ಲೋಣಿ: ಗ್ರಾಮದ ಸಮಗ್ರ ಅಭಿವೃದ್ಧಿಗೆ ನಾನು ಬದ್ಧ ಎಂದು ನಾಗಠಾಣ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ವಿಠ್ಠಲ ಕಟಕದೊಂಡ ಭರವಸೆ ನೀಡಿದರು.
ಗ್ರಾಮದಲ್ಲಿ ನಡೆದ ಪ್ರಚಾರ ಸಭೆಯಲ್ಲಿ ಮಾತನಾಡಿ, ಊರಿನ ಮೇಲ್ಭಾಗದ ನೀರಾವರಿ, ರಸ್ತೆ, ಶೌಚಾಲಯ ಸೇರಿ ಎಲ್ಲ ಕೆಲಸ ಮಾಡುವೆ. ನೀವಿಟ್ಟ ನಂಬಿಕೆಯನ್ನು ಉಳಿಸುವೆ. ಕಳೆದ ಸಲ ಶಾಸಕನಾಗಿದ್ದಾಗ ಈ ಗ್ರಾಮಕ್ಕೆ ಅನೇಕ ಕೆಲಸ ಮಾಡಿದ್ದೇನೆ, ಅವೆಲ್ಲ ಮುಂದುವರಿಸುವೆ. ನಾಗಠಾಣವನ್ನು ಮಾದರಿ ಕ್ಷೇತ್ರವಾಗಿಸುವೆ ಎಂದು ಹೇಳಿದರು.
ಚಡಚಣ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಆರ್.ಡಿ. ಹಕ್ಕಿ ಮಾತನಾಡಿ, ಒಂದು ಕಾಯಿಪಲ್ಯ ತಗೋಬೇಕಾದರೆ ಬಜಾರೆಲ್ಲ ತಿರುಗಾಡುವ ನಾವು ಒಬ್ಬ ಶಾಸಕನನ್ನು ಆರಿಸಲು ಅಲಕ್ಷ ಮಾಡಬಾರದು. ಕಾಕಾ.. ಬಾಬಾ ಎಂದು ಬರುವ ರಮೇಶ ಜಿಗಜಿಣಗಿಗೆ ಅವಕಾಶ ಕೊಡಬೇಡಿ. ನಲವತ್ತು ವರ್ಷ ಈ ಕ್ಷೇತ್ರ ಪ್ರತಿನಿಧಿಸಿದರೂ ಏನೂ ಮಾಡಿಲ್ಲ. ಕಾಂಗ್ರೆಸ್‌ನ ಕಟಕದೊಂಡರಿಗೆ ಮತ ನೀಡಿದರೆ ಉತ್ತಮ ಎಂದರು.
ಮುಖಂಡರಾದ ಬಿ.ಎಮ್. ಕೋರೆ, ಗೌಡೇಶಗೌಡ ಪಾಟೀಲ, ಕಾಮೇಶ ಪಾಟೀಲ, ಬಸು ಬಿರಾದಾರ, ಸತೀಶ ಮೋರಟಗಿ, ಮಲ್ಲು, ವಿಜಯ ದರೋರೆ, ಸಾಹೇಬಗೌಡ ಬಿರಾದಾರ, ರವಿ ಬಿರಾದಾರ, ದಿಲ್‌ದಾರ ಮುಲ್ಲಾ, ಮಲ್ಲು ಬಂಟನೂರ, ಕೊಟ್ರೇಶ ಅನೇಕರಿದ್ದರು. ಸತೀಶ ಹುಟಗಿ ನಿರೂಪಿಸಿದರು.
Subscribe to Updates
Get the latest creative news from FooBar about art, design and business.
Related Posts
Add A Comment