ಝಳಕಿ ಗ್ರಾಮಸ್ಥರ ಕುಡಿಯುವ ನೀರಿಗೆ ಸಂಕಷ್ಟ | ರವಿಕುಮಾರ ಹೂಗಾರ ಆರೋಪ
ಉದಯರಶ್ಮಿ ದಿನಪತ್ರಿಕೆ
ಚಡಚಣ: ಜಲಧಾರೆ ಯೋಜನೆಯ ಉದ್ದೇಶ ಜನರ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸುವುದಾದರೂ, ಝಳಕಿ ಗ್ರಾಮದಲ್ಲಿ ನಡೆಯುತ್ತಿರುವ ಕಾಮಗಾರಿಯಿಂದಲೇ ಗ್ರಾಮಸ್ಥರಿಗೆ ನೀರಿನ ತೀವ್ರ ಸಮಸ್ಯೆ ಉಂಟಾಗಿದೆ ಎಂದು ಕರ್ನಾಟಕ ರಕ್ಷಣಾ ವೇದಿಕೆ ಝಳಕಿ ವಲಯದ ಅಧ್ಯಕ್ಷ ರವಿಕುಮಾರ ಹೂಗಾರ ಆರೋಪಿಸಿದ್ದಾರೆ.
ಅವರು ಪ್ರಕಟಣೆಯಲ್ಲಿ ತಿಳಿಸಿದಂತೆ, ಜಲಧಾರೆ ಯೋಜನೆಯ ಗುತ್ತಿಗೆದಾರ ರಘು ವಂಶಿ ಅವರು ಝಳಕಿ ಗ್ರಾಮದ ಜೆ.ಜೆ.ಎಂ. ಪೈಪ್‌ಲೈನ್ ಕಾಮಗಾರಿ ವೇಳೆ ಗ್ರಾಮದ ನಲ್ಲಿಯ ಪೈಪ್‌ಲೈನ್ ಅನ್ನು ಮೂರು–ನಾಲ್ಕು ಸ್ಥಳಗಳಲ್ಲಿ ನೀರು ಸೋರಿಕೆಯಾಗಿದ್ದು ಕಂಡುಬಂದಿದ್ದು ಅಲ್ಲಿ ಪೈಪಅಳವಡಿಸುವಾಗ ಪೈಪಲೈನ್ ಒಡೆದಿದ್ದಾರೆ. ಈ ಬಗ್ಗೆ ವಾಟರ್ ಮ್ಯಾನ್ ಅಬ್ದುಲ್ ಮುಲ್ಲಾ ಅವರು ಸಂಬಂಧಪಟ್ಟವರಿಗೆ ಮಾಹಿತಿ ನೀಡಿದರೂ, ಸಮಯಕ್ಕೆ ಸರಿಯಾಗಿ ಪೈಪ್‌ಲೈನ್ ದುರಸ್ತಿ ಮಾಡದೆ ಗ್ರಾಮಸ್ಥರ ಕುಡಿಯುವ ನೀರಿನ ಸಮಸ್ಯೆಗೆ ಕಾರಣರಾಗಿದ್ದಾರೆ ಎಂದು ಆರೋಪಿಸಿದರು.
ಇಂಡಿ ತಾಲೂಕು ಉಪಾಧ್ಯಕ್ಷ ಪ್ರಕಾಶ ಪಾಟೀಲ ಮಾತನಾಡಿ, ಗುತ್ತಿಗೆದಾರರಿಗೆ ಎಷ್ಟೇ ಬಾರಿ ಕರೆ ಮಾಡಿದರೂ ಸ್ಪಂದನೆ ಇಲ್ಲದೆ, ಕಾಮಗಾರಿ ಸರಿಯಾಗಿ ನಡೆಸದೇ ಅಸಭ್ಯ ವರ್ತನೆ ತೋರಿಸುತ್ತಿದ್ದಾರೆ, ಜಲಧಾರೆ ಯೋಜನೆಗೆ ಸಂಬಂಧಪಟ್ಟ ಮೇಲಧಿಕಾರಿಗಳು ತಕ್ಷಣವೇ ಗುತ್ತಿಗೆದಾರರ ವಿರುದ್ಧ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ಗ್ರಾಮಸ್ಥರೊಂದಿಗೆ ಸೇರಿ ಉಗ್ರ ಹೋರಾಟಕ್ಕೆ ಮುಂದಾಗಲಿದ್ದೆವೆ ಎಂದು ಇಂಡಿ ತಾಲೂಕು ಉಪಾಧ್ಯಕ್ಷ ಪ್ರಕಾಶ ಪಾಟೀಲ ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ಮುದಕಣ್ಣ ವಾಲಿಕಾರ ಸೇರಿದಂತೆ ಗ್ರಾಮಸ್ಥರು ಉಪಸ್ಥಿತರಿದ್ದರು.

