Subscribe to Updates
Get the latest creative news from FooBar about art, design and business.
Author: editor.udayarashmi@gmail.com
ಲೇಖನ- ಸಂತೋಷ್ ರಾವ್ ಪೆರ್ಮುಡಪೆರ್ಮುಡ ಮನೆಪಟ್ರಮೆ ಗ್ರಾಮ ಮತ್ತು ಅಂಚೆಬೆಳ್ತಂಗಡಿ ತಾಲೂಕುದ.ಕ ಜಿಲ್ಲೆ-574198ದೂ: 9742884160 ಉದಯರಶ್ಮಿ ದಿನಪತ್ರಿಕೆ ಇಂದಿನ ಯುದ್ಧಗಳು ಕೇವಲ ಬಂದೂಕುಗಳ ಮೂಲಕ ನಡೆಯುವ ಬದಲು ಇಡೀ ಮನುಕುಲವನ್ನೇ ಕ್ಷಣಾರ್ಧದಲ್ಲಿ ನಾಶಪಡಿಸುವಂಥ ಅಪಾಯಕಾರಿ ಅಣ್ವಸ್ತ್ರಗಳು ಮತ್ತು ಜೈವಿಕ ಅಸ್ತ್ರಳಂತಹ ಸಮೂಹನಾಶಕ ಅಸ್ತ್ರಗಳನ್ನು ಪ್ರತೀ ದೇಶಗಳು ಒಗ್ಗೂಡಿಸಿ ಇಟ್ಟುಕೊಂಡಿವೆ. ಎಲ್ಲಾದರೂ ವಿವೇಚನೆ ಇಲ್ಲದೇ ಅವುಗಳನ್ನು ಪ್ರಯೋಗಿಸಿದರೆ ಅದರಿಂದ ಶತಮಾನದ ಹಿಂದೆ ಜಪಾನಿನಲ್ಲಿ ಆಗಿರುವ ಯುದ್ಧದ ಭೀಕರತೆಗಿಂತಲೂ ಹಲವು ಪಟ್ಟು ಹೆಚ್ಚಿನ ಪ್ರಮಾಣದ ನಾಶವಾಗುವುದು ದಿಟ. ಇಂತಹ ದುರಂತಕ್ಕೆ ಕಾರಣವಾಗುವ ಯುದ್ಧಕ್ಕೆ ಕೈಹಾಕುವ ಮೊದಲು ಯುದ್ಧದಾಹಿ ದೇಶಗಳು ತಮ್ಮ ದೇಶದ ನಾಗರಿಕರ ಮೇಲೆ ಆಗಬಹುದಾದ ಹಾನಿ ಮತ್ತು ದೇಶದ ಭವಿಷ್ಯದ ಕುರಿತು ಚಿಂತಿಸಬೇಕು. ಬರುವ ಸಮಸ್ಯೆಗಳಿಗೆ ಎಲ್ಲಕ್ಕೂ ಯುದ್ಧವೇ ಪರಿಹಾರ ಅಲ್ಲ ಎನ್ನುವುದನ್ನು ಗತಿಸಿರುವ ಯುದ್ಧ ಪರಿಣಾಮಗಳಿಂದ ಅರಿಯಬೇಕು.ಯುದ್ಧಗಳು ಯಥೇಚ್ಛ ಸಾವುನೋವು, ಆರ್ಥಿಕ ಕುಸಿತ, ಸಾಮಾಜಿಕ ಅಸ್ಥಿರತೆ ಮತ್ತು ಪರಿಸರ ವಿನಾಶವನ್ನು ಉಂಟುಮಾಡುವ ಮಾನವ ನಿರ್ಮಿತ ವಿಪತ್ತಾಗಿದೆ. ಇದು ತಲೆಮಾರುಗಳ ಕಾಲದವರೆಗೆ ಕಾಡುವ ಮಾನಸಿಕ…
ಉದಯರಶ್ಮಿ ದಿನಪತ್ರಿಕೆ ಅಫಜಲಪುರ: ದ್ವಿತಿಯ ಪಿಯು ಫಲಿತಾಂಶ ಹೊರ ಬಂದಿದ್ದು ಪಟ್ಟಣದಲ್ಲಿರುವ ಪ್ರತಿಷ್ಠಿತ ರಾಯಲ್ ಪಬ್ಲಿಕ್ ವಿಜ್ಞಾನ ಮತ್ತು ಕಲಾ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಉತ್ತಮ ಅಂಕಗಳನ್ನು ಪಡೆದುಕೊಂಡು ಕಾಲೇಜಿನ ಗೌರವ ಹೆಚ್ಚಿಸಿದ್ದಾರೆ.ಕಾಲೇಜಿನ ವಿದ್ಯಾರ್ಥಿಗಳ ಪೈಕಿ ನಾಲ್ವರು ಡಿಸ್ಟಿಂಕ್ಷನ್ ನಲ್ಲಿ ಪಾಸಾಗಿದ್ದು ೨೯ ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ತೇರ್ಗಡೆಗೊಂಡಿದ್ದಾರೆ. ೧೩ ವಿದ್ಯಾರ್ಥಿಗಳು ಸೆಕೆಂಡ್ ಕ್ಲಾಸ್ ನಲ್ಲಿ ಪಾಸಾಗುವ ಮೂಲಕ ಸಾಧನೆ ಮಾಡಿದ್ದಾರೆ.ಕಾಲೇಜಿನ ವಿದ್ಯಾರ್ಥಿ ಸುದೀಪ್ ಬಸವರಾಜ ರಾಠೋಡ ೫೫೨ ಅಂಕಗಳನ್ನು ಪಡೆದು ೯೨ ಪ್ರತಿಶತದೊಂದಿಗೆ ಪಾಸಾಗಿ ಕಾಲೇಜಿಗೆ ಮೊದಲ ಸ್ಥಾನ ಪಡೆದುಕೊಂಡಿದ್ದಾನೆ. ಶಭನಮ್ ಸಾಹೇಬ್‌ಪಟೇಲ್ ೫೪೩ ಅಂಕಗಳೊಂದಿಗೆ ೯೦.೫ ಪ್ರತಿಶತದೊಂದಿಗೆ ತೇರ್ಗಡೆಯಾಗಿ ಕಾಲೇಜಿಗೆ ದ್ವಿತಿಯ ಸ್ಥಾನ ಪಡೆದುಕೊಂಡಿದ್ದಾಳೆ. ಉಳಿದಂತೆ ಮಿಜ್ಬಾ ಅಶ್ಪಾಕ್ ೫೩೯ (೮೯.೮), ಸುಲೇಮನ್ ಮಹಿಬೂಬ್ ೫೧೦ (೮೫), ಅರುಣಕುಮಾರ ಶ್ರೀಶೈಲ್ ೫೦೪ (೮೪), ಐಶ್ವರ್ಯ ಮಲ್ಲಿನಾಥ ೫೦೨ (೮೩.೬), ಮಹಮ್ಮದ್ ಹಸೀಬ್ ೪೮೨ (೮೦.೩), ಅವಿನಾಶ ಬಸವರಾಜ ೪೭೮ (೭೯.೬) ಜಿಶಾನ್ ರಶೀದ್ ೪೭೧ (೭೮.೫), ಸುಫಿಯಾ…
ಉದಯರಶ್ಮಿ ದಿನಪತ್ರಿಕೆ ಕೊಲ್ಹಾರ: ತಾಲೂಕಿನ ಕುಪಕಡ್ಡಿ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿನಿ ಕೀರ್ತಿ ಶಿವಪ್ಪ ಹೊರಟ್ಟಿ ಅವರು 2025-26ನೇ ಸಾಲಿನ NMMS ಪರೀಕ್ಷೆಯಲ್ಲಿ 114 ಅಂಕಗಳನ್ನು ಪಡೆದು ಬಸವನ ಬಾಗೇವಾಡಿ ತಾಲೂಕಿಗೆ ಪ್ರಥಮ ಸ್ಥಾನ ಪಡೆದು ಶಾಲೆಯ ಕೀರ್ತಿಯನ್ನು ಹೆಚ್ಚಿಸಿದ್ದಾಳೆ.ಕಳೆದ ಫೆಬ್ರವರಿ ತಿಂಗಳಲ್ಲಿ ನಡೆದ ಈ ಪರೀಕ್ಷೆಯಲ್ಲಿ ಗ್ರಾಮೀಣ ಭಾಗದ ಸರಕಾರಿ ಶಾಲೆಯ ವಿದ್ಯಾರ್ಥಿನಿಯಾಗಿ ಈ ಸಾಧನೆ ಮಾಡಿರುವುದು ವಿಶೇಷವಾಗಿದೆ.ಅದೇ ಶಾಲೆಯ ಇತರೆ ವಿದ್ಯಾರ್ಥಿಗಳೂ ಉತ್ತಮ ಸಾಧನೆ ತೋರಿದ್ದು, ಗಾಯತ್ರಿ ಬಡಿಗೇರ 92, ಅಪೇಕ್ಷಾ ಕೋಲಕಾರ 86, ಮಲ್ಲಪ್ಪ ಬಿಜ್ಜರಗಿ 84, ಸಾಕ್ಷಿ ಮ್ಯಾಗೇಡಿ 81 ಹಾಗೂ ಲಕ್ಷ್ಮೀ ತಿಳಗುಳ 77 ಅಂಕಗಳನ್ನು ಪಡೆದುಕೊಂಡಿದ್ದಾರೆ.ಮಕ್ಕಳ ಈ ಸಾಧನೆಗೆ ಕ್ಷೇತ್ರ ಶಿಕ್ಷಣಾಧಿಕಾರಿ ವಸಂತ ರಾಠೋಡ, ಸಮನ್ವಯಾಧಿಕಾರಿ ಸುನೀಲ ನಾಯಕ, NMMS ತಾಲೂಕು ನೋಡಲ್ ಅಧಿಕಾರಿ ಅನುಜಾ ಗುಬ್ಬಾ ಸೇರಿದಂತೆ ಶಾಲಾ ಅಧ್ಯಕ್ಷ ಮುರಗೇಶ ಹಳ್ಳಿ, ಮುಖ್ಯಗುರು ಸಿದ್ದಪ್ಪ ಕೋಟ್ಯಾಳ ಹಾಗೂ ಶಿಕ್ಷಕರಾದ ಹಣಮಂತ ಬಿರಾದಾರ, ಸಂಗಮೇಶ ಎಲಬಳ್ಳಿ, ಶಾಂತಪ್ಪ ನಾಗರಳ್ಳಿ,…
ಗ್ರಾಮೀಣ ಪ್ರದೇಶಗಳಲ್ಲಿ ಕುಡಿವ ನೀರಿನ ಸಮಸ್ಯೆಗೆ ಸಂಪರ್ಕಿಸಿ | ಜಿಪಂ ಸಿಇಓ ರಿಷಿ ಆನಂದ ಪ್ರಕಟಣೆ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಜಿಲ್ಲೆಯ ಗ್ರಾಮೀಣ ಪ್ರದೇಶಗಳಲ್ಲಿ ಕುಡಿಯುವ ನೀರಿನ ಸಮಸ್ಯೆಯನ್ನು ನಿಗದಿತ ಸಮಯದಲ್ಲಿ ಪರಿಹರಿಸಲು ಜಿಲ್ಲಾ ಪಂಚಾಯತ ಕಚೇರಿ, ಕಾರ್ಯನಿರ್ವಾಹಕ ಅಭಿಯಂತರರು, ಗ್ರಾಮೀಣ ಕುಡಿಯುವ ನೀರು ಹಾಗೂ ನೈರ್ಮಲ್ಯ ವಿಭಾಗದ ಕಚೇರಿ ಮತ್ತು ಜಿಲ್ಲೆಯ ಎಲ್ಲಾ ತಾಲೂಕಾ ಪಂಚಾಯತಿಗಳಲ್ಲಿ ಸಹಾಯವಾಣಿ ಕೇಂದ್ರಗಳನ್ನು ಆರಂಭಿಸಲಾಗಿದೆ ಎಂದು ಜಿಲ್ಲಾ ಪಂಚಾಯತಿಯ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ರಿಷಿ ಆನಂದ ಅವರು ತಿಳಿಸಿದ್ದಾರೆ.ಜಿಲ್ಲಾ ಪಂಚಾಯತ ಕಚೇರಿಯ ಸಹಾಯವಾಣಿ ಸಂಖ್ಯೆ ; ೦೮೩೫೨-೨೭೭೨೯೩, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗದ ಕಚೇರಿಯ ದೂ. ಸಂಖ್ಯೆ : ೦೮೩೫೨-೨೪೪೯೭೧, ಮದ್ದೇಬಿಹಾಳ ೦೮೩೫೬-೨೦೦೬೦೬, ತಾಳಿಕೋಟಿ ೦೮೩೫೬-೨೦೦೧೦೩, ಸಿಂದಗಿ ೦೮೪೮೮ ೨೨೧೭೭೨, ದೇವರ ಹಿಪ್ಪರಗಿ ೦೮೪೨೪-೨೦೦೧೧೪, ಆಲಮೇಲ ೦೮೪೮೮-೨೯೮೯೦೦, ವಿಜಯಪುರ ೦೮೩೫೨-೨೪೨೪೨೩, ಬಬಲೇಶ್ವರ ೦೮೩೫೫-೨೦೦೦೦೫, ತಿಕೋಟಾ ೦೮೩೫೨-೨೯೪೫೦೬. ಇಂಡಿ ೦೮೩೫೯-೨೦೦೦೨೬, ಚಡಚಣ ೯೪೮೦೮೩೧೭೧೮, ಬ.ಬಾಗೇವಾಡಿ ೦೮೩೫೮-೨೪೫೨೩೬, ನಿಡಗುಂದಿ ೦೮೪೨೬-೨೦೦೧೬೩, ಕೊಲ್ಹಾರ ೦೮೪೨೬-೨೦೦೧೦೩ ಈ ಸಹಾಯ…
ಉದಯರಶ್ಮಿ ದಿನಪತ್ರಿಕೆ ಇಂಡಿ: ತಾಲೂಕಿನ ಸುಕ್ಷೇತ್ರ ಲಚ್ಯಾಣದಲ್ಲಿ ಶ್ರೀ ಶಂಕರಲಿಂಗ ಮಹಾ ರಥೋತ್ಸವ ಬುಧವಾರ ಸಂಜೆ ಮೂಲಾ ನಕ್ಷತ್ರ ಶುಭ ಮೂಹೂರ್ತದಲ್ಲಿ ನೆರೆದ ಸಹಸ್ರಾರು ಭಕ್ತರ ಜಯಘೋಷದೊಂದಿಗೆ ಸಂಭ್ರಮದಿಂದ ನೆರವೇರಿತು.ಬಂಥನಾಳದ ಪರಮಪೂಜ್ಯ ಡಾ. ವೃಷಭಲಿಂಗೇಶ್ವರ ಮಹಾಶಿವಯೋಗಿಗಳು, ಯರನಾಳದ ಪೂಜ್ಯ ಶ್ರೀ ಗುರು ಸಂಗನಬಸವ ಶ್ರೀಗಳು, ಇಟಗಿ ಪೂಕ್ಯರು, ಶಿರವಾಳದ ಸೋಮನಿಂಗ ಮಹಾರಾಜರು, ಸೇರಿದಂತೆ ವಿವಿಧ ಪೂಜ್ಯರ ಸಾನಿಧ್ಯದಲ್ಲಿ ನಡೆದ ರಥೋತ್ಸವ ನೋಡಿ ಕಣ್ಣು ತುಂಬಿಕೊಳ್ಳಲು ನೆರೆಯ ರಾಜ್ಯ ಮಹಾರಾಷ್ಟ್ರ ಆಂಧ್ರಪ್ರದೇಶ ತೆಲಂಗಾಣ ಸೇರಿದಂತೆ ರಾಜ್ಯದ ನಾನಾ ಭಾಗದ ಸಹಸ್ರಾರು ಭಕ್ತರು ಆಗಮಿಸಿದರು. ರಥೋತ್ಸದ ಸಂದರ್ಭದಲ್ಲಿ ಭಕ್ತರು ಬಾಳೆಹಣ್ಣು ಉತ್ತತ್ತಿ ಖಾರಿಕ ರಥದ ಮೇಲೆ ಎಸೆದು ಭಕ್ತಿಯ ಸಮರ್ಪಿಸಿದರು.ರಥವು ಬಸವಣ್ಣ ಕಟ್ಟೆಯ ವರೆಗೆ ಚಲಿಸಿ ಮೂಲ ಸ್ಥಳ ತಲುಪಿತು.
ಉದಯರಶ್ಮಿ ದಿನಪತ್ರಿಕೆ ಇಂಡಿ: ಶ್ರೀ ಸತ್ಯ ಸಾಯಿ ಜನ್ಮ ಶತಮಾನೋತ್ಸವದ ಅಂಗವಾಗಿ ಶ್ರೀ ಸತ್ಯ ಸಾಯಿ ಪ್ರೇಮವಾಹಿಸಿ ರಥವು ಇಂಡಿಗೆ ಏ.೧೩ ರಂದು ಬರಲಿದೆ ಎಂದು ಸಂಯೋಜಕರು ಶ್ರೀ ಸತ್ಯ ಸಾಯಿ ಮಹಿಳಾ ಸೇವಾ ಸಮಿತಿ ಗಂಗಾ ಗಲಗಲಿ ತಿಳಿಸಿದ್ದಾರೆ.ಅಂದು ಮಹಾವೀರ ವೃತ್ತದಿಂದ ಮೆರವಣೆಗೆ ನಡೆಯಲಿದ್ದು ವಾಧ್ಯ ಮೇಳ ಘೋಷಣೆಯೊಂದಿಗೆ ಸಾಯಿ ಗಾಯತ್ರಿ ಸಾಯಿ ಭಜನೆ ವೇಷದಾರಿಗಳು ಬಾಲ ವಿಕಾಸ ಮಕ್ಕಳಿಂದ ಮಹಿಳೆಯರ ಕೋಲಾಟ ಕುಂಭಮೇಳ ಆರತಿ ಮಂಗಳ ದ್ರವ್ಯ ಮತ್ತು ವಿವಿಧ ಭಕ್ಷ ಭೋಜನಗಳಿಂದ ರಥದ ಭವ್ಯವಾದ ಮೆರವಣೆಗೆ ನಡೆಯಲಿದೆ ಎಂದರು.ನಂತರ ಭಕ್ತಾದಿಗಳಿಗೆ ಸೀರೆ ಮತ್ತು ಮಹಾಪ್ರಸಾದ ವಿತರಣೆ ಮಾಡಲಾಗುವದು ಎಂದು ತಿಳಿಸಿದ್ದಾರೆ.ರಥವು ಪುಟಪುರ್ತಿಯಿಂದ ಹೊರಟು ಬಾಗಲಕೋಟ, ವಿಜಯಪುರಕ್ಕೆ ಏ. ೧೦ ರಂದು ಆಗಮಿಸಲಿದೆ. ಮುದ್ದೇಬಿಹಾಳ,ಹೂವಿನ ಹಿಪ್ಪರಗಿ, ಮನಗೂಳಿ, ಮುಳವಾಡ, ವಿಜಯಪುರ ಉಮರಾಣಿ ಅಂಜುಟಗಿ ಮಾರ್ಗವಾಗಿ ಇಂಡಿಗೆ ಆಗಮಿಸಿ ನಂತರ ರಾಮನಳ್ಳಿ,ಕೊರಳ್ಳಿ ಸಿಂದಗಿ ಮಾರ್ಗವಾಗಿ ಕಲಬುರಗಿ ಜಿಲ್ಲೆಗೆ ಹೊರಡಲಿದೆ ಎಂದರು.ಭಕ್ತಾದಿಗಳು ಸ್ವಾಮಿಯ ದರ್ಶನ ಪಡೆದು ಪುನೀತರಾಗಲು ಗಲಗಲಿ ವಿನಂತಿಸಿದ್ದಾರೆ.
ಉದಯರಶ್ಮಿ ದಿನಪತ್ರಿಕೆ ಸಿಂದಗಿ: ಧಾರ್ಮಿಕ ಕಾರ್ಯಕ್ರಮಗಳು ಮನಸ್ಸಿಗೆ ಶಾಂತಿ ಮತ್ತು ನೆಮ್ಮದಿಯನ್ನು ನೀಡುತ್ತವೆ. ಪುರಾಣ ಪ್ರವಚನ ಆಲಿಸುವುದರಿಂದ ಮನಸ್ಸು ಶುದ್ಧಗೊಳ್ಳುತ್ತದೆ ಎಂದು ಶಾಸಕ ಅಶೋಕ ಮನಗೂಳಿ ಹೇಳಿದರು.ಸಿಂದಗಿ ನಗರದ ನಂದಿಕೋಲ್ ಓಣಿಯಲ್ಲಿ ಶ್ರೀ ಮಲ್ಲಿಕಾರ್ಜುನ ಜಾತ್ರೆ ಮಹೋತ್ಸವ ನಿಮಿತ್ತ ಹಮ್ಮಿಕೊಂಡ ಶ್ರೀಶೈಲ ಶ್ರೀ ಮಲ್ಲಿಕಾರ್ಜುನ ಪುರಾಣ ಪ್ರವಚನ ಮಂಗಲೋತ್ಸವ ಸಮಾರಂಭದ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.ದೇವರು, ಧರ್ಮ, ಆಚಾರ-ವಿಚಾರ, ಸಂಪ್ರದಾಯ, ಸಂಸ್ಕೃತಿ, ಸಂಸ್ಕಾರ, ಮಾನವೀಯ ಮೌಲ್ಯಗಳಿಂದ ಕೂಡಿದ ಸುಸಂಸ್ಕೃತ ಸಮಾಜ ನಿರ್ಮಾಣ ಮಾಡುವಲ್ಲಿ ಪುರಾಣ, ಸತ್ಸಂಗ ಕಾರ್ಯಕ್ರಮಗಳು ಅತ್ಯವಶ್ಯಕ. ಮಾನವ ತನ್ನ ಬದುಕಿನ ಜಟಾಪಟಿಯ ಮದ್ಯೆಯೂ ಜೀವನ ಪವಿತ್ರಗೊಳಿಸಲು ಆಧ್ಯಾತ್ಮಿಕ ಚಿಂತನೆಗಳನ್ನು ಅಳವಡಿಸಿಕೊಳ್ಳಬೇಕು. ಶರಣ-ಶರಣೆಯರ, ಮಹಾತ್ಮರ ಜೀವನ ಚರಿತ್ರೆಗಳನ್ನು ಆಲಿಸುವ ಮೂಲಕ ಸನ್ಮಾರ್ಗದತ್ತ ಸಾಗಬೇಕು ಎಂದರು.ಈ ವೇಳೆ ಕಾರ್ಯಕ್ರಮದ ಸಾನಿಧ್ಯ ವಹಿಸಿದ ಸಾರಂಗಮಠದ ಪೀಠಾಧಿಪತಿ ಡಾ.ಪ್ರಭುಸಾರಂಗದೇವ ಶಿವಾಚಾರ್ಯ ಆಶೀರ್ವಚನ ನೀಡಿದರು.ಸಾನಿಧ್ಯವನ್ನು ಸಾರಂಗಮಠದ ಉತ್ತರಾಧಿಕಾರಿ ಡಾ.ವಿಶ್ವಪ್ರಭುದೇವ ಶಿವಾಚಾರ್ಯ, ಮಾಜಿ ಶಾಸಕ ಶರಣಪ್ಪ ಸುಣಗಾರ, ಅಖಿಲ ಭಾರತ ವೀರಶೈವ ಲಿಂಗಾಯತ ಸಮಾಜದ ಅಧ್ಯಕ್ಷ ಅಶೋಕ…
ಉದಯರಶ್ಮಿ ದಿನಪತ್ರಿಕೆ ಆಲಮಟ್ಟಿ: ತಾಳಿಕೋಟಿ ತಾಲೂಕಿನ ಮೂಕಿಹಾಳ ಗ್ರಾಮದ ರೈತರ ಜಮೀನನ್ನು ಚಿಮ್ಮಲಗಿ ಏತ ನೀರಾವರಿಯ ಪೂರ್ವ ಕಾಲುವೆಗೆ ಸ್ವಾಧೀನಪಡಿಸಿಕೊಂಡು ಹಲವು ವರ್ಷಗಳಾದರೂ ಇದುವರೆಗೆ ಪರಿಹಾರ ನೀಡಿಲ್ಲ ಎಂದು ಆರೋಪಿಸಿ ಅಖಂಡ ಕರ್ನಾಟಕ ರೈತ ಸಂಘದ ನೇತೃತ್ವದಲ್ಲಿ ರೈತರು ಗುರುವಾರ ಆಲಮಟ್ಟಿಯ ವಿಶೇಷ ಭೂಸ್ವಾಧೀನಾಧಿಕಾರಿ (ಎಸ್‌ಎಲ್‌ಒ) ಎಂ.ಬಿ. ನಾಗಠಾಣ ಅವರಿಗೆ ಮನವಿ ಸಲ್ಲಿಸಿದರು.ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಅರವಿಂದ ಕುಲಕರ್ಣಿ ಮಾತನಾಡಿ, ಕೃಷ್ಣಾ ಮೇಲ್ದಂಡೆ ಯೋಜನೆ ಲಾಲ್ ಬಹದ್ದೂರ್ ಶಾಸ್ತ್ರಿ ಜಲಾಶಯ ವ್ಯಾಪ್ತಿಯ ಚಿಮ್ಮಲಗಿ ಪೂರ್ವ ಕಾಲುವೆಗೆ ಮೂಕಿಹಾಳ ರೈತರ ಜಮೀನು ಹೆಚ್ಚುವರಿಯಾಗಿ ಸ್ವಾಧೀನಪಡಿಸಿಕೊಳ್ಳಲಾಗಿದೆ. ಇರುವ ಅಲ್ಪಸ್ವಲ್ಪ ಜಮೀನಿನಲ್ಲೂ ಕಾಲುವೆ ಹೋದ ಮೇಲೆ ಪರಿಹಾರ ನೀಡದಿದ್ದರೆ ರೈತ ಬದುಕುವುದಾದರೂ ಹೇಗೆ? ಎಂದು ಪ್ರಶ್ನಿಸಿದರು.ಪರಿಹಾರ ನೀಡಬೇಕು. ಇಲ್ಲದಿದ್ದರೆ ಆಲಮಟ್ಟಿ ಎಸ್‌ಎಲ್‌ಒ ಕಚೇರಿ ಮುಂದೆ ಮೂಕಿಹಾಳ ಸೇರಿದಂತೆ ಇತರೆ ಏತ ನೀರಾವರಿ ವ್ಯಾಪ್ತಿಯ ರೈತರನ್ನು ಸೇರಿಸಿಕೊಂಡು ಧರಣಿ ಸತ್ಯಾಗ್ರಹ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.”ಕೂಡಲೇಏ.೧೨ರಂದು ರೈತರ ಸಭೆ:ಮನವಿ ಸ್ವೀಕರಿಸಿದ ಎಸ್‌ಎಲ್‌ಒ ಎಂ.ಬಿ. ನಾಗಠಾಣ ಅವರು,…
ಉದಯರಶ್ಮಿ ದಿನಪತ್ರಿಕೆ ವಿಜಯಪುರ: ೨೦೨೬ -೨೭ನೇ ಸಾಲಿನ ಜಿಲ್ಲಾ ಬಾಲಭವನದ ವತಿಯಿಂದ ೫ ರಿಂದ ೧೬ ವರ್ಷದೊಳಗಿನ ಮಕ್ಕಳಿಗಾಗಿ ಬೇಸಿಗೆ ಶಿಬಿರವನ್ನು ಆಯೋಜಿಸಲಾಗಿದೆ. ಈ ಶಿಬಿರವು ಏ.೧೦ ರಿಂದ ೨೪ ರವರೆಗೆ ಬೆಳಿಗ್ಗೆ ೮ ರಿಂದ ಮಧ್ಯಾಹ್ನ ೧:೩೦ ಗಂಟೆಯವರೆಗೆ ನಡೆಯಲಿದೆ. ಮಕ್ಕಳ ಸೃಜನಾತ್ಮಕತೆ, ಕೌಶಲ್ಯಾಭಿವೃದ್ಧಿ ಮತ್ತು ಮನರಂಜನೆಗಾಗಿ ಚಿತ್ರಕಲೆ, ನೃತ್ಯ, ಕರಾಟೆ ಹಾಗೂ ಕರಕುಶಲ ಕಲೆ ಚಟುವಟಿಕೆಗಳು ಶಿಬಿರದಲ್ಲಿ ಏರ್ಪಡಿಸಿದೆ. ಕಚೇರಿ ವೇಳೆಯಲ್ಲಿ ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಸಂಯೋಜಕರು, ಜಿಲ್ಲಾ ಬಾಲಭವನ, ಮನಗೂಳಿ ರಸ್ತೆ, ವಿಜಯಪುರ ಅವರನ್ನು ಮೊ.೭೭೬೦೪೦೨೨೩೯ ಸಂಪರ್ಕಿಸಬಹುದಾಗಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
