ಆಯಿಲ್ ಕಂಪನಿ ಮಾರಾಟಾಧಿಕಾರಿಗಳು, ಪೆಟ್ರೋಲ್ ಬಂಕ್ ಮಾಲೀಕರ ಸಂಘದ ಪ್ರತಿನಿಧಿಗಳ ಸಭೆಯಲ್ಲಿ ಜಿಲ್ಲಾಧಿಕಾರಿ ಡಾ.ಆನಂದ್. ಕೆ ಸೂಚನೆ
ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಜಿಲ್ಲೆಯಲ್ಲಿ ಪೆಟ್ರೋಲ್ ಮತ್ತು ಡಿಸೈಲ್ ಸಮರ್ಪಕವಾಗಿ ಸರಬರಾಜಾಗುತ್ತಿದ್ದು, ಸಾರ್ವಜನಿಕರು ಆತಂಕ ಪಡುವ ಅಗತ್ಯವಿಲ್ಲ ಎಂದು ಜಿಲ್ಲಾಧಿಕಾರಿಗಳಾದ ಡಾ. ಆನಂದ ಕೆ. ಅವರು ಹೇಳಿದರು.
ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಸೋಮವಾರ ಜಿಲ್ಲೆಯ ಎಲ್ಲ ಆಯಿಲ್ ಕಂಪನಿಯ ಮಾರಾಟಾಧಿಕಾರಿಗಳು ಹಾಗೂ ಪೆಟ್ರೋಲ್ ಬಂಕ್ ಮಾಲೀಕರ ಸಂಘದ ಪ್ರತಿನಿಧಿಗಳ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ತೈಲ ಪೂರೈಕೆ ವಿಷಯದಲ್ಲಿ ಕಂಪನಿಗಳು ಜಾಗರೂಕತೆ ವಹಿಸಿ, ಸಮಸ್ಯೆ ಬಾರದ ರೀತಿಯಲ್ಲಿ ಇಂಧನ ಪೂರೈಸಬೇಕು ಎಂದರು.
ಉಳಿದ ಎಲ್ಲ ಪೆಟ್ರೋಲ್ ಪಂಪ್‌ಗಳಲ್ಲಿ ಅಗತ್ಯತೆಗೆ ಅನುಸಾರವಾಗಿ ತೈಲ ಲಭ್ಯವಿರುತ್ತದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.
ಇನ್ನೊಂದೆಡೆ ಜಿಲ್ಲೆಯ ಜನತೆ ಗಾಬರಿಯಾಗುವ ಅವಶ್ಯಕತೆ ಇಲ್ಲ. ಆದರೆ ಅವಶ್ಯಕತೆ ಅನುಸಾರ ಮಾತ್ರವೇ ಇಂಧನ ಪಡೆದುಕೊಳ್ಳಬೇಕು ಎಂಬುದನ್ನು ಜಿಲ್ಲಾಧಿಕಾರಿ ಇದೇ ವೇಳೆ ಸಾರ್ವಜನಿಕರಿಗೂ ಸಲಹೆ ಮಾಡಿದರು.
ಇನ್ನೊಂದೆಡೆ ಮುಂಗಾರು ಆರಂಭವಾಗಿದೆ.ಏಳುವರೆ ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ರೈತರ ಉಳುಮೆ ಕಾರ್ಯ ನಡೆಯುತ್ತಿದೆ. ಹಾಗಾಗಿ ರೈತರಿಗೆ ಯಾವುದೇ ಅನಾನುಕೂಲ ಹಾಗೂ ಸಮಸ್ಯೆಯಾಗದಂತೆ ಇಂಧನ ಪೂರೈಕೆ ಮಾಡಬೇಕು ಎಂದು ಜಿಲ್ಲಾಧಿಕಾರಿಗಳು ಸೂಚಿಸಿದರು.
ಆಹಾರ ಇಲಾಖೆಯ ಉಪ ನಿರ್ದೇಶಕ ವಿನಯಕುಮಾರ ಪಾಟೀಲ ಅವರು ಮಾತನಾಡಿ, ಜಿಲ್ಲೆಯ ಸರ್ಕಾರಿ ಸ್ವಾಮ್ಯದ ಬಿಪಿಸಿಎಲ್ ೭೧, ಐಒಸಿಎಲ್ ೧೩೫, ಎಚ್ ಪಿಸಿಎಲ್ ೭೪ ಇದ್ದು, ಜಿಯೋಬಿಪಿ ೧೨, ಎಂಆರ್.ಪಿಎಲ್ ೦೨ ಹಾಗೂ ನಾಯರ ೧೮ ಒಳಗೊಂಡಂತೆ ಒಟ್ಟು ೩೧೨ ಪೆಟ್ರೋಲ್ ಬಂಕ್ ಗಳು ಕಾರ್ಯ ನಿರ್ವಹಿಸುತ್ತಿವೆ ಎಂದು ಸಭೆಗೆ ಮಾಹಿತಿ ನೀಡಿದರು.
ಮಾಹಿತಿಗಾಗಿ ಸಂಪರ್ಕಿಸಿ: ಆಹಾರ ಇಲಾಖೆಯ ಆಲಮೇಲ, ಸಿಂದಗಿ ಹಾಗೂ ದೇವರಹಿಪ್ಪರಗಿ ಆಹಾರ ಇಲಾಖೆಯ ಶಿರಸ್ತೇದಾರ ಬಸವರಾಜ ಭೋವಿ (ಮೊ.೯೭೪೧೦೯೭೪೭೬), ಬಸವನ ಬಾಗೇವಾಡಿ, ನಿಡಗುಂದಿ ಹಾಗೂ ಕೋಲಾರ ತಾಲೂಕಿನ ಆಹಾರ ಶಿರಸ್ತೇದಾರರಾದ ಸಂಜಯ ಹಳ್ಳೂರ (ಮೊ:೯೯೦೨೪೨೪೯೧೨),ಮುದ್ದೇಬಿಹಾಳ ಹಾಗೂ ತಾಳಿಕೋಟೆಯ ಶಶಿಧರ ಕುಮಚಗಿ (ಮೊ:೯೯೮೬೮೯೬೬೨೮),ಇಂಡಿ ಹಾಗೂ ಚಡಚಣ ತಾಲೂಕಿನ ಆಹಾರ ಶಿರಸ್ತೇದಾರರಾದ ಪರಮಾನಂದ ಹೂಗಾರ (ಮೊ:೭೭೬೦೮೨೬೦೩೬),ವಿಜಯಪುರ ತಾಲೂಕಿನ ಆಹಾರ ನಿರೀಕ್ಷಕರಾದ ವಿಜಯಕುಮಾರ ಗುಮಶೆಟ್ಟಿ (ಮೊ:೮೦೯೫೩೧೨೯೯೯),ತಿಕೋಟಾ ತಾಲೂಕಿನ ಆಹಾರ ನಿರೀಕ್ಷಕರಾದ ಎಂ.ಎ ಅಕ್ಕಲಕೋಟ (ಮೊ: ೯೬೦೬೩೪೭೮೫೦) ಹಾಗೂ ಬಬಲೇಶ್ವರ ತಾಲೂಕಿನ ಆಹಾರ ನಿರೀಕ್ಷಕರಾದ ಎಚ್.ಕೆಬಿಳೇಕುದರಿ (ಮೊ:೯೯೪೫೪೯೦೮೭೨) ಇವರನ್ನು ಸಂಪರ್ಕಿಸಬಹುದಾಗಿದೆ ಎಂದವರು ತಿಳಿಸಿದರು.
ಈ ಸಭೆಯಲ್ಲಿ ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆಯ ಸಹಾಯಕ ನಿರ್ದೇಶಕರಾದ ಅಮರೇಶ ತಾಂಡೂರ ಸೆರಿದಂತೆ ಜಿಲ್ಲೆಯ ಎಲ್ಲಾ ತೈಲ ಕಂಪನಿಗಳ ಮಾರಾಟ ಅಧಿಕಾರಿಗಳು ಹಾಗೂ ಪೆಟ್ರೋಲ್ ಬಂಕ್ ಮಾಲೀಕರ ಸಂಘದ ಪದಾಧಿಕಾರಿಗಳು ಭಾಗವಹಿಸಿದ್ದರು.

