ಕೊಲ್ಹಾರ: ಪಟ್ಟಣದ ಜನತೆ ಕಳೆದ ೧೦ ವರ್ಷಗಳಿಂದ ರಾಜಕೀಯ ಬಲವಿಲ್ಲದೇ ಅಭಿವೃದ್ದಿಯಿಂದ ಕುಂಟಿತವಾಗಿದ್ದು ಅದನ್ನು ಹೋಗಲಾಡಿಸಬೇಕಾದರೆ ಜನಪರ ಹೋರಾಟಗಾರ, ಜನರಿಗೆ ಹತ್ತಿರದಲ್ಲಿಯೇ ಸಿಗುವ, ಸರ್ವ ಜನರ ಶ್ರೇಯೋಭಿವೃದ್ದಿಗಾಗಿ ಶ್ರಮಿಸುವ ಸಂಗಣ್ಣ ಬೆಳ್ಳುಬ್ಬಿಯವರನ್ನು ಮೇ ೧೦ರಂದು ನಡೆಯುವ ಮತದಾನದಲ್ಲಿ ಬಿಜೆಪಿ ಗುರುತಿಗೆ ಮತಹಾಕಿ ಗೆಲ್ಲಿಸಬೇಕೆಂದು ಚಂದ್ರಶೇಖರಯ್ಯ ಗಣಕುಮಾರ ಮತದಾರರಲ್ಲಿ ಮನವಿ ಮಾಡಿದರು.
ಪಟ್ಟಣದ ಶಿವಾಜಿ ಕಾಲೋಣಿಯಲ್ಲಿ ಕಟಬರ (ಮರಾಠಾ) ಸಮಾಜದ ಬಾಂಧವರು ಏರ್ಪಡಿಸಿದ್ದ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು ಈಗಿರುವ ಶಾಸಕರ ಬೇಟಿಗೆ ಹೋಗಬೇಕಾದರೆ ಸರತಿ ಸಾಲಿನಲ್ಲಿ ನಿಲ್ಲಬೇಕು. ಸಂಗಣ್ಣ ಬೆಳ್ಳುಬ್ಬಿಯವರು ಶಾಸಕರಾದರೆ ನೇರವಾಗಿ ಬೆಟ್ಟಿಯಾಗಿ ನಮ್ಮಗಳ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಲು ಸಾಧ್ಯವಾಗುತ್ತದೆ. ಆದ್ದರಿಂದ ಅವರ ಜಯಕ್ಕಾಗಿ ಪ್ರತಿಯೊಬ್ಬರು ಶ್ರಮಿಸೋಣ ಎಂದರು.
ಬಸವನ ಬಾಗೇವಾಡಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಸಂಗಣ್ಣ ಕ ಬೆಳ್ಳುಬ್ಬಿ ಮಾತನಾಡಿ, ಕೊಲ್ಹಾರ ಊರಿನ ಪ್ರತಿಯೊಬ್ಬರು ತಾವುಗಳೇ ನರೆಂದ್ರ ಮೋದಿಯಾಗಿ, ಅಮಿತ್ ಷಾ ಆಗಿ, ಯಡೆಯೂರಪ್ಪನವರಾಗಿ, ಬಸವರಾಜ ಬೊಮ್ಮಾಯಿಯವರಾಗಿ, ಪ್ರತಿಯೊಂದು ಬೂತ್ ಮಟ್ಟದಲ್ಲಿ ಶ್ರದ್ದೆಯಿಂದ ಕೆಲಸ ಮಾಡಿ ಈ ಬಾರಿ ಚುನಾವಣೆಯಲ್ಲಿ ಗೆಲ್ಲಿಸಬೇಕೆಂದು ವಿನಂತಿಸಿದರು.
ಕಟಬರ ಸಮಾಜದ ಅಧ್ಯಕ್ಷ ಡೋಂಗ್ರಿ ಕಟಬರ ಮಾತನಾಡಿ, ಕೊಲ್ಹಾರ ಪಟ್ಟಣದಲ್ಲಿರುವ ಮರಾಠಾ (ಕಟಬರ) ಸಮಾಜದ ಸರ್ವ ಮತಗಳು ಬೆಳ್ಳುಬ್ಬಿಯವರಿಗೆ ನೀಡುವದು ನಿಶ್ಚಿತ. ನಮ್ಮ ಸಮಾಜದಲ್ಲಿ ಬರುವ ಪ್ರತಿಯೊಂದು ಸಮಸ್ಯೆಗಳಿಗೂ ಸದಾಕಾಲ ಸ್ಪಂದನೆ ನೀಡಿ ಸಮಾಜವನ್ನು ಮುಂಚೂಣಿ ಸ್ಥಾನದಲ್ಲಿ ನಿಲ್ಲಿಸಿದ ಬೆಳ್ಳುಬ್ಬಿ ಕುಟುಂಬದವರ ಕಾರ್ಯಗಳನ್ನು ನಾವುಗಳು ಸದಾಕಾಲ ಮರೆಯುವಂತಿಲ್ಲ ಎಂದು ಹೇಳಿದರು.
ಪರಶುರಾಮ ಕಟಬರ. ಚಿನ್ನಪ್ಪ ಗಿಡ್ಡಪ್ಪಗೋಳ, ಬಸವರಾಜ ಕಟಬರ, ನಾಮದೇವ ಪವಾರ, ಹಣಮಂತ ಕಟಬರ, ಪಟ್ಟಣ ಪಂಚಾಯತ ಸದಸ್ಯ ಶ್ರೀಶೈಲ ಅಥಣಿ, ರಾಮ ಕಟಬರ, ಇಸ್ಮಾಯಿಲಸಾಬ ತಹಶೀಲ್ದಾರ ಅನೇಕ ಪ್ರಮುಖ ಹಿರಿಯರು ಹಾಗೂ ಕಟಬರ ಸಮಾಜದ ಮಹಿಳೆಯರು ಯುವಕರು, ಹಿರಿಯರು ಭಾಗವಹಿಸಿದ್ದರು.
Related Posts
Add A Comment