ಇಂಡಿ: ನಗರದ ಅಗರಖೇಡ ರಸ್ತೆಯಲ್ಲಿರುವ ಇವಣಿ ದಂತ ಆಸ್ಪತ್ರೆಯಲ್ಲಿ ಗುರುವಾರದಿಂದ ಉಚಿತ ದಂತ ತಪಾಸಣಾ ಶಿಬಿರ ಪ್ರಾರಂಭವಾಗಿದ್ದು ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ದಂತ ವೈದ್ಯ ಡಾ. ನಿಲೇಶ ಇವಣಿ ತಿಳಿಸಿದರು.
ಅವರು ತಮ್ಮ ಆಸ್ಪತ್ರೆಯಲ್ಲಿ ೩ ದಿವಸಗಳ ಕಾಲ ದಂತ ರೋಗಿಗಳಿಗೆ ಉಚಿತ ತಪಾಸಣೆ ಶಿಬಿರ ಉದ್ಘಾಟಿಸಿ ಮಾತನಾಡಿದರು.
ಶಿಬಿರದಲ್ಲಿ ಉಚಿತವಾಗಿ ಡಿಜಿಟಲ್ ಎಕ್ಸರೇ, ಔಷಧಿ ವಿತರಣೆ ಮಾಡಲಾಗುವುದು. ತಾಲ್ಲೂಕಿನ ದಂತ ರೋಗಿಗಳು ಇದರ ಸದುಪಯೋಗ ಮಾಡಿಕೊಳ್ಳಬೇಕೆಂದು ಅವರು ವಿನಂತಿಸಿದರು.
ಈ ಸಂದರ್ಭದಲ್ಲಿ ಡಾ. ಪಿ.ಎ. ಬಿರಾದಾರ, ಡಾ. ರಾಜಶೇಖರ ತೋಳನೂರ, ಡಾ. ಸೋಮನಾಥ ಮರಗೂರ, ಡಾ. ರವಿ ತಾಂಬೆ, ಡಾ. ತನ್ಮಯ ಧನಶೆಟ್ಟಿ, ಡಾ. ಅಕ್ಷಯ ಬಿರಾದಾರ, ಡಾ. ರಾಕೇಶ ದೇಸಾಯಿ, ಡಾ. ಅಕ್ಷತಾ ಬೋಳಸೂರೆ, ಡಾ. ಸುನಿಲ್ ಕರಾಳೆ, ವಿರುಪಾಕ್ಷಿ ಧನಶ್ರೀ, ಸಿದ್ದು ಲಬ್ಬಾ, ಸತೀಶ ಝಂಪಾ, ಶಿವಾನಂದ ಕೊಪ್ಪಾ, ಮಹೇಶ ಝಂಪಾ ಸೇರಿದಂತೆ ಮತ್ತಿತರರು ಇದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

