Author: editor.udayarashmi@gmail.com

ಬಸವ ಜಯಂತಿ ಕಾರ್ಯಕ್ರಮದಲ್ಲಿ ಜೆಡಿಎಸ್ ಮುಖಂಡ ಜಯಪ್ರಕಾಶ್ ಹೇಳಿಕೆ ಉದಯರಶ್ಮಿ ದಿನಪತ್ರಿಕೆ ಎಚ್ ಡಿ ಕೋಟೆ: ಇಬ್ಬರು ಮಹಾದಿಗ್ಗಜರು ಜನಿಸಿದ ತಿಂಗಳು ಏಪ್ರಿಲ್. ಬಸವಣ್ಣನವರು ಕಾಯಕ ಮತ್ತು ವಚನಗಳ ಮೂಲಕ ನಮಗೆ ಆದರ್ಶಪ್ರಾಯವಾಗಿದ್ದರೆ, ಡಾ. ಬಿ.ಆರ್ ಅಂಬೇಡ್ಕರ್ ಅವರು ಸಂವಿಧಾನದ ಮೂಲಕ ಸಮಾನತೆ ಸಾರಿದವರು. ನಾಡು ಕಂಡ ಇಂತ ಮಹನೀಯರ ತತ್ವ, ಆದರ್ಶಗಳನ್ನು ನಾವೆಲ್ಲರೂ ಅಳವಡಿಸಿಕೊಂಡು ಅವರ ಮಾರ್ಗದಲ್ಲಿ ನಡೆಯಬೇಕು ಎಂದು ಜೆಡಿಎಸ್ ಮುಖಂಡ ಜಯಪ್ರಕಾಶ್ ಚಿಕ್ಕಣ್ಣ ಹೇಳಿದರು.ಪಟ್ಟಣದ ಜೆಎಸ್ಎಸ್ ಮಂಗಳ ಮಂಟಪದಲ್ಲಿ ಅಖಿಲ ಭಾರತ ವೀರಶೈವ ಲಿಂಗಾಯಿತ ಮಹಾಸಭಾ ಹೆಚ್ ಡಿ. ಕೋಟೆ ಘಟಕ ವತಿಯಿಂದ ಆಯೋಜಿಸಿದ ಬಸವ ಜಯಂತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು. 12 ನೇ ಶತಮಾನದಲ್ಲಿ ವಿಶ್ವಗುರು ಬಸವಣ್ಣನವರು ಸಾರಿದ ತತ್ವ ಆದರ್ಶಗಳು ಇಂದಿಗೂ ಪ್ರಸ್ತುತವಾಗಿದ್ದು, ಇಂದಿನ ಜನಾಂಗ ಅವುಗಳನ್ನು ಅರಿತುಕೊಳ್ಳುವ ಮೂಲಕ ನಾಡಿನ ಏಳ್ಗೆಗೆ ಶ್ರಮಿಸಬೇಕು ಎಂದು ಜಯಪ್ರಕಾಶ್ ಚಿಕ್ಕಣ್ಣ ಹೇಳಿದರು.ಕನಕಪುರ ಶ್ರೀ ದೇಗುಲ ಮಠ ಕಿರಿಯ ಚನ್ನಬಸವ ಸ್ವಾಮಿ ಮಾತನಾಡಿ, ಹೆಚ್ ಡಿ ಕೋಟೆ…

Read More

ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಧಾರವಾಡದ ಕೃಷಿ ವಿಶ್ವವಿದ್ಯಾಲಯದ ದೇಶಿ ಯೋಜನೆಯಡಿಯಲ್ಲಿ ಖಾಲಿ ಇರುವ ಫೆಸಿಲಿಟೇಟರ್ ಹುದ್ದೆ ತಾತ್ಕಾಲಿಕ ನೇಮಕಾತಿಗಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಒಟ್ಟು ೨ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಲಾಗಿದ್ದು, ಕೃಷಿಯಲ್ಲಿ ಪದವಿ ಅಥವಾ ಸ್ನಾತಕೋತ್ತರ ಪದವಿ ಪಡೆದ ಹಾಗೂ ಕೃಷಿ ಮತ್ತು ಕೃಷಿಗೆ ಸಂಬಂಧಿಸಿದ ವಿಭಾಗದ ಹುದ್ದೆಗಳ ಅನುಭವ ಹೊಂದಿರಬೇಕು. ನೇಮಕಾತಿ ಪಡೆಯಲು ಬಯಸುವ ಅಭ್ಯರ್ಥಿಗಳು ಅರ್ಜಿ ನಮೂನೆ ಎರಡು ಪ್ರತಿಗಳೊಂದಿಗೆ ದಿನಾಂಕ :೫-೦೬-೨೦೨೬ರಂದು ಬೆಳಿಗ್ಗೆ ೧೦ ಗಂಟೆಗೆ ಸಹ ವಿಸ್ತರಣಾ ನಿರ್ದೇಶಕರು ಕೃಷಿ ವಿಸ್ತರಣಾ ಕೇಂದ್ರ ವಿಜಯಪುರದಲ್ಲಿ ನಡೆಯುವ ಸಂದರ್ಶನಕ್ಕೆ ಎಲ್ಲ ಮೂಲ ದಾಖಲೆಗಳನ್ನು ಹಾಗೂ ದೃಢೀಕೃತ ಎರಡು ಪ್ರತಿಗಳೊಂದಿಗೆ ಹಾಜರಾಗಬೇಕು. ಈ ಕುರಿತಂತೆ ಹೆಚ್ಚಿನ ಮಾಹಿತಿಗಾಗಿ ಸಹ ವಿಸ್ತರಣಾ ನಿರ್ದೇಶಕರು ಕೃಷಿ ವಿಸ್ತರಣಾ ಕೇಂದ್ರ ವಿಜಯಪುರ ಕಚೇರಿಯನ್ನು ಸಂಪರ್ಕಿಸಬಹುದಾಗಿದೆ ಎಂದು ಪ್ರಕಟಣೆ ತಿಳಿಸಿದೆ.

Read More

ಉದಯರಶ್ಮಿ ದಿನಪತ್ರಿಕೆ ವಿಜಯಪುರ: ನಗರ ನಿವಾಸಿ-ಕೇಂದ್ರಿತ ಆಧಾರ್ ಸೇವೆಗಳನ್ನು ಬಲಪಡಿಸುವ ನಿಟ್ಟಿನಲ್ಲಿ ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರದ ಬೆಂಗಳೂರು ಪ್ರಾದೇಶಿಕ ಕಚೇರಿ ಮತ್ತೊಂದು ಮಹತ್ವದ ಹೆಜ್ಜೆಯನ್ನಿರಿಸಿದ್ದು, ನಗರದ ಆಶ್ರಮ ರಸ್ತೆಯಲ್ಲಿರುವ ಬಿಎಲ್ ಡಿಇ ೨ನೇ ಗೇಟ್ ಎದುರಿಗಿರುವ ಬಜಾಜ್ ಶೋರೂಂ ಮೇಲಿನ ಕಟ್ಟಡದಲ್ಲಿ ಹೊಸ ಆಧಾರ್ ಸೇವಾ ಸೇವಾ ಕೇಂದ್ರವನ್ನು ಕಾರ್ಯಾರಂಭಿಸಲಾಗಿದೆ ಎಂದು ಜಿಲ್ಲಾಧಿಕಾರಿಗಳ ಕಚೇರಿ ಪ್ರಕಟಣೆ ತಿಳಿಸಿದೆ.ತಡೆರಹಿತ ಆಧಾರ್ ಸೇವೆ: ವಿಜಯಪುರ ಆಧಾರ್ ಸೇವಾ ಕೇಂದ್ರಗಳ ಪೈಕಿ ಇದು ‘ಮಾಡೆಲ್-ಬಿ’ ಕೇಂದ್ರವಾಗಿದ್ದು, ನಿವಾಸಿಗಳಿಗೆ ತಡೆರಹಿತ ಆಧಾರ್ ಸಂಬಂಧಿತ ಸೇವೆ ಒದಗಿಸಲು ಎಂದು ಕಾರ್ಯಾಚರಣಾ ಕಿಟ್ ಗಳನ್ನು ಈ ಕೇಂದ್ರದಲ್ಲಿ ಅಳವಡಿಸಲಾಗಿದೆ. ಈ ಆಧಾರ್ ಸೇವಾ ಕೇಂದ್ರವು ಆಧಾರ್ ನೋಂದಣಿ, ಬಯೋಮೆಟ್ರಿಕ್ ನವೀಕರಣಗಳು, ದೋಷ ತಿದ್ದುಪಡಿ ಮತ್ತು ಕುಂದು-ಕೊರತೆ ನಿವಾರಣಾ ಸೇವೆಗಳನ್ನು ಒಂದೇ ಸೂರಿನಡಿ ಒದಗಿಸುತ್ತದೆ. ಈ ಕೇಂದ್ರವು ವಾರದ ಎಲ್ಲ ದಿನಗಳಲ್ಲಿ ಕಾರ್ಯನಿರ್ವಹಿಸುತ್ತದೆ.ಈ ಆಧಾರ್ ಸೇವಾ ಕೇಂದ್ರವು ನೇರವಾಗಿ ಯುಐಡಿಎಐ ನಡಿ ಕಾರ್ಯನಿರ್ವಹಿಸುತ್ತದೆ. ಈ ಕೇಂದ್ರವನ್ನು ಸಂಪೂರ್ಣವಾಗಿ ಅಂತರ್ಗತ ಮತ್ತು…

Read More

ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಬಕ್ರೀದ್ ಹಬ್ಬದ ಹಿನ್ನೆಲೆಯಲ್ಲಿ ಜಿಲ್ಲೆಯಾದ್ಯಂತ ಚೆಕ್ ಪೋಸ್ಟ್ ಗಳಲ್ಲಿ ಅನಧಿಕೃತವಾಗಿ ಜಾನುವಾರುಗಳ ಸಾಗಣೆಯಾಗದಂತೆ ಅಧಿಕಾರಿಗಳು ತೀವ್ರ ನಿಗಾ ವಹಿಸಬೇಕು ಎಂದು ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ರಾಮಗೌಡ ಹಟ್ಟಿ ಹೇಳಿದರು. ಬಕ್ರೀದ್ ಹಬ್ಬದ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಪಶುಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆಯ ಸಹಯೋಗದಲ್ಲಿ ಸೋಮವಾರ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ದಾಖಲೆಗಳಿಲ್ಲದೆ ಜಾನುವಾರುಗಳ ಸಾಗಣೆ ಮಾಡುವುದು ಕಾನೂನಿನ ವಿರುದ್ಧವಾಗಿದೆ. ಹಾಗಾಗಿ ಅಕ್ರಮವಾಗಿ ಜಾನುವಾರುಗಳ ಸಾಗಣೆಯಾಗದಂತೆ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂದರು. ಜಾನುವಾರು ಖರೀದಿ ಹಾಗೂ ಮಾರಾಟ ಮಾಡುವ ವೇಳೆ ಜಾನುವಾರುಗಳಿಗೆ ಕಿವಿಯೋಲೆ ಇರುವುದು ಕಡ್ಡಾಯ. ಸಾಗಾಣಿಕೆ ಸಂಬಂಧಪಟ್ಟಂತೆ ಸಂಬಂಧಪಟ್ಟ ಅಧಿಕಾರಿಗಳಿಂದ ಧೃಡೀಕರಣ ಪತ್ರ ಕಡ್ಡಾಯವಾಗಿದೆ. ಎಲ್ಲ ಜಾನುವಾರುಗಳ ಮಾಲೀಕರಿಗೆ ಮನವೊಲಿಸಿ ಕಿವಿಯೋಲೆ ಹಾಕುವ ಪ್ರಕ್ರಿಯೆ ಜಾರಿಯಲ್ಲಿದೆ ಎಂದರು. ಬಕ್ರೀದ್ ಹಬ್ಬದ ಮುನ್ನಾ ದಿನವಾದ ಮೇ ೨೭ ಹಾಗೂ ಮೇ ೨೮ರಂದು ಜಾನುವಾರುಗಳ ಅಕ್ರಮ ವಧೆ ಹಾಗೂ ಸಾಗಣೆ ತಡೆಗಟ್ಟಲು ನಗರಪಾಲಿಕೆ, ಪಶುಪಾಲನಾ…

Read More

ಉದಯರಶ್ಮಿ ದಿನಪತ್ರಿಕೆ ದೇವರಹಿಪ್ಪರಗಿ: ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ತಾಲ್ಲೂಕು ಘಟಕದ ನೂತನ ಅಧ್ಯಕ್ಷರಾಗಿ ಪಿ.ಸಿ.ತಳಕೇರಿ ಆಯ್ಕೆಯಾಗಿದ್ದಾರೆ.ತಾಲ್ಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದಡಿ ಗುರುವಾರ ಜರುಗಿದ ತಾಲ್ಲೂಕು ಪದಾಧಿಕಾರಿಗಳ ಚುನಾವಣೆಯಲ್ಲಿ ಅವಿರೋಧವಾಗಿ ಆಯ್ಕೆ ಮಾಡಲಾಯಿತು.ಸಿದ್ರಾಮಪ್ಪ ಮುಳಸಾವಳಗಿ (ಉಪಾಧ್ಯಕ್ಷ), ರೇಣುಕಾಬಾಯಿ ಇಂಡಿ( ಮಹಿಳಾ ಉಪಾಧ್ಯಕ್ಷೆ), ಬಸವರಾಜ ನಾಗರಾಳ( ಪ್ರಧಾನ ಕಾರ್ಯದರ್ಶಿ), ದಾನು ರಾಠೋಡ(ಖಜಾಂಚಿ), ರವೀಂದ್ರ ಕೋಟಿನ್(ಸಹ ಕಾರ್ಯದರ್ಶಿ), ಪು಼ಷ್ಪಾವತಿ ರೂಗಿ( ಮಹಿಳಾ ಸಹಕಾರ್ಯದರ್ಶಿ), ರಹಮತಲ್ಲಾ ಹಳ್ಳಿ( ಸಂಘಟನಾ ಕಾರ್ಯದರ್ಶಿ), ಫರೀದಾಭಾನು ಶೇಖ್(ಮಹಿಳಾ ಸಂಘಟನಾ ಕಾರ್ಯದರ್ಶಿ) ಆಯ್ಕೆಯಾದರು.

Read More

ಉದಯರಶ್ಮಿ ದಿನಪತ್ರಿಕೆ ಸಿಂದಗಿ: ತಾಲೂಕಿನ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ರಿ, ಬೆಂಗಳೂರು, ಸಿಂದಗಿ ತಾಲೂಕು ಘಟಕಕ್ಕೆ ನೂತನ ಪದಾಧಿಕಾರಿಗಳು ಚುನಾವಣೆಯಲ್ಲಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.ತಾಲೂಕಾಧ್ಯಕ್ಷರಾಗಿ ಗುತ್ತರಗಿ ಎಲ್‌ಟಿ ಶಾಲೆಯ ಲಕ್ಷ್ಮಣ ಸೊನ್ನ, ಉಪಾಧ್ಯಕ್ಷರಾಗಿ ಕೆಜಿಎಂಪಿಎಸ್ ಶಾಲೆಯ ಶರಣಬಸಪ್ಪ ಲಂಗೋಟಿ, ಮಹಿಳಾ ಉಪಾಧ್ಯಕ್ಷೆಯಾಗಿ ಸಿಂದಗಿಯ ಯುಬಿಎಲ್‌ಪಿಎಸ್ ಶಾಲೆಯ ಎಫ್.ಎ.ಪಠಾಣ, ಪ್ರಧಾನ ಕಾರ್ಯದರ್ಶಿಯಾಗಿ ಸಿಂದಗಿ ಜಿಎಲ್‌ಪಿಎಸ್ ಶಾಲೆಯ ಜಗದೇವಪ್ಪ ಸಿಂಗೆ, ಖಜಾಂಚಿಯಾಗಿ ರಾಂಪೂರ ಪಿಎ ಎಲ್‌ಟಿ ಜಿಎಸ್‌ಪಿಎಸ್ ಶಾಲೆಯ ರಮೇಶ ಅಡಕಿ, ಸಹ ಕಾರ್ಯದರ್ಶಿಯಾಗಿ ಬಂದಾಳ ಗ್ರಾಮದ ಯುಬಿಎಲ್‌ಪಿಎಸ್ ಶಾಲೆಯ ಡಿ.ಎಚ್.ಚೌಧರಿ, ಮಹಿಳಾ ಸಹ ಕಾರ್ಯದರ್ಶಿಯಾಗಿ ಯರಗಲ್ ಬಿಕೆ ಎಚ್.ಪಿ.ಎಸ್ ಶಾಲೆಯ ಭಾಗ್ಯಶ್ರೀ ತಡಲಗಿ, ಸಂಘಟನಾ ಕಾರ್ಯದರ್ಶಿಯಾಗಿ ಬಬಲೇಶ್ವರ ಗ್ರಾಮದ ಜಿಎಚ್‌ಪಿಎಸ್ ಶಾಲೆಯ ಡಿ.ಸಿ.ಜಾಧವ, ಮಹಿಳಾ ಸಂಘಟನಾ ಕಾರ್ಯದರ್ಶಿಯಾಗಿ ಎಮ್‌ಪಿಎಸ್ ಶಾಲೆಯ ಸುಮಂಗಲಾ ಕೆಂಭಾವಿ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

Read More

ಉದಯರಶ್ಮಿ ದಿನಪತ್ರಿಕೆ ಸಿಂದಗಿ: ಮೇ.೨೮ರಂದು ನಡೆಯಲಿರುವ ಬಕ್ರೀದ್ ಹಬ್ಬವನ್ನು ಶಾಂತಿಯುತವಾಗಿ ಆಚರಿಸಬೇಕು. ಯಾವುದೇ ಗೊಂದಲ ಅಥವಾ ಅಶಾಂತಿಗೆ ಆಸ್ಪದ ನೀಡಬಾರದು. ಸಿಂದಗಿ ಜನತೆ ಶಾಂತಿ ಮತ್ತು ಸೌಹಾರ್ದತೆಗೆ ಹೆಸರುವಾಸಿಯಾದವರು ಪಿಎಸ್‌ಐ ಶ್ರೀಕಾಂತ ಕಾಂಬಳೆ ಹೇಳಿದರು.ಸಿಂದಗಿ ನಗರದ ಪೋಲಿಸ್ ಠಾಣೆಯ ಆವರಣದಲ್ಲಿ ಬಕ್ರೀದ್ ಹಬ್ಬದ ನಿಮಿತ್ಯ ಹಮ್ಮಿಕೊಂಡ ಶಾಂತಿ ಸಭೆಯಲ್ಲಿ ಮಾತನಾಡಿದ ಅವರು, ಎಲ್ಲ ಹಬ್ಬಗಳ ಸಂದರ್ಭದಲ್ಲೂ ಸಾರ್ವಜನಿಕರು ಕಾನೂನು ಸುವ್ಯವಸ್ಥೆ ಕಾಪಾಡಲು ಸಹಕಾರ ನೀಡಿದ್ದಾರೆ. ಇದೇ ಸಹಕಾರ ಮುಂದುವರಿಯಬೇಕು. ಇತರರಿಗೆ ಯಾವುದೇ ರೀತಿಯ ಸಮಸ್ಯೆಯಾಗದಂತೆ ಎಲ್ಲರೂ ನಡೆದುಕೊಳ್ಳಬೇಕು. ಯಾವುದೇ ಅಹಿತಕರ ಘಟನೆ ಕಂಡುಬಂದರೆ ಕಾನೂನು ಕೈಗೆ ತೆಗೆದುಕೊಳ್ಳದೆ ಪೊಲೀಸರ ಗಮನಕ್ಕೆ ತರಬೇಕು. ಹಬ್ಬದ ಸಂದರ್ಭದಲ್ಲಿ ನಗರ ಸೇರಿದಂತೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗುವುದು ಎಂದರು.ಈ ವೇಳೆ ಕ್ರೈಂ ಪಿಎಸ್‌ಐ ಎಂ.ಬಿ.ಬಿರಾದಾರ ಮಾತನಾಡಿ, ಇತ್ತೀಚೆಗೆ ಸಮಾಜಿಕ ಜಾಲತಾಣದಲ್ಲಿ ಸುಳ್ಳು ಸುದ್ಧಿಗಳು ಹರಡುತ್ತಿವೆ. ಸಾಮಾಜಿಕ ಜಾಲತಾಣಗಳಲ್ಲಿ ಬರುವ ಸುಳ್ಳು ಸುದ್ಧಿಗಳಿಂದ ಯಾರೂ ಪ್ರಚೋದನೆಗೆ ಒಳಗಾಗದೆ ಎಚ್ಚರಿಕೆ ವಹಿಸಬೇಕು. ಧಾರ್ಮಿಕ…

Read More

ಉದಯರಶ್ಮಿ ದಿನಪತ್ರಿಕೆ ತಾಳಿಕೋಟೆ: ಹೈದ್ರಾಬಾದ್‌ದಿಂದ ಮಗಳನ್ನು ಕರೆದುಕೊಂಡು ತಾಳಿಕೋಟೆ ಮಾರ್ಗವಾಗಿ ಬಾಗಲಕೋಟೆಗೆ ತರಳುತ್ತಿದ್ದ ಸಮಯದಲ್ಲಿ ತಾಳಿಕೋಟೆ ಸಮಿಪದಲ್ಲಿ ಆಲದಮರಕ್ಕೆ ಕಾರು ಡಕ್ಕಿಯಾಗಿ ತಂದೆ ಬಾಗಲಕೋಟೆ ಜಿಲ್ಲಾ ಪೊಲೀಸ್ ಕಚೇರಿಯಲ್ಲಿ ಜಿಎಚ್‌ಓ ಆಗಿ ಕಾರ್ಯನಿರ್ವಹಿಸುತ್ತಿದ್ದ ನಿಸಾರಹಮ್ಮದ ಅಬ್ದುಲ್‌ರಜಾಕ ಹಿಪ್ಪರಗಿ(೫೦) ಸ್ಥಳದಲ್ಲಿಯೇ ಸಾವನಪ್ಪಿದ ಘಟನೆ ಸೋಮವಾರ ನಸುಕಿನ ಜಾವ ೨ ಗಂಟೆಯ ಸುಮಾರಿಗೆ ನಡೆದಿದೆ.ನಿಸಾರಹಮ್ಮದ ಹಿಪ್ಪರಗಿ ಇವರು ಮಗಳಾದ ನೇಹಾ ಎಂಬವಳನ್ನು ಹೈದ್ರಾಬಾದ್‌ಗೆ ಐಪಿಎಸ್ ಕೋಚಿಂಗ್ ಬಿಟ್ಟಿದ್ದು ನಂತರ ಕೋಚಿಂಗ್ ನಂತರ ಹೈದ್ರಾಬಾದನಲ್ಲಿಯೇ ಐಪಿಎಸ್ ಪರಿಕ್ಷೆ ಮುಗಿದಿದ್ದರಿಂದ ಸ್ನೇಹಿತ ಬಸವರಾಜ ಸೊನಾ ಎಂಬವರ ಜೊತೆಗೂಡಿ ಮಗಳಾದ ನೇಹಾಳನ್ನು ಕರೆದುಕೊಂಡು ಬರುತ್ತಿದ್ದರೆನ್ನಲಾಗಿದ್ದು ತಾಳಿಕೋಟೆ ಸಮಿಪ ಬರುತ್ತಿದ್ದಾಗ ಕರವಿಂಗ್‌ನಲ್ಲಿ ನಿಸಾರಹಮ್ಮದನ ಅಜಾಗರುಕತೆ ಕಾರು ಚಲಾವಣೆಯಿಂದ ಬಲಗಡೆ ಇರುವ ಆಲದಮರಕ್ಕೆ ಕಾರು ಡಿಕ್ಕಿಹೊಡೆದಿದ್ದರಿಂದ ಸ್ಥಳದಲ್ಲಿಯೇ ನಿಸಾರಹಮ್ಮದ ಹಿಪ್ಪರಗಿ ಸಾವನಪ್ಪಿದ್ದಾನೆಂದು ಮೃತನ ಅಳಿಯನಾದ ಅಜೀಜಹಮ್ಮದ ಕುಡಚಿ ಅವರು ತಾಳಿಕೋಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.ಅಪಘಾತದ ಸಮಯದಲ್ಲಿ ಕಾರಿನಲ್ಲಿದ್ದ ಮಗಳಾದ ನೇಹಾ(೨೨) ಮತ್ತು ಅಪಘಾತದಲ್ಲಿ ಮೃತಪಟ್ಟ ನಿಸಾರಹಮ್ಮದನ ಸ್ನೇಹಿತ ಎಎಸ್‌ಐ ಬಸವರಾಜ…

Read More

ಆಯಿಲ್ ಕಂಪನಿ ಮಾರಾಟಾಧಿಕಾರಿಗಳು, ಪೆಟ್ರೋಲ್ ಬಂಕ್ ಮಾಲೀಕರ ಸಂಘದ ಪ್ರತಿನಿಧಿಗಳ ಸಭೆಯಲ್ಲಿ ಜಿಲ್ಲಾಧಿಕಾರಿ ಡಾ.ಆನಂದ್. ಕೆ ಸೂಚನೆ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಜಿಲ್ಲೆಯಲ್ಲಿ ಪೆಟ್ರೋಲ್ ಮತ್ತು ಡಿಸೈಲ್ ಸಮರ್ಪಕವಾಗಿ ಸರಬರಾಜಾಗುತ್ತಿದ್ದು, ಸಾರ್ವಜನಿಕರು ಆತಂಕ ಪಡುವ ಅಗತ್ಯವಿಲ್ಲ ಎಂದು ಜಿಲ್ಲಾಧಿಕಾರಿಗಳಾದ ಡಾ. ಆನಂದ ಕೆ. ಅವರು ಹೇಳಿದರು.ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಸೋಮವಾರ ಜಿಲ್ಲೆಯ ಎಲ್ಲ ಆಯಿಲ್ ಕಂಪನಿಯ ಮಾರಾಟಾಧಿಕಾರಿಗಳು ಹಾಗೂ ಪೆಟ್ರೋಲ್ ಬಂಕ್ ಮಾಲೀಕರ ಸಂಘದ ಪ್ರತಿನಿಧಿಗಳ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ತೈಲ ಪೂರೈಕೆ ವಿಷಯದಲ್ಲಿ ಕಂಪನಿಗಳು ಜಾಗರೂಕತೆ ವಹಿಸಿ, ಸಮಸ್ಯೆ ಬಾರದ ರೀತಿಯಲ್ಲಿ ಇಂಧನ ಪೂರೈಸಬೇಕು ಎಂದರು.ಉಳಿದ ಎಲ್ಲ ಪೆಟ್ರೋಲ್ ಪಂಪ್‌ಗಳಲ್ಲಿ ಅಗತ್ಯತೆಗೆ ಅನುಸಾರವಾಗಿ ತೈಲ ಲಭ್ಯವಿರುತ್ತದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.ಇನ್ನೊಂದೆಡೆ ಜಿಲ್ಲೆಯ ಜನತೆ ಗಾಬರಿಯಾಗುವ ಅವಶ್ಯಕತೆ ಇಲ್ಲ. ಆದರೆ ಅವಶ್ಯಕತೆ ಅನುಸಾರ ಮಾತ್ರವೇ ಇಂಧನ ಪಡೆದುಕೊಳ್ಳಬೇಕು ಎಂಬುದನ್ನು ಜಿಲ್ಲಾಧಿಕಾರಿ ಇದೇ ವೇಳೆ ಸಾರ್ವಜನಿಕರಿಗೂ ಸಲಹೆ ಮಾಡಿದರು.ಇನ್ನೊಂದೆಡೆ ಮುಂಗಾರು ಆರಂಭವಾಗಿದೆ.ಏಳುವರೆ ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ರೈತರ ಉಳುಮೆ…

Read More

ಬಹುಹಳ್ಳಿ ಕುಡಿಯುವ ನೀರು ಸರಬರಾಜು ಯೋಜನೆಗಳ ಪರಿಶೀಲನೆ ನಡೆಸಿದ ಜಿಪಂ ಸಿಇಒ ರಿಷಿ ಆನಂದ ಕಟ್ಟುನಿಟ್ಟಿನ ಕ್ರಮಕ್ಕೆ ಅಧಿಕಾರಿಗಳಿಗೆ ಸೂಚನೆ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಯಾವುದೇ ರೀತಿಯ ಕುಡಿಯುವ ನೀರಿನ ಸಮಸ್ಯೆ ಉಂಟಾಗದಂತೆ ಅಧಿಕಾರಿಗಳು ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕಾಧಿಕಾರಿಗಳಾದ ರಿಷಿ ಆನಂದ ಅಧಿಕಾರಿಗಳಿಗೆ ಸೂಚನೆ ನೀಡಿದರು.ಇಂಡಿ ತಾಲೂಕಿನ ಹೊರ್ತಿ ಮತ್ತು ಇತರೆ ೩೧ ಗ್ರಾಮಗಳಿಗೆ ಹಾಗೂ ಚಡಚಣ ತಾಲೂಕಿನ ಇಂಚಗೇರಿ ಮತ್ತು ಇತರೆ ೪೧ ಗ್ರಾಮಗಳಿಗೆ ನೀರು ಪೂರೈಸುವ ಬಹುಹಳ್ಳಿ ಕುಡಿಯುವ ನೀರು ಸರಬರಾಜು ಯೋಜನೆಗಳ ಜಲಮೂಲಗಳು ಹಾಗೂ ನೀರು ಸಂಸ್ಕರಣಾ ಘಟಕಗಳಿಗೆ ಸೋಮವಾರ ಭೇಟಿ ನೀಡಿ ಪರಿಶೀಲಿಸಿ ಅವರು ಮಾತನಾಡಿದರು,ಇಂಡಿ ತಾಲೂಕಿನ ಅರ್ಜನಾಳ ಮತ್ತು ಹಂಜಗಿ ಕೆರೆಗಳಿಗೆ ಭೇಟಿ ನೀಡಿದ ಅವರು, ಬಹುಹಳ್ಳಿ ಕುಡಿಯುವ ನೀರು ಸರಬರಾಜು ಯೋಜನೆಗಳ ಪ್ರಮುಖ ಜಲಮೂಲಗಳಾದ ಕೆರೆ ಹಾಗೂ ಜಲಾಶಯ ಒತ್ತುವರಿ ಹಾಗೂ ಸಂಗ್ರಹವಾಗಿರುವ ನೀರಿನ ಪ್ರಮಾಣವನ್ನು ಪರಿಶೀಲಿಸಿದ ಅವರು, ಮುಂಬರುವ ದಿನಗಳಲ್ಲಿ ನೀರಿನ ಕೊರತೆ ಉಂಟಾಗದಂತೆ…

Read More