ಉದಯರಶ್ಮಿ ದಿನಪತ್ರಿಕೆ
ಇಂಡಿ: ತಾಲೂಕಿನ ಲಚ್ಯಾಣ ಗ್ರಾಮದ ಶ್ರೀ ಸಿದ್ದಲಿಂಗೇಶ್ವರ ಭಕ್ತರ ವ್ಯಾಪಾರಸ್ಥರ ನೌಕರರ ಬಹುದಿನಗಳ ಬೇಡಿಕೆಗೆ ಶಾಸಕ ಯಶವಂತಗೌಡ ಪಾಟೀಲರು ಸ್ಪಂದಿಸಿ ಸಿಂದಗಿಯಿಂದ ಇಂಡಿ ಲಚ್ಯಾಣ ಮೂಲಕ ಸೋಲಾಪುರಕ್ಕೆ ಹೋಗುವ ಬಸ್ಸಿಗೆ ಚಾಲನೆ ನೀಡಿದರು. ಶಾಸಕ ಯಶವಂತರಾಯಗೌಡ ಪಾಟೀಲರು ಮಾತನಾಡಿ, ಸೋಲಾಪುರ ಮತ್ತು ಮಹಾರಾಷ್ಟçದ ವಿವಿಧ ಕಡೆಯಿಂದ ಬರುವ ಭಕ್ತರಿಗೆ ಈ ಬಸ್ಸು ಅನುಕೂಲವಾಗುತ್ತದೆ ಎಂದರು.
ಸಿಂದಗಿಯಿಂದ ಮದ್ಯಾನ್ಹ ೨ ಗಂಟೆಗೆ ಇಂಡಿಯಿಂದ ೩.೪೫ ಕ್ಕೆ ಬಿಡುವ ಬಸ್ಸು ಲಚ್ಯಾಣ ೪ ಗಂಟೆಗೆ, ಅಹಿರಸಂಗ, ಭೈರುಣಗಿ, ಭತಗುಣಕಿ ಹಲಸಂಗಿ ಧೂಳಖೇಡ ಮಾರ್ಗವಾಗಿ ಸೋಲಾಪುರ ತಲುಪುವದು.
ಸೋಲಾಪುರದಿಂದ ಸಂಜೆ ೭ ಗಂಟೆಗೆ ಬಿಡುವ ಬಸ್ಸು ಇದೇ ಮಾರ್ಗದಲ್ಲಿ ಇಂಡಿಯಿAದ ಸಿಂದಗಿಗೆ ಹೋಗಲಿದೆ.
ಕಾರ್ಯಕ್ರಮದಲ್ಲಿ ಕಂದಾಯ ಉಪವಿಬಾಗಾಧಿಕಾರಿ ಚಿದಾನಂದ ಗುರುಸ್ವಾಮಿ, ತಹಸೀಲ್ದಾರ ಬಿ.ಎಸ್.ಕಡಕಬಾವಿ, ಇಒ ಮಹಾದೇವಪ್ಪ ಏವೂರ ಮತ್ತಿತರಿದ್ದರು.
