Subscribe to Updates
Get the latest creative news from FooBar about art, design and business.
Author: editor.udayarashmi@gmail.com
ಕಲಕೇರಿಗ್ರಾಪಂ ನಿರ್ಮಿಸಿದ ಗ್ರಾಮೀಣ ಸಂತೆ ಮಾರುಕಟ್ಟೆ ಹಾಗೂ ವಾಣಿಜ್ಯ ಮಳಿಗೆಗಳ ಉದ್ಘಾಟನೆ ಸಮಾರಂಭ ಉದಯರಶ್ಮಿ ದಿನಪತ್ರಿಕೆ ಕಲಕೇರಿ: ಜನತೆಯ ಆಶಿರ್ವಾದದಿಂದ ಸಿಕ್ಕ ಅಧಿಕಾರದ ಅವಧಿಯಲ್ಲಿ ಜನ ಮೆಚ್ಚುವ ಕೆಲಸ ಕಾರ್ಯಗಳನ್ನು ಮಾಡಿದರೆ ಮಾತ್ರ ಅದು ಜನತೆಯ ಮನಸ್ಸಿನಲ್ಲಿ ಶಾಶ್ವತವಾಗಿ ಉಳಿಯಲು ಸಾಧ್ಯವಾಗುತ್ತದೆ. ಅಂತಹ ಕೆಲಸವನ್ನು ಗ್ರಾಮದ ಮುಖ್ಯ ಬಜಾರನಲ್ಲಿ ಉತ್ತಮ ಗುಣಮಟ್ಟದ ೫೦ಕ್ಕೂ ಹೆಚ್ಚು ವಾಣಿಜ್ಯ ಮಳಿಗೆಗಳನ್ನು ನಿರ್ಮಾಣ ಮಾಡುವ ಮೂಲಕ ಕಲಕೇರಿಯ ಗ್ರಾಮ ಪಂಚಾಯತಿಯು ಇಡಿ ಜಿಲ್ಲೆಗೆ ಮಾದರಿಯಾಗಿದೆ ಎಂದು ದೇವರಹಿಪ್ಪರಗಿ ಶಾಸಕ ರಾಜುಗೌಡ ಪಾಟೀಲ ಕುದರಿಸಾಲೋಡಗಿ ಹೇಳಿದರು.ಕಲಕೇರಿ ಗ್ರಾಮದ ಮುಖ್ಯ ಬಜಾರನಲ್ಲಿ ಜಿಲ್ಲಾ ಪಂಚಾಯತ್ ವಿಜಯಪುರ, ತಾಲೂಕು ಪಂಚಾಯತ್ ತಾಳಿಕೋಟಿ ಗ್ರಾಮ ಪಂಚಾಯತ್ ಕಾರ್ಯಾಲಯ ಕಲಕೇರಿ ಇವರ ವತಿಯಿಂದ ಹಮ್ಮಿಕೊಂಡ ಮಹಾತ್ಮಾ ಗಾಂಧೀಜಿ ಮಾರುಕಟ್ಟೆ ಹಾಗೂ ವಾಣಿಜ್ಯ ಮಳಿಗೆಗಳನ್ನು ಉದ್ಘಾಟಿಸಿ, ಸಸಿ ನೆಟ್ಟು ಅವರು ಮಾತನಾಡಿದರು.ಇಲ್ಲಿಯ ಗ್ರಾಮ ಪಂಚಾಯತ್ ಅಧಿಕಾರಿಗಳು ಹಾಗೂ ಸದಸ್ಯರು ಅತ್ಯಂತ ಕಡಿಮೆ ಅವಧಿಯಲ್ಲಿ ಮಳಿಗೆಗಳನ್ನು ನಿರ್ಮಿಸುವದರ ಜೊತೆಗೆ ಸುಮಾರು ೩೦-೪೦ ವರ್ಷಗಳಿಂದ ಈ ಜಾಗದಲ್ಲಿ…
ವಿಜಯಪುರದಲ್ಲಿ ಮಾಜಿ ಶಾಸಕ ಪ್ರೊ.ರಾಜು ಆಲಗೂರ ಅಭಿಮತ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಸರ್ಕಾರಿ ವೈದ್ಯಕೀಯ ಕಾಲೇಜ್ ಹೋರಾಟಗಾರು ಪೊಲೀಸರ ಮೇಲೆ ಕೈ ಎತ್ತಿರುವುದು ಸರಿಯಲ್ಲ, ಅದೇ ತೆರನಾಗಿ ಹೋರಾಟ ಸ್ಥಳವನ್ನು ತೆರವುಗೊಳಿಸಿರುವುದು ಅಕ್ಷಮ್ಯ ಅಪರಾಧ ಎಂದು ಮಾಜಿ ಶಾಸಕ ಪ್ರೊ.ರಾಜು ಆಲಗೂರ ಹೇಳಿದರು.ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸರ್ಕಾರಿ ವೈದ್ಯಕೀಯ ಕಾಲೇಜ್ ಸ್ಥಾಪನೆಗೆ ಸಂಬಂಧಿಸಿದಂತೆ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಬಿ. ಪಾಟೀಲರು ಭರವಸೆ ನೀಡಿದ್ದರು, ಹೀಗಿದ್ದರೂ ಸಹ ಅವರ ನಿವಾಸಕ್ಕೆ ಮುತ್ತಿಗೆ ಹಾಕುವ ಔಚಿತ್ಯವಿರಲಿಲ್ಲ, ಕಾನೂನಿಗಿಂತ ದೊಡ್ಡವರು ಯಾರೂ ಇಲ್ಲ, ಸ್ವಾಮೀಜಿಗಳು ಆರಕ್ಷಕ ಅಧಿಕಾರಿಗಳ ಮೇಲೆ ಕೈ ಮಾಡುವ ಅವಶ್ಯಕತೆಯೂ ಇರಲಿಲ್ಲ, ಇದೇ ಘಟನೆ ಇರಿಸಿಕೊಂಡು ಹೋರಾಟ ವೇದಿಕೆಯನ್ನೇ ತೆರವುಗೊಳಿಸಿರುವುದು ಅಕ್ಷಮ್ಯ ಅಪರಾಧವೇ, ಹೋರಾಟ, ಚಳವಳಿಗಳು ದಮನವಾಗಬಾರದು, ಹೋರಾಟದ ಹೆಸರಿನಲ್ಲಿ ಆರಕ್ಷಕರ ಮೇಲೆ ಕೈ ಮಾಡಿರುವುದು ಸರಿಯಲ್ಲ ಎಂದು ಆಲಗೂರ ಹೇಳಿದರು.ಜಿಲ್ಲೆಯಲ್ಲಿ ಸರ್ಕಾರಿ ವೈದ್ಯಕೀಯ ಕಾಲೇಜು ಸ್ಥಾಪನೆಗೆ ಯಾರ ತಕಾರರು ಇಲ್ಲ. ಇದರ ಪರವಾಗಿಯೇ ಕಾಂಗ್ರೆಸ್ ಪಕ್ಷ ಮತ್ತು ಸಚಿವರು, ಶಾಸಕರು ಸಹ…
ಕೊಲ್ಹಾರದಲ್ಲಿ ವಿಶ್ವ ಹಿಂದೂ ಪರಿಷತ್ ಹಾಗೂ ಭಜರಂಗದಳದ ವತಿಯಿಂದ ಶ್ರದ್ಧಾಂಜಲಿ ಸಭೆ ಉದಯರಶ್ಮಿ ದಿನಪತ್ರಿಕೆ ಕೊಲ್ಹಾರ: ಹಿಂದೂಗಳ ಮೇಲೆ ಬಾಂಗ್ಲಾದೇಶದಲ್ಲಿ ನಡೆಯುತ್ತಿರುವ ಹತ್ಯೆ ಹಾಗೂ ದೌರ್ಜನ್ಯವನ್ನು ಖಂಡಿಸಿ ವಿಶ್ವ ಹಿಂದೂ ಪರಿಷತ್ ಹಾಗೂ ಬಜರಂಗದಳದ ವತಿಯಿಂದ ಪಟ್ಟಣದಲ್ಲಿ ಶ್ರದ್ಧಾಂಜಲಿ ಹಾಗೂ ಪಂಜಿನ ಮೆರವಣಿಗೆ ನಡೆಯಿತು.ಪಟ್ಟಣದ ದ್ಯಾಮವ್ವ ದೇವಿ ದೇವಸ್ಥಾನದಿಂದ ಆರಂಭವಾದ ಈ ಮೆರವಣಿಗೆ ಪ್ರಮುಖ ಬೀದಿಗಳ ಮೂಲಕ ಸಾಗಿ ಮರಳಿ ದೇವಸ್ಥಾನದ ತಲುಪಿತು. ನೂರಾರು ಹಿಂದೂ ಕಾರ್ಯಕರ್ತರು ಪಂಜುಗಳನ್ನು ಹಿಡಿದು ಮೌನ ಶ್ರದ್ಧಾಂಜಲಿ ಸಲ್ಲಿಸಿ, ಬಾಂಗ್ಲಾದೇಶದಲ್ಲಿನ ಹಿಂದುಗಳ ಮೇಲೆ ನಡೆಯುತ್ತಿರುವ ಅಕ್ರಮಗಳಿಗೆ ವಿರೋಧ ವ್ಯಕ್ತಪಡಿಸಿದರು.ಈ ಸಂದರ್ಭದಲ್ಲಿ ಶಂಕರ ಗಣಾಚಾರಿ, ಬಿಜೆಪಿ ಯುವ ಮುಖಂಡ ಚಂದ್ರಶೇಖರ್ ಬೆಳ್ಳುಬ್ಬಿ, ಬಜರಂಗದಳ ಅಧ್ಯಕ್ಷ ಮಹೇಶ್ ತುಂಬುರಮಟ್ಟಿ ಸೇರಿದಂತೆ ಅನೇಕ ಹಿಂದೂ ಕಾರ್ಯಕರ್ತರು ಹಾಗೂ ಮುಖಂಡರು ಮೆರವಣಿಗೆಯಲ್ಲಿ ಭಾಗವಹಿಸಿದ್ದರು.
ಉದಯರಶ್ಮಿ ದಿನಪತ್ರಿಕೆ ಕೊಲ್ಹಾರ: ಪಟ್ಟಣದ ಅಂಬೇಡ್ಕರ್ ಸರ್ಕಲ್‌ನಲ್ಲಿ ಭೀಮಾ ಕೋರೆಗಾಂವ್ ವಿಜಯೋತ್ಸವವನ್ನು ಸಂಭ್ರಮದಿಂದ ಆಚರಿಸಲಾಯಿತು.ಈ ಸಂದರ್ಭದಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಗೌರವ ಸೂಚಿಸಲಾಯಿತು. ಕಾರ್ಯಕ್ರಮದಲ್ಲಿ ತೌಶೀಪ ಗಿರಗಾಂವಿ, ರಿಯಾಜ್ ಗಿರಗಾಂವಿ ದಶರಥ ಈಟಿ, ಸಂಗಪ್ಪ ಚಿಮ್ಮಲಗಿ ತಿಪ್ಪಣ್ಣ ಕುದರಿ, ಮಾರುತಿ ಕುದರಿ, ಸಿಡ್ಲಪ್ಪ ತಳಗೇರಿ, ಶೇಖು ಈಟಿ, ಸಚಿನ್ ಈಟಿ ಸಹಿತ ಅನೇಕರು ಉಪಸ್ಥಿತರಿದ್ದರು,
ಸಿದ್ದೇಶ್ವರ ಶಿಕ್ಷಣ ಸಂಸ್ಥೆ ಲೋಣಿ (ಬಿ.ಕೆ) ಅಧ್ಯಕ್ಷ ಬಿ.ಎಂ.ಕೋರೆ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ಉದಯರಶ್ಮಿ ದಿನಪತ್ರಿಕೆ ಚಡಚಣ:ಶಿಕ್ಷಣವೇ ಸಮಾಜ ಪರಿವರ್ತನೆಯ ಮೂಲಶಕ್ತಿ ಎಂಬ ತತ್ವದ ತಳಹದಿಯ ಮೇಲೆ ಗ್ರಾಮೀಣ ಪ್ರದೇಶದಲ್ಲಿ ಆರಂಭಿಸಲಾದ ಲೋಣ (ಬಿ.ಕೆ) ಗ್ರಾಮದ ಶ್ರೀ ಸಿದ್ದೇಶ್ವರ ಶಿಕ್ಷಣ ಸಂಸ್ಥೆ ಸುವರ್ಣ ಮಹೋತ್ಸವದ ಸಂಭ್ರಮದಲ್ಲಿದೆ. ಈ ನಿಮಿತ್ಯ ಜ.3 ಮತ್ತು 4 ರಂದು ಅದ್ದೂರಿ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಸಿದ್ದೇಶ್ವರ ಶಿಕ್ಷಣ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ಬಿ.ಎಂ.ಕೋರೆ ಹೇಳಿದರು.ಲೋಣಿ ಬಿ.ಕೆ ಗ್ರಾಮದ ಸಿದ್ದೇಶ್ವರ ಶಿಕ್ಷಣ ಸಂಸ್ಥೆಯ ಕಾರ್ಯಾಲಯದಲ್ಲಿ ಗುರುವಾರ ಆಯೋಜಿಸಲಾದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು.ಗ್ರಾಮೀಣ ಹಾಗೂ ಗಡಿಭಾಗದ ಮಕ್ಕಳಿಗೆ ಶಿಕ್ಷಣ ಒದಗಿಸುವ ಸಂಕಲ್ಪದೊಂದಿಗೆ 1974 ರಲ್ಲಿ ಆರಂಭಿಸಲಾದ ಈ ಸಂಸ್ಥೆ ಇಂದು ಪ್ರಾಥಮಿಕ, ಪ್ರೌಢ ಶಾಲೆ, ಪದವಿ ಕಾಲೇಜು, ವೃತ್ತಿಪರ ಶಿಕ್ಷಣ ಒಳಗೊಂಡಂತೆ 11 ಅಂಗ ಸಂಸ್ಥೆಗಳಲ್ಲಿ ಸಹಸ್ರಾರು ವಿದ್ಯಾರ್ಥಿಗಳು ಶಿಕ್ಷಣ ಪಡೆಯುತ್ತಿದ್ದಾರೆಜ.3 ರಂದು ಸುವರ್ಣ ಮಹೋತ್ಸವದ ಸಾನಿಧ್ಯವನ್ನು ವಿಜಯಪೂರ ಷಣ್ಮೂಖಾರೂಢ ಮಠದ ಅಭಿನವ ಸಿದ್ಧಾರೂಢ ಸಾಮೀಜಿ ವಹಿಸಲಿದ್ದು, ಉದ್ಘಾಟನೆಯನ್ನು ಜಿಲ್ಲಾ…
ಲೇಖನ- ಬಸವರಾಜ ಹೂಗಾರನಿಕಟ ಪೂರ್ವ ಜಿಲ್ಲಾ ಅಧ್ಯಕ್ಷರುಬಿಜೆಪಿ ಯುವ ಮೋರ್ಚಾವಿಜಯಪುರ ಜಿಲ್ಲೆಮೊ: 9740207097 ಉದಯರಶ್ಮಿ ದಿನಪತ್ರಿಕೆ ಬಾಂಗ್ಲಾದೇಶದ ಹಿಂದೂಗಳ ವಿಚಾರದಲ್ಲಿ ಇಂಡಿ ಮೈತ್ರಿ ವಿಫಲವಾಗಿದ್ದು, ಓವೆಸಿ ಮಾತ್ರ ನಾಯಕತ್ವ ತೋರಿದ್ದಾರೆ.ಬಾಂಗ್ಲಾದೇಶದಲ್ಲಿ ಹಿಂದೂ ಅಲ್ಪಸಂಖ್ಯಾತರ ಮೇಲೆ ನಡೆಯುತ್ತಿರುವ ಹಿಂಸೆ ಮತ್ತು ಭದ್ರತಾ ಆತಂಕಗಳು ಇಡೀ ದಕ್ಷಿಣ ಏಷ್ಯಾದ ಮನಸ್ಸನ್ನು ಕಲುಷಿತಗೊಳಿಸಿರುವ ಸಂದರ್ಭದಲ್ಲಿ, ಭಾರತದ ರಾಜಕೀಯ ನಾಯಕತ್ವದ ನಿಲುವುಗಳು ಕಠಿಣ ಪರೀಕ್ಷೆಗೆ ಒಳಗಾಗಿವೆ. ಇಂತಹ ಗಂಭೀರ ಮಾನವೀಯ ಸಂಕಟದ ನಡುವೆ, ಯಾರ ಧ್ವನಿ ಕೇಳಿಬಂದಿತು ಮತ್ತು ಯಾರು ಮೌನಕ್ಕೆ ಶರಣಾದರು ಎಂಬ ಪ್ರಶ್ನೆಗೆ ಉತ್ತರಗಳು ಈಗ ಸ್ಪಷ್ಟವಾಗಿವೆ.ತಮ್ಮನ್ನು ತಾವು “ಧರ್ಮನಿರಪೇಕ್ಷತೆ” ಮತ್ತು “ಅಲ್ಪಸಂಖ್ಯಾತರ ರಕ್ಷಣೆ” ಎಂಬ ಪದಗಳ ಮೂಲಕ ಸದಾ ಮುಂಚೂಣಿಯಲ್ಲಿ ತೋರಿಸಿಕೊಳ್ಳುವ ಇಂಡಿ ಮೈತ್ರಿಕೂಟದ ನಾಯಕರು — ರಾಹುಲ್ ಗಾಂಧಿ, ಸೋನಿಯಾ ಗಾಂಧಿ, ಮಲ್ಲಿಕಾರ್ಜುನ ಖರ್ಗೆ, ಪ್ರಿಯಾಂಕಾ ಗಾಂಧಿ ವಾದ್ರಾ, ಅಖಿಲೇಶ್ ಯಾದವ್, ತೇಜಸ್ವಿ ಯಾದವ್, ಮಮತಾ ಬ್ಯಾನರ್ಜಿ, ಅಭಿಷೇಕ್ ಬ್ಯಾನರ್ಜಿ, ಉದ್ಧವ ಠಾಕ್ರೆ, ಆದಿತ್ಯ ಠಾಕ್ರೆ, ಶರದ್ ಪವಾರ್, ಸುಪ್ರಿಯಾ ಸುಲೆ,…
ಝಳಕಿ ಗ್ರಾಮಸ್ಥರ ಕುಡಿಯುವ ನೀರಿಗೆ ಸಂಕಷ್ಟ | ರವಿಕುಮಾರ ಹೂಗಾರ ಆರೋಪ ಉದಯರಶ್ಮಿ ದಿನಪತ್ರಿಕೆ ಚಡಚಣ: ಜಲಧಾರೆ ಯೋಜನೆಯ ಉದ್ದೇಶ ಜನರ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸುವುದಾದರೂ, ಝಳಕಿ ಗ್ರಾಮದಲ್ಲಿ ನಡೆಯುತ್ತಿರುವ ಕಾಮಗಾರಿಯಿಂದಲೇ ಗ್ರಾಮಸ್ಥರಿಗೆ ನೀರಿನ ತೀವ್ರ ಸಮಸ್ಯೆ ಉಂಟಾಗಿದೆ ಎಂದು ಕರ್ನಾಟಕ ರಕ್ಷಣಾ ವೇದಿಕೆ ಝಳಕಿ ವಲಯದ ಅಧ್ಯಕ್ಷ ರವಿಕುಮಾರ ಹೂಗಾರ ಆರೋಪಿಸಿದ್ದಾರೆ.ಅವರು ಪ್ರಕಟಣೆಯಲ್ಲಿ ತಿಳಿಸಿದಂತೆ, ಜಲಧಾರೆ ಯೋಜನೆಯ ಗುತ್ತಿಗೆದಾರ ರಘು ವಂಶಿ ಅವರು ಝಳಕಿ ಗ್ರಾಮದ ಜೆ.ಜೆ.ಎಂ. ಪೈಪ್‌ಲೈನ್ ಕಾಮಗಾರಿ ವೇಳೆ ಗ್ರಾಮದ ನಲ್ಲಿಯ ಪೈಪ್‌ಲೈನ್ ಅನ್ನು ಮೂರು–ನಾಲ್ಕು ಸ್ಥಳಗಳಲ್ಲಿ ನೀರು ಸೋರಿಕೆಯಾಗಿದ್ದು ಕಂಡುಬಂದಿದ್ದು ಅಲ್ಲಿ ಪೈಪಅಳವಡಿಸುವಾಗ ಪೈಪಲೈನ್ ಒಡೆದಿದ್ದಾರೆ. ಈ ಬಗ್ಗೆ ವಾಟರ್ ಮ್ಯಾನ್ ಅಬ್ದುಲ್ ಮುಲ್ಲಾ ಅವರು ಸಂಬಂಧಪಟ್ಟವರಿಗೆ ಮಾಹಿತಿ ನೀಡಿದರೂ, ಸಮಯಕ್ಕೆ ಸರಿಯಾಗಿ ಪೈಪ್‌ಲೈನ್ ದುರಸ್ತಿ ಮಾಡದೆ ಗ್ರಾಮಸ್ಥರ ಕುಡಿಯುವ ನೀರಿನ ಸಮಸ್ಯೆಗೆ ಕಾರಣರಾಗಿದ್ದಾರೆ ಎಂದು ಆರೋಪಿಸಿದರು.ಇಂಡಿ ತಾಲೂಕು ಉಪಾಧ್ಯಕ್ಷ ಪ್ರಕಾಶ ಪಾಟೀಲ ಮಾತನಾಡಿ, ಗುತ್ತಿಗೆದಾರರಿಗೆ ಎಷ್ಟೇ ಬಾರಿ ಕರೆ ಮಾಡಿದರೂ ಸ್ಪಂದನೆ ಇಲ್ಲದೆ,…
ಭೀಮ್ ಸರಕಾರ್ ಸಂಘಟನೆಯ ಸಂಸ್ಥಾಪಕ ಅಧ್ಯಕ್ಷ ಪರಶುರಾಮ ಚಲವಾದಿ ಒತ್ತಾಯ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಅಪಾಯಕರ ಮನರಂಜನಾ ಕ್ರೀಡೆಗಳಿಗೆ ಜಿಲ್ಲಾಡಳಿತವು ಕಡಿವಾಣ ಹಾಕಬೇಕೆಂದು ಆಗ್ರಹಿಸಿ ಭೀಮ್ ಸರಕಾರ ಸಂಘಟನೆ ಪದಾಧಿಕಾರಿಗಳು ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಮನವಿ ಸಲ್ಲಿಸಿದರು.ಈ ಸಂದರ್ಭದಲ್ಲಿ ಸಂಘಟನೆಯ ಸಂಸ್ಥಾಪಕ ಅಧ್ಯಕ್ಷ ಪರಶುರಾಮ ಚಲವಾದಿ ಮಾತನಾಡಿ, ನಗರದಲ್ಲಿ ಕಳೆದ ವರ್ಷ ಶ್ರೀ ಸಿದ್ದೇಶ್ವರ ಜಾತ್ರಾ ಮಹೋತ್ಸವದಲ್ಲಿ ಅನಧಿಕೃತ ಅಪಾಯಕರ ಕಾನೂನು ಬಾಹಿರ ಮನೋರಂಜನಾ ಆಟಗಳಿಗೆ ಜಿಲ್ಲಾಡಳಿತ ಪರವಾನಿಗೆ ನೀಡಿದ್ದಿರಿ. ಆ ಪ್ರಯುಕ್ತ ಉಲ್ಲೇಖ (೨) ರ ಪ್ರಕಾರ ನಮ್ಮ ಸಂಘಟನೆ ಪರವಾಗಿ ನ್ಯಾಯಾಲಯದ ಮೆಟ್ಟಲೇರಿದ್ದು ತಮಗೂ ತಿಳಿದ ವಿಷಯ, ಅದರಂತೆ ಈ ಮನೋರಂಜನಾ ಆಟಗಳಿಗೆ ಸಂಬಂಧಪಟ್ಟ ಎಲ್ಲ ಇಲಾಖೆಗಳಿಗೆ ಅರ್ಜಿ ಬರೆದು ಎನ್.ಓ.ಸಿ ನೀಡದಿರುವ ಬಗ್ಗೆ ಪತ್ರ ಪಡೆದುಕೊಂಡು ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಿದರೂ ಕೂಡಾ ಪರವಾನಿಗೆ ಇಲ್ಲದೆ ಮನೋರಂಜನೆ ಆಟಗಳನ್ನು ಆಡಿಸಲಾಯಿತು. ಈಗ ಮತ್ತೆ ಶ್ರೀ ಸಿದ್ದೇಶ್ವರ ಜಾತ್ರಾ ಮಹೋತ್ಸವ ಸಮೀಪಿಸಿದ್ದು ಮತ್ತೆ ಈ ಅಪಾಯಕರ ಕಾನೂನು ಬಾಹಿರ ಮನೋರಂಜನಾ…
ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಬಸವಣ್ಣನವರು ಜಾತಿ-ಲಿಂಗ ಬೇಧವಿಲ್ಲದ ಸಮಾಜ, ಸ್ತ್ರೀ ಸ್ವಾತಂತ್ರ್ಯ, ಸಮಾನತೆ, ಕಾಯಕವೇ ಕೈಲಾಸ, ದಾಸೋಹ ತತ್ವಗಳ ವಿಚಾರಧಾರೆಗಳು ಹಾಗೂ ಸಾಮಾಜಿಕ ಮೌಢ್ಯತೆಯನ್ನು ತೊಲಗಿಸಿಲು ಹೋರಾಡಿದ ಶ್ರೇಷ್ಠ ಸಂತ. ೧೨ ನೆಯ ಶತಮಾನದಲ್ಲಿ ಅನುಭವ ಮಂಟಪದ ಮೂಲಕ ಪ್ರಜಾಪ್ರಭುತ್ವದ ವ್ಯವಸ್ಥೆಯ ಮೂಲಕ ಎಲ್ಲ ಸಮುದಾಯದ ಶರಣರನ್ನು ಒಂದುಗೂಡಿಸಿ ಸಮ ಸಮಾಜದ ಹರಿಕಾರರಾಗಿದ್ದರು ಎಂದು ವಿಜಯಪುರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವಾಣಿಜ್ಯಶಾಸ್ತç ಪ್ರಾಧ್ಯಾಪಕ ಪ್ರೊ. ಎಂ.ಎಸ್.ಖೊದ್ನಾಪೂರ ಅವರು ಅಭಿಪ್ರಾಯಪಟ್ಟರು.ಅವರು ಮಹಾರಾಷ್ಟçದ ಸೋಲಾಪೂರದ ಅಹಲ್ಯಾಬಾಯಿ ಹೋಳ್ಕರ ಸೋಲಾಪೂರ ವಿಶ್ವವಿದ್ಯಾಲಯ ಹಾಗೂ ಸಂಗಮೇಶ್ವರ ಕಾಲೇಜ (ಸ್ವಾಯತ್ತ) ಇವುಗಳ ಸಹಯೋಗದಡಿಯಲ್ಲಿ “ಮಹಾತ್ಮಾ ಬಸವೇಶ್ವರ ವಿಚಾರಧಾರೆ ಮತ್ತು ಕಾರ್ಯಸಾಧನೆಗಳು” ವಿಷಯ ಕುರಿತ ಒಂದು ದಿನದ ರಾಷ್ಟ್ರೀಯ ವಿಚಾರ ಸಂಕೀರಣದದಲ್ಲಿ ಪ್ರಥಮ ಗೋಷ್ಠಿಯಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಮಾತನಾಡುತ್ತಿದ್ದರು.ಅವರು ಮಾತನಾಡುತ್ತಾ, ಬಸವಣ್ಣನವರು ಜಾತಿ, ಮತ, ಪಂಗಡ, ಧರ್ಮ, ಲಿಂಗ, ಬಡವ-ಬಲ್ಲಿದ ಯಾವುದೇ ಭೇದವಿಲ್ಲದೇ ಎಲ್ಲರೂ ಸಮಾನರು ಎಂಬ ಸಮಾನತೆಯ ಜತೆಗೆ “ವಸುದೈವ ಕುಟುಂಬಕಂ” ಎಂಬ ಸಮಷ್ಠಿಭಾವದ ವಿಶ್ವ ಮಾನವತೆಯ…
ಲೇಖನ- ವೀಣಾ ಹೇಮಂತ್ ಗೌಡ ಪಾಟೀಲ್ಮುಂಡರಗಿಗದಗ ಜಿಲ್ಲೆ ಉದಯರಶ್ಮಿ ದಿನಪತ್ರಿಕೆ ಯಾವುದೇ ಒಂದು ಸಸಿಯ ಚಿಗುರುವ ಭಾಗವನ್ನು ನಾವು ಕುಡಿ ಎಂದು ಕರೆಯುತ್ತೇವೆ. ಬೇರು ಸಸ್ಯಕ್ಕೆ ಮೂಲ ಆಧಾರವಾದರೆ ಕಾಂಡ ಎಲೆಗಳು ಅದರ ವಿಸ್ತರಿತ ಭಾಗವಾಗುತ್ತವೆ ಮತ್ತು ಕುಡಿ ಮುಂದಿನ ಭವಿಷ್ಯದಲ್ಲಿ ದೊಡ್ಡದಾಗುವ,ಹೆಮ್ಮರವಾಗುವ ಭಾಗವಾಗುತ್ತದೆ.ಅಂತೆಯೇ ಕುಟುಂಬದಲ್ಲಿ ಹಿರಿಯರು ಮೂಲ ಬೇರಾದರೆ ಅವರ ಮಕ್ಕಳು ಕಾಂಡ ಎಲೆ ಮುಂತಾದ ಸಸ್ಯದ ಭಾಗಗಳಾಗುತ್ತಾರೆ ಮನೆಯ ಮಕ್ಕಳು ಆ ಮನೆಯ ಭವಿಷ್ಯದ ಕುಡಿಗಳಾಗುತ್ತಾರೆ. ಇಂತಹ ಮನೆಯ ಮಕ್ಕಳು ತಮ್ಮ ಎಲ್ಲಾ ಅಣ್ಣ, ತಮ್ಮ, ಅಕ್ಕ, ತಂಗಿಯರೊಂದಿಗೆ ಉತ್ತಮವಾದ ಒಡನಾಟವನ್ನು ಇಟ್ಟುಕೊಂಡು ಬಾಳುವಂತೆ ನಾವು ಮಕ್ಕಳನ್ನು ಬೆಳೆಸಬೇಕು.ಮಕ್ಕಳಲ್ಲಿ ಅವರು ಹಾಗೆ ಇವರು ಹೀಗೆ ಎಂಬ ಪೂರ್ವಾಗ್ರಹಗಳನ್ನು ಬೆಳೆಸದೇ ಎಲ್ಲರೊಂದಿಗೆ ಪ್ರೀತಿ, ವಿಶ್ವಾಸ, ಸಹೃದಯತೆಯಿಂದ ಬದುಕುವಂತಹ ತಾಳ್ಮೆಯ ಸ್ವಭಾವವನ್ನು ನಿಧಾನವಾಗಿ ರೂಢಿಸಬೇಕು.ಒಂದೇ ಕುಟುಂಬದ ಎರಡನೇ ತಲೆಮಾರಿನ ಮಕ್ಕಳು ಮತ್ತು ಮೊಮ್ಮಕ್ಕಳಲ್ಲಿಯೂ ಕೂಡ ತಮ್ಮ ಹಿರಿಯರಲ್ಲಿ ಇದ್ದಂತಹ ಅನ್ಯೋನ್ಯತಾ ಭಾವ, ಪ್ರೀತಿ ವಿಶ್ವಾಸ ಇರಲಿ… ಹಾಗೆ ಇರುವಂತೆ ಮಕ್ಕಳನ್ನು ಬೆಳೆಸಬೇಕು.…
