ದೇವರಹಿಪ್ಪರಗಿ: ಬಂಜಾರಾ ಸಮುದಾಯದವರಿಗೆ ಬಿಜೆಪಿ ಯಾವತ್ತೂ ಅನ್ಯಾಯ ಮಾಡಿಲ್ಲ. ದೇಶದ ಪ್ರಧಾನಿಗಳು ಬಂದು ತಾಂಡಾಗಳನ್ನು ಕಂದಾಯ ಗ್ರಾಮಗಳನ್ನಾಗಿ ಮಾಡುವುದರ ಜೊತೆಗೆ ಸ್ವಾವಲಂಬಿ ಬದುಕಿಗೆ ಸಹಕಾರಿಯಾಗಿದ್ದಾರೆ ಎಂದು ಶಾಸಕ ಸೋಮನಗೌಡ ಪಾಟೀಲ ಸಾಸನೂರ ಹೇಳಿದರು.
ಮುಳಸಾವಳಗಿ ತಾಂಡಾದಲ್ಲಿ ಜೆಡಿಎಸ್ ಹಾಗೂ ಕಾಂಗ್ರೆಸ್ ಕಾರ್ಯಕರ್ತರನ್ನು ಬಿಜೆಪಿ ಪಕ್ಷಕ್ಕೆ ಸೇರ್ಪಡೆ ಮಾಡಿಕೊಂಡು ಮಾತನಾಡಿದ ಅವರು, ಬಂಜಾರಾ ಸಮುದಾಯದವರು ಅತ್ಯಂತ ನಂಬಿಕೆಗೆ ಅರ್ಹರಾಗಿದ್ದಾರೆ. ಶ್ರಮಿಕ ವರ್ಗವಾಗಿದ್ದು, ನಂಬಿಕೆ ಮೇಲೆ ಜೀವನ ಮಾಡುತ್ತಿದ್ದಾರೆ. ಸದಾ ಶ್ರಮದಿಂದಲೇ ಜೀವನ ಸಾಗಿಸುತ್ತ ದುಡಿಯುವ ವರ್ಗವಾಗಿದೆ. ನಮ್ಮ ಸರಕಾರ ಬಂಜಾರಾ ಸಮುದಾಯದ ಅಭಿವೃದ್ಧಿಗಾಗಿ ಹಲವಾರು ಯೋಜನೆಗಳನ್ನು ಜಾರಿಗೆ ತಂದು ಅನುಷ್ಠಾನಗೊಳಿಸಿದೆ. ತಾಂಡಾ ಅಭಿವೃದ್ಧಿ ನಿಗಮದ ಮೂಲಕ ಮೂಲಭೂತ ಸೌಕರ್ಯಗಳನ್ನು ಒದಗಿಸುವಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡಿದ್ದೇನೆ. ನನ್ನ ಕ್ಷೇತ್ರದಲ್ಲಿ ಬರುವ ಎಲ್ಲ ತಾಂಡಾಗಳಿಗೂ ಬಹುತೇಕ ಉತ್ತಮ ರಸ್ತೆ, ಸಿಸಿ ರಸ್ತೆ ನಿರ್ಮಾಣ, ಜೆಜೆಎಂ ಮೂಲಕ ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿದೆ. ಗುಳೆ ಹೋಗುವುದನ್ನು ತಪ್ಪಿಸಲು ನರೇಗಾ ಯೋಜನೆಯಲ್ಲಿ ಪ್ರತಿಯೊಬ್ಬ ದುಡಿಯುವ ಕೈಗೆ ಉದ್ಯೋಗದ ವ್ಯವಸ್ಥೆ ಮಾಡಲಾಗಿದೆ. ಅಭಿವೃದ್ಧಿ ವಿಚಾರದಲ್ಲಿ ನಾನೆಂದು ಬೇಧಭಾವ ಮಾಡಿಲ್ಲ. ಪ್ರತಿಯೊಬ್ಬರಿಗ ಸಮಾನ ದೃಷ್ಠಿಯಿಂದ ಕಂಡು ಕೈಲಾದ ಮಟ್ಟಿಗೆ ಸಹಕಾರ ನೀಡಿದ್ದೇನೆ.
ಇನ್ನು ಕ್ಷೇತ್ರದ ರೈತರ ಬಾಳು ಹಸನಾಗಿಸಲು ಕಂಕಣಬದ್ಧನಾಗಿದ್ದು, ಸಮಗ್ರ ನೀರಾವರಿಗಾಗಿ ಶ್ರಮಿಸುತ್ತಿದ್ದೇನೆ. ಈಗಾಗಲೇ ಬೂದಿಹಾಳ ಪೀರಾಪುರ ಏತ ನೀರಾವರಿ ಯೋಜನೆ ಹಾಗೂ ಮುಳವಾಡ ಮೂರನೇ ಹಂತದ ಏತ ನೀರಾವರಿ ಮೂಲಕ ಕ್ಷೇತ್ರದ ಇಡೀ ರೈತರ ಜಮೀನು ನೀರಾವರಿಗೊಳಪಡಿಸಲು ಪ್ರಾಮಾಣಿಕ ಪ್ರಯತ್ನ ಮಾಡಿದ್ದೇನೆ. ಕೆರೆ ತುಂಬುವ ಯೋಜನೆಗೆ ಜಾರಿ ಮಾಡಿ ಬಹುತೇಕ ಎಲ್ಲ ಕೆರೆಗಳನ್ನು ತುಂಬಿಸಲಾಗಿದೆ. ಸುಮಾರು ೩ಸಾವಿರ ಕೋಟಿಗೂ ಹೆಚ್ಚು ಅನುದಾನ ತಂದು ಕ್ಷೇತ್ರದ ಪ್ರಗತಿಗೆ ಶ್ರಮಿಸುತ್ತಿದ್ದೇನೆ. ಅದಕ್ಕಾಗಿ ಅಭಿವೃದ್ಧಿ ಮಾಡಿ ಮತ ಕೇಳಲು ಬಂದಿರುವೆ ನನಗೆ ಬೆಂಬಲ ನೀಡಿ ಆಶೀರ್ವಾದ ಮಾಡಬೇಕೆಂದು ಮನವಿ ಮಾಡಿದರು.
ಇದೇ ಸಂದರ್ಭದಲ್ಲಿ ತಾಪಂ ಮಾಜಿ ಸದಸ್ಯ ಬಂಜಾರಾ ಸಮುದಾಯದ ಯುವ ಮುಖಂಡ ಪ್ರವೀಣ ಲಮಾಣಿ ಇವರು ತಮ್ಮ ಬೆಂಬಲಿಗರೊAದಿಗೆ ಜೆಡಿಎಸ್ ತೊರೆದು ಬಿಜೆಪಿ ಸೇರ್ಪಡೆಯಾದರು. ಪ್ರಚಾರ ಸಭೆಯಲ್ಲಿ ಬಿಜೆಪಿ ಪಕ್ಷದ ಪ್ರಮುಖರು, ಪದಾಧಿಕಾರಿಗಳು, ಕಾರ್ಯಕರ್ತರು ಪಾಲ್ಗೊಂಡಿದ್ದರು.
Subscribe to Updates
Get the latest creative news from FooBar about art, design and business.
ತಾಂಡಾಗಳನ್ನು ಕಂದಾಯ ಗ್ರಾಮಗಳನ್ನಾಗಿ ಮಾಡಿದ್ದು ಬಿಜೆಪಿ :ಸೋಮನಗೌಡ
Related Posts
Add A Comment