ವಿಜಯಪುರ: ಶ್ರೀ ಅಮೋಘಸಿದ್ಧ ಮತ್ತು ಶ್ರೀ ಸಿದ್ಧೇಶ್ವರ ಸ್ವಾಮೀಜಿ ಬಯಸಿದ ಸುಂದರ ನಾಡು ನಮ್ಮದಾಗಬೇಕು. ಇದಕ್ಕೆ ಎಲ್ಲರೂ ಸಹಕರಿಸಿಬೇಕು ಎಂದು ಕೆ.ಪಿ.ಸಿ.ಸಿ ಪ್ರಚಾರ ಸಮತಿ ಅಧ್ಯಕ್ಷ ಎಂ. ಬಿ. ಪಾಟೀಲ ಹೇಳಿದ್ದಾರೆ.
ತಿಕೋಟಾ ತಾಲೂಕಿನ ಅರಕೇರಿ ಮತ್ತು ಬರಟಗಿಯಲ್ಲಿ ಪ್ರಚಾರ ಕೈಗೊಂಡು ಅವರು ಮಾತನಾಡಿದರು.
ನಾಡು ಸಮೃದ್ಧವಾಗಿರಬೇಕಾದರೆ ನೀರಿನ ಸೌಲಭ್ಯ ಇರಬೇಕು. ನಮ್ಮ ಪರಿಸರ ಸುಂದರವಾಗಿರಬೇಕು. ಭೂಮಿ ಸಮೃದ್ಧವಾಗಿರಬೇಕು. ಜನ ಸುಖ ಮತ್ತು ಸಂತೋಷದಿಂದ ಬಾಳಬೇಕು. ಮಕ್ಕಳು ವಿದ್ಯಾವಂತರಾಗಿ ಐ.ಎ.ಎಸ್, ಐ.ಪಿ.ಎಸ್ ಅಧಿಕಾರಿಗಳಾಗಬೇಕು. ಉದ್ಯಮಿಗಳಾಗಬೇಕು. ಸುಸಂಸ್ಕøತರಾಗಿ ಜೀವನ ನಡೆಸುವಂತಾಗಬೇಕು. ಈ ನಿಟ್ಟಿನಲ್ಲಿ ಸೌಲಭ್ಯಗಳನ್ನು ಒದಗಿಸಲು ನಾನು ಶ್ರಮಿಸುತ್ತಿದ್ದೇನೆ ಎಂದು ಹೇಳಿದರು.
ಜಲಸಂಪನ್ಮೂಲ ಸಚಿವನಾಗಿದ್ದಾಗ ಸನ್ಮಾನ ಕಾರ್ಯಕ್ರಮಗಳಿಂದ ದೂರವಿದ್ದೆ. ಈ ಭಾಗಕ್ಕೆ ನೀರು ಕೊಡಲು ಹಗಲಿರುಳು ಕೆಲಸ ಮಾಡಿದ್ದೇನೆ. ಹೀಗಾಗಿ ಜನರ ಕೌಟುಂಬಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲು ಸಾಧ್ಯವಾಗಿಲ್ಲ. ಆದರೆ, ಇದೇ ಜನರ ಬಾಳು ಹಸನಾಗಿಸಲು ಮಾಡಿದ ಅಹೋರಾತ್ರಿ ಕೆಲಸ ಫಲ ನೀಡುತ್ತಿದೆ. ನೀರು ಕೊಟ್ಟವರಿಗೆ ತಾವೆಲ್ಲರೂ ಆಶೀರ್ವಾದ ಬಾರಿ ಅಂತರದಿಂದ ಆಯ್ಕೆ ಮಾಡಬೇಕು ಎಂದು ಅವರು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಪೀರಪಟೇಲ ಪಾಟೀಲ, ಅರ್ಜುನ ರಾಠೋಡ, ಸಿದ್ದಣ್ಣ ಸಕ್ರಿ, ಅಶೋಕ ದಳವಾಯಿ, ಎನ್.ಎಸ್.ಬೆಳ್ಳುಬ್ಬಿ, ಕಾಂತಾ ನಾಯಕ, ಶಿವಾನಂದ ಇಂಚಗೇರಿ, ಚನ್ನಪ್ಪ ದಳವಾಯಿ, ಸುರೇಶ ಭಂಡಾರಿ, ಹುಸೇನ ಮನಗೂಳಿ, ಸೋಮನಿಂಗ ಕಟಾವಿ, ಸಿದ್ದಪ್ಪ ಚಡಚಣ, ವಿಜಯ ಕಾಂಬಳೆ, ಬಾಜಿರಾಯ ಕರೆ, ಬಿ.ಜಿ.ಪಾಟೀಲ, ಗುರುಪಾದಗೌಡ ದಾಶ್ಯಾಳ, ಮಲ್ಲನಗೌಡ ಪಾಟೀಲ, ಕಾಂತು ನಾಯಕ, ಸತೀಶ ನಾಯಕ, ರಾಜು ರಾಠೋಡ, ಗೋವಿಂದ ಸಿಂಧೆ, ದತ್ತಾ ಕಾಟಕರ, ಸಜ್ಜನ ಸಾಹುಕಾರ, ಪದ್ದು ಚವ್ಹಾಣ, ಕಾಸು ಚವ್ಹಾಣ, ನೀಲು ನಾಯಕ, ದಯಾನಂದ ಜೋರಾಪುರ ಮುಂತಾದವರು ಉಪಸ್ಥಿತರಿದ್ದರು.
ಮಾನೇನದೊಡ್ಡಿ ರೈತನ ಮನದಾಳದ ಮಾತು
ಎಂ. ಬಿ. ಪಾಟೀಲರ ಎದುರು ಮನದಾಳದ ಅನುಭವ ಹಂಚಿಕೊಂಡ ಮಾನೇನದೊಡ್ಡಿ ರೈತ ವಸಂತ ಭೀರಪ್ಪ ಮಾನೆ, ಈ ಮುಂಚೆ ಗ್ರಾಮಗಳಲ್ಲಿ ಕುಡಿಯುವ ನೀರಿಗಾಗಿ ಮಹಿಳೆಯರು ಜಡೆ ಎಳೆದಾಡಿಕೊಂಡು ಜಗಳವಾಡುತ್ತಿದ್ದರು. ನೀರಿಲ್ಲದ ಕಾರಣ ನಾವು ಕುರಿಗಳನ್ನು ತೆಗೆದುಕೊಂಡು ಗುಲಬರ್ಗಾ ಮತ್ತು ಸೋಲಾಪುರ ಕಡೆ ವರ್ಷವಿಡಿ ಗುಳೆ ಹೋಗುತ್ತಿದ್ದೇವು. ಮನೆಯಲ್ಲಿನ ಆಗು- ಹೋಗುಗಳ ಬಗ್ಗೆ ಕಿಂಚಿತ್ತು ಮಾಹಿತಿ ಇರುತ್ತಿರಲಿಲ್ಲ. ಈಗ ನಮ್ಮ ಕುಟುಂಬದ 16 ಎಕರೆ ಜಮೀನಿಗೆ ಎಂ. ಬಿ. ಪಾಟೀಲರ ಕೃಪೆಯಿಂದ ನೀರು ಬಂದಿದೆ. 900 ಟನ್ ಕಬ್ಬು ಬೆಳೆದಿದ್ದೇವೆ. ಹೊಸದಾಗಿ ಎರಡು ಎಕರೆ ಜಮೀನು ಖರೀದಿಸಿದ್ದೇವೆ. ನಮ್ಮ ಮಕ್ಕಳು ಈಗ ಶಾಲೆಯ ಕಡೆ ಮುಖ ಮಾಡಿದ್ದಾರೆ. ದೈವ ಸ್ವರೂಪಿ ಎಂ. ಬಿ. ಪಾಟೀಲರಿಗಾಗಿ ನಾವು ಬದುಕಿರುವವರೆಗೂ ಮತ ಹಾಕುತ್ತೇವೆ ಎಂದು ಹೇಳಿದರು.