ಉದಯರಶ್ಮಿ ದಿನಪತ್ರಿಕೆ
ಚಿಮ್ಮಡ: ತ್ಯಾಗ, ಬಲಿದಾನ, ಸೌಹಾರ್ದತೆ ಸಂಕೇತವಾಗಿರುವ ಬಕ್ರೀದ ಹಬ್ಬವನ್ನು ಗ್ರಾಮದ ಮುಸ್ಲಿಮ್ ಬಾಂಧವರು ಸಡಗರ ಸಂಭ್ರಮದೊಂದಿಗೆ ಸೌಹಾರ್ದಯುತವಾಗಿ ಆಚರಿಸಿದರು.
ಗ್ರಾಮದ ಮುಸ್ಲಿಂ ಸಮಾಜಬಾಂಧವರು ಗುರುವಾರ ಮುಂ ೮ ಘಂಟೆಗೆ ಜಾಮಿಯಾ ಮಸೀದಿಯಲ್ಲಿ ಸೇರಿ ನಂತರ ಕಾಲ್ನಡಿಗೆಯ ಮೂಲಕ ಸಮೀಪದ ಇದ್ಗಾ ಮೈದಾನಕ್ಕೆ ಹೋಗಿ ವಿಶೇಷ ಪ್ರಾರ್ಥನೆ ಸಲ್ಲಿಸಿ ಪರಸ್ಪರ ಸೌಹಾರ್ದತೆ ಮೂಡಿಸುವಂತೆ, ಪ್ರಕ್ರತಿಯ ಮೇಲಿನ ಮುನಿಸು ತೊರೆದು ಕರುಣೆ ದಯಪಾಲಿಸುವಂತೆ, ದೇಶದಲ್ಲಿ ಸೌಹಾರ್ದತೆ ನೆಲೆಸುವಂತೆ ಅಲ್ಲಾಹನಲ್ಲಿ ಪ್ರಾರ್ಥಿಸಿದರು. ನಂತರ ಪರಸ್ಪರ ಶುಭಾಶಯ ವಿನಿಮಯ ಮಾಡಿಕೊಂಡರು.
ನಂತರ ಖಬರಸ್ಥಾನಕ್ಕೆ ಭೇಟಿ ನೀಡಿ ಅಗಲಿದ ಕುಟುಂಬಸ್ಥರ, ಪೂರ್ವಜರ ಸ್ವರ್ಗ ಪ್ರಾಪ್ತಿಗಾಗಿ ದುವಾ ಮಾಡಿದರು.
ಸಾಮೂಹಿಕ ಪ್ರಾರ್ಥನೆಯನ್ನು ಮೂಸಾ ಯಾದವಾಡ, ಮೌಲಾನಾ ಅಬುಬಕರ ಜಮಖಂಡಿ ನಡೆಸಿದರು. ಅಂಜುಮನ್ ಜಮಾತ ಅಧ್ಯಕ್ಷರಾದ ಹಾಫಿಜ ಸಲೀಮ ಜಮಖಂಡಿ ನೇತ್ರತ್ವ ವಹಿಸಿದ್ದರು.
ಪ್ರಮುಖರಾದ ರುಸ್ತುಮ್ ಮಾಲದಾರ, ಹನಿಫ ಚಿಕ್ಕೋಡಿ, ಮೀರಾಸಾಬ ಯಾದವಾಡ, ಅಲ್ಲಾವುದ್ದಿನ ಮೋಪಗಾರ, ಅಮೀರಲಿ ಸರಕಾವಸ, ಹಾಜಿಲಾಲ ಜಮಾದಾರ, ನೂರಸಾಬ ನದಾಫ, ಮಮ್ಮದ ಯಾದವಾಡ, ಪಿರಸಾಬ ನದಾಫ, ಇಮಾಮ ಯಾದವಾಡ, ಸಲೀಮ ಸರಕಾವಸ, ಸೇರಿದಂತೆ ನೂರಾರು ಜನ ಮುಸ್ಲಿಂ ಬಾಂಧವರು ಉಪಸ್ಥಿತರಿದ್ದರು. ಹಬ್ಬದ ನಿಮಿತ್ಯ ವಿಶೇಷ ಖಾದ್ಯ ಸುರಖುರಮಾವನ್ನು ತಮ್ಮ ಸ್ನೇಹಿತರಿಗೆ ಅಥಿತಿಗಳೊಂದಿಗೆ ಹಂಚಿಕೊಳ್ಳುವ ಮೂಲಕ ಖುಷಿ ಅನುಭವಿಸಿದರು, .

