ಭೀಮ್ ಸರಕಾರ್ ಸಂಘಟನೆಯ ಸಂಸ್ಥಾಪಕ ಅಧ್ಯಕ್ಷ ಪರಶುರಾಮ ಚಲವಾದಿ ಒತ್ತಾಯ
ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಅಪಾಯಕರ ಮನರಂಜನಾ ಕ್ರೀಡೆಗಳಿಗೆ ಜಿಲ್ಲಾಡಳಿತವು ಕಡಿವಾಣ ಹಾಕಬೇಕೆಂದು ಆಗ್ರಹಿಸಿ ಭೀಮ್ ಸರಕಾರ ಸಂಘಟನೆ ಪದಾಧಿಕಾರಿಗಳು ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಸಂಘಟನೆಯ ಸಂಸ್ಥಾಪಕ ಅಧ್ಯಕ್ಷ ಪರಶುರಾಮ ಚಲವಾದಿ ಮಾತನಾಡಿ, ನಗರದಲ್ಲಿ ಕಳೆದ ವರ್ಷ ಶ್ರೀ ಸಿದ್ದೇಶ್ವರ ಜಾತ್ರಾ ಮಹೋತ್ಸವದಲ್ಲಿ ಅನಧಿಕೃತ ಅಪಾಯಕರ ಕಾನೂನು ಬಾಹಿರ ಮನೋರಂಜನಾ ಆಟಗಳಿಗೆ ಜಿಲ್ಲಾಡಳಿತ ಪರವಾನಿಗೆ ನೀಡಿದ್ದಿರಿ. ಆ ಪ್ರಯುಕ್ತ ಉಲ್ಲೇಖ (೨) ರ ಪ್ರಕಾರ ನಮ್ಮ ಸಂಘಟನೆ ಪರವಾಗಿ ನ್ಯಾಯಾಲಯದ ಮೆಟ್ಟಲೇರಿದ್ದು ತಮಗೂ ತಿಳಿದ ವಿಷಯ, ಅದರಂತೆ ಈ ಮನೋರಂಜನಾ ಆಟಗಳಿಗೆ ಸಂಬಂಧಪಟ್ಟ ಎಲ್ಲ ಇಲಾಖೆಗಳಿಗೆ ಅರ್ಜಿ ಬರೆದು ಎನ್.ಓ.ಸಿ ನೀಡದಿರುವ ಬಗ್ಗೆ ಪತ್ರ ಪಡೆದುಕೊಂಡು ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಿದರೂ ಕೂಡಾ ಪರವಾನಿಗೆ ಇಲ್ಲದೆ ಮನೋರಂಜನೆ ಆಟಗಳನ್ನು ಆಡಿಸಲಾಯಿತು. ಈಗ ಮತ್ತೆ ಶ್ರೀ ಸಿದ್ದೇಶ್ವರ ಜಾತ್ರಾ ಮಹೋತ್ಸವ ಸಮೀಪಿಸಿದ್ದು ಮತ್ತೆ ಈ ಅಪಾಯಕರ ಕಾನೂನು ಬಾಹಿರ ಮನೋರಂಜನಾ ಆಟಗಳನ್ನು ಹಾಕಲು ಸಿದ್ದತೆ ನಡೆದಿರುವುದು ಕಂಡು ಬಂದಿದೆ. ತಾವು ಕೂಡಲೆ ಸೂಕ್ತ ಕ್ರಮ ಕೈಗೊಂಡು ಈ ಅಪಾಯಕರ ಮನೋರಂಜನಾ ಆಟಗಳಿಗೆ ಪರವಾನಿಗೆ ನೀಡದೆ ಆರಂಭಿಸಿದಲ್ಲಿ ತಮ್ಮನೆ ತಪ್ಪಿಸ್ಥರು ಎಂದು ತಿಳಿದು ಉಗ್ರ ಹೋರಾಟವಲ್ಲದೆ ನ್ಯಾಯಾಲಯದಲ್ಲಿ ದಾವೆ ಹೂಡಿ ಕಾನೂನು ಕ್ರಮಕ್ಕೆ ಗುರಿ ಪಡಿಸಲಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಈ ವೇಳೆ ಭೀಮ್ ಸರಕಾರ ಸಂಘಟನಾ ಸಮಿತಿಯ ನಗರ ಅಧ್ಯಕ್ಷ ಸೋಮಶೇಖರ ಬಾ. ಶಹಾಪುರ, ಜಿಲ್ಲಾ ಕಾರ್ಯದರ್ಶಿ ಅನೀಲ ಬೋರಗಿ, ಶಂಕರ ಬಜಂತ್ರಿ, ಸುನೀಲ ಬೋರಗಿ, ಸುನೀಲ ಚಲವಾದಿ ಇದ್ದರು.

