ಉದಯರಶ್ಮಿ ದಿನಪತ್ರಿಕೆ
ಸಿಂದಗಿ: ತಾಲೂಕಿನ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ರಿ, ಬೆಂಗಳೂರು, ಸಿಂದಗಿ ತಾಲೂಕು ಘಟಕಕ್ಕೆ ನೂತನ ಪದಾಧಿಕಾರಿಗಳು ಚುನಾವಣೆಯಲ್ಲಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ತಾಲೂಕಾಧ್ಯಕ್ಷರಾಗಿ ಗುತ್ತರಗಿ ಎಲ್‌ಟಿ ಶಾಲೆಯ ಲಕ್ಷ್ಮಣ ಸೊನ್ನ, ಉಪಾಧ್ಯಕ್ಷರಾಗಿ ಕೆಜಿಎಂಪಿಎಸ್ ಶಾಲೆಯ ಶರಣಬಸಪ್ಪ ಲಂಗೋಟಿ, ಮಹಿಳಾ ಉಪಾಧ್ಯಕ್ಷೆಯಾಗಿ ಸಿಂದಗಿಯ ಯುಬಿಎಲ್‌ಪಿಎಸ್ ಶಾಲೆಯ ಎಫ್.ಎ.ಪಠಾಣ, ಪ್ರಧಾನ ಕಾರ್ಯದರ್ಶಿಯಾಗಿ ಸಿಂದಗಿ ಜಿಎಲ್‌ಪಿಎಸ್ ಶಾಲೆಯ ಜಗದೇವಪ್ಪ ಸಿಂಗೆ, ಖಜಾಂಚಿಯಾಗಿ ರಾಂಪೂರ ಪಿಎ ಎಲ್‌ಟಿ ಜಿಎಸ್‌ಪಿಎಸ್ ಶಾಲೆಯ ರಮೇಶ ಅಡಕಿ, ಸಹ ಕಾರ್ಯದರ್ಶಿಯಾಗಿ ಬಂದಾಳ ಗ್ರಾಮದ ಯುಬಿಎಲ್‌ಪಿಎಸ್ ಶಾಲೆಯ ಡಿ.ಎಚ್.ಚೌಧರಿ, ಮಹಿಳಾ ಸಹ ಕಾರ್ಯದರ್ಶಿಯಾಗಿ ಯರಗಲ್ ಬಿಕೆ ಎಚ್.ಪಿ.ಎಸ್ ಶಾಲೆಯ ಭಾಗ್ಯಶ್ರೀ ತಡಲಗಿ, ಸಂಘಟನಾ ಕಾರ್ಯದರ್ಶಿಯಾಗಿ ಬಬಲೇಶ್ವರ ಗ್ರಾಮದ ಜಿಎಚ್‌ಪಿಎಸ್ ಶಾಲೆಯ ಡಿ.ಸಿ.ಜಾಧವ, ಮಹಿಳಾ ಸಂಘಟನಾ ಕಾರ್ಯದರ್ಶಿಯಾಗಿ ಎಮ್‌ಪಿಎಸ್ ಶಾಲೆಯ ಸುಮಂಗಲಾ ಕೆಂಭಾವಿ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

