Subscribe to Updates
Get the latest creative news from FooBar about art, design and business.
Author: editor.udayarashmi@gmail.com
ದೇವರಹಿಪ್ಪರಗಿ: ಬಂಜಾರಾ ಸಮುದಾಯದವರಿಗೆ ಬಿಜೆಪಿ ಯಾವತ್ತೂ ಅನ್ಯಾಯ ಮಾಡಿಲ್ಲ. ದೇಶದ ಪ್ರಧಾನಿಗಳು ಬಂದು ತಾಂಡಾಗಳನ್ನು ಕಂದಾಯ ಗ್ರಾಮಗಳನ್ನಾಗಿ ಮಾಡುವುದರ ಜೊತೆಗೆ ಸ್ವಾವಲಂಬಿ ಬದುಕಿಗೆ ಸಹಕಾರಿಯಾಗಿದ್ದಾರೆ ಎಂದು ಶಾಸಕ ಸೋಮನಗೌಡ ಪಾಟೀಲ ಸಾಸನೂರ ಹೇಳಿದರು.ಮುಳಸಾವಳಗಿ ತಾಂಡಾದಲ್ಲಿ ಜೆಡಿಎಸ್ ಹಾಗೂ ಕಾಂಗ್ರೆಸ್ ಕಾರ್ಯಕರ್ತರನ್ನು ಬಿಜೆಪಿ ಪಕ್ಷಕ್ಕೆ ಸೇರ್ಪಡೆ ಮಾಡಿಕೊಂಡು ಮಾತನಾಡಿದ ಅವರು, ಬಂಜಾರಾ ಸಮುದಾಯದವರು ಅತ್ಯಂತ ನಂಬಿಕೆಗೆ ಅರ್ಹರಾಗಿದ್ದಾರೆ. ಶ್ರಮಿಕ ವರ್ಗವಾಗಿದ್ದು, ನಂಬಿಕೆ ಮೇಲೆ ಜೀವನ ಮಾಡುತ್ತಿದ್ದಾರೆ. ಸದಾ ಶ್ರಮದಿಂದಲೇ ಜೀವನ ಸಾಗಿಸುತ್ತ ದುಡಿಯುವ ವರ್ಗವಾಗಿದೆ. ನಮ್ಮ ಸರಕಾರ ಬಂಜಾರಾ ಸಮುದಾಯದ ಅಭಿವೃದ್ಧಿಗಾಗಿ ಹಲವಾರು ಯೋಜನೆಗಳನ್ನು ಜಾರಿಗೆ ತಂದು ಅನುಷ್ಠಾನಗೊಳಿಸಿದೆ. ತಾಂಡಾ ಅಭಿವೃದ್ಧಿ ನಿಗಮದ ಮೂಲಕ ಮೂಲಭೂತ ಸೌಕರ್ಯಗಳನ್ನು ಒದಗಿಸುವಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡಿದ್ದೇನೆ. ನನ್ನ ಕ್ಷೇತ್ರದಲ್ಲಿ ಬರುವ ಎಲ್ಲ ತಾಂಡಾಗಳಿಗೂ ಬಹುತೇಕ ಉತ್ತಮ ರಸ್ತೆ, ಸಿಸಿ ರಸ್ತೆ ನಿರ್ಮಾಣ, ಜೆಜೆಎಂ ಮೂಲಕ ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿದೆ. ಗುಳೆ ಹೋಗುವುದನ್ನು ತಪ್ಪಿಸಲು ನರೇಗಾ ಯೋಜನೆಯಲ್ಲಿ ಪ್ರತಿಯೊಬ್ಬ ದುಡಿಯುವ ಕೈಗೆ ಉದ್ಯೋಗದ ವ್ಯವಸ್ಥೆ ಮಾಡಲಾಗಿದೆ.…
ದೇವರಹಿಪ್ಪರಗಿ: ಕಾಂಗ್ರೆಸ್ ಪಕ್ಷದ ಎಲ್ಲ ಆಕಾಂಕ್ಷಿಗಳ ಅವಿರತ ಶ್ರಮ ಹಾಗೂ ಸಹಕಾರದಿಂದ ಈ ಬಾರಿ ಚುನಾವಣೆಯಲ್ಲಿ 25 ಸಾವಿರಕ್ಕೂ ಅಧಿಕ ಮತಗಳ ಅಂತರದಿAದ ಗೆಲ್ಲುವ ವಿಶ್ವಾಸವಿದೆ ಎಂದು ಕಾಂಗ್ರೆಸ್ ಅಭ್ಯರ್ಥಿ ಶರಣಪ್ಪ ಸುಣಗಾರ ಹೇಳಿದರು.ಪಟ್ಟಣದ ಕಾಂಗ್ರೆಸ್ ಕಾರ್ಯಾಲಯದಲ್ಲಿ ಗುರುವಾರ ಜರುಗಿದ ಪತ್ರಿಕಾಗೋಷ್ಟಿಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.ದೇವರಹಿಪ್ಪರಗಿ ಕ್ಷೇತ್ರದ 7 ಜಿಲ್ಲಾ ಪಂಚಾಯಿತಿ ಕ್ಷೇತ್ರಗಳ ಬಹುತೇಕ ಗ್ರಾಮಗಳ ಮನೆಮನೆಗೆ ಭೇಟಿ ಮಾಡಿ ಮತದಾರರನ್ನು ಕಂಡು ಕಾಂಗ್ರೆಸ್ ಪಕ್ಷದ ಸಾಧನೆ ಹಾಗೂ ಪ್ರಣಾಳಿಕೆಗಳ ಬಗ್ಗೆ ವಿವರಿಸಲಾಗುತ್ತಿದೆ. ಜೊತೆಗೆ ಪಕ್ಷದ ಆಕಾಂಕ್ಷಿಗಳು ಸೇರಿದಂತೆ ಸಂತೋಷ ದೊಡ್ಡಮನಿ, ಕಲ್ಲಪ್ಪ ಮಟ್ಟಿ, ಪರಶುರಾಮ ಖಾನಾಪೂರ, ಅಶೋಕಗೌಡ ಪಾಟೀಲ, ಬಸನಗೌಡ ಕಾಮನಕೇರಿಯವರ ಜವಾಬ್ದಾರಿ ಹಾಗೂ ಕೋರವಾರ ಭಾಗದಲ್ಲಿ ಛಾಯಾಗೋಳ, ಹುಣಶ್ಯಾಳ ಭಾಗದಲ್ಲಿ ನಂದಕುಮಾರ ಭೈರಿ, ದೇಶಮುಖರು, ಬಂಡೆಪ್ಪನಹಳ್ಳಿ ಸಾಲೋಡಗಿಯಲ್ಲಿ ಬಿ.ಎಸ್.ಪಾಟೀಲ(ಯಾಳಗಿ), ಆನಂದ ದೊಡ್ಡಮನಿ ಸೇರಿದಂತೆ ವಿವಿಧ ಭಾಗಗಳಲ್ಲಿ ಸುಜಾತಾ ಕಳ್ಳಿಮನಿ, ಗೌರಮ್ಮ ಮುತ್ತತ್ತಿ ನೇತೃತ್ವದ ತಂಡಗಳ ಜವಾಬ್ದಾರಿಯಿಂದ ಕಾರ್ಯ ನಿರ್ವಹಿಸುವುದರ ಜೊತೆಗೆ ತಾವೇ ಅಭ್ಯರ್ಥಿಯಾಗಿ ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದು ಪಕ್ಷದ ಬಲ…
ದೇವರಹಿಪ್ಪರಗಿ: ಬಂಜಾರ ಸಮುದಾಯ ಹಿಂದಿನಿAದಲೂ ಕಾಂಗ್ರೆಸ್ ಪರವಾಗಿದೆ ಎಂದು ಕಾಂಗ್ರೆಸ್ ಅಭ್ಯರ್ಥಿ ಶರಣಪ್ಪ ಸುಣಗಾರ ಹೇಳಿದರು.ಮತಕ್ಷೇತ್ರದ ಹುಣಶ್ಯಾಳ ಜಿಲ್ಲಾ ಪಂಚಾಯಿತಿ ವ್ಯಾಪ್ತಿಯ ಕೆರೂಟಗಿ ತಾಂಡಾದ ಪ್ರಚಾರ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದರು, ಬಂಜಾರ ಸಮುದಾಯಕ್ಕೆ ಕಾಂಗ್ರೆಸ್ ಎಲ್ಲ ರೀತಿಯ ಕೊಡುಗೆಗಳನ್ನು ನೀಡಿ ಉತ್ತಮ ಜೀವನ ನಡೆಸಲು ಅನುಕೂಲ ಮಾಡಿಕೊಟ್ಟಿz. ಜೊತೆಗೆೆ ಬಂಜಾರ ಸಮುದಾಯ ಶ್ರಮಿಕ ಹಾಗೂ ನಿಷ್ಠೆಯಿಂದ ಕಾರ್ಯನಿರ್ವಹಿಸುತ್ತಿದ್ದು ಸದಾ ಕಾಂಗ್ರೆಸ್ ಪರವಾಗಿದೆ. ಅದರಂತೆ ಈ ಬಾರಿ ಚುನಾವಣೆಯಲ್ಲಿ ಒಮ್ಮತದಿಂದ ಬೆಂಬಲಿಸಿ ನನಗೆ ಆಶೀರ್ವಾದ ಮಾಡಬೇಕೆಂದು ಮನವಿ ಮಾಡಿದರು.ಗಡಿ ಅಭಿವೃದ್ಧಿ ಪ್ರಾಧಿಕಾರದ ಮಾಜಿಅಧ್ಯಕ್ಷ ಸುಭಾಷ ಛಾಯಾಗೊಳ ಮಾತನಾಡಿ, ಕಾಂಗ್ರೆಸ್ ಸದಾ ಸಾಮಾಜಿಕ ನ್ಯಾಯದ ಅಡಿಯಲ್ಲಿ ರಾಜಕೀಯ ಮಾಡುತ್ತಿದೆ. ಪ್ರತಿಯೊಂದು ಸಮಾಜವನ್ನು ಗುರುತಿಸಿ ಗೌರವಿಸಿ ಸಮಾನ ಸ್ಥಾನಮಾನ ನೀಡುತ್ತಿದೆ ಅದಕ್ಕಾಗಿ ಎಲ್ಲರೂ ಕಾಂಗ್ರೆಸ್ ಬೆಂಬಲಿಸಬೇಕೆAದು ಕೋರಿದರು.ದೇವರಹಿಪ್ಪರಗಿ ತಾಲೂಕು ಪಂಚಾಯತಿ ಮಾಜಿ ಅಧ್ಯಕ್ಷೆ, ಜಿಲ್ಲಾ ಮಹಿಳಾ ಕಾಂಗ್ರೆಸ್ ಕಾರ್ಯದರ್ಶಿ ಲಲಿತಾ ದೊಡಮನಿ ಮಾತನಾಡಿ, ಸರ್ವ ಸಮುದಾಯ ನೆಮ್ಮದಿಯಿಂದ ಇರಬೇಕಾದರೆ ಕಾಂಗ್ರೆಸ್‌ಗೆ ನಾವೆಲ್ಲ ಬೆಂಬಲಿಸೋಣ. ಈ ನಿಟ್ಟಿನಲ್ಲಿ…
ವಿಜಯಪುರ: ಶ್ರೀ ಅಮೋಘಸಿದ್ಧ ಮತ್ತು ಶ್ರೀ ಸಿದ್ಧೇಶ್ವರ ಸ್ವಾಮೀಜಿ ಬಯಸಿದ ಸುಂದರ ನಾಡು ನಮ್ಮದಾಗಬೇಕು. ಇದಕ್ಕೆ ಎಲ್ಲರೂ ಸಹಕರಿಸಿಬೇಕು ಎಂದು ಕೆ.ಪಿ.ಸಿ.ಸಿ ಪ್ರಚಾರ ಸಮತಿ ಅಧ್ಯಕ್ಷ ಎಂ. ಬಿ. ಪಾಟೀಲ ಹೇಳಿದ್ದಾರೆ. ತಿಕೋಟಾ ತಾಲೂಕಿನ ಅರಕೇರಿ ಮತ್ತು ಬರಟಗಿಯಲ್ಲಿ ಪ್ರಚಾರ ಕೈಗೊಂಡು ಅವರು ಮಾತನಾಡಿದರು. ನಾಡು ಸಮೃದ್ಧವಾಗಿರಬೇಕಾದರೆ ನೀರಿನ ಸೌಲಭ್ಯ ಇರಬೇಕು. ನಮ್ಮ ಪರಿಸರ ಸುಂದರವಾಗಿರಬೇಕು. ಭೂಮಿ ಸಮೃದ್ಧವಾಗಿರಬೇಕು. ಜನ ಸುಖ ಮತ್ತು ಸಂತೋಷದಿಂದ ಬಾಳಬೇಕು. ಮಕ್ಕಳು ವಿದ್ಯಾವಂತರಾಗಿ ಐ.ಎ.ಎಸ್, ಐ.ಪಿ.ಎಸ್ ಅಧಿಕಾರಿಗಳಾಗಬೇಕು. ಉದ್ಯಮಿಗಳಾಗಬೇಕು. ಸುಸಂಸ್ಕøತರಾಗಿ ಜೀವನ ನಡೆಸುವಂತಾಗಬೇಕು. ಈ ನಿಟ್ಟಿನಲ್ಲಿ ಸೌಲಭ್ಯಗಳನ್ನು ಒದಗಿಸಲು ನಾನು ಶ್ರಮಿಸುತ್ತಿದ್ದೇನೆ ಎಂದು ಹೇಳಿದರು. ಜಲಸಂಪನ್ಮೂಲ ಸಚಿವನಾಗಿದ್ದಾಗ ಸನ್ಮಾನ ಕಾರ್ಯಕ್ರಮಗಳಿಂದ ದೂರವಿದ್ದೆ. ಈ ಭಾಗಕ್ಕೆ ನೀರು ಕೊಡಲು ಹಗಲಿರುಳು ಕೆಲಸ ಮಾಡಿದ್ದೇನೆ. ಹೀಗಾಗಿ ಜನರ ಕೌಟುಂಬಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲು ಸಾಧ್ಯವಾಗಿಲ್ಲ. ಆದರೆ, ಇದೇ ಜನರ ಬಾಳು ಹಸನಾಗಿಸಲು ಮಾಡಿದ ಅಹೋರಾತ್ರಿ ಕೆಲಸ ಫಲ ನೀಡುತ್ತಿದೆ. ನೀರು ಕೊಟ್ಟವರಿಗೆ ತಾವೆಲ್ಲರೂ ಆಶೀರ್ವಾದ ಬಾರಿ ಅಂತರದಿಂದ ಆಯ್ಕೆ ಮಾಡಬೇಕು…
ಸಿಂದಗಿ: ಮತಕ್ಷೇತ್ರದಲ್ಲಿ ಬಿಜೆಪಿ ಅಲೆಯು ಜೋರಾಗಿ ಬೀಸುತ್ತಿದ್ದು ಮತ್ತೆ ರಮೇಶ ಭೂಸನೂರ ಅವರು ಶಾಸಕರಾಗಿ ಈ ಬಾರಿ ಬಿಜೆಪಿ ಸರಕಾರದಲ್ಲಿ ಸಚಿವರಾಗುವುದು ಖಂಡಿತ ಎಂದು ಬಿಜೆಪಿ ಮುಖಂಡ ಡಾ.ಗೌತಮ್ ಚೌಧರಿ ಭವಿಷ್ಯ ನುಡಿದರು.ತಾಲೂಕಿನ ಚಿಕ್ಕ ಅಲ್ಲಾಪುರ ಗ್ರಾಮದಲ್ಲಿ ಬುಧವಾರ ಸಂಜೆ ಬಿಜೆಪಿ ಪಕ್ಷದ ಅಭ್ಯರ್ಥಿ ರಮೇಶ ಭೂಸನೂರ ಅವರೊಂದಿಗೆ ಮನೆ ಮನೆಗೆ ತೆರಳಿ ಮತಯಾಚನೆ ಬಳಿಕ ಪ್ರಚಾರ ಸಭೆಯಲ್ಲಿ ಅವರು ಮಾತನಾಡಿದರು.ಬಿಜೆಪಿ ಅಭ್ಯರ್ಥಿ ರಮೇಶ ಭೂಸನೂರ ಅವರು, ಜಾತ್ಯಾತೀತ ನಿಲುವಿನ ವ್ಯಕ್ತಿಯಾಗಿದ್ದು, ಸರ್ವ ಜನಾಂಗವನ್ನು ಪ್ರೀತಿಸುವ ಮನೋಭಾವ ಹೊಂದಿದ್ದಾರೆ. ಕ್ವೇತ್ರದಲ್ಲಿ ಅವರು ಮಾಡಿದ ಅಭಿವೃದ್ಧಿ ಕಾರ್ಯಗಳು ಹಾಗೂ ಕೇಂದ್ರ ಮತ್ತು ರಾಜ್ಯದ ಬಿಜೆಪಿ ಡಬಲ್ ಎಂಜಿನ್ ಸರ್ಕಾರದ ಸಾಧನೆಗಳನ್ನು ಮೆಚ್ಚಿ ಇಂದು ವಿವಿಧ ಪಕ್ಷಗಳ ಮುಖಂಡರು ಮತ್ತು ಕಾರ್ಯಕರ್ತರು ಬಿಜೆಪಿ ಪಕ್ಷಕ್ಕೆ ತಾವೇ ಸ್ವಯಂಪ್ರೇರಣೆಯಿಂದ ಸೇರ್ಪಡೆಗೊಳ್ಳುತ್ತಿದ್ದಾರೆ. ಇದು ಬಿಜೆಪಿ ಗೆಲುವಿನ ಮುನ್ಸೂಚನೆಯಾಗಿದೆ ಎಂದರು.ಕ್ಷೇತ್ರದ ಸಮಗ್ರ ಅಭಿವೃದ್ಧಿಗಾಗಿ ಭೂಸನೂರ ಅವರನ್ನು ಸಚಿವರನ್ನಾಗಿ ಮಾಡಲು ಮತ್ತೊಮ್ಮೆ ಅವರನ್ನು ಗೆಲ್ಲಿಸಬೇಕೆಂದು ಡಾ.ಗೌತಮ್ ಚೌಧರಿ ಮನವಿ ಮಾಡಿದರು.ಶಾಸಕ…
ವಿಜಯಪುರ: ಮಹಾರಾಷ್ಟ್ರ ಡಿಸಿಎಂ ದೇವೇಂದ್ರ ಫಡ್ನವೀಸ್ ತಮ್ಮ ರಾಜ್ಯದಲ್ಲಿ ನೀರಾವರಿ ಮಾಡುವುದನ್ನು ಬಿಟ್ಟು ನಮ್ಮ ಕೆಲಸಗಳ ಬಗ್ಗೆ ಟೀಕಿಸುತ್ತಿರುವುದು ಹಾಸ್ಯಾಸ್ಪದವಾಗಿದೆ ಎಂದು ಕೆ.ಪಿ.ಸಿ.ಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ. ಬಿ. ಪಾಟೀಲ ಹೇಳಿದ್ದಾರೆ. ತಿಕೋಟಾ ತಾಲೂಕಿನ ಕನಮಡಿಯಲ್ಲಿ ಪ್ರಚಾರ ಕೈಗೊಂಡು ಮಾತನಾಡಿದ ಅವರು, ಫಡ್ನವೀಸ್ ಇತ್ತಿಚೆಗೆ ಕನಮಡಿಯಲ್ಲಿ ಇಲ್ಲಸಲ್ಲದ ಮಾತುಗಳನ್ನು ಹೇಳಿದ್ದಾರೆ. ಅವರದೇ ರಾಜ್ಯದ ಮೈಶಾಳ ನೀರಾವರಿ ಯೋಜನೆಯನ್ನು 45 ವರ್ಷ ಕಳೆದರೂ ಕೈಗೆತ್ತಿಕೊಳ್ಳದೇ ಜತ ತಾಲೂಕಿನ ಜನರಿಗೆ ಅನ್ಯಾಯ ಮಾಡಿದ್ದಾರೆ. ಪಾನಿ ಏಣಾರ ಆಹೇ(ನೀರು ಬರಲಿದೆ) ಎಂದು ಸುಳ್ಳು ಹೇಳುತ್ತ ಕಾಲಹರಣ ಮಾಡುತ್ತಿದ್ದಾರೆ. ಆದರೆ ನಾನು ಜಲಸಂಪನ್ಮೂಲ ಸಚಿವನಾಗಿದ್ದಾಗ ಮಾಡಿರುವ ನೀರಾವರಿ ಯೋಜನೆಗಳ ಫಲವಾಗಿ ಜತ ತಾಲೂಕಿನ 42 ಗ್ರಾಮಗಳಿಗೆ ಮತ್ತು 9 ಕೆರೆಗಳಿಗೆ ನೀರು ಬಂದಿದೆ. ಈ ಹಿನ್ನಲೆಯಲ್ಲಿ ಆ ಗ್ರಾಮಗಳ ಜನ ತಮ್ಮನ್ನು ಕರ್ನಾಟಕಕ್ಕೆ ಸೇರಿಸಿಕೊಳ್ಳಿ ಎಂದು ಹೋರಾಟ ನಡೆಸಿದ್ದಾರೆ. ಇದರ ಅರಿವು ಫಡ್ನವೀಸ್ ಅವರಿಗೆ ಇಲ್ಲ. ಬಾಕಿ ಕಾಮಗಾರಿಗಳು ಪೂರ್ಣಗೊಂಡ ನಂತರ ಈ ಭಾಗ ಮತ್ತಷ್ಟು…
ಸಿಂದಗಿ: ಮತಕ್ಷೇತ್ರದಲ್ಲಿ ಅಲ್ಪಸಂಖ್ಯಾತರು ಸೇರಿದಂತೆ ಎಲ್ಲ ವರ್ಗದವರು ಬಿಜೆಪಿಗೆ ಸೇರ್ಪಡೆಗೊಳ್ಳುತ್ತಿದ್ದಾರೆ ; ಆಲಮೇಲ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರೇ ರಾಜಿನಾಮೆ ನೀಡಿ ನಮ್ಮೊಂದಿಗೆ ಕೈಜೋಡಿಸಿದ್ದಾರೆಂದ ಮೇಲೆ ಕಾಂಗ್ರೆಸ್ ಗತಿ ಎಲ್ಲಿಗೆ ಬಂತು ನೋಡಿ ಎಂದು ಶಾಸಕ, ಬಿಜೆಪಿ ಅಭ್ಯರ್ಥಿ ರಮೇಶ ಭೂಸನೂರ ವ್ಯಂಗ್ಯವಾಡಿದರು.ಪಟ್ಟಣದ ಬಿಜೆಪಿ ಪ್ರಚಾರ ಕಾರ್ಯಾಲಯದಲ್ಲಿ ಬುಧವಾರ ಜಿ.ಪಂ ಮಾಜಿ ಸದಸ್ಯರ ಪ್ರತಿನಿಧಿ ಈರಗಂಟೆಪ್ಪ ಮಾಗಣಗೇರಿ, ತಾ.ಪಂ ಸದಸ್ಯ ಅಕ್ಬರ್ ಮುಲ್ಲಾ, ಜೆಡಿಎಸ್ ಹಿರಿಯ ಮುಖಂಡ ಸಲೀಂ ಜುಮನಾಳ ಸೇರಿದಂತೆ ಹಲವು ಗ್ರಾಮಗಳ ಗ್ರಾ.ಪಂ ಸದಸ್ಯರು ಮತ್ತು ಮುಖಂಡರ ಪಕ್ಷ ಸೇರ್ಪಡೆ ಕಾರ್ಯಕ್ರಮದಲ್ಲಿ ಇವರು ಮಾತನಾಡಿದರು. ಕ್ಷೇತ್ರದಲ್ಲಿ ದಿನೇ ದಿನೇ ಬದಲಾವಣೆ ಕಾವು ಏರುತ್ತಿದ್ದು, ಬಿಜೆಪಿಯ ಬಲ ಹೆಚ್ಚುತ್ತಿದೆ. ಕಾಂಗ್ರೆಸ್‌ಗೆ ಯಾರೂ ಮನಪೂರ್ವಕ ಕೈ ಜೋಡಿಸದಿದ್ದರೂ ಸಹ ಅವರಿಗೆ ಬಲವಂತದಿAದ ಶಾಲು ಹೊದಿಸಿ ಅವರ ಇಡೀ ಸಮಾಜವೇ ಪಕ್ಷ ಸೇರ್ಪಡೆಯಾಗಿದೆ ಎಂದು ಸುದ್ದಿ ಹಬ್ಬಿಸಿ ಪ್ರಚಾರ ಪಡೆಯುತ್ತಿದ್ದಾರೆಂದು ವ್ಯಂಗ್ಯವಾಡಿದರು.ಬಿಜೆಪಿ ಮುಖಂಡ ಡಾ.ಗೌತಮ್ ಚೌಧರಿ ಅವರು, ಡಬಲ್ ಇಂಜಿನ್ ಸರ್ಕಾರದ ಮತ್ತು ಶಾಸಕ…
ವಿಜಯಪುರ : ಶೇ.೪೦ ರಷ್ಟು ಕಮೀಷನ್ ಪಡೆದುಕೊಳ್ಳುತ್ತಿದ್ದ ಬಿಜೆಪಿ ಸರ್ಕಾರ ರಾಜ್ಯದಲ್ಲಿ ಲೂಟಿ ಹೊಡೆಯುತ್ತಿದ್ದಾಗ ಸರ್ವಶಕ್ತಿಮಾನ ಮೋದಿ ಅವರು ತಡೆಯಲಿಲ್ಲ, ಅವರು ಕೇವಲ ಕಣ್ಮುಚ್ಚಿ ಕರ್ನಾಟಕದ ವಿಕಾಸದ ಕನಸು ಕಾಣುತ್ತಿದ್ದರು ಎಂದು ಎಐಸಿಸಿ ನಾಯಕಿ ಪ್ರಿಯಾಂಕಾ ಗಾಂಧೀ ವ್ಯಂಗ್ಯವಾಡಿದರು.ಬುಧವಾರ ಇAಡಿ ಪಟ್ಟಣದಲ್ಲಿ ನಡೆದ ಕಾಂಗ್ರೆಸ್ ಬೃಹತ್ ಸಮಾವೇಶದಲ್ಲಿ ಕಾರ್ಯಕರ್ತರನ್ನುದ್ದೇಶಿಸಿ ಅವರು ಮಾತನಾಡಿದರು.ಕರ್ನಾಟಕದ ಚುನಾವಣಾ ಭಾಷಣ ಮಾಡುವಾಗ ಕರ್ನಾಟಕದ ವಿಕಾಸದ ಕನಸು ಕಂಡಿದ್ದೇನೆ ಎಂದು ಹೇಳುತ್ತಾ ಹೊರಟಿದ್ದಾರೆ, ಜನರ ಹಣವನ್ನು ಬಿಜೆಪಿ ಲೂಟಿ ಹೊಡೆಯುವಾಗ ಅವರಿಗೇಕೆ ಅರಿವಾಗಲಿಲ್ಲ ಎಂದು ವ್ಯಂಗ್ಯವಾಡಿದರು.ದುರಾಸೆ, ಅಧಿಕಾರ ದಾಹಕ್ಕಾಗಿ ಶಾಸಕರನ್ನು ಖರೀದಿಸಿ ರಚನೆಯಾಗಿರುವ ಬಿಜೆಪಿ ಸರ್ಕಾರಕ್ಕೆ ಕೇವಲ ಲೂಟಿ ಹೊಡೆಯುವುದೇ ಉದ್ದೇಶವಾಗಿದೆ, ಕರ್ನಾಟಕದ ವಿಕಾಸದ ಕನಸು ನಾನು ಕಂಡಿದ್ದೇನೆ ಎಂದು ಮೋದಿಜಿ ಹೇಳಿದ್ದಾರೆ, ಆದರೆ ಬಿಜೆಪಿ ನಾಯಕರು ಶೇ.೪೦ ಕಮೀಷನ್ ತೆಗೆದುಕೊಂಡು ಜನತೆಯನ್ನು ಲೂಟಿ ಮಾಡುತ್ತಿದ್ದಾಗ ನಿಮ್ಮ ಕಣ್ಣು ಬಂದಾಗಿತ್ತು, ಏಕೆಂದರೆ ನೀವು ಕನಸು ಕಾಣುವಲ್ಲಿ ಮಗ್ನರಾಗಿದ್ದೀರಿ, ಹೀಗಾಗಿ ಲೂಟಿ ಹೊಡೆಯಲು ಬಿಟ್ಟಿದ್ದೀರಿ, ಗುತ್ತಿಗೆದಾರರು ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ, ಸರ್ವಜ್ಞಾನಿ,…
ತುಬಚಿ- ಬಬಲೇಶ್ವರ ಏತ ನೀರಾವರಿ ಮೂಲಕ ಈ ಭಾಗದಲ್ಲಿ ನೀರಾವರಿ :ಎಂ.ಬಿ.ಪಾಟೀಲ ಬಿಜ್ಜರಗಿ ಗ್ರಾಮಸ್ಥರು ತಮ್ಮ ಎಲ್ಲ ಬಂಧುಗಳು, ಸ್ನೇಹಿತರು ಮತ್ತು ತಮಗೆ ಪರಿಚಯವಿರುವ ಎಲ್ಲರನ್ನೂ ಸಂಪರ್ಕಿಸಿ ಎಂ.ಬಿ.ಪಾಟೀಲರನ್ನು ಈ ಬಾರಿ 50 ಸಾವಿರಕ್ಕೂ ಹೆಚ್ಚು ಅಂತರದಿಂದ ಆಯ್ಕೆ ಮಾಡಿ, ಉತ್ತರ ಕರ್ನಾಟಕದಲ್ಲಿ ಮತ್ತೊಂದು ಹೊಸ ಇತಿಹಾಸ ನಿರ್ಮಿಸಬೇಕು ಎಂದು ಮಾಜಿ ಡಿಸಿಎಂ ಲಕ್ಷ್ಮಣ ಸವದಿ ಕರೆ ನೀಡಿದರು. ಬುಧವಾರ ತಿಕೋಟಾ ತಾಲೂಕಿನ ಬಿಜ್ಜರಗಿಯಲ್ಲಿ ಕೆ.ಪಿ.ಸಿ.ಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ. ಬಿ. ಪಾಟೀಲರ ಪರ ಪ್ರಚಾರ ನಡೆಸಿದ ಅವರು, ಬಿಜ್ಜರಗಿ ಗ್ರಾಮಸ್ಥರ ಮೇಲೆ ವಿಶ್ವಾಸವಿಟ್ಟು ಇಲ್ಲಿಗೆ ಬಂದಿದ್ದೇನೆ. ಲಕ್ಷ್ಮಣ ಸವದಿ ಯಾವುದೇ ಊರಿಗೆ ಹೋಗಬೇಕಾದರೆ ನೂರು ಬಾರಿ ಯೋಚಿಸಿಯೇ ಹೋಗುತ್ತಾರೆ. ಈ ಭಾಗದ ಎಲ್ಲರೂ ಎಂ.ಬಿ.ಪಾಟೀಲರನ್ನು ಅವರ ರಾಜಕೀಯ ಜೀವನದಲ್ಲಿಯೇ ಅತಿ ಹೆಚ್ಚು ಮತಗಳ ಅಂತರದಿಂದ ಗೆಲ್ಲಿಸಬೇಕು ಎಂದು ಅವರು ಮನವಿ ಮಾಡಿದರು. ಒಬ್ಬ ಒಳ್ಳೆಯ ನಾಯಕ ನಿಮಗೆ ಸಿಕ್ಕಿದ್ದಾರೆ. ಅಂಥ ನಾಯಕರನ್ನು ಬೆಳೆಸುವ ಕೆಲಸವನ್ನು ತಾವೆಲ್ಲರೂ ಮಾಡಬೇಕು. ಶೆ.90…
