ದೇವರಹಿಪ್ಪರಗಿ: ಕಾಂಗ್ರೆಸ್ ಪಕ್ಷದ ಎಲ್ಲ ಆಕಾಂಕ್ಷಿಗಳ ಅವಿರತ ಶ್ರಮ ಹಾಗೂ ಸಹಕಾರದಿಂದ ಈ ಬಾರಿ ಚುನಾವಣೆಯಲ್ಲಿ 25 ಸಾವಿರಕ್ಕೂ ಅಧಿಕ ಮತಗಳ ಅಂತರದಿAದ ಗೆಲ್ಲುವ ವಿಶ್ವಾಸವಿದೆ ಎಂದು ಕಾಂಗ್ರೆಸ್ ಅಭ್ಯರ್ಥಿ ಶರಣಪ್ಪ ಸುಣಗಾರ ಹೇಳಿದರು.
ಪಟ್ಟಣದ ಕಾಂಗ್ರೆಸ್ ಕಾರ್ಯಾಲಯದಲ್ಲಿ ಗುರುವಾರ ಜರುಗಿದ ಪತ್ರಿಕಾಗೋಷ್ಟಿಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ದೇವರಹಿಪ್ಪರಗಿ ಕ್ಷೇತ್ರದ 7 ಜಿಲ್ಲಾ ಪಂಚಾಯಿತಿ ಕ್ಷೇತ್ರಗಳ ಬಹುತೇಕ ಗ್ರಾಮಗಳ ಮನೆಮನೆಗೆ ಭೇಟಿ ಮಾಡಿ ಮತದಾರರನ್ನು ಕಂಡು ಕಾಂಗ್ರೆಸ್ ಪಕ್ಷದ ಸಾಧನೆ ಹಾಗೂ ಪ್ರಣಾಳಿಕೆಗಳ ಬಗ್ಗೆ ವಿವರಿಸಲಾಗುತ್ತಿದೆ. ಜೊತೆಗೆ ಪಕ್ಷದ ಆಕಾಂಕ್ಷಿಗಳು ಸೇರಿದಂತೆ ಸಂತೋಷ ದೊಡ್ಡಮನಿ, ಕಲ್ಲಪ್ಪ ಮಟ್ಟಿ, ಪರಶುರಾಮ ಖಾನಾಪೂರ, ಅಶೋಕಗೌಡ ಪಾಟೀಲ, ಬಸನಗೌಡ ಕಾಮನಕೇರಿಯವರ ಜವಾಬ್ದಾರಿ ಹಾಗೂ ಕೋರವಾರ ಭಾಗದಲ್ಲಿ ಛಾಯಾಗೋಳ, ಹುಣಶ್ಯಾಳ ಭಾಗದಲ್ಲಿ ನಂದಕುಮಾರ ಭೈರಿ, ದೇಶಮುಖರು, ಬಂಡೆಪ್ಪನಹಳ್ಳಿ ಸಾಲೋಡಗಿಯಲ್ಲಿ ಬಿ.ಎಸ್.ಪಾಟೀಲ(ಯಾಳಗಿ), ಆನಂದ ದೊಡ್ಡಮನಿ ಸೇರಿದಂತೆ ವಿವಿಧ ಭಾಗಗಳಲ್ಲಿ ಸುಜಾತಾ ಕಳ್ಳಿಮನಿ, ಗೌರಮ್ಮ ಮುತ್ತತ್ತಿ ನೇತೃತ್ವದ ತಂಡಗಳ ಜವಾಬ್ದಾರಿಯಿಂದ ಕಾರ್ಯ ನಿರ್ವಹಿಸುವುದರ ಜೊತೆಗೆ ತಾವೇ ಅಭ್ಯರ್ಥಿಯಾಗಿ ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದು ಪಕ್ಷದ ಬಲ ಇಮ್ಮಡಿಗೊಳ್ಳಲು ಕಾರಣವಾಗಿದೆ.
ದೇವರಹಿಪ್ಪರಗಿ ಹಾಗೂ ಹೂವಿನಹಿಪ್ಪರಗಿ ಭಾಗಗಳಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರುಗಳಾದ ಬಶೀರ್‌ಅಹ್ಮದ ಬೇಪಾರಿ, ಬಾಳನಗೌಡ ಪಾಟೀಲ(ಸಾತಿಹಾಳ), ರಮೀಜಾ ನದಾಫ್, ಸರಿತಾ ನಾಯಿಕ್ ರವರ ಅವಿರತ ಪ್ರಯತ್ನ ದಿಂದಾಗಿ ಕಾಂಗ್ರೆಸ್ ಕಾರ್ಯಕರ್ತರಲ್ಲಿ ಹೊಸ ಹುಮ್ಮಸ್ಸು ಮೂಡಿದೆ. ಈ ರೀತಿಯಾಗಿ ಪ್ರತಿಯೊಬ್ಬರು ಜಿಲ್ಲಾ ಪಂಚಾಯಿತಿ ಸಮಿತಿಯ ಸದಸ್ಯರು ಹಾಗೂ ಕಾರ್ಯಕರ್ತರು ಒಗ್ಗಟ್ಟಿನಿಂದ ಕಾರ್ಯನಿರ್ವಹಿಸುತ್ತಿರುವುದನ್ನು ಮತದಾರರು ಗಮನಿಸುತ್ತಿದ್ದಾರೆ.
ಬಿಜೆಪಿ ಸರ್ಕಾರದ ವೈಪಲ್ಯ ಹಾಗೂ ಜೆಡಿಎಸ್ ಪಕ್ಷದ ಕುಟುಂಬ ಹಾಗೂ ಅವಕಾಶವಾದಿ ರಾಜಕಾರಣವನ್ನು ಎಲ್ಲರೂ ಗಮನಿಸಿದ್ದು ಇದಕ್ಕೆ ವಿಜಯಪುರದಲ್ಲಿ ಜೆಡಿಎಸ್ ಪಕ್ಷದ ಅಭ್ಯರ್ಥಿ ಕಣದಿಂದ ನಿವೃತ್ತಿಯಾಗಿರುವುದೇ ಉತ್ತಮ ಉದಾಹರಣೆಯಾಗಿದೆ. ಜೊತೆಗೆ ಮುಖ್ಯವಾಗಿ ರಡ್ಡಿ, ಕುರುಬ, ಪಂಚಮಸಾಲಿ, ಮುಸ್ಲೀಮ್ ಸಮುದಾಯದ ಪ್ರಮುಖರು ಪಕ್ಷದ ಪ್ರಚಾರಕ್ಕೆ ಕೈಜೋಡಿಸಿದ್ದು ನಿಶ್ಚಿತವಾಗಿ ಈ ಚುನಾವಣೆಯಲ್ಲಿ ೨೫ ಸಾವಿರಕ್ಕಿಂತಲೂ ಅಧಿಕ ಮತಗಳಿಂದ ಗೆಲ್ಲುವ ವಿಶ್ವಾಸವಿದೆ ಎಂದು ಭರವಸೆ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಯೂತ್ ಕಾಂಗ್ರೆಸ್ ಅಧ್ಯಕ್ಷ ಮುನೀರ್ ಬಿಜಾಪೂರ, ಮುರ್ತುಜಾ ತಾಂಬೋಳಿ, ಪ್ರಕಾಶ ಗುಡಿಮನಿ, ಕಾಶೀನಾಥ ಜಮಾದಾರ, ಬಸಯ್ಯ ಮಲ್ಲಿಕಾರ್ಜುನಮಠ ಇದ್ದರು.
Subscribe to Updates
Get the latest creative news from FooBar about art, design and business.
25 ಸಾವಿರಕ್ಕೂ ಅಧಿಕ ಮತಗಳ ಅಂತರದಿಂದ ಗೆಲ್ಲುವ ವಿಶ್ವಾಸ :ಸುಣಗಾರ
Related Posts
Add A Comment