ವಿಜಯಪುರ : ಶೇ.೪೦ ರಷ್ಟು ಕಮೀಷನ್ ಪಡೆದುಕೊಳ್ಳುತ್ತಿದ್ದ ಬಿಜೆಪಿ ಸರ್ಕಾರ ರಾಜ್ಯದಲ್ಲಿ ಲೂಟಿ ಹೊಡೆಯುತ್ತಿದ್ದಾಗ ಸರ್ವಶಕ್ತಿಮಾನ ಮೋದಿ ಅವರು ತಡೆಯಲಿಲ್ಲ, ಅವರು ಕೇವಲ ಕಣ್ಮುಚ್ಚಿ ಕರ್ನಾಟಕದ ವಿಕಾಸದ ಕನಸು ಕಾಣುತ್ತಿದ್ದರು ಎಂದು ಎಐಸಿಸಿ ನಾಯಕಿ ಪ್ರಿಯಾಂಕಾ ಗಾಂಧೀ ವ್ಯಂಗ್ಯವಾಡಿದರು.
ಬುಧವಾರ ಇAಡಿ ಪಟ್ಟಣದಲ್ಲಿ ನಡೆದ ಕಾಂಗ್ರೆಸ್ ಬೃಹತ್ ಸಮಾವೇಶದಲ್ಲಿ ಕಾರ್ಯಕರ್ತರನ್ನುದ್ದೇಶಿಸಿ ಅವರು ಮಾತನಾಡಿದರು.
ಕರ್ನಾಟಕದ ಚುನಾವಣಾ ಭಾಷಣ ಮಾಡುವಾಗ ಕರ್ನಾಟಕದ ವಿಕಾಸದ ಕನಸು ಕಂಡಿದ್ದೇನೆ ಎಂದು ಹೇಳುತ್ತಾ ಹೊರಟಿದ್ದಾರೆ, ಜನರ ಹಣವನ್ನು ಬಿಜೆಪಿ ಲೂಟಿ ಹೊಡೆಯುವಾಗ ಅವರಿಗೇಕೆ ಅರಿವಾಗಲಿಲ್ಲ ಎಂದು ವ್ಯಂಗ್ಯವಾಡಿದರು.
ದುರಾಸೆ, ಅಧಿಕಾರ ದಾಹಕ್ಕಾಗಿ ಶಾಸಕರನ್ನು ಖರೀದಿಸಿ ರಚನೆಯಾಗಿರುವ ಬಿಜೆಪಿ ಸರ್ಕಾರಕ್ಕೆ ಕೇವಲ ಲೂಟಿ ಹೊಡೆಯುವುದೇ ಉದ್ದೇಶವಾಗಿದೆ, ಕರ್ನಾಟಕದ ವಿಕಾಸದ ಕನಸು ನಾನು ಕಂಡಿದ್ದೇನೆ ಎಂದು ಮೋದಿಜಿ ಹೇಳಿದ್ದಾರೆ, ಆದರೆ ಬಿಜೆಪಿ ನಾಯಕರು ಶೇ.೪೦ ಕಮೀಷನ್ ತೆಗೆದುಕೊಂಡು ಜನತೆಯನ್ನು ಲೂಟಿ ಮಾಡುತ್ತಿದ್ದಾಗ ನಿಮ್ಮ ಕಣ್ಣು ಬಂದಾಗಿತ್ತು, ಏಕೆಂದರೆ ನೀವು ಕನಸು ಕಾಣುವಲ್ಲಿ ಮಗ್ನರಾಗಿದ್ದೀರಿ, ಹೀಗಾಗಿ ಲೂಟಿ ಹೊಡೆಯಲು ಬಿಟ್ಟಿದ್ದೀರಿ, ಗುತ್ತಿಗೆದಾರರು ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ, ಸರ್ವಜ್ಞಾನಿ, ಸರ್ವಾಂತರಯಾಮಿಗೆ ಪತ್ರ ಬರೆದರೂ ಪ್ರಯೋಜನವಿಲ್ಲ, ಸರ್ವಶಕ್ತಿಮಾನ, ಸರ್ವಶ್ರೇಷ್ಠ, ಸರ್ವೋತ್ತಮ, ವಿಕಾಸ ಪುರುಷ ಎಂದು ಬಿಜೆಪಿ ನಾಯಕರು ಮೋದಿ ಅವರನ್ನು ಗುಣಗಾನ ಮಾಡುತ್ತಿದ್ದಾರೆ, ಆದರೆ ಮೋದಿ ಅವರು ಕರ್ನಾಟಕಕ್ಕೆ ಬಂದು ವಿಕಾಸ
ಸರ್ವಾಂತರ್ಯಾಮಿಯಾದ ನಿಮಗೆ ಕರ್ನಾಟಕ ವಿಕಾಸ ಮಾಡಲು ಏಕೆ ಸಾಧ್ಯವಾಗಲಿಲ್ಲ, ಲೂಟಿ ಹೊಡೆಯುತ್ತಾ ಹೊಡೆಯುತ್ತಾ ಹೋದರೆ ಉದ್ಯೋಗ ಸೃಷ್ಟಿಯ ಕೆಲಸವೂ ಮರೆತಿದೆ, ವಿಕಾಸ ಶಿಕ್ಷಣ, ಆಸ್ಪತ್ರೆ, ಉದ್ಯೋಗ, ಈ ಬಗ್ಗೆ ಯಾವ ವಿಷಯ ಆಧಾರಿತ ಮಾತುಗಳನ್ನೇಕೆ ಆಡುತ್ತಿಲ್ಲ ಎಂದು ಪ್ರಶ್ನಿಸಿದರು. ಜಿಎಸ್‌ಟಿ ಹೇರಿ ಸಣ್ಣ ವ್ಯಾಪಾರಸ್ಥರಿಗೆ ನುಂಗಲಾರದ ತುತ್ತಾಗಿದೆ, ಸಣ್ಣ ಕೈಗಾರಿಕೆಗಳು ನೆಲಕಚ್ಚುತ್ತಿವೆ, ಕರ್ನಾಟಕದಿಂದ ೧.೫ ಲಕ್ಷ ಕೋಟಿ ಲೂಟಿ ಹೊಡೆದಿದೆ, ಈ ಹಣದಲ್ಲಿ ದೊಡ್ಡ ಪ್ರಮಾಣದಲ್ಲಿ ಏಮ್ಸ್ ಆಸ್ಪತ್ರೆ, ಸ್ಮಾರ್ಟ್ಗಳನ್ನು ರೂಪಿಸಬಹುದಿತ್ತು ಎಂದರು.
ಬೆಲೆ ಏರಿಕೆ ದೊಡ್ಡ ಪ್ರಮಾಣದಲ್ಲಿ ಏರಿಕೆಯಾಗಿದೆ, ರೈತರ ಬದುಕು ದುಸ್ತರವಾಗಿದೆ, ಯೂರಿಯಾ ಬೆಲೆ ಏರಿಕೆಯಾಗಿದೆ, ದೊಡ್ಡ ಸವಾಲುಗಳು ಜನಸಾಮಾನ್ಯರನ್ನು ಕಾಡುತ್ತಿದ್ದು, ಈ ಸಮಸ್ಯೆಗಳು ಹೆಚ್ಚಾಗುತ್ತಿವೆ ಹೊರತು ಕಡಿಮೆಯಾಗುತ್ತಿಲ್ಲ, ಎಲ್ಲೆಡೆ ಲೂಟಿ ಹೊಡೆಯುವ ಮೂಲಕ ಆಡಳಿತ ವ್ಯವಸ್ಥೆಗೆ ನಗೆಪಾಟಲಿಗೀಡುಮಾಡುವಂತೆ ಬಿಜೆಪಿ ಮಾಡಿದೆ ಎಂದರು.
ಭಾವನಾತ್ಮಕ, ಧರ್ಮದ ಮಾತು ಆಡಿದರೆ ಸಾಕು ತಾವು ಗೆಲ್ಲಬಹುದು ಎಂಬ ಮನೋಭಾವ ಬಿಜೆಪಿಗರಲ್ಲಿ ಅಧಿಕವಾಗಿದೆ, ಈ ಸಂಗತಿ ಗೊತ್ತಿರುವ ಅನೇಕ ಬಿಜೆಪಿ ನಾಯಕರು ಅಭಿವೃದ್ಧಿ ಮಾಡುವುದನ್ನೇ ಮರೆತಿದ್ದಾರೆ ಎಂದು ಪ್ರಿಯಾಂಕಾ ದೂರಿದರು.
ಚುನಾವಣೆ ಬಂದಾಗ ಜನರ ದಿಕ್ಕು ತಪ್ಪಿಸುವ ಕೆಲಸ ಮಾಡಲಾಗುತ್ತದೆ, ನಿಮ್ಮ ಮತ ನಿಮ್ಮ ವಿಕಾಸಕ್ಕೆ ಇರಬೇಕು ಹೊರತು ಭಾವನಾತ್ಮಕದ ಪ್ರವಾಹದಲ್ಲಿ ಸಾಗಿ ಹೋಗಬಾರದು, ಈ ಜಾಗೃತಿ ಅವಶ್ಯ, ಅನವಶ್ಯಕ ವಿಚಾರಗಳಿಗೆ ಮಾರು ಹೋಗದಿರಿ ಎಂದು ಕರೆ ನೀಡಿದರು.
ವಿಧಾನ ಪರಿಷತ್ ಸದಸ್ಯ, ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್, ವಿಧಾನ ಪರಿಷತ್ ಪ್ರತಿಪಕ್ಷ ಮುಖ್ಯ ಸಚೇತಕ ಪ್ರಕಾಶ ರಾಠೋಡ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಪ್ರೊ.ರಾಜು ಆಲಗೂರ, ಎಐಸಿಸಿ ವೀಕ್ಷಕಿ ಪ್ರೀತಿ ಜೈಸ್ವಾಲ್, ಕೆಪಿಸಿಸಿ ಕಾರ್ಯದರ್ಶಿ ಕಾಂತಾ ನಾಯಕ, ಪ್ರಮುಖರಾದ ಮಲ್ಲಿಕಾರ್ಜುನ ಲೋಣಿ, ಎಸ್.ಎಂ. ಪಾಟೀಲ ಗಣಿಹಾರ, ಸಂಯುಕ್ತಾ ಪಾಟೀಲ, ರಾಜಶೇಖರ ಗುಡದಿನ್ನಿ, ಸುರೇಶ ಗೊಣಸಗಿ, ಎಂ.ಆರ್. ಪಾಟೀಲ ಬಳ್ಳೊಳ್ಳಿ ಮೊದಲಾದವರು ಉಪಸ್ಥಿತರಿದ್ದರು.
ಇಂಡಿ ಜಿಲ್ಲಾ ಕೇಂದ್ರವಾಗಿಸುವ ಧೃಡ ಸಂಕಲ್ಪ
ಕಳೆದ 3೦ ವರ್ಷಗಳಿಂದ ರಾಜಕೀಯ ಭವಿಷ್ಯವನ್ನು ಕರುಣಿಸಿದ ಇಂಡಿ ಜನತೆಯನ್ನು ನಿತ್ಯ ಆರಾಧಿಸುತ್ತೇನೆ, ಆಲಮಟ್ಟಿ ಜಲಾಶಯಕ್ಕಗಿ ವಿಜಯಪುರ ಜನತೆ ಸರ್ವಸ್ವವನ್ನು ತ್ಯಾಗ ಮಾಡಿದ ಮಹಾನ್ ತ್ಯಾಗಿಗಳು, ಈ ತ್ಯಾಗಿಗಳನ್ನು ಸ್ಮರಿಸಿಕೊಳ್ಳುವುದು ನಮ್ಮ ಆದ್ಯ ಕರ್ತವ್ಯ ಎಂದು ಇಂಡಿ ಶಾಸಕ ಯಶವಂತರಾಯಗೌಡ ಪಾಟೀಲ ಹೇಳಿದರು.
ಸ್ವಾತಂತ್ರö್ಯ ಹೋರಾಟ, ಸಾಹಿತ್ಯ ಹೀಗೆ ಭೀಮೆಯ ಒಡಲು ಇಂಡಿ ದೊಡ್ಡ ಮಟ್ಟದ ಕೊಡುಗೆಯನ್ನು ರಾಷ್ಟçಕ್ಕೆ, ನಾಡಿಗೆ ನೀಡಿದೆ ಎಂದರು. ಭೀಮಾಶಂಕರ ಸಹಕಾರಿ ಸಕ್ಕರೆ ಕಾರ್ಖಾನೆ ಪುನರುಜ್ಜೀವನ ಕನಸು ನನಸು ಮಾಡುವ ಮೂಲಕ ದಶಕಗಳಿಂದ ಆಗದ ಕೆಲಸಗಳನ್ನು ಮಾಡಲಾಗಿದೆ, ಲಿಂಬೆ ಅಭಿವೃದ್ಧಿ ಮಂಡಳಿ ಸ್ಥಾಪನೆ ಮಾಡಿದ್ದು ಸಹ ಸಿದ್ಧರಾಮಯ್ಯ ಸರ್ಕಾರ ಎಂದರು.
ಮುಂದಿನ ದಿನಗಳಲ್ಲಿ ಇಂಡಿ ಜಿಲ್ಲಾ ಕೇಂದ್ರವಾಗಿಸುವ ಸಂಕಲ್ಪ ಮಾಡಲಾಗಿದೆ, ಈಗಾಗಲೇ ಅತ್ಯಾಧುನಿಕ ಮಿನಿ ವಿಧಾನಸೌಧವಿದ್ದು ಪ್ರಸ್ತುತ ತಾಲೂಕಾ ಆಡಳಿತ ಕಾರ್ಯನಿರ್ವಹಿಸುತ್ತಿದ್ದು, ಮುಂದೊAದು ದಿನ ಜಿಲ್ಲಾ ಕೇಂದ್ರವಾಗುವ ದೂರದೃಷ್ಟಿಯಿಂದಲೇ ಈ ಬೃಹತ್ ಕಟ್ಟಡ ಕಟ್ಟಲಾಗಿದೆ ಎಂದರು. ಪೂರ್ವಜನರು ನಮಗೆ ಶಾಂತಿ, ಪ್ರೀತಿಯ ಮಂತ್ರ ಕಲಿಸಿದ್ದಾರೆ, ಕಳೆದ ೧೦ ವರ್ಷಗಳಿಂದ ಯಾವ ಅಹಿತಕರ ಘಟನೆ ನಡೆದಿಲ್ಲ, ಶಾಂತಿ ಎಲ್ಲೆಡೆ ಕಂಗೊಳಿಸುತ್ತಿದೆ ಎಂದರು. ಶ್ರೀ ಸಿದ್ದೇಶ್ವರ ಸ್ವಾಮಿಜಿಗಳು ಶಾಂತಿಯ ತತ್ವ ಬೋಧಿಸಿದ್ದಾರೆ, ನಿಸರ್ಗ ರಕ್ಷಣೆಯ ಪಾಠ ಹೇಳಿದ್ದಾರೆ. ಈ ತತ್ವವನ್ನು ನಿತ್ಯ ಪಾಲಿಸಲಾಗುತ್ತಿದೆ, ವಿಜಯಪುರ, ಸೊಲ್ಲಾಪೂರದಲ್ಲಿ ದಿನನಿತ್ಯ ನೀರು ಸಮರ್ಪಕವಾಗಿ ಸಿಗುತ್ತಿಲ್ಲ, ಆದರೆ ಇಂಡಿ ಜನತೆಗೆ ೨೪*೭ ಕುಡಿಯುವ ನೀರು ದೊರಕುತ್ತಿದೆ ಎಂದರು.