Subscribe to Updates
Get the latest creative news from FooBar about art, design and business.
Author: editor.udayarashmi@gmail.com
ಉದಯರಶ್ಮಿ ದಿನಪತ್ರಿಕೆ ಸಿಂದಗಿ: ಅಖಿಲ ಭಾರತ ಮಾನವೀಯತೆ ಸಂದೇಶ ವೇದಿಕೆ ಸಿಂದಗಿ ಶಾಖೆಯ ವತಿಯಿಂದ ಸಿಂದಗಿ ನಗರದ ಮೂರು ಪ್ರಮುಖ ಆಸ್ಪತ್ರೆಯಲ್ಲಿ ಹಳ್ಳಿಗಳಿಂದ ಬಂದ ರೋಗಿಗಳಿಗೆ ಮತ್ತು ಹಸಿದವರಿಗ ಹಾಗೂ ಬಸ್ ನಿಲ್ದಾಣದಲ್ಲಿ ರಾತ್ರಿಯ ಹೊತ್ತು ಪ್ರಯಾಣ ಮಾಡುವ ನೂರ, ಐವತ್ತು ಪ್ರಯಾಣಿಕರಿಗೆ ಸಂಜೆಯ ಊಟ ವಿತರಿಸಲಾಯಿತು.ಹಸಿವು ಮುಕ್ತ ಸಮಾಜವೆಂದರೆ ಎಲ್ಲರಿಗೂ ಆಹಾರ ಲಭ್ಯವಾಗುವ ಸಮಾಜವಾಗಬೇಕು. ಇದು ಮೂಲಭೂತ ಮಾನವ ಹಕ್ಕು. ನಾವು ಒಟ್ಟಾಗಿ ಕೆಲಸ ಮಾಡಿದರೆ, ಹಸಿವನ್ನು ನಿರ್ಮೂಲನೆ ಮಾಡಬಹುದು.ಪ್ರತಿ ಊಟವೂ ಒಂದು ಉಡುಗೊರೆ. ಹಸಿದವರಿಗೆ ಊಟ ನೀಡುವುದು ನಮ್ಮ ಕರ್ತವ್ಯ. ನಾವು ಆಹಾರವನ್ನು ವ್ಯರ್ಥ ಮಾಡಬಾರದು. ಬದಲಿಗೆ ಅದನ್ನು ಅಗತ್ಯವಿರುವವರಿಗೆ ಹಂಚಬೇಕು. ಹಸಿವು ಮುಕ್ತ ಸಮಾಜಕ್ಕಾಗಿ, ನಾವು ಒಗ್ಗಟ್ಟಾಗಿ ನಿಲ್ಲೋಣ ಎಂದು ಮೌಲಾನಾ ದಾವೂದ ನದ್ವಿ ಹೇಳಿದರು.ಇದೇ ರೀತಿ ಮೌಲಾನಾ ಕಲೀಮುಲ್ಲಾಹ ನದ್ವಿ ಹಸಿದವರಿಗೆ ಊಟ ನೀಡುವ ಸೇವೆಯು ಬಹಳ ಶ್ರೇಷ್ಠವಾದ ಕೆಲಸ. ಇದು ನಮ್ಮ ಸಮಾಜದಲ್ಲಿ ಬಡತನ ಮತ್ತು ಹಸಿವಿನ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ ಎಂಬ…
ಉದಯರಶ್ಮಿ ದಿನಪತ್ರಿಕೆ ಸಿಂದಗಿ: ಅಖಿಲ ಭಾರತ ಮಾನವೀಯತೆ ಸಂದೇಶ ವೇದಿಕೆ ವತಿಯಿಂದ ಸಿಂದಗಿ ನಗರದಲ್ಲಿ ಕುಡಿಯುವ ನೀರಿನ ಅರವಟಿಗೆ ಸೌಲಭ್ಯ ಕಲ್ಪಿಸಿ ಮಾನವೀಯತೆ ಮೆರೆದಿದೆ.ಸುಡು ಬೇಸಿಗೆ ಹೆಚ್ಚುತ್ತಿರುವ ತಾಪಮಾನವನ್ನು ಗಮನದಲ್ಲಿ ಇಟ್ಟುಕೊಂಡು ಅಖಿಲ ಭಾರತ ಮಾನವೀಯತೆ ಸಂದೇಶ ವೇದಿಕೆಯು ನಗರದ ಪ್ರಮುಖ ಸ್ಥಳಗಳಲ್ಲಿ ನೀರಿನ ಅರವಟಿಗೆ ಅಳವಡಿಸಿ ಜನಸಾಮಾನ್ಯರಿಗೆ, ಬಾಯಾರಿ ಬಂದವರಿಗೆ ನೀರಿನ ದಾಹ ತಣಿಸುವ ಕಾರ್ಯ ಮಾಡುತ್ತಿದೆ.ತಾಲ್ಲೂಕು ಸಾರ್ವಜನಿಕ ಆಸ್ಪತ್ರೆ, ಪೊಲೀಸ್ ಠಾಣೆ ಇನ್ನು ಹಲವಾರು ನಗರದ ಪ್ರಮುಖ ಬೀದಿಗಳಲ್ಲಿ ನೀರಿನ ಅರವಟಿಗೆಯನ್ನು ಅಳವಡಿಸಿ ಈ ಸೇವೆಯ ಕಾರ್ಯಗೆ ಚಾಲನೆ ನೀಡಲಾಯಿತು.ಈ ಸೇವೆ ಸುಮಾರು ಹತ್ತು ವರ್ಷಗಳಿಂದ ಸಿಂದಗಿ ನಗರದಲ್ಲಿ ತುಂಬಾ ಯಶಸ್ವಿಯಾಗಿ ಮುಂದುವರೆಯುತ್ತಿದೆ. ಸಾರ್ವಜನಿಕರಿಂದ ವೇದಿಕೆಯ ಈ ಸೇವೆ ಮೆಚ್ಚುಗೆಗೆ ಪಾತ್ರವಾಗುತ್ತಿದೆ. ಇಂತಹ ಸೇವೆಯ ಭಾವನೆಯಿಂದ ಸುಂದರ ಸಮಾಜದ ನಿರ್ಮಾಣ ಸಾಧ್ಯ ಇಂತಹ ಕಾರ್ಯದಿಂದ ಜನಸಾಮಾನ್ಯರಿಗೆ, ಕಛೇರಿಗೆ ಬರುವ ಹಳ್ಳಿ ಭಾಗದ ಜನರಿಗೆ ತುಂಬಾ ಅನುಕೂಲವಾಗುವುದು ಹಾಗೂ ಮಾನವೀಯ ಮೌಲ್ಯವನ್ನು ಬೇಳೆಸುವಲ್ಲಿ ವೇದಿಕೆಯ ಪಾತ್ರ ಬಹುಮುಖ್ಯವಾಗಿದೆ. ಎಂದು ಸರ್ವ…
ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಸೋಮವಾರದಂದು ಬಸವ ಜಯಂತಿ ಹಾಗೂ ಅಕ್ಷಯ ತೃತೀಯ ಪ್ರಯುಕ್ತ ಜಿಲ್ಲೆಯಾದ್ಯಂತ ಮಾಂಸ ಮತ್ತು ಮದ್ಯ ಮಾರಾಟವನ್ನು ಸಂಪೂರ್ಣವಾಗಿ ನಿಷೇಧಿಸುವಂತೆ ಜಿಲ್ಲಾ ಪಂಚಾಯತ ಮಾಜಿ ಅಧ್ಯಕ್ಷ ಹಾಗೂ ಬಿಜೆಪಿ ಮುಖಂಡ ಉಮೇಶ ಕೋಳಕೂರ ಒತ್ತಾಯಿಸಿದ್ದಾರೆ.ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಇದೇ ದಿ. 20 ರಂದು ವಿಶ್ವಗುರು ಬಸವಣ್ಣನವರ ಜನ್ಮದಿನವಾದ ‘ಬಸವ ಜಯಂತಿ’ ಹಾಗೂ ಅತ್ಯಂತ ಪವಿತ್ರವಾದ ‘ಅಕ್ಷಯ ತೃತೀಯ’ ಹಬ್ಬಗಳು ಒಟ್ಟಾಗಿ ಆಚರಿಸಲ್ಪಡುತ್ತಿವೆ. ಈ ದಿನಗಳು ನಮ್ಮ ನಾಡಿನ ಸಾಂಸ್ಕೃತಿಕ ಮತ್ತು ಧಾರ್ಮಿಕ ಇತಿಹಾಸದಲ್ಲಿ ಅತ್ಯಂತ ಮಹತ್ವದ ದಿನಗಳಾಗಿವೆ.ವಿಶ್ವಗುರು ಬಸವಣ್ಣನವರು ದಯವೇ ಧರ್ಮದ ಮೂಲವಯ್ಯಾ…ಎಂದು ಸಾರಿದವರು. ಅಹಿಂಸೆ ಮತ್ತು ಜೀವಕಾರುಣ್ಯ ಅವರ ತತ್ವಗಳ ಮೂಲಾಧಾರ. ಅಂತಹ ಮಹಾಪುರುಷರ ಜಯಂತಿಯ ದಿನದಂದು ಜಿಲ್ಲೆಯಾದ್ಯಂತ ಮಾಂಸದ ಅಂಗಡಿಗಳು ತೆರೆದಿರುವುದು ಮತ್ತು ಪ್ರಾಣಿ ವಧೆ ಮಾಡುವುದು ಅವರ ತತ್ವಗಳಿಗೆ ಹಾಗೂ ಭಕ್ತರ ಭಾವನೆಗಳಿಗೆ ತೀವ್ರ ಧಕ್ಕೆ ತರುತ್ತದೆ. ಅದೇ ರೀತಿ, ಅಕ್ಷಯ ತೃತೀಯದಂತಹ ಮಂಗಳಕರ ದಿನದಂದು ಮದ್ಯದಂತಹ ವಸ್ತುಗಳ ಮಾರಾಟವು…
ವಿಜಯಪುರದಲ್ಲಿ “ಬಯಕೆಯ ಬಳ್ಳಿ” ಪುಸ್ತಕ ಲೋಕಾರ್ಪಣೆಗೊಳಿಸಿದ ತೋಟಗಾರಿಕೆ ಇಲಾಖೆಯ ಜಂಟಿ ನಿರ್ದೇಶಕ ರಾಹುಲ್‌ಕುಮಾರ್ ಭಾವಿದೊಡ್ಡಿ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಸಾಹಿತ್ಯ ಎಂಬುದು ಕೇವಲ ಪದಗಳ ಜೋಡಣೆವಲ್ಲ ಅದು ಮನಸ್ಸಿನ ನಿಜ ಸ್ವರೂಪವನ್ನು ಪ್ರತಿಬಿಂಬಿಸುವ ಕನ್ನಡಿಯಾಗಿದೆ. ಅನುಭವಗಳ ಆಳ ಭಾವಗಳ ವ್ಯಾಪ್ತಿ ಜೀವನಗಳ ಸತ್ಯ ಸೌಂದರ್ಯಗಳ ಸಂಗಮವೇ ಕಾವ್ಯವಾಗಿದೆ ಎಂದು ತೋಟಗಾರಿಕೆ ಇಲಾಖೆಯ ಜಂಟಿ ನಿರ್ದೇಶಕರಾದ ರಾಹುಲ್‌ಕುಮಾರ್ ಭಾವಿದೊಡ್ಡಿ ಅವರು ಹೇಳಿದರು.ನಗರದ ಸರ್ಕಾರಿ ಆರ್ಟ್ಸ್ ಗ್ಯಾಲರಿಯಲ್ಲಿ ಬುಧವಾರ ಹಮ್ಮಿಕೊಂಡ ಬಯಕೆಯ ಬಳ್ಳಿ ಪುಸ್ತಕದ ಲೋಕಾರ್ಪಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.ಮಣ್ಣು ಮತ್ತು ಸಸಿ ಹಣ್ಣುಗಳ ಸಂರಕ್ಷಣೆ ಮತ್ತು ಪೋಷಣೆಯಲ್ಲಿ ತೊಡಗಿಸಿಕೊಂಡಿರುವ ಸಂಗೀತ ತೇಲಿ ಅವರು ಸಾಹಿತ್ಯದೊಂದಿಗೆ ಆಸಕ್ತಿ ಹೊಂದಿ ತಮ್ಮ ಚೊಚ್ಚಲ ಪುಸ್ತಕವನ್ನು ರಚಿಸಿರುವ ಇವರ ಸಾಹಿತ್ಯ ಪಯಣ ಯಶಸ್ವಿಯಾಗಲಿ, ಕನ್ನಡ ಸಾಂಸ್ಕೃತಿಕ ವಲಯದಲ್ಲಿ ಇವರು ಗುರುತಿಸಿಕೊಳ್ಳಲಿ ಎಂದು ಅವರು ಹೇಳಿದರು.ಈ ಸಂದರ್ಭ ಸಾಹಿತಿ ಮನು ಪತ್ತಾರ ಮಾತನಾಡಿ, ಬಯಕೆಯ ಬಳ್ಳಿಯಲ್ಲಿ 30 ಹನಿ ಕವನಗಳು ಮಲ್ಲಿಗೆ ಹೂವಿನ ಪರಿಮಳ ಸೂಸುವ ಹಾಗೂ…
ಉದಯರಶ್ಮಿ ದಿನಪತ್ರಿಕೆ ವರದಿ: ಸಿದ್ರಾಮ್ ಎಮ್ ಇಟ್ಟಿಜಮಖಂಡಿ: ಶ್ರೀಶೈಲ ಮಲ್ಲಿಕಾರ್ಜುನ ಕಂಬಿ ಐದೇಶಿ ಉತ್ಸವ ಅತಿ ವಿಜೃಂಭಣೆಯಿಂದ ಸಾವಳಗಿ ಗ್ರಾಮದಲ್ಲಿ ನಡೆಯಿತು.ಜಮಖಂಡಿ ತಾಲೂಕಿನ ಸಾವಳಗಿ ಗ್ರಾಮದಲ್ಲಿ ಶ್ರೀಶೈಲ ಮಲ್ಲಿಕಾರ್ಜುನ ಕಂಬಿ ಮಲ್ಲಯ್ಯನ ಐದೇಶಿ ಉತ್ಸವ ವಿಜೃಂಭಣೆಯಿಂದ ಜರುಗಿತು. ಐದೇಶಿ ಉತ್ಸವ ನಿಮಿತ್ತ ಪ್ರಮುಖ ಬೀದಿಗಳಲ್ಲಿ ಭವ್ಯ ಮೆರವಣಿಗೆ ಮೂಲಕ ವಾದ್ಯ ಮೇಳದೊಂದಿಗೆ ಅದ್ಧೂರಿಯಾಗಿ ಉತ್ಸವ ಸಾಗಿತು.ಇಲ್ಲಿಂದ ಅಲ್ಲಿಗೆ ಹೋದಾರತ್ತ ಏನ್ ಕೊಡುವನೋ ಮಲ್ಲಯ್ಯ’ ಕೇಳಿದೆ ಅಂದರ, ಕುದರಿ ಛತ್ತರಗಿ ಸಂಪತ್ತು ಕೊಡುವನೋ ಮಲ್ಲಯ್ಯ, ಧನವು ಕೊಟ್ಟು ಧಾನ್ಯವ ಕೊಟ್ಟು, ಸಿರಿಯ ಕೊಡುವನೋ ಮಲ್ಲಯ್ಯ.ಕಂಬಿ ಮಲ್ಲಯ್ಯ ದೇವರನ್ನು ಹೆಗಲ ಮೇಲೆ ಹೊತ್ತು ಸಾಗಿದ್ದು ಒಂದೆಡೆಯಾದರೆ ಅದರ ಮುಂಭಾಗದಲ್ಲಿ ಕನ್ನಡಿ, ಬಾಸಿಂಗ , ಮುತ್ತೈದೆಯರು ಆರತಿ, ದಿವಟಗಿ, ವಿವಿಧ ವಾದ್ಯ ಮೇಳದೊಂದಿಗೆ ಪ್ರತೀ ವರ್ಷದ ಪದ್ಧತಿಯಂತೆ ಕಂಬಿ ಮಲ್ಲಯ್ಯನನ್ನು ಕೂಡಿಸಿ ಮಂಗಳಾರತಿ ಮಾಡಿ ಕಂಬಿ ಐದೇಶಿ ಕಾರ್ಯಕ್ರಮ ನಡೆಯಿತು, ಸಾವಿರಾರು ಭಕ್ತರು ಕಂಬಿ ಮಲ್ಲಯ್ಯನಿಗೆ ಬೆಲ್ಲ ಅರ್ಪಿಸಿ ಭಕ್ತಿಯಿಂದ ನಮಿಸಿದರು.ಐದೇಶಿ ಇಲ್ಲಿಯ ಆಚರಣೆಯಾಗಿದ್ದು, ಈ…
ಉದಯರಶ್ಮಿ ದಿನಪತ್ರಿಕೆ ಚಡಚಣ: ತಾಲೂಕಾಡಳಿತ, ತಾಲೂಕ ಪಂಚಾಯತ, ಪಟ್ಟಣ ಪಂಚಾಯತ ಹಾಗೂ ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಡಾ.ಬಿ.ಆರ್. ಅಂಬೇಡ್ಕರ್ ಅವರ 135ನೇ ಜಯಂತಿಯನ್ನು ಚಡಚಣ ಪಟ್ಟಣದ ತಹಶೀಲ್ದಾರ್ ಕಛೇರಿ ಆವರಣದಲ್ಲಿ ಅತ್ಯಂತ ಭಕ್ತಿಭಾವ ಹಾಗೂ ವಿಜೃಂಭಣೆಯಿಂದ ಆಚರಿಸಲಾಯಿತು.ಕಾರ್ಯಕ್ರಮದ ಉದ್ಘಾಟಿಸಿದ ಶಾಸಕ ವಿಠ್ಠಲ ಕಟಕಧೋಂಡ ಅವರು ಮಾತನಾಡಿ, ಅಂಬೇಡ್ಕರ್ ಅವರು ಕೇವಲ ಭಾರತದ ಸಂವಿಧಾನದ ಶಿಲ್ಪಿಯಷ್ಟೇ ಅಲ್ಲದೆ, ವಿಶ್ವಕ್ಕೆ ಮಾದರಿಯಾಗಿದ್ದಾರೆ, ಸಮಾಜದಲ್ಲಿಯ ಅಂಕು ಡೊಂಕುಗಳನ್ನು ತಿದ್ದುವ ಮತ್ತು ಸಮಾನತೆ, ಸ್ವಾತಂತ್ರ‍್ಯ ಮತ್ತು ನ್ಯಾಯದ ಮೌಲ್ಯಗಳನ್ನು ಬಿತ್ತಿದ ಮಹಾನ್ ಚಿಂತಕರು ಎಂದು ಹೇಳಿದರು.ಯುವಜನತೆ ಅಂಬೇಡ್ಕರ್ ಅವರ ಆದರ್ಶಗಳನ್ನು ಅಳವಡಿಸಿಕೊಂಡು ಸಾಮಾಜಿಕ ಜವಾಬ್ದಾರಿಯನ್ನು ಹೊತ್ತುಕೊಳ್ಳಬೇಕು ಎಂದು ಕರೆ ನೀಡಿದರು.ಉಪನ್ಯಾಸಕರಾದ ಡಾ. ಸಂಜೀವಕುಮಾರ ಪೋತೆ ಅವರು ಅಂಬೇಡ್ಕರ್ ಅವರ ಜೀವನಚರಿತ್ರೆಯನ್ನು ಸವಿಸ್ತಾರವಾಗಿ ಪರಿಚಯಿಸಿದರು.ತಹಶೀಲ್ದಾರ ಸಂಜಯ ಇಂಗಳೆ ಮಾತನಾಡಿದರು.ಕಾರ್ಯಕ್ರಮದಲ್ಲಿ ಡಾ|| ಬಿ.ಆರ್.ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ, ಅವರ ತತ್ವಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವ ಸಂಕಲ್ಪ ಮಾಡಲಾಯಿತು. ಸಂವಿಧಾನದ ಪೀಠಿಕೆ ಓದಲಾಯಿತು.ಪಟ್ಟಣದ ಪ್ರಮುಖ ಬೀದಿಯಲ್ಲಿ ಡಾ|| ಬಿ.ಆರ್.ಅಂಬೇಡ್ಕರ್ ಅವರ…
ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಜಿಲ್ಲೆಯ ದೇವರಹಿಪ್ಪರಗಿ ತಾಲ್ಲೂಕಿನ ಹಂಚಲಿ ಗ್ರಾಮದ ನಿವೃತ್ತ ಶಿಕ್ಷಕ ಸಂಗಪ್ಪ ಶರಣಪ್ಪ ಸೊನ್ನದ (84) ಅವರು ಬುಧವಾರ ಕಲಬುರಗಿಯ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.ಅವರಿಗೆ ಪತ್ರಕರ್ತ ಚಂದ್ರಕಾಂತ ಸೊನ್ನದ ಸೇರಿದಂತೆ ಇಬ್ಬರು ಪುತ್ರರು, ಇಬ್ಬರು ಪುತ್ರಿಯರು ಇದ್ದಾರೆ.ಅಂತ್ಯಕ್ರಿಯೆ ಗುರುವಾರ ಬೆಳಿಗ್ಗೆ 11ಕ್ಕೆ ಹಂಚಲಿ ಗ್ರಾಮದ ಸ್ವಂತ ಹೊಲದಲ್ಲಿ ನೆರವೇರಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.
ಉದಯರಶ್ಮಿ ದಿನಪತ್ರಿಕೆ ಅಥಣಿ: ಕ್ಷೇತ್ರದ ಗ್ರಾಮೀಣ ಭಾಗದ ಜನರಿಗೆ ಮೂಲಸೌಕರ್ಯ ಕಲ್ಪಿಸುವುದು ನನ್ನ ಮೊದಲ ಆದ್ಯತೆಯಾಗಿದ್ದು, ತಾಲೂಕಿನ ಅಭಿವೃದ್ಧಿಗಾಗಿ ಪ್ರಾಮಾಣಿಕ ಪ್ರಯತ್ನ ಮಾಡಲಾಗುತ್ತಿದ್ದು,” ಎಂದು ಮಾಜಿ ಉಪಮುಖ್ಯಮಂತ್ರಿ ಹಾಗೂ ಶಾಸಕ ಲಕ್ಷ್ಮಣ ಸವದಿ ಹೇಳಿದರು.ತಾಲೂಕಿನ ಸಪ್ತಸಾಗರ, ತೀರ್ಥ ಹಾಗೂ ಖವಟಕೊಪ್ಪ ಗ್ರಾಮಗಳಲ್ಲಿ ಸುಮಾರು 14 ಕೋಟಿ ರೂಪಾಯಿ ವೆಚ್ಚದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು.ಗ್ರಾಮಸ್ಥರ ದೀರ್ಘಕಾಲದ ಬೇಡಿಕೆಗಳನ್ನು ಈಡೇರಿಸುವ ನಿಟ್ಟಿನಲ್ಲಿ ಈ ಕಾಮಗಾರಿಗಳು ಸಹಕಾರಿಯಾಗಲಿವೆ ಎಂದು ಅವರು ಆಶಯ ವ್ಯಕ್ತಪಡಿಸಿದರು.ಇದೇ ವೇಳೆ 30 ಜನ ಶಾಸಕರು ದೆಹಲಿಗೆ ತೆರಳಿರುವ ವಿಚಾರವಾಗಿ ಪ್ರತಿಕ್ರಿಯಿಸಿದ ಸವದಿ ಅವರು, “ಶಾಸಕರು ದೆಹಲಿಗೆ ಹೋಗಿರುವ ವಿಚಾರ ನನ್ನ ಗಮನದಲ್ಲಿದೆ. ಸರ್ಕಾರ ರಚನೆಯಾದ ಸಂದರ್ಭದಲ್ಲಿ ಹೈಕಮಾಂಡ್, ಮುಖ್ಯಮಂತ್ರಿಗಳು ಹಾಗೂ ಕೆಪಿಸಿಸಿ ಅಧ್ಯಕ್ಷರು ಎರಡುವರೆ ವರ್ಷಗಳ ನಂತರ ಸಚಿವ ಸಂಪುಟ ಪುನರ್ ರಚನೆ ಮಾಡಿ ಬೇರೆಯವರಿಗೆ ಅವಕಾಶ ನೀಡುತ್ತೇವೆ ಎಂಬ ಭರವಸೆ ನೀಡಿದ್ದರು. ಈಗ ಆ ಕಾಲಮಿತಿ ಮುಗಿದಿದೆ,” ಎಂದ ಅವರು “ಸಚಿವ ಸ್ಥಾನ ಕೇಳುವುದು…
