ವಿಜಯಪುರ: ಪ್ರತಿಯೊಂದು ಮತ ಕೂಡ ಅಮೂಲ್ಯವಾಗಿವೆ. ನಗರದ ಸುರಕ್ಷತೆ ಹಾಗೂ ಅಭಿವೃದ್ಧಿ ಗಾಗಿ ಎಲ್ಲರೂ ಮತದಾನ ಮಾಡಬೇಕು ಎಂದು ಯುವ ನಾಯಕ ರಾಮನಗೌಡ ಬ ಪಾಟೀಲ ಯತ್ನಾಳ ಅವರು ಹೇಳಿದರು.
ನಗರ ವಿಧಾನಸಭಾ ಮತಕ್ಷೇತ್ರ ವ್ಯಾಪ್ತಿಯ ವಾ.ನಂ.7ರ ಢೋರ ಗಲ್ಲಿಯಲ್ಲಿ ವೀರಶೈವ ಡೋರ ಕಕ್ಕಯ್ಯ ಸಮಾಜದ ಸಭೆ ಹಾಗೂ ಪಾದಯಾತ್ರೆ ಮೂಲಕ ಮತಯಾಚನೆ. ಕಲಾಲ ಗಲ್ಲಿ ಮತ್ತು ಅಗಸರ ಗಲ್ಲಿಯಲ್ಲಿ ಪಾದಯಾತ್ರೆ ಮೂಲಕ ಮತಯಾಚನೆ. ವಾ.ನಂ.31ರ ಅಜರೇಕರ ಚಾಳ, ಅಯೋಧ್ಯಾ ನಗರ, ಶಾಹುನಗರ, ತೆಗ್ಗಿನ ಹನುಮಾನ ಗುಡಿ, ಅಡಕಿ ಗಲ್ಲಿ, ಮಂಜಣ್ಣ ಗಲ್ಲಿಯಲ್ಲಿ ಪಾದಯಾತ್ರೆ ಮೂಲಕ ಮತಯಾಚನೆ ಮಾಡಿ ಅವರು ಮಾತನಾಡಿದರು.
ಒಬ್ಬರು ಶಾಸಕರು ಹೇಗಿರಬೇಕು ಎಂಬುದು ತಂದೆಯ ಅಭಿವೃದ್ಧಿ ಕಾರ್ಯಗಳ ಮೂಲಕ ತಿಳಿದಿದೆ. ಬರೀ ಶಾಸಕರಾಗಿಯೇ ಇಷ್ಟೊಂದು ಒಳ್ಳೆಯ ಕೆಲಸ ಮಾಡಿದ್ದಾರೆಂದರೇ, ಮುಂದು ದೊಡ್ಡ ಹುದ್ದೆ ಸಿಗುವ ನಿರಿಕ್ಷೆಯಿದೆ. ಆಗ ನಗರ ಹಾಗೂ ಜಿಲ್ಲೆಯ ಚಿತ್ರಣ ಹೇಗೆ ಬದಲಾಗಬಹುದು ಯೋಚಿಸಿ, ತಂದೆಗೆ ಆಶೀರ್ವದಿಸಿ. ತಮ್ಮ ನಿರೀಕ್ಷೆ ಹುಸಿಯಾಗದಂತೆ ನಡೆದುಕೊಳ್ಳುತ್ತಾರೆ ಎಂದು ಹೇಳಿದರು.
ಶಕ್ತಿ ಗುರುತಿಸಿ ಪಕ್ಷ ಸ್ಟಾರ್ ಪ್ರಚಾರಕರನ್ನಾಗಿ ಮಾಡಿದ ಮೇಲೆ ನಗರ ಜನತೆಯ ಮೇಲೆ ನಂಬಿಕೆಯಿಟ್ಟು, ನಿರ್ಭಯವಾಗಿ ಇತರೆ ಅಭ್ಯರ್ಥಿಗಳ ಗೆಲುವಿಗಾಗಿ ವಿವಿಧ ಜಿಲ್ಲೆಗಳಿಗೆ ತೆರಳಿ ಪ್ರಚಾರ ನಡೆಸುತ್ತಿದ್ದಾರೆ. ತಂದೆಯ ನಂಬಿಕೆ ಉಳಿಸಿಕೊಳ್ಳಿ, ನಾವು ಕೂಡ ನಿಮ್ಮ ಬೇಕು ಬೇಡಿಕೆಗಳಿಗೆ ಸದಾ ಸ್ಪಂದಿಸುತ್ತೇವೆ ಎಂದರು.
ಮಹಾನಗರ ಪಾಲಿಕೆ ಸದಸ್ಯರು, ಪಕ್ಷದ ಮುಖಂಡರು, ಕಾರ್ಯಕರ್ತರು, ಅಭಿಮಾನಿಗಳು, ಹಿರಿಯ ನಾಗರಿಕರು, ಮಹಿಳೆಯರು ಇದ್ದರು.