ದೇವರಹಿಪ್ಪರಗಿ: ನಾಡಿನ ಜನತೆಗೆ ಹಲವು ಭಾಗ್ಯಗಳನ್ನು ನೀಡಿ ಅಭಿವೃದ್ಧಿಗೆ ಶ್ರಮಿಸಿದ ಕಾಂಗ್ರೆಸ್ ಪಕ್ಷಕ್ಕೆ ನಿಮ್ಮ ಮತ ಮೀಸಲಾಗಿರಲಿ ಎಂದು ದೇವರಹಿಪ್ಪರಗಿ ಮತಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಶರಣಪ್ಪ ಸುಣಗಾರ ಹೇಳಿದರು.
ತಾಲ್ಲೂಕಿನ ಹಿಟ್ನಳ್ಳಿ, ಗಂಗನಳ್ಳಿ, ಚಿಕ್ಕರೂಗಿ, ಕಡ್ಲೇವಾಡ ಪಿಸಿಎಚ್ ಗ್ರಾಮಗಳಲ್ಲಿ ಶುಕ್ರವಾರ ಚುನಾವಣಾ ಪ್ರಚಾರ ಕೈಗೊಂಡು ಮಾತನಾಡಿದರು.
ಮತದಾರರೇ ನೀವು ಜೆಡಿಎಸ್ ಪಕ್ಷಕ್ಕೆ ನೀಡುವ ಮತ ಬಿಜೆಪಿ ಪಕ್ಷಕ್ಕೆ ನೀಡಿದಂತೆ ಬಿಜೆಪಿ ಹಾಗೂ ಜೆಡಿಎಸ್ ಒಂದೇ ನಾಣ್ಯದ ಎರಡು ಮುಖಗಳು. ಹಿಂದೆ ಜೆಡಿಎಸ್ ಆಡಳಿತವನ್ನು ನೋಡಿದ್ದೀರಿ. ಈಗ ಬಿಜೆಪಿಯ ಭ್ರಷ್ಟ ಆಡಳಿತವನ್ನು ಕಾಣುತ್ತಿದ್ದೀರಿ, ಇವೆರಡರ ಆಡಳಿತ ನೋಡಿದಾಗ ಹಲವು ಭಾಗ್ಯಗಳನ್ನು ನೀಡಿದ ಕಾಂಗ್ರೆಸ್ ಪಕ್ಷವೇ ಉತ್ತಮವೆನಿಸುತ್ತದೆ. ಆದ್ದರಿಂದ ಸಿದ್ರಾಮಯ್ಯ ನೇತೃತ್ವದಲ್ಲಿನ ಹಿಂದಿನ ಕಾಂಗ್ರೆಸ್ ಸರ್ಕಾರ ನೀಡಿದ ಜನಪರ ಆಡಳಿತವನ್ನು ಅವಲೋಕಿಸಿ ಪಕ್ಷಕ್ಕೆ ಮತ ನೀಡಬೇಕು. ಕಾಂಗ್ರೆಸ್ ಪಕ್ಷ ಎಂದಿಗೂ ಸುಭದ್ರ ಸರ್ಕಾರವನ್ನೇ ನೀಡಿದೆ. ಆದ್ದರಿಂದ ನಿಮ್ಮೇಲ್ಲರ ಮೊದಲ ಪ್ರಾಶಸ್ತö್ಯ ಕಾಂಗ್ರೆಸ್ ಪಕ್ಷಕ್ಕೆ ಇರಲಿ ಎಂದರು.
ಕೆಪಿಸಿಸಿ ಸದಸ್ಯ ಬಿ.ಎಸ್.ಪಾಟೀಲ(ಯಾಳಗಿ), ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಶೀರ್ ಅಹ್ಮದ್ ಬೇಪಾರಿ, ಮಹಿಳಾ ಅಧ್ಯಕ್ಷೆ ಸರಿತಾ ನಾಯಿಕ್, ನಿವೃತ್ತ ಡಿಎಸ್‌ಪಿ ಎಸ್.ಎಸ್.ಹುಲ್ಲೂರ, ಜಿಲ್ಲಾ ಕಾಂಗ್ರೆಸ್ ಮುಖಂಡ ಸಾಯಿಕುಮಾರ ಬಿಸನಾಳ, ರಾಜು ಮೆಟಗಾರ, ಹಾಲುಮತದ ಸಮಾಜದ ಮುಖಂಡ ಪ್ರಕಾಶ ಸಂಗೋಗಿ, ವಿಠ್ಠಲ ದೇಗಿನಾಳ, ನಬಿ ಮುಲ್ಲಾ, ಶರಣಬಸು ದೇಗಿನಾಳ, ಸುಲ್ತಾನಗೌಡ ಬಿರಾದಾರ, ಖುದಾಮ್‌ಸಾಬ್ ಮುಲಾ,್ಲ ಅರ್ಜುನ ಮಾದರ, ಗಣೇಶ ವಾಡೆ ಇಮ್ತಿಯಾಜ್ ಮುಲ್ಲಾ, ಪ್ರಕಾಶ ಗುಡಿಮನಿ, ಮುರ್ತುಜಾ ತಾಂಬೋಳಿ ಇದ್ದರು.
Related Posts
Add A Comment