ಉದಯರಶ್ಮಿ ದಿನಪತ್ರಿಕೆ
ದೇವರಹಿಪ್ಪರಗಿ: ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ತಾಲ್ಲೂಕು ಘಟಕದ ನೂತನ ಅಧ್ಯಕ್ಷರಾಗಿ ಪಿ.ಸಿ.ತಳಕೇರಿ ಆಯ್ಕೆಯಾಗಿದ್ದಾರೆ.
ತಾಲ್ಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದಡಿ ಗುರುವಾರ ಜರುಗಿದ ತಾಲ್ಲೂಕು ಪದಾಧಿಕಾರಿಗಳ ಚುನಾವಣೆಯಲ್ಲಿ ಅವಿರೋಧವಾಗಿ ಆಯ್ಕೆ ಮಾಡಲಾಯಿತು.
ಸಿದ್ರಾಮಪ್ಪ ಮುಳಸಾವಳಗಿ (ಉಪಾಧ್ಯಕ್ಷ), ರೇಣುಕಾಬಾಯಿ ಇಂಡಿ( ಮಹಿಳಾ ಉಪಾಧ್ಯಕ್ಷೆ), ಬಸವರಾಜ ನಾಗರಾಳ( ಪ್ರಧಾನ ಕಾರ್ಯದರ್ಶಿ), ದಾನು ರಾಠೋಡ(ಖಜಾಂಚಿ), ರವೀಂದ್ರ ಕೋಟಿನ್(ಸಹ ಕಾರ್ಯದರ್ಶಿ), ಪು಼ಷ್ಪಾವತಿ ರೂಗಿ( ಮಹಿಳಾ ಸಹಕಾರ್ಯದರ್ಶಿ), ರಹಮತಲ್ಲಾ ಹಳ್ಳಿ( ಸಂಘಟನಾ ಕಾರ್ಯದರ್ಶಿ), ಫರೀದಾಭಾನು ಶೇಖ್(ಮಹಿಳಾ ಸಂಘಟನಾ ಕಾರ್ಯದರ್ಶಿ) ಆಯ್ಕೆಯಾದರು.

