ಬಸವ ಜಯಂತಿ ಕಾರ್ಯಕ್ರಮದಲ್ಲಿ ಜೆಡಿಎಸ್ ಮುಖಂಡ ಜಯಪ್ರಕಾಶ್ ಹೇಳಿಕೆ
ಉದಯರಶ್ಮಿ ದಿನಪತ್ರಿಕೆ
ಎಚ್ ಡಿ ಕೋಟೆ: ಇಬ್ಬರು ಮಹಾದಿಗ್ಗಜರು ಜನಿಸಿದ ತಿಂಗಳು ಏಪ್ರಿಲ್. ಬಸವಣ್ಣನವರು ಕಾಯಕ ಮತ್ತು ವಚನಗಳ ಮೂಲಕ ನಮಗೆ ಆದರ್ಶಪ್ರಾಯವಾಗಿದ್ದರೆ, ಡಾ. ಬಿ.ಆರ್ ಅಂಬೇಡ್ಕರ್ ಅವರು ಸಂವಿಧಾನದ ಮೂಲಕ ಸಮಾನತೆ ಸಾರಿದವರು. ನಾಡು ಕಂಡ ಇಂತ ಮಹನೀಯರ ತತ್ವ, ಆದರ್ಶಗಳನ್ನು ನಾವೆಲ್ಲರೂ ಅಳವಡಿಸಿಕೊಂಡು ಅವರ ಮಾರ್ಗದಲ್ಲಿ ನಡೆಯಬೇಕು ಎಂದು ಜೆಡಿಎಸ್ ಮುಖಂಡ ಜಯಪ್ರಕಾಶ್ ಚಿಕ್ಕಣ್ಣ ಹೇಳಿದರು.
ಪಟ್ಟಣದ ಜೆಎಸ್ಎಸ್ ಮಂಗಳ ಮಂಟಪದಲ್ಲಿ ಅಖಿಲ ಭಾರತ ವೀರಶೈವ ಲಿಂಗಾಯಿತ ಮಹಾಸಭಾ ಹೆಚ್ ಡಿ. ಕೋಟೆ ಘಟಕ ವತಿಯಿಂದ ಆಯೋಜಿಸಿದ ಬಸವ ಜಯಂತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು. 12 ನೇ ಶತಮಾನದಲ್ಲಿ ವಿಶ್ವಗುರು ಬಸವಣ್ಣನವರು ಸಾರಿದ ತತ್ವ ಆದರ್ಶಗಳು ಇಂದಿಗೂ ಪ್ರಸ್ತುತವಾಗಿದ್ದು, ಇಂದಿನ ಜನಾಂಗ ಅವುಗಳನ್ನು ಅರಿತುಕೊಳ್ಳುವ ಮೂಲಕ ನಾಡಿನ ಏಳ್ಗೆಗೆ ಶ್ರಮಿಸಬೇಕು ಎಂದು ಜಯಪ್ರಕಾಶ್ ಚಿಕ್ಕಣ್ಣ ಹೇಳಿದರು.
ಕನಕಪುರ ಶ್ರೀ ದೇಗುಲ ಮಠ ಕಿರಿಯ ಚನ್ನಬಸವ ಸ್ವಾಮಿ ಮಾತನಾಡಿ, ಹೆಚ್ ಡಿ ಕೋಟೆ ಮತ್ತು ಸರಗೂರು ಭಾಗದಲ್ಲಿ ಬಸವಣ್ಣನವರ ತತ್ವ ಆದರ್ಶಗಳನ್ನು ತಿಳಿಸುವ ಕಾರ್ಯ ನಡೆಯುತ್ತಿರುವುದು ಬಹಳ ಸಂತೋಷವಾಗುತ್ತಿದೆ. ಸಮಾಜ ಸದೃಢವಾಗಿ ಬೆಳೆಯಲು ಜಾಗೃತರಾಗಲು ಇಂತಹ ಕಾರ್ಯಕ್ರಮಗಳು ಬಹಳ ಮುಖ್ಯ. ಸಮಾಜದ ಯುವಕರು ಕಾಯಕವನ್ನು ಮೈಗೂಡಿಸಿಕೊಂಡು, ವಚನಗಳನ್ನು ಅಳವಡಿಸಿಕೊಳ್ಳಬೇಕು. ಲಿಂಗ ಕಟ್ಟಿಕೊಳ್ಳುವುದರ ಜೊತೆಗೆ ನಡೆ ನುಡಿಯೂ ಬಹಳ ಮುಖ್ಯವಾಗುತ್ತದೆ. ನಮ್ಮ ಸಮಾಜ ಎಲ್ಲರನ್ನು ಪ್ರೀತಿಸುವಂತಾಗಬೇಕು. ನಿಸ್ವಾರ್ಥ ಸೇವೆಯಿಂದ ಸಮಾಜ ಸೇವೆ ಮಾಡಲು ಮುಂದಾಗಬೇಕು. ಎಲ್ಲರ ಸಹಕಾರದಿಂದ ಈ ದಿನ ಮಹಾಸಭಾ ಹೆಮ್ಮರವಾಗಿ ಬೆಳೆದಿದೆ ಎಲ್ಲರಿಗೂ ಶುಭವಾಗಲಿ ಎಂದು ಆಶೀರ್ವಾಚನ ನೀಡಿದರು.
ಕಾರ್ಯಕ್ರಮದಲ್ಲಿ ತ್ರಿವಿಧ ದಾಸೋಹ ಶ್ರೀ ಮಲ್ಲೇಶ್ವರ ಮಠ ದೇವನೂರು ಶ್ರೀ ಮಹಾಂತಸ್ವಾಮಿಜೀ, ನಾಗೇಂದ್ರ ಸ್ವಾಮಿಜಿ, ಚಂದ್ರಶೇಖರ ಸ್ವಾಮೀಜಿ, ಮಲ್ಲಿಕಾರ್ಜುನ ಸ್ವಾಮೀಜಿ, ಚನ್ನಬಸವ ಸ್ವಾಮೀಜಿ, ಶ್ರೀ ಮಹದೇವ ಸ್ವಾಮೀಜಿ, ಶ್ರೀ ಷಡಕ್ಷರಿ ಸ್ವಾಮಿಜೀ, ಶ್ರೀ ತೋಂಟದಾರ್ಯ ಸ್ವಾಮಿಜಿ. ಶ್ರೀ ಶಿವಕುಮಾರ ಸ್ವಾಮಿಜಿ , ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ತಾಲೂಕು ಅಧ್ಯಕ್ಷ ಎಸ್ ರುದ್ರಪ್ಪ, ಪ್ರಧಾನ ಕಾರ್ಯದರ್ಶಿ ಚಿಕ್ಕಕೆರೆಯೂರು ಶಿವಕುಮಾರ್, ಪ್ರಧಾನ ಭಾಷಣಕಾರ ಎಸ್. ಕಿರಣ್, ಜೆಡಿಎಸ್ ಮುಖಂಡ ಜಯಪ್ರಕಾಶ್ ಚಿಕ್ಕಣ್ಣ, ಕೆ.ಎಂ. ಕೃಷ್ಣನಾಯಕ, ಎಚ್.ವಿ.ಬಸವರಾಜು, ಸದಾನಂದ, ಬೂದನೂರ ಬಸವರಾಜಪ್ಪ, ಕಾವ್ಯ ಶಿವಮೂರ್ತಿ, ಎಚ್.ಸಿ.ಶಿವಣ್ಣ, ಪಿ.ನಾಗರಾಜಪ್ಪ, ಬಿ.ನಂದೀಶ್ ಕುಮಾರ್, ಎಂ.ಚಂದ್ರಶೇಖರ್, ಎಂ.ಪ್ರದೀಪ್ ಕುಮಾರ್, ಬಹುದ್ದೂರ್ ಸತೀಶ್,ಎಂ.ಎನ್.ಜಗದೀಶ್, ಆರ್ ಸುರೇಶ್ ಸೇರಿದಂತೆ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ತಾಲೂಕು ಘಟಕದ ನಿರ್ದೇಶಕರು, ಸಮುದಾಯದ ಮುಖಂಡರು ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಹಾಜರಿದ್ದರು.
ಜೂನಿಯರ್ ಕಾಲೇಜಿನಿಂದ ಜೆಎಸ್ ಎಸ್ ಮಂಗಳ ಮಂಟಪವರೆಗೆ ನಡೆದ ನಂದಿಧ್ವಜ ಮೆರವಣಿಗೆಗೆ ಸುತ್ತೂರು ಮಠದ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮಿಗಳು ಚಾಲನೆ ನೀಡಿದರು.
ಶಾಸಕ ಅನಿಲ್ ಚಿಕ್ಕಮಾದು, ಎಚ್ ಎಂ.ಗಣೇಶ್ ಪ್ರಸಾದ್ ಹಾಗೂ ಜೆಡಿಎಸ್ ಮುಖಂಡ ಕೆ.ಎಂ. ಕೃಷ್ಣನಾಯಕ ನಂದಿಧ್ವಜಕ್ಕೆ ಪುಷ್ಪರ್ಚನೆ ಮಾಡಿದರು. ಶ್ರೀ ಬಸವೇಶ್ವರರ ಪುತ್ಥಳಿಯನ್ನು ಬೆಳ್ಳಿರಥದಲ್ಲಿ ಕೂರಿಸಿ ಮೆರವಣಿಗೆ ಮಾಡಲಾಯಿತು. ವೀರಗಾಸೆ ಕುಣಿತ, ಡೊಳ್ಳುಕುಣಿತ, ಮಂಗಳವಾದ್ಯ, ಚಂಡೆಮದ್ದಳೆ, ನಗಾರಿ, ತಮಟೆ, ಬ್ಯಾಂಡ್ ಸೆಟ್, ಗಾಡಿಗೊಂಬೆ, ಹಳ್ಳಿಕಾರ್ ಎತ್ತುಗಳು ಮೆರವಣಿಗೆಗೆ ಮೆರಗು ತಂದಿತು.

