Subscribe to Updates
Get the latest creative news from FooBar about art, design and business.
Author: editor.udayarashmi@gmail.com
ಉದಯರಶ್ಮಿ ದಿನಪತ್ರಿಕೆ ಇಂಡಿ: ರಾಜ್ಯದಲ್ಲಿ ಯುವ ಸಮುದಾಯ ಸಾಕಷ್ಟಿದೆ. ಅವರಿಗೆ ಉದ್ಯೋಗವಕಾಶಗಳಿಲ್ಲ. ಕಾರಣ ಸೌಹಾರ್ದ ಸಹಕಾರಿ ಸಂಘಗಳು ಕೇವಲ ಠೇವಣಿ ಸಂಗ್ರಹಣೆ ಮತ್ತು ಸಾಲ ಕೊಡುವದರಲ್ಲಿ ನಿರತರಾಗದೇ ವಿವಿಧ ಉದ್ಯೋಗಗಳಲ್ಲಿಯ ತಜ್ಞರನ್ನು ಕರೆಸಿ, ಯುವಕರಿಗೆ ತರಬೇತಿ ನೀಡಿ ಸ್ವಂತ ಉದ್ಯೋಗಗಳನ್ನು ಮಾಡುವ ಬಗ್ಗೆ ಆಸಕ್ತಿ ಬೆಳೆಸಿ, ರಾಜ್ಯದ ಆದಾಯ ಹೆಚ್ಚಿಸುವಲ್ಲಿ ಸಹಕಾರ ನೀಡಬೇಕೆಂದು ಸಿದ್ದಸಿರಿ ಮಲ್ಟಿ ಪರ್ಪೋಸ್ ಕೋ ಆಫರೇಟಿವ್ ಸೋಸೈಯಿಟಿ ಅಧ್ಯಕ್ಷ ರಾಮನಗೌಡ ಪಾಟೀಲ ಕರೆ ನೀಡಿದರು.ಅವರು ಭಾನುವಾರ ಇಂಡಿ ನಗರದಲ್ಲಿ ಕ್ಷತ್ರೀಯ ಸೌಹಾರ್ಧ ಸಹಕಾರಿ ಸಂಘವನ್ನು ಉದ್ಘಾಟಿಸಿ ಮಾತನಾಡಿದರು.ರಾಜ್ಯದಲ್ಲಿ ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ನಿರುದ್ಯೋಗಿಗಳಾಗಿದ್ದಾರೆ. ಅವರಿಗೆ ಸೌಹಾರ್ಧ ಸಂಘಗಳು ಹೆಚ್ಚಿನ ಅವಕಾಶ ನೀಡಿ ವಿವಿಧ ಉದ್ಯೋಗಗಳಲ್ಲಿ ತೊಡಗುವಂತೆ ಮಾಡಬೇಕು. ಯುವಕ-ಯುವತಿಯರು ಮನಸ್ಸು ಮಾಡಿದ್ದಾದರೆ ಬೇಕಾದದ್ದನ್ನು ಸಾಧಿಸಬಲ್ಲರು. ಅವರಿಗೆ ಸರಿಯಾದ ಮಾರ್ಗ ತೋರಿಸುವ ಕೆಲಸವಾಗಬೇಕಿದೆ. ಆ ಕೆಲಸ ಸೌಹಾರ್ಧ ಸಂಘಗಳು ಮಾಡಲು ಮುಂದಾಗಬೇಕು ಎಂದು ಸಲಹೆ ನೀಡಿದರು.ಸಹಕಾರಿ ಸಂಘಗಳ ನಿರೀಕ್ಷಕ ವಿಜಯಕುಮಾರ ನಾಯಕ ಮಾತನಾಡಿ, ಸಹಕಾರ ಸಂಘಗಳ ಸಹಾಯಕ ನಿಬಂಧಕರ…
ವಿಜಯಪುರದಲ್ಲಿ ತನು ಪೌಂಡೇಷನ್ ವತಿಯಿಂದ ವಂದೇ ಮಾತರಂ ಪ್ರಶಸ್ತಿ ಪ್ರಧಾನ | ಮಾಜಿ ಸಚಿವ ಅಪ್ಪು ಪಟ್ಟಣಶೆಟ್ಟಿ ಅಭಿಮತ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ದೇಶಪ್ರೇಮ ಎಂಬುದು ಕೇವಲ ಮಾತಿಗೆ ಸೀಮಿತವಾಗದೆ ಪ್ರತಿಯೊಬ್ಬ ನಾಗರಿಕನ ನಡವಳಿಕೆ ಮತ್ತು ಸಾಮಾಜಿಕ ಚಿಂತನೆಗಳಲ್ಲಿ ಪ್ರತಿಫಲಿಸಬೇಕು. ಆಗ ಮಾತ್ರ ಯುವಕರು ದೇಶಪ್ರೇಮಿಗಳಾಗಿ ಹೊರ ಹೊಮ್ಮುವುದಕ್ಕೆ ಸಾಧ್ಯವಾಗುತ್ತದೆ ಎಂದು ಮಾಜಿ ಸಚಿವ ಅಪ್ಪು ಪಟ್ಟಣಶೆಟ್ಟಿ ತಿಳಿಸಿದರು.ನಗರದ ಕಂದಗಲ್ ಹಣಮಂತರಾಯ ರಂಗಮಂದಿರದಲ್ಲಿ ತನು ಫೌಂಡೇಷನ್ ವತಿಯಿಂದ ಆಯೋಜಿಸಲಾಗಿದ್ದ ವಂದೇ ಮಾತರಂ ರಾಜ್ಯ ಪ್ರಶಸ್ತಿ ಪ್ರದಾನ ಹಾಗೂ ದೇಶಭಕ್ತಿಗೀತೆಗಳ ಗಾಯನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು; ದೇಶದ ಭದ್ರತೆ ಮತ್ತು ಪ್ರಗತಿ ಕೇವಲ ಗಡಿಯಲ್ಲಿ ನಿಲ್ಲುವ ಸೈನಿಕರಿಂದಷ್ಟೇ ಅಲ್ಲ, ಸಮಾಜದಲ್ಲಿ ಸಕಾರಾತ್ಮಕ ಬದಲಾವಣೆ ತರುವ ಪ್ರತಿಯೊಬ್ಬ ನಾಗರಿಕನಿಂದ ಸಾಧ್ಯ. ಯುವಜನತೆ ಕೇವಲ ಭಾಷಣಗಳಿಗೆ ಮರುಳಾಗದೆ, ನಿಸ್ವಾರ್ಥ ಸೇವೆಯ ಮೂಲಕ ಸಮಾಜದ ಕಟ್ಟಕಡೆಯ ವ್ಯಕ್ತಿಗೂ ನೆರವಾಗುವ ಚಿಂತನೆ ಬೆಳೆಸಿಕೊಳ್ಳಬೇಕು. ಕುಸಿಯುತ್ತಿರುವ ಮೌಲ್ಯಗಳನ್ನು ಎತ್ತಿ ಹಿಡಿಯುವ ಇಂಥ ಕಾರ್ಯಕ್ರಮಗಳು ನಮ್ಮೆಲ್ಲರ ಜವಾಬ್ದಾರಿಯನ್ನು ಹೆಚ್ಚು ಮಾಡುತ್ತವೆ.…
ವಿಜಯಪುರ ವೃಕ್ಷೋಥಾನ ಕುರಿತು ಬೆಂಗಳೂರು ಓಟಗಾರರಿಗೆ ಹಮ್ಮಿಕೊಂಡ ಸಭೆಯಲ್ಲಿ ಕೆ.ಎಸ್.ಡಿ.ಎಲ್. ವ್ಯವಸ್ಥಾಪಕ ನಿರ್ದೇಶಕ ಪ್ರಶಾಂತ್ ಪಿ.ಕೆ.ಎಂ ಹೇಳಿಕೆ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ವಿಜಯಪುರದಲ್ಲಿ ಕಳೆದ ಹತ್ತು ವರ್ಷಗಳಲ್ಲಿ ಹಮ್ಮಿಕೊಂಡ ಕೋಟಿ ವೃಕ್ಷ ಅಭಿಯಾನದ ಪರಿಣಾಮವಾಗಿ, ಅರಣ್ಯ ಪ್ರದೇಶವು ಶೇಕಡಾ 0.17 ರಿಂದ ಶೇಕಡಾ 2.4 ಕ್ಕೆ ಏರಿಕೆಯಾಗಿದೆ ಎಂದು ಕೆ.ಎಸ್.ಡಿ.ಎಲ್. ವ್ಯವಸ್ಥಾಪಕ ನಿರ್ದೇಶಕ ಪ್ರಶಾಂತ್ ಪಿ.ಕೆ.ಎಂ ಹೇಳಿದರು.ಬೆಂಗಳೂರು ಕರ್ನಾಟಕ ಟೆನ್ನಿಸ್ ಕ್ಲಬ್ ಸಭಾಂಗಣದಲ್ಲಿ ವಿಜಯಪುರ ವೃಕ್ಷೋಥಾನ ಕುರಿತು ಬೆಂಗಳೂರು ಓಟಗಾರರಿಗೆ ಹಮ್ಮಿಕೊಂಡ ಸಭೆಯಲ್ಲಿ ಮಾತನಾಡಿದ ಅವರು, ಶತ-ಶತಮಾನದ ವಿಜಯಪುರದಲ್ಲಿ ಕಾಡೇಮ್ಮೆ ಮತ್ತು ಕೃಷ್ಣಮೃಗಗಳು ಇಲ್ಲಿ ವಾಸಿಸುತ್ತಿದ್ದವು ಎಂಬುದು ವಿಜಯಪುರದ ಗೆಜೆಟಿಯರ್ ನಲ್ಲಿ ದಾಖಲಾಗಿದೆ. ನಂತರದಲ್ಲಿ ಸತತ ಬರಗಾಲ ಮತ್ತು ಅಂತರ್ಜಲ ಕುಸಿತದಿಂದ ಕಾಡು ನಾಶವಾಗಿ ಬರ ಭೂಮಿಯಿಂದ ಇಂಥಹ ಪ್ರಾಣಿಗಳು ಕಣ್ಮರೆಯಾಗಿದ್ದವು. ಇದೀಗ ಈ ಭಾಗದಲ್ಲಿ ನೀರಾವರಿ ಜೊತೆಗೆ ಅರಣ್ಯೀಕರಣಕ್ಕೂ ಆದ್ಯತೆ ನೀಡಿದ ಸಚಿವ ಎಂ.ಬಿ.ಪಾಟೀಲರ ವಿಶೇಷ ಪ್ರಯತ್ನದಿಂದ ಆರಂಭಗೊಂಡ ಕೋಟಿವೃಕ್ಷ ಅಭಿಯಾನದ ಪರಿಣಾಮ ಇಲ್ಲಿ ಅರಣ್ಯೀಕರಣ ಹೆಚ್ಚಳವಾಗಿದೆ. ವೃಕ್ಷೋಥಾನ್ ಹೆರಿಟೇಜ್…
ಅಫಜಲಪುರ ತಾಲೂಕು ಆಡಳಿತದ ಮೂಗಿನಡಿಯಲ್ಲೇ ಅನೈರ್ಮಲ್ಯ | ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಸಾರ್ವಜನಿಕರ ಆಕ್ರೋಶ ಉದಯರಶ್ಮಿ ದಿನಪತ್ರಿಕೆ ವಿಶೇಷ ವರದಿಅಫಜಲಪುರ: ತಾಲೂಕು ಆಡಳಿತದ ಹೃದಯಭಾಗವಾದ ಪಟ್ಟಣದ ತಹಸೀಲ್ದಾರ್ ಕಚೇರಿಯ ಆವರಣವೇ ಇದೀಗ ಅನೈತಿಕ ದಂಧೆಗಳು ಮತ್ತು ನಶೆ ವ್ಯಸನಿಗಳ ಅಡ್ಡೆಯಾಗಿ ಮಾರ್ಪಟ್ಟಿರುವುದು ದುರಂತ.ಸಾರ್ವಜನಿಕರು ತಮ್ಮ ನಿತ್ಯದ ಕೆಲಸ-ಕಾರ್ಯಗಳಿಗಾಗಿ ನಿತ್ಯ ನೂರಾರು ಸಂಖ್ಯೆಯಲ್ಲಿ ಭೇಟಿ ನೀಡುವ ಸರ್ಕಾರಿ ಕಚೇರಿಯ ಮೂತ್ರಾಲಯ ಹಾಗೂ ಹಿಂಭಾಗದ ಆವರಣದಲ್ಲಿ ಅಕ್ರಮ ಚಟುವಟಿಕೆಗಳ ಕರಾಳ ಮುಖ ಬಯಲಾಗಿದೆ.ಕಚೇರಿಯ ಮೂತ್ರ ವಿಸರ್ಜನೆ ಮಾಡುವ ಜಾಗದಲ್ಲಿ ನಶೆ ಬರಿಸುವ ನಿಷೇಧಿತ ಕೆಮ್ಮಿನ ಔಷಧದ (Cough Syrup) ಖಾಲಿ ಬಾಟಲಿಗಳು ಹಾಗೂ ನಿರೋಧಗಳು (Condoms) ಅಸಹ್ಯಕರ ರೀತಿಯಲ್ಲಿ ಎಲ್ಲೆಂದರಲ್ಲಿ ಬಿದ್ದಿವೆ. ಇಷ್ಟೇ ಅಲ್ಲದೆ, ಆವರಣದ ಪಕ್ಕದಲ್ಲಿ ಮದ್ಯದ ಖಾಲಿ ಬಾಟಲಿಗಳು, ಸಿಗರೇಟ್ ತುಂಡುಗಳು, ಗುಟ್ಕಾ ಪ್ಯಾಕೆಟ್‌ಗಳು ಹಾಗೂ ಅಕ್ರಮ ಜೂಜಾಟಕ್ಕೆ ಬಳಸುವ ಚೀಟಿಗಳು ರಾಶಿ ರಾಶಿಯಾಗಿ ಬಿದ್ದಿರುವುದು ಬೆಳಕಿಗೆ ಬಂದಿದೆ.ಕಣ್ಮುಚ್ಚಿ ಕುಳಿತ ಆಡಳಿತ ವ್ಯವಸ್ಥೆ: ತಾಲೂಕಿನ ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡಬೇಕಾದ ತಹಸೀಲ್ದಾರ್ ಕಚೇರಿಯ…
ಬಸವ–ಭೀಮ ಸಂಗಮ’ ಕಾರ್ಯಕ್ರಮದಲ್ಲಿ ಲೋಕೋಪಯೋಗಿ ಇಲಾಖೆ ಸಚಿವ ಸತೀಶ ಜಾರಕಿಹೊಳಿ ಅಭಿಮತ ಉದಯರಶ್ಮಿ ದಿನಪತ್ರಿಕೆ ಬಾಗಲಕೋಟೆ: ಬಸವಣ್ಣನವರ ಚಿಂತನೆ, ವಚನ ಸಾಹಿತ್ಯ ಹಾಗೂ ಅಂಬೇಡ್ಕರ್ ಅವರ ಸಂವಿಧಾನಾತ್ಮಕ ಆಶಯಗಳನ್ನು ಇತಿಹಾಸದಿಂದ ಮರೆಮಾಚುವ ಯಾವುದೇ ಪ್ರಯತ್ನವನ್ನು ಸಹಿಸಬಾರದು. ಇಂತಹ ಷಡ್ಯಂತ್ರಗಳ ವಿರುದ್ಧ ಸಮಾಜ ಜಾಗೃತವಾಗಿ ಸಂಘಟಿತ ಹೋರಾಟ ನಡೆಸಬೇಕು ಎಂದು ಲೋಕೋಪಯೋಗಿ ಇಲಾಖೆ ಸಚಿವ ಸತೀಶ ಜಾರಕಿಹೊಳಿ ಹೇಳಿದರು.ಜಮಖಂಡಿ ತಾಲೂಕಿನ ಸಾವಳಗಿ ಸಮೀಪದ ಗೊಠೆ ಗ್ರಾಮದಲ್ಲಿ ಸತ್ಯಶೋಧಕ ಸಂಘದ ವತಿಯಿಂದ ಆಯೋಜಿಸಿದ್ದ ‘ಜಾತ್ಯತೀತ, ಬಹುತ್ವ ಕರ್ನಾಟಕ ಸಂಕಲ್ಪದ ಸರ್ವಜಾತಿ–ಸರ್ವಧರ್ಮ ಸಹೋದರತ್ವ ಸಮಾವೇಶ ಹಾಗೂ ಬಸವ–ಭೀಮ ಸಂಗಮ’ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.ಬಸವಣ್ಣನವರ ವಿಚಾರಧಾರೆ ಜನಸಾಮಾನ್ಯರಿಗೆ ತಲುಪಬಾರದು ಎಂಬ ಉದ್ದೇಶದಿಂದ ಅವರ ವಚನಗಳನ್ನು ನಾಶಪಡಿಸುವ ಪ್ರಯತ್ನಗಳು ನಡೆದಿವೆ. ತಾಳಿಕೋಟೆ ಹಾಗೂ ಬಹಮನಿ ಸುಲ್ತಾನರ ಕಾಲಘಟ್ಟದ ಇತಿಹಾಸದ ವಿವಿಧ ಘಟನೆಗಳ ನಡುವೆಯೂ ಬಸವಣ್ಣನವರ ಚಿಂತನೆಗಳು ಉಳಿದುಕೊಂಡಿವೆ. ಜ್ಯೋತಿಬಾ ಫುಲೆ ಅವರು ಶಿವಾಜಿ ಮಹಾರಾಜರ ಇತಿಹಾಸವನ್ನು ಜನರಿಗೆ ಪರಿಚಯಿಸುವಲ್ಲಿ ಮಹತ್ವದ ಪಾತ್ರ ವಹಿಸಿದರು. ಅದೇ ರೀತಿ ಡಾ.ಬಿ.ಆರ್.…
ಲೇಖನ- ಶ್ರೇಯಸ್ ಕಾರ್ತಿಕ್ಭದ್ರಾವತಿ ಉದಯರಶ್ಮಿ ದಿನಪತ್ರಿಕೆ ‘ಭಯ’ ಎಂಬುದು ಮನುಷ್ಯನ ಅಸ್ತಿತ್ವದ ಅವಿಭಾಜ್ಯ ಅಂಗ. ಇದು ಕೇವಲ ಬಾಹ್ಯ ಪ್ರಚೋದನೆಗಳಿಗೆ ನೀಡುವ ಪ್ರತಿಕ್ರಿಯೆಯಲ್ಲ, ಬದಲಾಗಿ ನಮ್ಮ ಮನಸ್ಸಿನ ಆಳದಲ್ಲಿ ಸೃಷ್ಟಿಯಾಗುವ ಒಂದು ಜಟಿಲ ಕಲ್ಪನೆ. ಹೊರಗಿನ ಜಗತ್ತಿನಲ್ಲಿ ನೈಜ ಅಪಾಯವಿದ್ದಾಗ ಉಂಟಾಗುವ ಎಚ್ಚರಿಕೆಯೇ ಭಯವಾದರೆ, ಮನಸ್ಸಿನೊಳಗಿನ ಕಲ್ಪಿತ ಅಪಾಯಗಳೇ ‘ಭಯವೆಂಬ ಭೂತ’ವನ್ನು ಸೃಷ್ಟಿಸುತ್ತವೆ.ಮನಸ್ಸಿನ ರಚನೆ ಮತ್ತು ಭಯದ ಮೂಲನಮ್ಮ ಮೆದುಳಿನ ‘ಅಮಿಗ್ಡಾಲಾ’ (Amygdala) ಎಂಬ ಭಾಗವು ಭಯದ ಅನುಭವಕ್ಕೆ ಕೇಂದ್ರಬಿಂದು. ಆದಿಮಾನವನಿಗೆ ಕಾಡುಪ್ರಾಣಿಗಳ ದಾಳಿಯಿಂದ ಬದುಕಲು ಈ ಭಯವೇ ರಕ್ಷಾಕವಚವಾಗಿತ್ತು. ಆದರೆ, ಆಧುನಿಕ ಮನುಷ್ಯನಿಗೆ ಅಪಾಯಗಳು ಬದಲಾಗಿವೆ. ಇಂದು ನಾವು ಪ್ರಾಣಿಗಳಿಗಿಂತ ಹೆಚ್ಚಾಗಿ ಭವಿಷ್ಯದ ಅನಿಶ್ಚಿತತೆ, ಸೋಲಿನ ಭಯ, ಅಪಮಾನದ ಭಯ, ಮತ್ತು ಇತರರ ಅಭಿಪ್ರಾಯಗಳ ಭಯದಿಂದ ಬಳಲುತ್ತಿದ್ದೇವೆ. ವಾಸ್ತವದಲ್ಲಿ ಇವುಗಳಿಗೆ ಯಾವುದೇ ಭೌತಿಕ ರೂಪವಿಲ್ಲ; ಇವೆಲ್ಲವೂ ಮನಸ್ಸಿನ ಕಲ್ಪಿತ ಸೃಷ್ಟಿಗಳು.ಕಲ್ಪನೆಯೇಸೃಷ್ಟಿಸುವಭೂತಭಯವೆಂಬ ಭೂತವು ಸಾಮಾನ್ಯವಾಗಿ ‘ಅಜ್ಞಾತ’ದೊಂದಿಗೆ ಬೆಳೆದುಬರುತ್ತದೆ. ನಾವು ಯಾವುದನ್ನು ಅರಿಯುವುದಿಲ್ಲವೋ ಅಥವಾ ಯಾವುದರ ಫಲಿತಾಂಶ ನಮಗೆ ತಿಳಿದಿಲ್ಲವೋ, ಅಲ್ಲಿ ಮನಸ್ಸು…
ವಿಜಯಪುರದಲ್ಲಿ ಹಿರಿಯ ಸಾಹಿತಿ ಸಿದ್ಧರಾಮ ಉಪ್ಪಿನರ ಕೃತಿ ‘ಅಲ್ಲಮನೊಂದಿಗೆ ಅನುಸಂಧಾನ’ ಬಿಡುಗಡೆ ಉದಯರಶ್ಮಿ ದಿನಪತ್ರಿಕೆ ವಿಜಯಪುರ: “ಮಾನವ ಕುಲಂ ತಾನೊಂದೆ ವಲಂ’ ಎನ್ನುವ ಜೈನ ಸಾಹಿತ್ಯದ ಧ್ಯೇಯದ ಜೊತೆ ‘ಬಯಲನ್ನು ಬಿತ್ತಿದ’ ಅಲ್ಲಮನ ಅನುಸಂಧಾನವನ್ನು ಸಾಹಿತ್ಯ ಪರಿಷತ್ ಸಾಕಾರಗೊಳಿಸಿರುವುದು ಬಹಳ ವಿಶೇಷ ಎಂದು ಸಂಶೋದಕ ಡಾ.ಮಲ್ಲಿಕಾರ್ಜುನ ಮೇತ್ರಿ ಹೇಳಿದರು.ಇಲ್ಲಿನ ಕನ್ನಡ ಭವನದಲ್ಲಿ ಭಾನುವಾರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಆಯೋಜಿಸಿದ್ದ ಷಹಾ ಪ್ರತಾಪಚಂದ ಘೀರಾಜಿ ಓಸ್ವಾಲ್ ಹಾಗೂ ಕಾಂತಿಲಾಲ ಪ್ರತಾಪಚಂದ ಓಸ್ವಾಲ್ ದತ್ತಿ ಉಪನ್ಯಾಸಗಳ ಅಂಗವಾಗಿ ನಡೆದ ಜೈನ ಧರ್ಮದ ತತ್ವಗಳು, ಕನ್ನಡ ಸಾಹಿತ್ಯಕ್ಕೆ ಜೈನರ ಕೊಡುಗೆ ಕುರಿತ ಉಪನ್ಯಾಸ ಮತ್ತು ಸಿದ್ದರಾಮ ಉಪ್ಪಿನ ಅವರ ‘ಅಲ್ಲಮನೊಂದಿಗೆ ಅನುಸಂಧಾನ’ ಪುಸ್ತಕ ಬಿಡುಗಡೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.ಜೈನ ಧರ್ಮದ ಮೂಲ ಸೆಲೆ ಮಾನವೀಯತೆ. ಜ್ಞಾನ ಮತ್ತು ಚಾರಿತ್ರ್ಯದ ದಾರಿ ಹಾಕಿ ಕೊಟ್ಟವರು ಜೈನ ಪರಂಪರೆಯವರು. ದೀರ್ಘ ಸಾಹಿತ್ಯಿಕ ನೆಲೆಗೆ ಅವರ ಕೊಡುಗೆ ಅಪಾರ. ಕನ್ನಡ ಸಾಹಿತ್ಯ ಶ್ರೇಷ್ಠವಾಗಿದ್ದು, ಈ ಬುನಾದಿ ಭದ್ರಗೊಳಿಸುವಲ್ಲಿ ಜೈನ…
ಉದಯರಶ್ಮಿ ದಿನಪತ್ರಿಕೆ ಚಡಚಣ: ಉತ್ತಮ ಸಮಾಜ ನಿರ್ಮಾಣಕ್ಕೆ ಉತ್ತಮ ಶಿಕ್ಷಣದ ಜತೆಗೆ ಉತ್ತಮ ಯುವಶಕ್ತಿ ಅತ್ಯಗತ್ಯ. ಒಳ್ಳೆಯ ಶಿಕ್ಷಣ ಪಡೆಯಲು ಉತ್ತಮ ಶಿಕ್ಷಕರು, ಉತ್ತಮ ಸಂಸ್ಕೃತಿ ಬೆಳೆಸಲು ತಂದೆ-ತಾಯಿಯ ಪಾತ್ರ ಮುಖ್ಯವಾಗಿದ್ದು, ಸಮಾಜದ ಅಭಿವೃದ್ಧಿಗೆ ಯುವಕರ ಕೊಡುಗೆ ನಿರ್ಣಾಯಕವಾಗಿದೆ ಎಂದು ಇಂಡಿ ಶಾಸಕ ಯಶವಂತರಾಯಗೌಡ ಪಾಟೀಲ ಹೇಳಿದರು.ಝಳಕಿ ಗ್ರಾಮದ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಆವರಣದಲ್ಲಿ 2026-27ನೇ ಸಾಲಿನ ಸಂಸ್ಕೃತಿ, ಕ್ರೀಡೆ, ಎನ್‌ಎಸ್‌ಎಸ್, ರೆಡ್‌ಕ್ರಾಸ್, ಸ್ಕೌಟ್ಸ್ ಸೇರಿದಂತೆ ವಿವಿಧ ಚಟುವಟಿಕೆಗಳ ಉದ್ಘಾಟನಾ ಸಮಾರಂಭ ನೆರವೇರಿಸಿ ಅವರು ಮಾತನಾಡಿದರು.ಯುವಕರಲ್ಲಿ ಶಿಕ್ಷಣದ ಜ್ಯೋತಿ ಬೆಳಗಿದಾಗ ಮಾತ್ರ ಸಮಾಜ ಹಾಗೂ ದೇಶ ಪ್ರಗತಿಯತ್ತ ಸಾಗಲು ಸಾಧ್ಯ. ವಿಜಯಪುರ ಜಿಲ್ಲೆಯಲ್ಲಿ ಹೆಚ್ಚಿನ ಸರ್ಕಾರಿ ಶಾಲಾ-ಕಾಲೇಜುಗಳು ಇಂಡಿ ತಾಲೂಕಿನಲ್ಲಿ ಇರುವುದೇ ಹೆಮ್ಮೆಯ ಸಂಗತಿ. ಆದರೆ ಶಾಲಾ-ಕಾಲೇಜುಗಳ ಸಂಖ್ಯೆ ಹೆಚ್ಚಿರುವುದಷ್ಟೇ ಮುಖ್ಯವಲ್ಲ. ಅಲ್ಲಿನ ಶಿಕ್ಷಕರು ವಿದ್ಯಾರ್ಥಿಗಳಿಗೆ ಉತ್ತಮ ಅಭ್ಯಾಸ ಹಾಗೂ ಮೌಲ್ಯಗಳನ್ನು ಕಲಿಸಬೇಕು. ವಿದ್ಯಾರ್ಥಿಗಳು ಶ್ರದ್ಧೆಯಿಂದ ವಿದ್ಯಾಭ್ಯಾಸ ಮಾಡಿದಾಗ ಮಾತ್ರ ಶಿಕ್ಷಣಕ್ಕೆ ನಿಜವಾದ ಅರ್ಥ ಬರುತ್ತದೆ ಎಂದರು.ಶಿಕ್ಷಣದಿಂದ ಬುದ್ಧಿಶಕ್ತಿ ವೃದ್ಧಿಯಾದರೆ,…
ಉದಯರಶ್ಮಿ ದಿನಪತ್ರಿಕೆ ಚಡಚಣ: ಮಕ್ಕಳ ಆರೋಗ್ಯದ ಹಿತದೃಷ್ಟಿಯಿಂದ ವಿದ್ಯಾಭಾರತಿ ಪೂರ್ವ ಪ್ರಾಥಮಿಕ ಹಾಗೂ ಹಿರಿಯ ಪ್ರಾಥಮಿಕ ಶಾಲೆ, ಚಡಚಣದಲ್ಲಿ ವೇದಾಸ್ ಮೆಡಿಕಲ್ ಕೇರ್ ತಂಡದ ವೈದ್ಯರಿಂದ ಆರೋಗ್ಯ ತಪಾಸಣಾ ಶಿಬಿರವನ್ನು ಆಯೋಜಿಸಲಾಗಿತ್ತು.ಶಿಬಿರದಲ್ಲಿ ವಿದ್ಯಾರ್ಥಿಗಳ ಕಣ್ಣು, ಕಿವಿ, ಮೂಗು, ಹಲ್ಲು ಹಾಗೂ ಗಂಟಲು ಸೇರಿದಂತೆ ವಿವಿಧ ಆರೋಗ್ಯ ತಪಾಸಣೆಗಳನ್ನು ನಡೆಸಲಾಯಿತು.ಮಕ್ಕಳಲ್ಲಿ ಆರೋಗ್ಯದ ಬಗ್ಗೆ ಜಾಗೃತಿ ಮೂಡಿಸುವುದರ ಜೊತೆಗೆ, ತಪಾಸಣೆಯ ವೇಳೆ ಆರೋಗ್ಯ ಸಮಸ್ಯೆಗಳು ಕಂಡುಬಂದ ಮಕ್ಕಳಿಗೆ ಅಗತ್ಯ ವೈದ್ಯಕೀಯ ಸಲಹೆ ಹಾಗೂ ಸೂಕ್ತ ಮಾರ್ಗದರ್ಶನ ನೀಡಲಾಯಿತು.ಹಿರಿಯ ದಂತ ವೈದ್ಯ ಡಾ. ಪ್ರವೀಣಕುಮಾರ ಕೊಠ, ಹಿರಿಯ ವೈದ್ಯರಾದ ಡಾ. ಸಂಜು ಜೋಶಿ ಹಾಗೂ ಡಾ. ಬಸಿಮ್ ಪಾಟೀಲ, ಕಿವಿ ತಜ್ಞೆ ಡಾ. ಆಶ್ವಿನಿ ಮತ್ತು ಕಣ್ಣಿನ ವೈದ್ಯ ಡಾ. ಶಿವಾನಂದ ಮಳಿ ಅವರು ಮಕ್ಕಳ ಆರೋಗ್ಯ ತಪಾಸಣೆ ನಡೆಸಿದರು.ಈ ಸಂದರ್ಭದಲ್ಲಿ ಸಂಸ್ಥೆಯ ಅಧ್ಯಕ್ಷ ಕೆ.ಪಿ. ಬೋಳೆಗಾಂವ ಹಾಗೂ ಮುಖ್ಯಗುರು ಆರ್.ಎಸ್. ಬಣಗಾರ್ ಉಪಸ್ಥಿತರಿದ್ದು, ಮಕ್ಕಳ ಆರೋಗ್ಯ ಕಾಪಾಡುವಲ್ಲಿ ಇಂತಹ ಶಿಬಿರಗಳ ಮಹತ್ವದ ಕುರಿತು ಮಾತನಾಡಿದರು.ಶಾಲಾ…
ಉದಯರಶ್ಮಿ ದಿನಪತ್ರಿಕೆ ಅಥಣಿ: ತಾಲೂಕಿನ ಸಮಗ್ರ ಅಭಿವೃದ್ಧಿ ಹಾಗೂ ಜನರಿಗೆ ಅಗತ್ಯವಿರುವ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಲು ಸರ್ಕಾರ ಬದ್ಧವಾಗಿದ್ದು, ಅಭಿವೃದ್ಧಿ ಕಾಮಗಾರಿಗಳಿಗೆ ಹೆಚ್ಚಿನ ಆದ್ಯತೆ ನೀಡಲಾಗುವುದು ಎಂದು ಸಹಕಾರ ಸಚಿವ ಲಕ್ಷ್ಮಣ ಸವದಿ ಹೇಳಿದರು.ಅವರು ಅಥಣಿ ನಗರದ ಜತ್ತ ರಸ್ತೆಯ ಸಮೀಪದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಆವರಣದ ಬಳಿ ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಇಲಾಖೆಯ ವತಿಯಿಂದ ನಿರ್ಮಿಸಲಾಗುತ್ತಿರುವ ಉಪವಿಭಾಗ ಕಚೇರಿ ಕಟ್ಟಡದ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿದರು.ಕೃಷಿ ಪ್ರಧಾನವಾಗಿರುವ ಅಥಣಿ ತಾಲೂಕಿನಲ್ಲಿ ನೀರಿನ ಲಭ್ಯತೆ ಹಾಗೂ ಸಮರ್ಪಕ ನಿರ್ವಹಣೆ ರೈತರ ಆರ್ಥಿಕ ಪ್ರಗತಿಗೆ ಪ್ರಮುಖವಾಗಿದೆ. ಈ ಹಿನ್ನೆಲೆಯಲ್ಲಿ ಸಣ್ಣ ನೀರಾವರಿ ಯೋಜನೆಗಳು ಅಂತರ್ಜಲ ಸಂರಕ್ಷಣೆ ಹಾಗೂ ನೀರಿನ ಸದ್ಬಳಕೆಗೆ ಸಂಬಂಧಿಸಿದ ಕಾಮಗಾರಿಗಳಿಗೆ ಹೆಚ್ಚಿನ ಒತ್ತು ನೀಡಲಾಗುವುದು ಎಂದು ಸಚಿವ ಸವದಿ ಅವರು ತಿಳಿಸಿದರು.ರೈತರಿಗೆ ಆಡಳಿತಾತ್ಮಕ ಸೇವೆ ಸುಲಭ:ಉಪವಿಭಾಗ ಕಚೇರಿ ನಿರ್ಮಾಣದಿಂದ ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಇಲಾಖೆಯ ಆಡಳಿತಾತ್ಮಕ ಕಾರ್ಯಗಳು ಇನ್ನಷ್ಟು ಪರಿಣಾಮಕಾರಿಯಾಗಿ ನಡೆಯಲಿವೆ. ತಾಲೂಕಿನ…
