ಕೊಲ್ಹಾರ: ಶಾಸಕ ಶಿವಾನಂದ ಪಾಟೀಲರ ಅಭಿವೃದ್ದಿ ಕೆಲಸಗಳನ್ನು ನೋಡಿ, ಚುನಾಯಿತ ಜನಪ್ರತಿನಿಧಿಗಳಿಗೆ ಅವರು ತೋರಿಸುವ ಗೌರವವನ್ನು ಮೆಚ್ಚಿ ನಾನು ನನ್ನ ಸ್ವ ಇಚ್ಚೆಯಿಂದ ಎಐಎಮ್‌ಐಎಮ್ ಪಕ್ಷವನ್ನು ತೊರೆದು ಕಾಂಗ್ರೆಸ್ ಪಕ್ಷವನ್ನು ಸೇರಿಕೊಂಡಿದ್ದೇನೆ ಎಂದು ಪಟ್ಟಣ ಪಂಚಾಯತಿಯ ಸದಸ್ಯ ತೌಶಿಪ್ ಗಿರಗಾಂವಿ ಹೇಳಿದರು.
ಮನಗೂಳಿಯಲ್ಲಿ ಶಾಸಕ ಶಿವಾನಂದ ಪಾಟೀಲರ ಸಮ್ಮುಖದಲ್ಲಿ ಕಾಂಗ್ರೆಸ್ ಪಕ್ಷವನ್ನು ಸೇರ್ಪಡೆಗೊಂಡ ನಂತರ ಪಟ್ಟಣದ ಪತ್ರಿಕಾ ಪ್ರತಿನಿಧಿಯೊಂದಿಗೆ ದೂರವಾಣಿ ಮೂಲಕ ಮಾತನಾಡಿ ಅಭಿಪ್ರಾಯ ತಿಳಿಸಿದ ಅವರು, ಜನಪರ ಕಾಳಜಿವುಳ್ಳ ಶಾಸಕರು ಕೊಲ್ಹಾರ ಪಟ್ಟಣವನ್ನು ಅಭಿವೃದ್ದಿ ಮಾಡುತ್ತಿರುವದು ನನಗೆ ಅತೀವ ಸಂತಸ ತಂದಿದ್ದು ನಾನು ಪ್ರತಿನಿಧಿಸುವ ವಾರ್ಡ ಕೂಡ ಮಾದರಿಯ ಕ್ಷೇತ್ರವನ್ನಾಗಿ ಮಾಡಲು ಪಣತೊಟ್ಟಿದ್ದು ಈ ದಿಸೆಯಲ್ಲಿ ಪಕ್ಷವನ್ನು ತೊರೆದಿದ್ದೇನೆ ವಿನಹ ಯಾವುದೇ ಸ್ವಾರ್ಥ ಮನೋಭಾವನೆಯಿಂದ ಅಲ್ಲ ಎಂದು ಹೇಳಿದರು.
ಕೊಲ್ಹಾರ ಪಟ್ಟಣ ಪಂಚಾಯತಿಯಲ್ಲಿ ಎಐಎಮ್‌ಐಎಮ್ ಪಕ್ಷವನ್ನು ಪ್ರತಿನಿಧಿಸಿದ್ದ ಇನ್ನೋರ್ವ ಸದಸ್ಯೆ ಶ್ರೀಮತಿ ಅಕೀರಾ ಅನ್ವರ ಕಂಕರಪೀರ ಅವರ ಪತಿ ಅನ್ವರ ಅವರು ಕೂಡ ಪಕ್ಷವನ್ನು ತೊರೆದು ಕಾಂಗ್ರೆಸ್ ಪಕ್ಷವನ್ನು ಸೇರ್ಪಡೆಗೊಂಡರು. ಈ ಸಂದರ್ಬದಲ್ಲಿ ಶಾಸಕ ಶಿವಾನಂದ ಪಾಟೀಲ, ಕಲ್ಲು ದೇಸಾಯಿ, ಪಟ್ಟಣ ಪಂಚಾಯತ ಹಿರಿಯ ಸದಸ್ಯ ಚನಮಲ್ಲಪ್ಪ ಗಿಡ್ಡಪ್ಪಗೋಳ, ಅಲ್ತಾಪ ಜಮಾದಾರ, ರಫೀಕ ಮನ್ನಾಬಾಯಿ, ರಾಜು ಶಿರೂರ ಉಪಸ್ಥಿತರಿದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment