Subscribe to Updates
Get the latest creative news from FooBar about art, design and business.
Author: editor.udayarashmi@gmail.com
ಏ.30ರಂದು ಮತದಾನ ಜಾಗೃತಿ ಕಾರ್ಯಕ್ರಮ ಯಶಸ್ವಿಗೊಳಿಸಲು ಜಿಲ್ಲಾಧಿಕಾರಿ ಡಾ.ವಿಜಯ ಮಹಾಂತೇಶ ಕರೆ ವಿಜಯಪುರ: ಏಪ್ರಿಲ್ 30 ರಂದು ರಾಷ್ಟ್ರೀಯ ಹಬ್ಬದ ಮಾದರಿಯಲ್ಲಿ ಜರುಗುವ “ನಮ್ಮ ನಡೆ ಮತಗಟ್ಟೆಯ ಕಡೆ” ಕಾರ್ಯಕ್ರಮದಲ್ಲಿ ಎಲ್ಲರೂ ಅತ್ಯುತ್ಸಾಹದಿಂದ ಭಾಗವಹಿಸಿ, ಕಾರ್ಯಕ್ರಮವನ್ನು ಅತ್ಯಂತ ಯಶಸ್ವಿಗೊಳಿಸುವುದರ ಜೊತೆಗೆ ಮತದಾರರಲ್ಲಿ ಮತದಾನ ಅರಿವು ಮೂಡಿಸಬೇಕೆಂದು ಜಿಲ್ಲಾ ಚುನಾವಣಾಧಿಕಾರಿಗಳು ಹಾಗೂ ಜಿಲ್ಲಾಧಿಕಾರಿಗಳಾದ ಡಾ.ವಿಜಯ ಮಹಾಂತೇಶ ದಾನಮ್ಮನವರ ಅವರು ಕರೆ ನೀಡಿದರು.ಶುಕ್ರವಾರ ಜಿಲ್ಲಾ ಪಂಚಾಯತಿ ಸಭಾ ಭವನದಲ್ಲಿ “ನಮ್ಮ ನಡೆ ಮತಗಟ್ಟೆಯ ಕಡೆ” ಕಾರ್ಯಕ್ರಮದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿದ್ದ ಅವರು ಈಗಾಗಲೇ ಮುಖ್ಯ ಚುನಾವಣಾಧಿಕಾರಿಗಳು ಈ ಕಾರ್ಯಕ್ರಮ ರೂಪರೇಷಗಳ ಕುರಿತು ಮಾರ್ಗಸೂಚಿಯಲ್ಲಿ ತಿಳಿಸಿದಂತೆ ಎಲ್ಲರೂ ಕಡ್ಡಾಯವಾಗಿ ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಬೇಕು ಎಂದು ಹೇಳಿದರು.ಜಿಲ್ಲೆಯ ಎಲ್ಲ ಮತಗಟ್ಟೆಗಳಲ್ಲಿ ಈ ಕಾರ್ಯಕ್ರಮವನ್ನು ಏಕಕಾಲಕ್ಕೆ ಹಮ್ಮಿಕೊಂಡಿದ್ದು, ಏಪ್ರಿಲ್ 30ರ ಬೆಳಿಗ್ಗೆ 8 ಗಂಟೆಯೊಳಗಾಗಿ ಸಂಬAಧಿಸಿದ ಅಧಿಕಾರಿಗಳು ತಮ್ಮ ವ್ಯಾಪ್ತಿಯ ಮತಗಟ್ಟೆಗಳಿಗೆ ತೆರಳಿ ಪೂರ್ವ ಸಿದ್ಧತೆ ಕೈಗೊಂಡು ನಿಯಮಾನುಸಾರ ಕಾರ್ಯಕ್ರಮ ಆಯೋಜಿಸಲು ಕ್ರಮವಹಿಸಬೇಕು. ಮತಗಟ್ಟೆ ಹಂತದಲ್ಲಿ ಮತಗಟ್ಟೆ…
ವಿಜಯಪುರ: ಪ್ರತಿಯೊಂದು ಮತ ಕೂಡ ಅಮೂಲ್ಯವಾಗಿವೆ. ನಗರದ ಸುರಕ್ಷತೆ ಹಾಗೂ ಅಭಿವೃದ್ಧಿ ಗಾಗಿ ಎಲ್ಲರೂ ಮತದಾನ ಮಾಡಬೇಕು ಎಂದು ಯುವ ನಾಯಕ ರಾಮನಗೌಡ ಬ ಪಾಟೀಲ ಯತ್ನಾಳ ಅವರು ಹೇಳಿದರು. ನಗರ ವಿಧಾನಸಭಾ ಮತಕ್ಷೇತ್ರ ವ್ಯಾಪ್ತಿಯ ವಾ.ನಂ.7ರ ಢೋರ ಗಲ್ಲಿಯಲ್ಲಿ ವೀರಶೈವ ಡೋರ ಕಕ್ಕಯ್ಯ ಸಮಾಜದ ಸಭೆ ಹಾಗೂ ಪಾದಯಾತ್ರೆ ಮೂಲಕ ಮತಯಾಚನೆ. ಕಲಾಲ ಗಲ್ಲಿ ಮತ್ತು ಅಗಸರ ಗಲ್ಲಿಯಲ್ಲಿ ಪಾದಯಾತ್ರೆ ಮೂಲಕ ಮತಯಾಚನೆ. ವಾ.ನಂ.31ರ ಅಜರೇಕರ ಚಾಳ, ಅಯೋಧ್ಯಾ ನಗರ, ಶಾಹುನಗರ, ತೆಗ್ಗಿನ ಹನುಮಾನ ಗುಡಿ, ಅಡಕಿ ಗಲ್ಲಿ, ಮಂಜಣ್ಣ ಗಲ್ಲಿಯಲ್ಲಿ ಪಾದಯಾತ್ರೆ ಮೂಲಕ ಮತಯಾಚನೆ ಮಾಡಿ ಅವರು ಮಾತನಾಡಿದರು. ಒಬ್ಬರು ಶಾಸಕರು ಹೇಗಿರಬೇಕು ಎಂಬುದು ತಂದೆಯ ಅಭಿವೃದ್ಧಿ ಕಾರ್ಯಗಳ ಮೂಲಕ ತಿಳಿದಿದೆ. ಬರೀ ಶಾಸಕರಾಗಿಯೇ ಇಷ್ಟೊಂದು ಒಳ್ಳೆಯ ಕೆಲಸ ಮಾಡಿದ್ದಾರೆಂದರೇ, ಮುಂದು ದೊಡ್ಡ ಹುದ್ದೆ ಸಿಗುವ ನಿರಿಕ್ಷೆಯಿದೆ. ಆಗ ನಗರ ಹಾಗೂ ಜಿಲ್ಲೆಯ ಚಿತ್ರಣ ಹೇಗೆ ಬದಲಾಗಬಹುದು ಯೋಚಿಸಿ, ತಂದೆಗೆ ಆಶೀರ್ವದಿಸಿ. ತಮ್ಮ ನಿರೀಕ್ಷೆ ಹುಸಿಯಾಗದಂತೆ ನಡೆದುಕೊಳ್ಳುತ್ತಾರೆ ಎಂದು…
ಇಂಡಿ: ಮೇ 3ರ ಸಾಯಂಕಾಲ 5:೦೦ ಗಂಟೆಗೆ ಪಟ್ಟಣದ ಸಿಂದಗಿ ರಸ್ತೆಯ ಧನಶೆಟ್ಟಿ ಮಂಗಲ ಕಾರ್ಯಾಲಯದಲ್ಲಿ ಗುರುವಂದನಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಇಂಡಿ ತಾಲೂಕು ಲಿಂಗಾಯತ ಪಂಚಮಸಾಲಿ ಸಮಾಜದ ಅಧ್ಯಕ್ಷ ವಿ.ಹೆಚ್. ಬಿರಾದಾರ, ಜಿಲ್ಲಾ ಪಂಚಮಸಾಲಿ ಯುವ ಘಟಕದ ಅಧ್ಯಕ್ಷ ಸೋಮಶೇಖರ ದೇವರ ತಿಳಿಸಿದರು.ಅವರು ಶುಕ್ರವಾರ ಪಟ್ಟಣದ ಶ್ರೀ ಶಾಂತೇಶ್ವರ ಸೌಹಾರ್ದ ಸಹಕಾರಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.ಪಂಚಮಸಾಲಿ ಸಮಾಜಕ್ಕೆ ಮೀಸಲಾತಿ ಸಿಗುವ ಸಲುವಾಗಿ ದಶಕಗಳ ಕಾಲ ಹೋರಾಟ ನಡೆಸಿದ ಜಯ ಮೃತ್ಯುಂಜಯ ಮಹಾಸ್ವಾಮೀಜಿಗಳಿಗೆ ಅಭಿನಂದಿಸುವ ನಿಟ್ಟಿನಲ್ಲಿ ಗುರುವಂದನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.ತಾಲೂಕಿನ ಪಂಚಮಸಾಲಿ ಸಮಾಜ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಗುರುಗಳಿಗೆ ಅಭಿನಂದನೆ ಸಲ್ಲಿಸಬೇಕೆಂದು ಅವರು ಮನವಿ ಮಾಡಿದರು.ಸುದ್ದಿಗೋಷ್ಠಿಯಲ್ಲಿ ಅನೀಲ ಏಳಗಿ, ಅನೀಲಗೌಡ ಪಾಟೀಲ್, ಶಿವಾನಂದ ಚಾಳೀಕಾರ್, ಬಾಳು ಮುಳಜಿ, ಶರಣು ಬಂಡಿ, ಶಾಂತುಗೌಡ ಬಿರಾದಾರ್, ಅಂಬೂರಾವ್ ಕವಟಗಿ, ಮಲ್ಲು ಚಾಕುಂಡಿ, ಅರವಿಂದ ಪಾಟೀಲ್, ಶ್ರೀಶೈಲಗೌಡ ಬಿರಾದಾರ ಸೇರಿದಂತೆ ಇನ್ನಿತರರು ಇದ್ದರು.
ಮೇ.27-28 ರಂದು ವಿಜಯಪುರದಲ್ಲಿ ರಾಜ್ಯಮಟ್ಟದ ೯ನೇ ಮೇ ಸಾಹಿತ್ಯ ಮೇಳ ವಿಜಯಪುರ: ಬಹುರಾಷ್ಟ್ರೀಯ ಕಂಪನಿಗಳ ಹಿತಾಸಕ್ತಿಗಳಿಗನುಗುಣವಾಗಿ ಇಂದು ಸಾಹಿತ್ಯ ರಚನೆ ಹಾಗೂ ಪ್ರಚಾರಗಳು ಆಗುತ್ತಿದೆ. ಸಾಹಿತ್ಯವನ್ನು ಜನತೆಯಿಂದ ದೂರ ಮಾಡಿ ಕಾರ್ಪೋರೇಟಿಕರಣಗೊಳಿಸುವ ಕೆಲಸ ನಡೆಯುತ್ತಿದೆ. ಆ ಮೂಲಕ ಕನ್ನಡ ಸಾಹಿತ್ಯವನ್ನು ಬೂಸಾದ ಕಡೆ ಹೊರಳಿಸುವ ಪ್ರಯತ್ನ ವ್ಯಾಪಕವಾಗಿ ನಡೆಯುತ್ತಿದೆ ಎಂದು ಲಡಾಯಿ ಪ್ರಕಾಶನದ ಪ್ರಕಾಶಕರಾದ ಬಸವರಾಜ ಸೂಳಿಬಾವಿ ವಿಷಾದಿಸಿದರು.ಶುಕ್ರವಾರ ನಗರದ ಬುದ್ಧವಿಹಾರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ನಮ್ಮ ಕನ್ನಡ ಸಾಹಿತ್ಯ ಪರಂಪರೆ ಜನಮುಖಿ, ಜನತೆಗೋಸ್ಕಕರ ಸಾಹಿತ್ಯ ಪರಂಪರೆಯನ್ನು ಮರುಕಳುಸುವ ಉದ್ದೇಶವನ್ನು ಹೊಂದಿ ಲಡಾಯಿ ಪ್ರಕಾಶನ ಗದಗ, ಕವಿ ಪ್ರಕಾಶನ, ಕವಲಕ್ಕಿ ಚಿತ್ತಾರ ಕಲಾ ಬಳಗ ಧಾರವಾಡ, ಮೇ ಸಾಹಿತ್ಯ ಮೇಳ ಬಳಗ ವಿಜಯಪುರದ ವತಿಯಿಂದ ಮೇ 27, 28 ರಂದು ನಗರದ ಕಂದಗಲ್ಲ ಹನುಮಂತಾಯ ರಂಗಮAದಿರದಲ್ಲಿ ರಾಷ್ಟ್ರ ಮಟ್ಟದ ಚಿಂತಕರು ಪ್ರತಿನಿಧಿಗಳು ಸೇರಿದಂತೆ ರಾಜ್ಯದ ಸಾಹಿತಿಗಳು ಚಿಂತಕರು ಪ್ರತಿನಿಧಿಗಳು ಭಾಗವಹಿಸುವ ೯ನೇ ಮೇ ಸಾಹಿತ್ಯ ಮೇಳವನ್ನು ಆಯೋಜಿಸಲಾಗಿದೆ ಎಂದು ಅವರು…
ದೇವರಹಿಪ್ಪರಗಿ: ನಾಡಿನ ಜನತೆಗೆ ಹಲವು ಭಾಗ್ಯಗಳನ್ನು ನೀಡಿ ಅಭಿವೃದ್ಧಿಗೆ ಶ್ರಮಿಸಿದ ಕಾಂಗ್ರೆಸ್ ಪಕ್ಷಕ್ಕೆ ನಿಮ್ಮ ಮತ ಮೀಸಲಾಗಿರಲಿ ಎಂದು ದೇವರಹಿಪ್ಪರಗಿ ಮತಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಶರಣಪ್ಪ ಸುಣಗಾರ ಹೇಳಿದರು.ತಾಲ್ಲೂಕಿನ ಹಿಟ್ನಳ್ಳಿ, ಗಂಗನಳ್ಳಿ, ಚಿಕ್ಕರೂಗಿ, ಕಡ್ಲೇವಾಡ ಪಿಸಿಎಚ್ ಗ್ರಾಮಗಳಲ್ಲಿ ಶುಕ್ರವಾರ ಚುನಾವಣಾ ಪ್ರಚಾರ ಕೈಗೊಂಡು ಮಾತನಾಡಿದರು.ಮತದಾರರೇ ನೀವು ಜೆಡಿಎಸ್ ಪಕ್ಷಕ್ಕೆ ನೀಡುವ ಮತ ಬಿಜೆಪಿ ಪಕ್ಷಕ್ಕೆ ನೀಡಿದಂತೆ ಬಿಜೆಪಿ ಹಾಗೂ ಜೆಡಿಎಸ್ ಒಂದೇ ನಾಣ್ಯದ ಎರಡು ಮುಖಗಳು. ಹಿಂದೆ ಜೆಡಿಎಸ್ ಆಡಳಿತವನ್ನು ನೋಡಿದ್ದೀರಿ. ಈಗ ಬಿಜೆಪಿಯ ಭ್ರಷ್ಟ ಆಡಳಿತವನ್ನು ಕಾಣುತ್ತಿದ್ದೀರಿ, ಇವೆರಡರ ಆಡಳಿತ ನೋಡಿದಾಗ ಹಲವು ಭಾಗ್ಯಗಳನ್ನು ನೀಡಿದ ಕಾಂಗ್ರೆಸ್ ಪಕ್ಷವೇ ಉತ್ತಮವೆನಿಸುತ್ತದೆ. ಆದ್ದರಿಂದ ಸಿದ್ರಾಮಯ್ಯ ನೇತೃತ್ವದಲ್ಲಿನ ಹಿಂದಿನ ಕಾಂಗ್ರೆಸ್ ಸರ್ಕಾರ ನೀಡಿದ ಜನಪರ ಆಡಳಿತವನ್ನು ಅವಲೋಕಿಸಿ ಪಕ್ಷಕ್ಕೆ ಮತ ನೀಡಬೇಕು. ಕಾಂಗ್ರೆಸ್ ಪಕ್ಷ ಎಂದಿಗೂ ಸುಭದ್ರ ಸರ್ಕಾರವನ್ನೇ ನೀಡಿದೆ. ಆದ್ದರಿಂದ ನಿಮ್ಮೇಲ್ಲರ ಮೊದಲ ಪ್ರಾಶಸ್ತö್ಯ ಕಾಂಗ್ರೆಸ್ ಪಕ್ಷಕ್ಕೆ ಇರಲಿ ಎಂದರು.ಕೆಪಿಸಿಸಿ ಸದಸ್ಯ ಬಿ.ಎಸ್.ಪಾಟೀಲ(ಯಾಳಗಿ), ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಶೀರ್ ಅಹ್ಮದ್ ಬೇಪಾರಿ,…
ಕೊಲ್ಹಾರ: ಶಾಸಕ ಶಿವಾನಂದ ಪಾಟೀಲರ ಅಭಿವೃದ್ದಿ ಕೆಲಸಗಳನ್ನು ನೋಡಿ, ಚುನಾಯಿತ ಜನಪ್ರತಿನಿಧಿಗಳಿಗೆ ಅವರು ತೋರಿಸುವ ಗೌರವವನ್ನು ಮೆಚ್ಚಿ ನಾನು ನನ್ನ ಸ್ವ ಇಚ್ಚೆಯಿಂದ ಎಐಎಮ್‌ಐಎಮ್ ಪಕ್ಷವನ್ನು ತೊರೆದು ಕಾಂಗ್ರೆಸ್ ಪಕ್ಷವನ್ನು ಸೇರಿಕೊಂಡಿದ್ದೇನೆ ಎಂದು ಪಟ್ಟಣ ಪಂಚಾಯತಿಯ ಸದಸ್ಯ ತೌಶಿಪ್ ಗಿರಗಾಂವಿ ಹೇಳಿದರು.ಮನಗೂಳಿಯಲ್ಲಿ ಶಾಸಕ ಶಿವಾನಂದ ಪಾಟೀಲರ ಸಮ್ಮುಖದಲ್ಲಿ ಕಾಂಗ್ರೆಸ್ ಪಕ್ಷವನ್ನು ಸೇರ್ಪಡೆಗೊಂಡ ನಂತರ ಪಟ್ಟಣದ ಪತ್ರಿಕಾ ಪ್ರತಿನಿಧಿಯೊಂದಿಗೆ ದೂರವಾಣಿ ಮೂಲಕ ಮಾತನಾಡಿ ಅಭಿಪ್ರಾಯ ತಿಳಿಸಿದ ಅವರು, ಜನಪರ ಕಾಳಜಿವುಳ್ಳ ಶಾಸಕರು ಕೊಲ್ಹಾರ ಪಟ್ಟಣವನ್ನು ಅಭಿವೃದ್ದಿ ಮಾಡುತ್ತಿರುವದು ನನಗೆ ಅತೀವ ಸಂತಸ ತಂದಿದ್ದು ನಾನು ಪ್ರತಿನಿಧಿಸುವ ವಾರ್ಡ ಕೂಡ ಮಾದರಿಯ ಕ್ಷೇತ್ರವನ್ನಾಗಿ ಮಾಡಲು ಪಣತೊಟ್ಟಿದ್ದು ಈ ದಿಸೆಯಲ್ಲಿ ಪಕ್ಷವನ್ನು ತೊರೆದಿದ್ದೇನೆ ವಿನಹ ಯಾವುದೇ ಸ್ವಾರ್ಥ ಮನೋಭಾವನೆಯಿಂದ ಅಲ್ಲ ಎಂದು ಹೇಳಿದರು.ಕೊಲ್ಹಾರ ಪಟ್ಟಣ ಪಂಚಾಯತಿಯಲ್ಲಿ ಎಐಎಮ್‌ಐಎಮ್ ಪಕ್ಷವನ್ನು ಪ್ರತಿನಿಧಿಸಿದ್ದ ಇನ್ನೋರ್ವ ಸದಸ್ಯೆ ಶ್ರೀಮತಿ ಅಕೀರಾ ಅನ್ವರ ಕಂಕರಪೀರ ಅವರ ಪತಿ ಅನ್ವರ ಅವರು ಕೂಡ ಪಕ್ಷವನ್ನು ತೊರೆದು ಕಾಂಗ್ರೆಸ್ ಪಕ್ಷವನ್ನು ಸೇರ್ಪಡೆಗೊಂಡರು. ಈ ಸಂದರ್ಬದಲ್ಲಿ…
ಕೊಲ್ಹಾರ: ಪಟ್ಟಣದ ಜನತೆ ಕಳೆದ ೧೦ ವರ್ಷಗಳಿಂದ ರಾಜಕೀಯ ಬಲವಿಲ್ಲದೇ ಅಭಿವೃದ್ದಿಯಿಂದ ಕುಂಟಿತವಾಗಿದ್ದು ಅದನ್ನು ಹೋಗಲಾಡಿಸಬೇಕಾದರೆ ಜನಪರ ಹೋರಾಟಗಾರ, ಜನರಿಗೆ ಹತ್ತಿರದಲ್ಲಿಯೇ ಸಿಗುವ, ಸರ್ವ ಜನರ ಶ್ರೇಯೋಭಿವೃದ್ದಿಗಾಗಿ ಶ್ರಮಿಸುವ ಸಂಗಣ್ಣ ಬೆಳ್ಳುಬ್ಬಿಯವರನ್ನು ಮೇ ೧೦ರಂದು ನಡೆಯುವ ಮತದಾನದಲ್ಲಿ ಬಿಜೆಪಿ ಗುರುತಿಗೆ ಮತಹಾಕಿ ಗೆಲ್ಲಿಸಬೇಕೆಂದು ಚಂದ್ರಶೇಖರಯ್ಯ ಗಣಕುಮಾರ ಮತದಾರರಲ್ಲಿ ಮನವಿ ಮಾಡಿದರು.ಪಟ್ಟಣದ ಶಿವಾಜಿ ಕಾಲೋಣಿಯಲ್ಲಿ ಕಟಬರ (ಮರಾಠಾ) ಸಮಾಜದ ಬಾಂಧವರು ಏರ್ಪಡಿಸಿದ್ದ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು ಈಗಿರುವ ಶಾಸಕರ ಬೇಟಿಗೆ ಹೋಗಬೇಕಾದರೆ ಸರತಿ ಸಾಲಿನಲ್ಲಿ ನಿಲ್ಲಬೇಕು. ಸಂಗಣ್ಣ ಬೆಳ್ಳುಬ್ಬಿಯವರು ಶಾಸಕರಾದರೆ ನೇರವಾಗಿ ಬೆಟ್ಟಿಯಾಗಿ ನಮ್ಮಗಳ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಲು ಸಾಧ್ಯವಾಗುತ್ತದೆ. ಆದ್ದರಿಂದ ಅವರ ಜಯಕ್ಕಾಗಿ ಪ್ರತಿಯೊಬ್ಬರು ಶ್ರಮಿಸೋಣ ಎಂದರು.ಬಸವನ ಬಾಗೇವಾಡಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಸಂಗಣ್ಣ ಕ ಬೆಳ್ಳುಬ್ಬಿ ಮಾತನಾಡಿ, ಕೊಲ್ಹಾರ ಊರಿನ ಪ್ರತಿಯೊಬ್ಬರು ತಾವುಗಳೇ ನರೆಂದ್ರ ಮೋದಿಯಾಗಿ, ಅಮಿತ್ ಷಾ ಆಗಿ, ಯಡೆಯೂರಪ್ಪನವರಾಗಿ, ಬಸವರಾಜ ಬೊಮ್ಮಾಯಿಯವರಾಗಿ, ಪ್ರತಿಯೊಂದು ಬೂತ್ ಮಟ್ಟದಲ್ಲಿ ಶ್ರದ್ದೆಯಿಂದ ಕೆಲಸ ಮಾಡಿ ಈ ಬಾರಿ ಚುನಾವಣೆಯಲ್ಲಿ ಗೆಲ್ಲಿಸಬೇಕೆಂದು…
ಲೋಣಿ: ಗ್ರಾಮದ ಸಮಗ್ರ ಅಭಿವೃದ್ಧಿಗೆ ನಾನು ಬದ್ಧ ಎಂದು ನಾಗಠಾಣ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ವಿಠ್ಠಲ ಕಟಕದೊಂಡ ಭರವಸೆ ನೀಡಿದರು.ಗ್ರಾಮದಲ್ಲಿ ನಡೆದ ಪ್ರಚಾರ ಸಭೆಯಲ್ಲಿ ಮಾತನಾಡಿ, ಊರಿನ ಮೇಲ್ಭಾಗದ ನೀರಾವರಿ, ರಸ್ತೆ, ಶೌಚಾಲಯ ಸೇರಿ ಎಲ್ಲ ಕೆಲಸ ಮಾಡುವೆ. ನೀವಿಟ್ಟ ನಂಬಿಕೆಯನ್ನು ಉಳಿಸುವೆ. ಕಳೆದ ಸಲ ಶಾಸಕನಾಗಿದ್ದಾಗ ಈ ಗ್ರಾಮಕ್ಕೆ ಅನೇಕ ಕೆಲಸ ಮಾಡಿದ್ದೇನೆ, ಅವೆಲ್ಲ ಮುಂದುವರಿಸುವೆ. ನಾಗಠಾಣವನ್ನು ಮಾದರಿ ಕ್ಷೇತ್ರವಾಗಿಸುವೆ ಎಂದು ಹೇಳಿದರು.ಚಡಚಣ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಆರ್.ಡಿ. ಹಕ್ಕಿ ಮಾತನಾಡಿ, ಒಂದು ಕಾಯಿಪಲ್ಯ ತಗೋಬೇಕಾದರೆ ಬಜಾರೆಲ್ಲ ತಿರುಗಾಡುವ ನಾವು ಒಬ್ಬ ಶಾಸಕನನ್ನು ಆರಿಸಲು ಅಲಕ್ಷ ಮಾಡಬಾರದು. ಕಾಕಾ.. ಬಾಬಾ ಎಂದು ಬರುವ ರಮೇಶ ಜಿಗಜಿಣಗಿಗೆ ಅವಕಾಶ ಕೊಡಬೇಡಿ. ನಲವತ್ತು ವರ್ಷ ಈ ಕ್ಷೇತ್ರ ಪ್ರತಿನಿಧಿಸಿದರೂ ಏನೂ ಮಾಡಿಲ್ಲ. ಕಾಂಗ್ರೆಸ್‌ನ ಕಟಕದೊಂಡರಿಗೆ ಮತ ನೀಡಿದರೆ ಉತ್ತಮ ಎಂದರು.ಮುಖಂಡರಾದ ಬಿ.ಎಮ್. ಕೋರೆ, ಗೌಡೇಶಗೌಡ ಪಾಟೀಲ, ಕಾಮೇಶ ಪಾಟೀಲ, ಬಸು ಬಿರಾದಾರ, ಸತೀಶ ಮೋರಟಗಿ, ಮಲ್ಲು, ವಿಜಯ ದರೋರೆ, ಸಾಹೇಬಗೌಡ ಬಿರಾದಾರ, ರವಿ…
ವಿಜಯಪುರ: ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ. ಬಿ. ಪಾಟೀಲರು ಚುನಾವಣೆಯಲ್ಲಿ 50 ಸಾವಿರಕ್ಕೂ ಹೆಚ್ಚು ಮತಗಳ ಅಂತರದಿಂದ ಜಯಗಳಿಸಲಿ ಎಂದು ಪ್ರಾರ್ಥಿಸಿ ಯುವಕನೋರ್ವ ವಿಜಯಪುರದಿಂದ ತಿಕೋಟಾ ಹಾಜಿಮಸ್ತಾನ ದರ್ಗಾವರೆಗೆ ಪಾದಯಾತ್ರೆ ಕೈಗೊಂಡು ಗಮನ ಸೆಳೆದಿದ್ದಾನೆ. ವಿಜಯಪುರ ನಗರದ ಸಕಾಫ್ ರೋಜಾ ನಿವಾಸಿ ಸಮೀರ ಜಾಗೀರದಾರ(36) ಗ್ಯಾರೇಜ್ ನಡೆಸುತ್ತಿದ್ದಾರೆ. ಎಂ. ಬಿ. ಪಾಟೀಲ ಅವರ ಕಟ್ಟಾ ಅಭಿಮಾನಿಯಾಗಿರುವ ಅವರು ವಿಜಯಪುರ ನಗರದ ಜೋಡ ಗುಮ್ಮಟದಿಂದ ತಿಕೋಟಾ ಹಾಜಿಮಸ್ತಾನ ದರ್ಗಾವರೆಗೆ ಪಾದಯಾತ್ರೆ ನಡೆಸಿದ್ದಾರೆ. ಈ ವಿಷಯ ತಿಳಿದು ದರ್ಗಾಕ್ಕೆ ಆಗಮಿಸಿದ ಎಂ. ಬಿ. ಪಾಟೀಲರು ಅಭಿಮಾನಿಯ ಪ್ರೀತಿಗೆ ಮೆಚ್ಚುಗೆ ವ್ಯಕ್ತಪಡಿಸಿ ಶುಭ ಕೋರಿದರು. ಈ ಸಂದರ್ಭದಲ್ಲಿ ವಿಜಯಪುರ ಮಾಜಿ ಮೇಹರ ಸಜ್ಜಾದೆ ಪೀರಾ ಮುಶ್ರೀಫ್, ಶಕೀಲ ಸುತಾರ ಮುಂತಾದವರು ಉಪಸ್ಥಿತರಿದ್ದರು ಉಪಸ್ಥಿತರಿದ್ದರು. ಈ ಕುರಿತು ಪ್ರತಿಕ್ರಿಯೆ ನೀಡಿದ ಸಮೀರ ಜಾಗೀರದಾರ, ಜೀವನದಲ್ಲಿ ನೀರು ಮತ್ತು ಅನ್ನ ಸಕಲ ಜೀವಿಗಳಿಗೂ ಅಗತ್ಯವಾಗಿದೆ. ಎಂ. ಬಿ. ಪಾಟೀಲರು ನಮಗೆಲ್ಲರಿಗೂ ನೀರು ಕೊಡುವ ಕೆಲಸ ಮಾಡಿದ್ದಾರೆ. ದೂರದಿಂದ…
ವಿಜಯಪುರ: ಮತ ಹಾಕುವಾಗ ಜಾತಿ ನೋಡಬಾರದು. ಅಭಿವೃದ್ಧಿ ಮಾಡುವ ಅಭ್ಯರ್ಥಿಯನ್ನು ನೋಡಿ ವೋಟ್ ಹಾಕಬೇಕು ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಕಾಂತಾ ನಾಯಕ ಹೇಳಿದರು. ನಾಗಠಾಣ ಮತಕ್ಷೇತ್ರದ ಕನ್ನೂರ ಗ್ರಾಮದಲ್ಲಿ ಕೆ.ಪಿ.ಸಿ.ಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ. ಬಿ. ಪಾಟೀಲ ಅವರು ಕಾಂಗ್ರೆಸ್ ಅಭ್ಯರ್ಥಿ ವಿಠ್ಠಲ ಧೋಂಡಿಬಾ ಕಟಕದೊಂಡ ಪರ ಕೈಗೊಂಡ ಪ್ರಚಾರ ಸಭೆಯಲ್ಲಿ ಅವರು ಮಾತನಾಡಿದರು. ಬಿಜೆಪಿ ಭ್ರಷ್ಟಾಚಾರದಲ್ಲಿ ಮತ್ತು ಜೆಡಿಎಸ್ ಜಾತಿ ರಾಜಕಾರಣದಲ್ಲಿ ನಿರತವಾಗಿವೆ. ಜನಪ್ರತಿನಿಧಿಗಳು ಕೇವಲ ಶುಭ ಮತ್ತು ಅಶುಭ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡರೆ ಸಾಲದು. ಅಭಿವೃದ್ಧಿ ಕೆಲಸಗಳನ್ನೂ ಮಾಡಬೇಕು. ಆದರೆ, ನಾಗಠಾಣ ಮತಕ್ಷೇತ್ರದಲ್ಲಿ ಯಾವುದೇ ಅಭಿವೃದ್ಧಿಯಾಗಿಲ್ಲ ಎಂದು ಹೇಳಿದರು. ಕೆ.ಪಿ.ಸಿ.ಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ. ಬಿ. ಪಾಟೀಲ ಮಾತನಾಡಿ, ಅಚ್ಛೇ ದಿನ್ ಹೆಸರಲ್ಲಿ ದೇಶ ಮತ್ತು ರಾಜ್ಯದ ಪರಿಸ್ಥಿತಿ ಹಾಳಾಗಿದೆ. ನೀವು ಬಿಜೆಪಿಗೆ ಮತ ಹಾಕಿದರೆ ಯಾವುದೇ ಪ್ರಯೋಜನವಿಲ್ಲ ಎಂದು ಹೇಳಿದರು. ಕನ್ನೂರು ಗ್ರಾಮ ನನಗೆ ಚಿರಪರಿಚಿತ. ಕ್ಷೇತ್ರಗಳ ಪುನರ್ವಿಂಗಡಣೆಗೂ ಮುಂಚೆ ನಮ್ಮ ಮತಕ್ಷೇತ್ರದ ವ್ಯಾಪ್ತಿಯಲ್ಲಿ…
