ಉದಯರಶ್ಮಿ ದಿನಪತ್ರಿಕೆ
ಇಂಡಿ: ಬೇಸಿಗೆ ಮುಗಿಯುತ್ತ ಬಂದಿದೆ. ತಾಲೂಕಿನಲ್ಲಿ ನಗರ ಮತ್ತು ಗ್ರಾಮೀಣ ಜನರಿಗೆ ಕುಡಿಯುವ ನೀರಿನ ತೊಂದರೆಯಾಗದಂತೆ ಕ್ರಮ ಕೈಕೊಳ್ಳಿ ಎಂದು ಶಾಸಕ ಯಶವಂತರಾಯಗೌಡ ಪಾಟೀಲರು ಹೇಳಿದರು.
ನಗರದ ಪ್ರವಾಸಿ ಮಂದಿಎದಲ್ಲಿ ವಿವಿಧ ಇಲಾಖೆಗಳ ಪ್ರಗತಿ ಪರಿಶಿಲನಾ ಸಭೆಯಲ್ಲಿ ಮಾತನಾಡುತ್ತಿದ್ದರು.
ತಾಲೂಕಿನ ರಾಮ ತೀರ್ಥ ತಾಂಡಾದಲ್ಲಿ ಕುಡಿಯುವ ನೀರಿನ ತೊಂದರೆ ಇದೆ. ಅದು ಬಿಟ್ಟರೆ ಬಹುತೇಕ ಎಲ್ಲಿಯೂ ಇಲ್ಲ. ಕೂಡಲೇ ರಾಮತೀರ್ಥ ಗ್ರಾಮದ ಕುಡಿಯುವ ನೀರಿನ ತೊಂದರೆಗೆ ಕ್ರಮ ವಹಿಸಲು ಕೇಳಿಕೊಂಡರು.
ಅದಕ್ಕೆ ಉತ್ತರಿಸಿದ ಗ್ರಾಮೀಣ ಕಿರು ನೀರು ಸರಬರಾಜು ಅಧಿಕಾರಿಗಳು ರಾಮತೀರ್ಥ ಗ್ರಾಮಕ್ಕೆ ಹೊರ್ತಿ ಪ್ರದೇಶದಿಂದ ನೀರಿನ ಪೂರೈಕೆ ಯಾಗುತ್ತಿದೆ. ರಾಮತೀರ್ಥ ತುಂಬ ಎತ್ತರ ಪ್ರದೇಶದಲ್ಲಿದೆ, ಹೊರ್ತಿ ಮತ್ತು ಸುತ್ತಲಿನ ಐದು ಗ್ರಾಮಗಳಿಗೆ ಐದು ಗಂಟೆ ನೀರಿನ ಪೂರೈಕೆ ಬಂದು ಮಾಡಿ ನೀರು ಬಿಡಬೇಕಾಗುತ್ತದೆ. ಹೀಗಾಗಿ ಬರುವ ದಿನಗಳಲ್ಲಿ ಸಮೀಪದಲ್ಲಿಯೇ ಇರುವ ಕೆರೆಯ ಪೂಲಕ ಪಾಯಿಪ ಲಾಯಿನ ಕಾರ್ಯ ಮಾಡಿ ವ್ಯವಸ್ಥೆ ಕಲ್ಪಿಸಲು ಕ್ರೀಯಾಯೋಜನೆ ರೂಪಿಸಲಾಗಿದೆ ಎಂದರು.
ತಾ.ಪಂ ಇಒ ಮಲ್ಲಿಕಾರ್ಜುನ ಏವೂರ ಮಾತನಾಡಿ ತಾಲೂಕಿನಲ್ಲಿ ೬೮ ಶುದ್ದ ಕುಡಿಯುವ ನೀರಿನ ಘಟಕಗಳಿದ್ದು ಅವುಗಳನ್ನು ರಿಪೇರಿ ಮಾಡಿ ಗ್ರಾಮಸ್ಥರಿಗೆ ಶುದ್ಧ ಕುಡಿಯುವ ನೀರಿನ ಪೂರೈಕೆಗೆ ಪ್ರಯತ್ನಿಸಲಾಗುತ್ತಿದೆ ಎಂದರು.
ಕೃಷ್ಣಾ ಕಾಲುವೆ ಅಧಿಕ್ಷಕ ಅಭಿಯಂತರ ಮನೋಜಕುಮಾರ ಗಡಬಳ್ಳಿ ಮಾತನಾಡಿ ಕೃಷ್ಣಾ ಮುಖ್ಯ ಕಾಲುವೆಗೆ ಈಗಾಗಲೇ ನೀರು ಬಿಟ್ಟಿದ್ದು ಅದು ಸಂಗೋಗಿ ಕೆರೆಯ ವರೆಗೆ ಬಂದಿದ್ದು ಕೆರೆ ತುಂಬಿದ ನಂತರ ಎರಡು ಟಿಎಂಸಿ ನೀರಿನಲ್ಲಿ ಎಲ್ಲ ಕೆರೆಗಳನ್ನು ತುಂಬಿ ಗ್ರಾಮಸ್ಥರಿಗೆ ತೊಂದರೆಯಾಗದಂತೆ ಮಾಡುತ್ತೇವೆ. ಅದರಂತೆ ಶಾಸಕರು ತಾಲೂಕಿನ ರೋಡಗಿ, ಖ್ಯಾಢಗಿ, ಬ್ಯೂಯ್ಯಾರ ಅಗರಖೇಡ ಗ್ರಾಮಗಳಿಗೆ ಕುಡಿಯುವ ನೀರಿನ ತೊಂದರೆ ಆಗಬಾರದು. ಹೀಗಾಗಿ ಕಾಲುವೆಯಿಂದ ನೀರು ಭೀಮಾ ನದಿಗೆ ಹರಿಸಿ ಅಲ್ಲಿಂದ ಪೂರೈಸಲು ಕೇಳಿ ಕೊಂಡರು. ಮನೋಜಕುಮಾರ ಗಡಬಳ್ಳಿಯವರು ಮಾತನಾಡಿ, ಅದಕ್ಕೆ ಇನ್ನು ಒಂದು ಟಿಎಂಸಿ ನೀರು ಬೇಕಾಗುತ್ತದೆ ಎಂದರು.
ಬಹುತೇಕ ತಾಲೂಕಿನ ಕೆರೆಗಳಲ್ಲಿ ಶೇ ೩೦ ರಷ್ಟು ನೀರಿದೆ. ಆದರೆ ಲೋಣಿ ಮತ್ತು ಅರ್ಜನಾಳ ಕೆರೆಗಳಲ್ಲಿ ನೀರಿಲ್ಲ. ಸಧ್ಯ ಕೃಷ್ಣಾ ಕಾಲುವೆಗೆ ನೀರು ಬಿಟ್ಟಿದ್ದು ಕೆರೆಗಳನ್ನು ತುಂಬಿಸಲಾಗುವದೆಂದು ಮನೋಜಕುಮಾರ ಗಡಬಳ್ಳಿ ತಿಳಿಸಿದರು.
ಇಂಡಿ ಪಟ್ಟಣಕ್ಕೆ ಕುಡಿಯುವ ನೀರಿನ ತೊಂದರೆ ಇಲ್ಲ. ಭೀಮಾ ನದಿಯಿಂದ ಬಿಟ್ಟ ನೀರು ಪೂರೈಸಲಾಗುತ್ತಿದೆ. ಮೇಗಾ ಮಾರ್ಕೆಟ ಸಾರ್ವಜನಿಕರಿಗೆ ಉಪಯೋಗವಾಗಲು ಕ್ರಮ ಕೈಕೊಳ್ಳಬೇಕೆಂದು ನಗರಸಭೆ ಆಯುಕ್ತರನ್ನು ಕೇಳಿಕೊಂಡರು. ಮತ್ತು ಕರ ವಸೂಲಾತಿ ಹೆಚ್ಚಿಸಿ ಆ ಹಣವನ್ನು ಕುಡಿಯುವ ನೀರು ಮತ್ತು ಸ್ವಚ್ಛತೆಗೆ ಬಳಸಲು ಕೇಳಿಕೊಂಡರು.
ಸಾವಳಸಂಗ ಅರಣ್ಯ ಪ್ರದೇಶದಲ್ಲಿ ಖಾಸಗಿಯವರು ಗಾಳಿಯಂತ್ರದಿಂದ ವಿದ್ಯುತ್ ತಯಾರಿಸುತ್ತಿದ್ದು ಅವರ ವಿದ್ಯುತ್ ತಂತಿ ಮತ್ತು ಕಂಬಗಳು ಅರಣ್ಯ ಪ್ರದೇಶದಿಂದ ಹೋದ ಕಾರಣ ಎರಡು ಸಾವಿರ ಗಿಡ ಹಾಳಾಗಿವೆ. ಕಾರಣ ಕಂಪನಿಯವರ ಮೇಲೆ ಕೇಸು ದಾಖಲಿಸಿ ನಿರ್ದಾಕ್ಷಿಣ ಕ್ರಮ ಕೈಕೊಳ್ಳಲು ತಿಳಿಸಿದರು.
ತಾಲೂಕಿನಲ್ಲಿರುವ ಕೆಲವು ಕೆರೆಯ ಸುತ್ತಲೂ ರೈತರು ಭೋರ್ ಹೊಡೆಯುತ್ತಿರುವದು, ಪಾಯಿಪ್ ಹಾಕುವದು ಕೃಷಿಗಾಗಿ ನೀರು ಬಳಸುತ್ತಿದ್ದು ಅವರ ಮೇಲೆ ಕ್ರಮಕ್ಕಾಗಿ ಸಣ್ಣ ನೀರಾವರಿ ಅಧಿಕಾರಿಗಳಿಗೆ ತಿಳಿಸಿದರು.
ತಾಲೂಕಿನಲ್ಲಿ ಸಾತಲಗಾಂವ ನಾದ ರಸ್ತೆ, ಸಾಲೋಟಗಿ ನಾದ ರಸ್ತೆ ರೂಗಿ ಹಿರೇಮಸಳಿ ರಸ್ತೆಗಳನ್ನು ಮುಂದಿನ ತಿಂಗಳಲ್ಲಿ ಪೂರ್ತಿಗೊಳಿಸುವದಾಗಿ ಲೋಕೋಪಯೋಗಿ ಇಲಾಖೆಯ ದಯಾನಂದ ಮಠ ತಿಳಿಸಿದರು.
ಸಭೆಯಲ್ಲಿ ಕಂದಾಯ ಉಪವಿಬಾಗಾಧಿಕಾರಿ ಚಿದಾನಂದ ಗುರುಮೂರ್ತಿ, ತಹಸೀಲ್ದಾರ ಬಿ.ಎಸ್.ಕಡಕಬಾವಿ, ಡಿ.ವಾಯ್ ಎಸ್ ಪಿ ಸದಾಶಿವ ಕಟ್ಟಿಮನಿ, ತಾ.ಪಂ ಇಒ ಮಹಾದೇವಪ್ಪ ಏವೂರ, ಕೃಷ್ಣಾ ಮೇಲ್ದಂಡೆ ಯೋಜನೆಯ ಗೋವಿಂದ, ಮನೋಜಕುಮಾರ, ನಗರಸಭೆ ಆಯುಕ್ತ ಶಿವಾನಂದ ಪೂಜಾರಿ, ಆರೋಗ್ಯ ಅಧಿಕಾರಿ ಡಾ|| ರಾಜೇಶ ಕೋಳೆಕರ,ಅರಣ್ಯ ಅಧಿಕಾರಿಗಳಾದ ಎಸ್.ಜೆ.ಸಂಗಾಲಕ, ಮುಂಜುನಾಥ ಧುಳೆ, ಹೆಸ್ಕಾಂನ ಇಇ ಎಸ್.ಎ ಬಿರಾದಾರ, ಎಇಇ ಎಸ್. ಆರ್ ಮೆಂಡೆದಾರ ಗ್ರಾಮೀಣ ನೀರು ಸರಬರಾಜು ಎಇಇ ಶಿವಾಜಿ ಬನಸೋಡೆ ಮತ್ತಿತರಿದ್ದರು.

