Subscribe to Updates
Get the latest creative news from FooBar about art, design and business.
Author: editor.udayarashmi@gmail.com
ಲೇಖನ- ಜಯಶ್ರೀ.ಜೆ. ಅಬ್ಬಿಗೇರಿ.ಇಂಗ್ಲೀಷ್ ಉಪನ್ಯಾಸಕರುಬೆಳಗಾವಿಮೊ: ೯೪೪೯೨೩೪೧೪೨ ಉದಯರಶ್ಮಿ ದಿನಪತ್ರಿಕೆ ಹೃದಯದ ಹೃದಯವೇ,ನೀ ಕಣ್ಣಿಗೆ ಬಿದ್ದಾಗಿನಿಂದ ಎಂಥ ತ್ರಿಪುರ ಸುಂದರಿಯರಿಗೂ ಮನಸ್ಸು ಸೋಲುತ್ತಿಲ್ಲ. ಮುಷ್ಟಿಯಷ್ಟಿರುವ ಹೃದಯದಲ್ಲಿ ನೂರಾರು ಕನಸುಗಳು ತಾವಾಗಿಯೇ ಗೂಡು ಕಟ್ಟಿಕೊಂಡಿವೆ. ನಿನ್ನ ಒಪ್ಪಿಗೆ ಕಾಯದೇ ಬೆಚ್ಚನೆಯ ಎದೆಯಲ್ಲಿ ನಿನ್ನಂದ ಬಚ್ಚಿಟ್ಟುಕೊಂಡು ಹೋದಲ್ಲೆಲ್ಲ ನಿನ್ನನ್ನು ಕರೆದೊಯ್ಯುತಿರುವೆ. ಲೋಕದಲ್ಲೆೆಲ್ಲ ನೀನೇ ತುಂಬಿರುವೆ. ಈ ಪುಟ್ಟ ಹೃದಯವನು ಮನಸಾರೆ ನಿನ್ನ ಕೈಲಿಡಲು ಕಣ್ಣ ರೆಪ್ಪೆಗಳನು ಅಂಟಿಸದೇ ಕಾಯುತಿರುವೆ. ಪ್ರಪಂಚವು ಒಪ್ಪಲಿ ಬಿಡಲಿ ನಾನೆಂದಿಗೂ ನಿನ್ನವನೇ ಗೆಳತಿ. ಸಣ್ಣ ಸಣ್ಣ ಆಸೆಗಳ ಸಂಭ್ರಮ, ಹೊತ್ತು ಗೊತ್ತಿಲ್ಲದೇ ನಿದ್ದೆ ಕೆಡಿಸುತಿದೆ. ನಿನ್ನ ಮೈ ಮಾಟದ ಅಂದ ಚೆಂದದ ಬಣ್ಣನೆ ಕೇಳಿದರೆ ಹುಟ್ಟುಗುರುಡನೂ ನಿನ್ನ ಕಿರು ಬೆರಳನು ಹಿಡಿಯಲು ಹಟ ಹಿಡಿಯುತ್ತಾನೆ. ಅಂತಾದ್ರಲ್ಲಿ ನಾನಾವ ಲೆಕ್ಕ? ಇನ್ನಾರಾದರೂ ನಿನ್ನ ಕೈ ಕೇಳಿ, ನೀ ಒಪ್ಪಿಬಿಟ್ಟರೆ ಎಂಬ ಚಿಂತೆ ಕಾಡುತಿದೆ. ಪ್ರೇಮಲೋಕದಲ್ಲಿ ಕೊನೆಯಾಗದ ಪ್ರೇಮಗೀತೆಯನ್ನು ಜೊತೆ ಜೊತೆಯಲ್ಲಿ ಹಾಡುವಾಸೆ ಕೇಳು ಸಿಂಗಾರಿ. ಅಳಿಸಲಾಗದ ಬಂಧನದಲ್ಲಿ ಬಂಧಿಸಿಕೊಳ್ಳುವ ಆಸೆ. ಹದಿ ಹರೆಯದ…
೨೦೨೭ ರ ಜನವರಿ ಅಂತ್ಯದವರೆಗೆ ವಿಮಾನ ಹಾರಾಟ | ಕೆಎಸ್‌ಐಐಡಿಸಿ ಅಧ್ಯಕ್ಷ ಎಸ್.ಜಿ. ನಂಜಯ್ಯನಮಠ ಹೇಳಿಕೆ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಬಹುನಿರೀಕ್ಷಿತ ವಿಜಯಪುರ ವಿಮಾನ ನಿಲ್ದಾಣ ಕಾರ್ಯಾರಂಭಕ್ಕೆ ಮುಹೂರ್ತ ಕೂಡಿ ಬಂದಿದ್ದು, ೨೦೨೭ರ ವರ್ಷಾರಂಭವಾಗುತ್ತಿದ್ದಂತೆಯೇ ವಿಮಾನ ಹಾರಿಸುವ ಪ್ರಯತ್ನ ಕೈಗೂಡಲಿದೆ ಎಂದು ಕರ್ನಾಟಕ ರಾಜ್ಯ ಕೈಗಾರಿಕಾ ಮತ್ತು ಮೂಲಸೌಲಭ್ಯ ಅಭಿವೃದ್ಧಿ ನಿಗಮದ (ಕೆಎಸ್‌ಐಐಡಿಸಿ) ಅಧ್ಯಕ್ಷ ಎಸ್.ಜಿ. ನಂಜಯ್ಯನಮಠ ತಿಳಿಸಿದರು.ಶುಕ್ರವಾರ ವಿಮಾನ ನಿಲ್ದಾಣಕ್ಕೆ ಭೇಟಿ ನೀಡಿ ಪ್ರಗತಿ ಪರಿಶೀಲಿಸಿದ ಬಳಿಕ ಅವರು ನಗರದ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.ಪರಿಸರ ಇಲಾಖೆಯ ಅನುಮತಿ ಇಲ್ಲದೇ ಇರುವುದರಿಂದ ಹಾಗೂ ಸುಪ್ರೀಂ ಕೋರ್ಟ್ ತಡೆಯಾಜ್ಞೆ ನೀಡಿದ್ದರಿಂದಾಗಿ ವಿಳಂಬವಾಗಿದೆ. ನಂತರದಲ್ಲಿ ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಹಾಗೂ ಜಿಲ್ಲಾ ಮೂಲಸೌಕರ್ಯ ಅಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ. ಎಂ.ಬಿ.ಪಾಟೀಲರು ಈ ನಿಟ್ಟಿನಲ್ಲಿ ಸಾಕಷ್ಟು ಪ್ರಯತ್ನಿಸಿದ್ದರಿಂದ ಇದೀಗ ಮೂರು ವಾರಗಳ ಹಿಂದೆ ತಡೆಯಾಜ್ಞೆ ತೆರವಾಗಿದೆ ಎಂದರು.ಜೊತೆಗೆ ಕೇಂದ್ರ ಪರಿಸರ ಇಲಾಖೆ ಅನುಮತಿ ಕೋರಿದ್ದೇವೆ. ಸಂಸತ್ ಅಧಿವೇಶನ ನಡೆಯುತ್ತಿರುವುದರಿಂದ ತಡವಾಗಬಹುದು.…
ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಸರಕಾರ ಅತ್ಯಾಧುನಿಕ ಸೌಲಭ್ಯಗಳನ್ನು ಗ್ರಾಮೀಣ ವಿದ್ಯಾರ್ಥಿಗಳಿಗೂ ಕಲ್ಪಿಸಿದ್ದು, ಹಾಗಾಗಿ ಕಾಲೇಜ್ ನಲ್ಲಿ ಸಿಗುವ ಸೌಲಭ್ಯಗಳ ಸದುಪಯೋಗ ಪಡೆದುಕೊಂಡು, ಕನಸು ನನಸು ಮಾಡಿಕೊಳ್ಳುವ ಮೂಲಕ ಹೆತ್ತವರಿಗೆ, ಹುಟ್ಟಿದೂರಿಗೆ ಹಾಗೂ ಶಿಕ್ಷಕರ ಕೀರ್ತಿ ಹೆಚ್ಚಿಸಬೇಕು ಎಂದು ಗ್ರಾಮ ಪಂಚಾಯಿತಿ ಮಾಜಿ ಉಪಾಧ್ಯಕ್ಷ ಗುರನಗೌಡ ಬಿರಾದಾರ ಹೇಳಿದರು.ಕೊಲ್ಹಾರ ತಾಲೂಕಿನ ಕುಪಕಡ್ಡಿಯಲ್ಲಿ ಹೊಸದಾಗಿ ಪ್ರಾರಂಭವಾದ ಸರಕಾರಿ ಪದವಿ ಪೂರ್ವ ಕಾಲೇಜಿನ ೨೦೨೬-೨೭ ನೇ ಸಾಲಿನ ಪ್ರಥಮ ಪಿಯುಸಿ ವಿದ್ಯಾರ್ಥಿಗಳ ಸ್ವಾಗತ ಹಾಗು ಸಾಂಸ್ಕೃತಿಕ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.ಕಾಲೇಜಿನ ಪ್ರಾಚಾರ್ಯ ಎಚ್. ಎಲ್. ದೊಡಮನಿ ಮಾತನಾಡಿ, ಊರಿನ ಶಿಕ್ಷಣ ಪ್ರೇಮಿಗಳ ಪರಿಶ್ರಮದಿಂದ ನಮ್ಮ ಗ್ರಾಮಕ್ಕೆ ಸರಕಾರಿ ಪದವಿ ಪೂರ್ವ ಕಾಲೇಜು ಮಂಜೂರಾಗಿದ್ದು ಇದು ಗ್ರಾಮೀಣ ಹೆಣ್ಣು ಮಕ್ಕಳ ಶಿಕ್ಷಣಕ್ಕೆ ತುಂಬಾ ಸಹಕಾರಿಯಾಗಿದೆ. ಕಾಲೇಜು ಮಂಜೂರಿಗೆ ಶ್ರಮಿಸಿದ ಗ್ರಾಮದ ಎಲ್ಲ ಧುರೀಣರಿಗೆ ಕೃತಜ್ಞತೆಗಳನ್ನು ಸಲ್ಲಿಸಿ ಸಮುದಾಯದ ಸಹಭಾಗಿತ್ವದಿಂದ ಮಾತ್ರ ಶಿಕ್ಷಣ ಸಂಸ್ಥೆಗಳು ಉನ್ನತ ಮಟ್ಟಕ್ಕೆ ಬೆಳೆಯಲು ಸಾಧ್ಯ. ಎಂದ ಅವರು, ಕುಪಕಡ್ಡಿ ಗ್ರಾಮಸ್ಥರು ಕಾಲೇಜು…
ಮಹಿಳಾ ವಿವಿಯ ಕುಲಪತಿ ಪ್ರೊ.ವಿಜಯಾ ಕೋರಿಶೆಟ್ಟಿ ಅಭಿಮತ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ದೇವರಾಜ ಅರಸುರವರು ಜಾರಿಗೆ ತಂದ ಭೂ ಸುಧಾರಣೆ, ಜೀತ ಪದ್ಧತಿ ನಿರ್ಮೂಲನೆ ಸೇರಿದಂತೆ ಹಲವು ಕ್ರಾಂತಿಕಾರಿ ಕ್ರಮಗಳು ಇಂದಿಗೂ ಪ್ರಸ್ತುತವಾಗಿವೆ ಎಂದು ಮಹಿಳಾ ವಿವಿಯ ಕುಲಪತಿ ಪ್ರೊ. ವಿಜಯಾ ಬಿ. ಕೋರಿಶೆಟ್ಟಿ ಹೇಳಿದರು.ನಗರದ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ ಹಿಂದುಳಿದ ವರ್ಗಗಳ ಕೋಶದ ವತಿಯಿಂದ ಇತ್ತೀಚಿಗೆ ಹಮ್ಮಿಕೊಂಡಿದ್ದ ದಿವಂಗತ ಡಿ. ದೇವರಾಜ ಅರಸುರವರ ೧೧೧ನೇ ಜನ್ಮದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.ಸಮಾಜದ ಒಳಿತಿನ ದೃಷ್ಟಿಯಿಂದ ದೇವರಾಜ ಅರಸುರವರು ತಮ್ಮ ಅಧಿಕಾರಾವಧಿಯಲ್ಲಿ ಹಲವು ಮಹತ್ವದ ಬದಲಾವಣೆಗಳನ್ನು ತಂದರು. ಭೂ ಸುಧಾರಣೆ, ಮಾನವ ಹಕ್ಕುಗಳ ರಕ್ಷಣೆ, ಮೈಸೂರು ರಾಜ್ಯಕ್ಕೆ ಕರ್ನಾಟಕ ಎಂದು ನಾಮಕರಣ ಹಾಗೂ ಜೀತ ಪದ್ಧತಿ ನಿರ್ಮೂಲನೆಯಂತಹ ಕ್ರಮಗಳು ಸಾಮಾಜಿಕ ಪರಿವರ್ತನೆಗೆ ಕಾರಣವಾದವು ಎಂದು ಹೇಳಿದರು.ಕನ್ನಡ ವಿಭಾಗದ ಪ್ರಾಧ್ಯಾಪಕ ಪ್ರೊ. ನಾಗರಾಜ ಮಾತನಾಡಿ, ೧೯೭೦ರ ದಶಕದಲ್ಲಿ ಕರ್ನಾಟಕದಲ್ಲಿ ಕ್ರಾಂತಿಕಾರಿ ಬದಲಾವಣೆ ತಂದ ರಾಜಕೀಯ ಮುತ್ಸದ್ದಿ ದೇವರಾಜ ಅರಸು…
ಉದಯರಶ್ಮಿ ದಿನಪತ್ರಿಕೆ ಬಾಗಲಕೋಟೆˌ (ಜಮಖಂಡಿ): ತಾಲೂಕಿನ ಜಂಬಗಿ ಗ್ರಾಮದ ಸರ್ಕಾರಿ ಪ್ರೌಢಶಾಲೆಯ ಸಹ ಶಿಕ್ಷಕ ಬಾಳಪ್ಪ ಮ. ಮಠೋಳಿ (ಬಿ.ಎಂ. ಮಠೋಳಿ) ಅವರಿಗೆ ರಾಜ್ಯಮಟ್ಟದ ಪ್ರತಿಷ್ಠಿತ ‘ಶಿಕ್ಷಕ ಸೇವಾ ರತ್ನ’ ಪ್ರಶಸ್ತಿ ಲಭಿಸಿದ್ದು, ಈ ಹಿನ್ನೆಲೆಯಲ್ಲಿ ಚಿಕ್ಕಪಡಸಲಗಿ ಗ್ರಾಮದ ಶ್ರೀ ಗುರು ರಾಮಾಅವಧೂತ ವಿದ್ಯಾ ಸಂಸ್ಥೆ ವತಿಯಿಂದ ಅಭಿನಂದನಾ ಹಾಗೂ ಸನ್ಮಾನ ಕಾರ್ಯಕ್ರಮ ನಡೆಯಿತು.ಕರ್ನಾಟಕ ರಾಜ್ಯ ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕ ಹಾಗೂ ಜಮಖಂಡಿ ತಾಲೂಕು ಘಟಕ ಮತ್ತು ವೀರೇಶ್ವರ ಪ್ರಕಾಶನ, ಜಮಖಂಡಿ ಇವರ ಸಹಯೋಗದಲ್ಲಿ ಶಿಕ್ಷಕರ ಶೈಕ್ಷಣಿಕ ಸೇವೆ, ಸಾಧನೆ ಹಾಗೂ ಶಿಕ್ಷಣ ಕ್ಷೇತ್ರಕ್ಕೆ ನೀಡಿದ ಕೊಡುಗೆಯನ್ನು ಗುರುತಿಸಿ ಮಠೋಳಿ ಅವರಿಗೆ ಪ್ರಶಸ್ತಿ ಪ್ರದಾನ ಮಾಡಲಾಗಿದೆ.ಪ್ರಶಸ್ತಿ ಪಡೆದ ಮಠೋಳಿ ಅವರನ್ನು ಶ್ರೀ ಗುರು ರಾಮಾಅವಧೂತ ವಿದ್ಯಾ ಸಂಸ್ಥೆಯ ವತಿಯಿಂದ ಗೌರವಿಸಲಾಯಿತು.ಸನ್ಮಾನ ಸ್ವೀಕರಿಸಿ ಮಾತನಾಡಿದ ಬಿ.ಎಂ. ಮಠೋಳಿ, “ಶಿಕ್ಷಕ ವೃತ್ತಿ ವಿದ್ಯಾರ್ಥಿಗಳ ಭವಿಷ್ಯ ರೂಪಿಸುವ ಮಹತ್ವದ ಜವಾಬ್ದಾರಿಯಾಗಿದೆ. ನನಗೆ ದೊರೆತಿರುವ ಈ ಗೌರವವನ್ನು ಇನ್ನಷ್ಟು ನಿಷ್ಠೆಯಿಂದ ಶೈಕ್ಷಣಿಕ ಸೇವೆ ಸಲ್ಲಿಸಲು…
ಬೂದಿಹಾಳ ಪಿಎಚ್ ಗ್ರಾಮದ ರೈತನ ಜೋಡೆತ್ತುಗಳ ಅಪ್ರತಿಮ ಸಾಧನೆಗೆ ಜನರ ಮೆಚ್ಚುಗೆ ಉದಯರಶ್ಮಿ ದಿನಪತ್ರಿಕೆ ಸಿಂದಗಿ: ಶೈಕ್ಷಣಿಕ ಕಾಶಿಯ ಸಿಂದಗಿ ತಾಲೂಕಿನ ರೈತರು ಮುಂಗಾರು ಆರಂಭವಾಗುತ್ತಿದ್ದಂತೆ ಕೈಗೊಳ್ಳುವ ಕೃಷಿ ಚಟುವಟಿಗಳು ನಾನಾ ಸಾಧನೆಗಳಿಗೆ ಪ್ರೇರೆಪಿಸುತ್ತಿವೆ. ಇಂತಹದ್ದೆ ಸಾಧನೆಯೊಂದನ್ನು ಸಿಂದಗಿ ತಾಲೂಕಿನ ಬೂದಿಹಾಳ ಪಿಹೆಚ್ ಗ್ರಾಮದ ರೈತ ಮತ್ತು ಆತನ ಎತ್ತುಗಳು ಮಾಡುವ ಮೂಲಕ ಗಮನ ಸೆಳೆದಿದ್ದಾರೆ.ನಾಗರ ಪಂಚಮಿ ಮತ್ತು ಸ್ವಾತಂತ್ರ‍್ಯ ದಿನಾಚರಣೆ ಅಂಗವಾಗಿ ರೈತ ಗುರುಪಾದ ಚೌಧರಿ ತನ್ನ ಜೋಡೆತ್ತುಗಳಿಗೆ ನೊಗಕಟ್ಟಿ ತಮ್ಮ ಜೋಡಿ ಎತ್ತುಗಳೊಂದಿಗೆ ಕೇವಲ ೫ಗಂಟೆಯಲ್ಲಿಯೇ ಒಂಟಿ ದಿಂಡಿನ ಸಹಾಯದಿಂದ ೧೧ ಎಕರೆ ಜಮೀನು ಹರಗಿ ಗಮನ ಸೆಳೆದಿದ್ದಾರೆ.ಪಂಚಮಿ ಬಂತೆಂದರೆ ಸಾಕು ವಿಜಯಪುರ ಜಿಲ್ಲೆಯ ಸಿಂದಗಿ ತಾಲೂಕಿನ ರೈತರು ತಮ್ಮ ಜಾನುವಾರುಗಳ ಮೂಲಕ ವಿವಿಧ ಸಾಧನೆ ಮಾಡುತ್ತಾರೆ. ಅಂತೆಯೇ ಈ ರೈತ ತನ್ನ ಊರಾದ ಬೂದಿಹಾಳ ಗ್ರಾಮದಲ್ಲಿ ೫ಗಂಟೆಯಲ್ಲಿ ೧೧ಎಕರೆ ಜಮೀನು ಹರಗುವ ಮೂಲಕ ರೈತರು ಮೆಚ್ಚುವ ಸಾಧನೆ ಮಾಡಿದ್ದಾರೆ.ಕೃಷಿಕ ಈ ಸಾಧನೆ ಮಾಡುತ್ತಿದ್ದಾನೆ ಎಂಬುದನ್ನು ಅರಿತ ಬೂದಿಹಾಳ…
ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಸಚಿವ ಬಿ.ನಾಗೇಂದ್ರ ರಾಜೀನಾಮೆ ಹಾಗೂ ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ಬಿಜೆಪಿ ಸಿಂದಗಿ ಮತಕ್ಷೇತ್ರದ ಮಂಡಲದ ವತಿಯಿಂದ ನಗರದಲ್ಲಿ ನಡೆಯುತ್ತಿರುವ ಬೃಹತ್ ಧರಣಿ ಸತ್ಯಾಗ್ರಹ 4ನೇ ದಿನಕ್ಕೆ ಕಾಲಿಟ್ಟಿದೆ.ಬಿಜೆಪಿ ಕಾರ್ಯಕರ್ತರು ಕೆಲ ಘಂಟೆಗಳ ಕಾಲ ರಸ್ತೆ ತಡೆದು ಪ್ರತಿಭಟನೆ ನಡೆಸಿದರು.ಧರಣಿ ನಿರತ ಸ್ಥಳಕ್ಕೆ ಜಿಲ್ಲಾಧಿಕಾರಿ ಆನಂದ ಕೆ ಅವರು ಆಗಮಿಸಿ ಮನವಿ ಪತ್ರ ಸ್ವೀಕರಿಸಿದರು.ಧರಣಿ ಸತ್ಯಾಗ್ರಹದ ನೇತೃತ್ವವನ್ನು ಸಂಸದ ರಮೇಶ ಜಿಗಜಿಣಗಿ ವಹಿಸಿ ಮಾತನಾಡಿ, ತಾನು ಎಸ್‌ಟಿ ಎಂಬ ಕಾರಣಕ್ಕೆ ಬಿಜೆಪಿಗರು ಹೋರಾಟ ಮಾಡುತ್ತಿದ್ದಾರೆಂದು ಆರೋಪಿಸುವ ಸಚಿವ ನಾಗೇಂದ್ರನಿಗೆ ಅದೇ ಸಮುದಾಯದ ಅನುದಾನ ದುರ್ಬಳಕೆ ಮಾಡಿಕೊಳ್ಳುವಾಗ ಕಾಳಜಿ ಇರಲಿಲ್ಲವೇ? ಹಾಗೆ ನೋಡಿದರೆ ಬಿಜೆಪಿಯೇ ಎಸ್‌ಟಿ ಸಮುದಾಯದ ಕಾಳಜಿ ಮೆರೆಯುತ್ತಿದೆ ಎಂದರು.ನಗರದ ಡಾ.ಬಿ.ಆರ್. ಅಂಬೇಡ್ಕರ್ ವೃತ್ತದಲ್ಲಿ ನಾಗೇಂದ್ರನಿಗೆ ಸಂಪುಟದಿಂದ ಕೈ ಬಿಡಲು ಹಾಗೂ ಬರ ಪರಿಹಾರ ಘೋಷಿಸಲು’ ಆಗ್ರಹಿಸಿ ಬಿಜೆಪಿಯಿಂದ ಹಮ್ಮಿಕೊಂಡಿದ್ದ ಅನಿರ್ದಿಷ್ಟಾವಧಿ ಧರಣಿಯನ್ನು ಶುಕ್ರವಾರ ಮುಕ್ತಾಯಗೊಳಿಸಿ ಅವರು ಮಾತನಾಡಿದರು.ವಿಧಾನ ಮಂಡಲ ಅಧಿವೇಶನದಲ್ಲಿ ಬರ ಪರಿಹಾರಕ್ಕೆ ಸಂಬಂಧಿಸಿದಂತೆ ಚರ್ಚೆಯಾಗದ ಕಾರಣ…
ಉದಯರಶ್ಮಿ ದಿನಪತ್ರಿಕೆ ಕೊಲ್ಹಾರ: ಸಣ್ಣದೊಂದು ನೆರವು ವ್ಯಕ್ತಿಯ ಸ್ವಾವಲಂಬನೆಯ ಪಯಣದಲ್ಲಿ ದೊಡ್ಡ ಬದಲಾವಣೆಗೆ ಕಾರಣವಾಗಬಹುದು ಎಂಬ ಆಶಯದೊಂದಿಗೆ ತಾಲೂಕಿನ ಕೂಡಗಿ ಎನ್‌ಟಿಪಿಸಿ ತನ್ನ ಕಾರ್ಪೊರೇಟ್ ಸಾಮಾಜಿಕ ಹೊಣೆಗಾರಿಕೆ (CSR) ಯೋಜನೆಯಡಿ ವಿಶೇಷಚೇತನರಿಗೆ ಸಹಾಯಕ ಸಾಧನಗಳನ್ನು ವಿತರಿಸಿತು.ಎನ್‌ಟಿಪಿಸಿ ಕೂಡಗಿ ಹಾಗೂ ಬೆಂಗಳೂರಿನ ಭಾರತೀಯ ಕೃತಕ ಅಂಗ ತಯಾರಿಕಾ ನಿಗಮ (ALIMCO) ಸಹಯೋಗದಲ್ಲಿ ಸಹಾಯಕ ಸಾಧನಗಳ ವಿತರಣಾ ಕಾರ್ಯಕ್ರಮ ಆಯೋಜಿಸಲಾಗಿತ್ತು.ಕೂಡಗಿ, ಮುತ್ತಗಿ, ಮಸೂತಿ, ತೆಲಗಿ ಹಾಗೂ ಗೋಳಸಂಗಿ ಸುತ್ತಮುತ್ತಲಿನ ಗ್ರಾಮಗಳ 109 ವಿಶೇಷಚೇತನ ಫಲಾನುಭವಿಗಳಿಗೆ ಒಟ್ಟು 191 ಸಹಾಯಕ ಸಾಧನಗಳನ್ನು, ಸುಮಾರು ₹30 ಲಕ್ಷ ಮೌಲ್ಯದಲ್ಲಿ ವಿತರಿಸಲಾಯಿತು.ವಿತರಿಸಲಾದ ಸಾಧನಗಳಲ್ಲಿ ಮೋಟಾರ್ ಚಾಲಿತ ತ್ರಿಚಕ್ರ ವಾಹನಗಳು, ಗಾಲಿಕುರ್ಚಿಗಳು, ಶ್ರವಣ ಸಾಧನಗಳು, ಊರುಗೋಲುಗಳು, ವಿವಿಧ ವಾಕಿಂಗ್ ಏಡ್ಸ್, ಶೈಕ್ಷಣಿಕ ಕಿಟ್‌ಗಳು, ಸ್ಮಾರ್ಟ್‌ಫೋನ್‌ಗಳು, ಕೃತಕ ಅಂಗಗಳು ಹಾಗೂ ಕ್ಯಾಲಿಪರ್‌ಗಳು ಸೇರಿದಂತೆ ವಿವಿಧ ಸಹಾಯಕ ಸಾಧನಗಳು ಒಳಗೊಂಡಿದ್ದವು.ಈ ಸಾಧನಗಳು ವಿಶೇಷಚೇತನರ ಚಲನವಲನ, ಸಂವಹನ, ಶಿಕ್ಷಣ ಹಾಗೂ ದೈನಂದಿನ ಚಟುವಟಿಕೆಗಳಿಗೆ ನೆರವಾಗುವುದರೊಂದಿಗೆ ಸ್ವಾವಲಂಬನೆ, ಆತ್ಮವಿಶ್ವಾಸ ಮತ್ತು ಗೌರವಯುತ ಜೀವನಕ್ಕೆ ಉತ್ತೇಜನ ನೀಡುವ…
ಉದಯರಶ್ಮಿ ದಿನಪತ್ರಿಕೆ ವಿಜಯಪುರ: ನಗರದ ಬಿ.ಎಲ್.ಡಿ.ಇ ಸಂಸ್ಥೆಯ ಎ.ವಿ.ಎಸ್. ಆಯುರ್ವೇದ ಮಹಾವಿದ್ಯಾಲಯದ ಶಲ್ಯ ತಂತ್ರ ವಿಭಾಗದ ವತಿಯಿಂದ ಅಗ್ನಿಕರ್ಮಚಿಕಿತ್ಸೆ ಕುರಿತು ಆರು ದಿನಗಳ ಉಚಿತ ಶಿಬಿರ ಆಗಷ್ಟ 24 ರಿಂದ ಆಗಷ್ಟ 29ರ ವರೆಗೆ ನಡೆಯಲಿದೆ.ಬಿ.ಎಲ್.ಡಿ.ಇ ಆಯುರ್ವೇದ ಹೈಟೆಕ್ ಆಸ್ಪತ್ರೆಯ ನಡೆಯಲಿರುವ ಈ ಶಿಬಿರದಲ್ಲಿ ಬೆನ್ನು ನೋವು, ಭುಜ ನೋವು, ಕತ್ತು ನೋವು , ಹಿಮ್ಮಡಿ ನೋವು, ಸಂಧಿ ನೋವು ಮುಂತಾದವುಗಳಿಗೆ ಉಚಿತ ತಪಾಸಣೆ ಹಾಗೂ ಉಚಿತ ಚಿಕಿತ್ಸೆ ನೀಡಲಾಗುವುದು.ಇಂಥ ಸಮಸ್ಯೆಗಳನ್ನು ಎದುರಿಸುತ್ತಿರುವ ಸಾರ್ವಜನಿಕರು ಈ ಶಿಬಿರದ ಸದುಪಯೋಗವನ್ನು ಪಡೆದುಕೊಳ್ಳಬೇಕು ಎಂದು ಬಿ.ಎಲ್.ಡಿ.ಇ ಹೈಟೆಕ್ ಆಯುರ್ವೇದ ಆಸ್ಪತ್ರೆಯ ಆಡಳಿತಾಧಿಕಾರಿ ಡಾ. ಸಂಜಯ ಕಡ್ಲಿಮಟ್ಟಿ ಮಾಧ್ಯಮ ಪ್ರಕಟಣೆಯಲ್ಲಿ ಮಾಹಿತಿ ನೀಡಿದ್ದಾರೆ.ಹೆಚ್ಚಿನ ಮಾಹಿತಿಗಾಗಿ ಆಸ್ಪತ್ರೆಯ ಮೊ. ನಂ. 9513397413 ಸಂಪರ್ಕಿಸಬಹುದಾಗಿದೆ.
