ್ಮಿ
  • ರಾಷ್ಚ್ರ
  • ವಿಜಯಪುರ
  • ವಿದ್ಯಾರ್ಥಿ ನಿಧಿ
  • ವಿಶೇಷ ಲೇಖನ
  • ಸಾಹಿತ್ಯ
  • ಸಿನಿಮಾ
  • ಹೊತ್ತಿಗೆ ಹೊರಣ
Recent Posts
  • ರಾಜ್ಯಮಟ್ಟದ ಜೀವನಾಡಿ ಕನ್ನಡ ಸಾಹಿತ್ಯ ಸ್ಪರ್ಧೆ-2026
    In (ರಾಜ್ಯ ) ಜಿಲ್ಲೆ
  • ಬಿ.ವಿ.ಹಿರೇಮಠ ಗೆ ‘ಸಿಂದಗಿ ಸಿರಿ’ ಆದರ್ಶ ಶಿಕ್ಷಕ ಪ್ರಶಸ್ತಿ
    In (ರಾಜ್ಯ ) ಜಿಲ್ಲೆ
  • ಉದಯರಶ್ಮಿ ಇಂದಿನ ದಿನಪತ್ರಿಕೆ ಜುಲೈ 22, 2026
    In ದಿನಪತ್ರಿಕೆ
  • ಡಾ.ಸುರೇಖಾ ರಾಠೋಡ ಗೆ “ಸಾಹಿತ್ಯ ರತ್ನ” ಪ್ರಶಸ್ತಿ ಪ್ರದಾನ
    In (ರಾಜ್ಯ ) ಜಿಲ್ಲೆ
  • ಯುಕೆಪಿ ಎಂ.ಡಿ. ಕಚೇರಿಯ ಕಂಪ್ಯೂಟರ್ ಜಪ್ತಿ!
    In (ರಾಜ್ಯ ) ಜಿಲ್ಲೆ
  • ದೋಷರಹಿತ ಮತದಾರರ ಪಟ್ಟಿಗೆ ರಾಜಕೀಯಪಕ್ಷಗಳ ಸಹಕಾರ ಅಗತ್ಯ
    In (ರಾಜ್ಯ ) ಜಿಲ್ಲೆ
  • ಆಲಮಟ್ಟಿ ಉದ್ಯಾನಗಳಿಗೆ ಶಾಲಾ ಮಕ್ಕಳಿಗೆ ಉಚಿತ ಪ್ರವೇಶಕ್ಕೆ ಮನವಿ
    In (ರಾಜ್ಯ ) ಜಿಲ್ಲೆ
  • ಆಲಮಟ್ಟಿ ಎತ್ತರ ಹೆಚ್ಚಳ ೩ ವರ್ಷದಲ್ಲಿ ಪೂರ್ಣಗೊಳಿಸಲು ಬದ್ಧ
    In (ರಾಜ್ಯ ) ಜಿಲ್ಲೆ
  • ೧ ರಿಂದ ೫ ವರೆಗೆ ಶಿಕ್ಷಣ ಕಡ್ಡಾಯವಾಗಿ ಮಾತೃಭಾಷೆಯಲ್ಲಿರಲಿ
    In (ರಾಜ್ಯ ) ಜಿಲ್ಲೆ
  • 21ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ ಹ.ಮ.ಪೂಜಾರ
    In ವಿಶೇಷ ಲೇಖನ
Editors Picks
Top Reviews
udayarashminews.com
Facebook X (Twitter) Instagram Pinterest Vimeo YouTube
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
© 2026 udayarashminews.com. Designed by udayarashmi news .

Type above and press Enter to search. Press Esc to cancel.