Author: editor.udayarashmi@gmail.com

ಮುದ್ದೇಬಿಹಾಳ: ಪಟ್ಟಣದ ವಿದ್ಯಾನಗರದಲ್ಲಿರುವ ಧರ್ಮಸ್ಥಳ ಸಂಸ್ಥೆಯ ಕಾರ್ಯಾಲಯದ ಪಕ್ಕದ ಮತ್ತು ಅದರ ನಂತರದ ಎರಡೂ ಬದಿಯ ರಸ್ತೆಗಳಲ್ಲಿ ಸಿಸಿರಸ್ತೆ ನಿರ್ಮಿಸುತ್ತಿದ್ದು ಸಂಪೂರ್ಣ ಕಾನೂನು ಬಾಹಿರವಾಗಿವೆ. ನಿಯಮಗಳ ಪ್ರಕಾರ ರಸ್ತೆ ನಿರ್ಮಿಸುವಂತೆ ಪುರಸಭೆಯವರು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಹೆಸರು ಹೇಳಲು ಇಚ್ಛಿಸದ ಹಿರಿಯ ನ್ಯಾಯವಾದಿಗಳೊಬ್ಬರು ಒತ್ತಾಯಿಸಿದ್ದಾರೆ.ರಸ್ತೆ ನಿರ್ಮಿಸಬೇಕಾದರೆ ಕ್ರಿಯಾಯೋಜನೆಯ ಪ್ರಕಾರವೇ ನಿರ್ಮಿಸಬೇಕಾಗುತ್ತದೆ. ಆದರೆ ಇಲ್ಲಿ ಲೈನ್‌ಔಟ್ ಹಾಕದೇ, ರಸ್ತೆಯ ಆಕಾರವನ್ನು ರಚಿಸದೇ ಸಿಸಿರಸ್ತೆ ನಿರ್ಮಿಸುತ್ತಿದ್ದು ಇದು ಸಂಪೂರ್ಣ ಕಾನೂನು ಬಾಹಿರವಾಗಿದೆ. ಈ ಬಗ್ಗೆ ಈಗಾಗಲೇ ಗುತ್ತಿಗೆದಾರನ ಗಮನಕ್ಕೆ ತಂದರೂ ಯಾವುದೇ ಪ್ರಯೋಜವಾಗಿಲ್ಲ. ಇಲ್ಲಿನ ನಕಾಶೆಗಳನ್ನು ಗಮನಿಸಿದರೆ ದೊಡ್ಡದಾದ ರಸ್ತೆಗಳಿವೆ. ಆದರೆ ಹಲವು ನಿವಾಸಿಗಳು ಅತಿಕ್ರಮಿಸಿದ್ದು ಈ ರಸ್ತೆಯಲ್ಲಿ ತ್ರಿಚಕ್ರ ವಾಹನ ಓಡಾಡುವದೂ ಕಷ್ಟ ಸಾಧ್ಯವಾಗಿದೆ. ಅಂಬುಲೆನ್ಸ್ಗಳು, ನಾಲ್ಕು ಚಕ್ರದ ವಾಹನ ಸವಾರರಿಗೆ ಇಲ್ಲಿ ಬರಲು ಯಾವುದೇ ರಸ್ತೆಯೇ ಉಳಿದಿಲ್ಲ. ಹಾಗಾಗಿ ರಸ್ತೆಗೆ ಕಾಂಕ್ರೀಟ್ ಹಾಕುವ ಮೊದಲು ನಿಯಮಾನುಸಾರ ಅನುಸರಿಸಬೇಕಾದ ಕ್ರಮಗಳನ್ನು ಚಾಚೂ ತಪ್ಪದೇ ಪಾಲಿಸಿ ರಸ್ತೆ ನಿರ್ಮಾಣ ಮಾಡಬೇಕು. ನಿರ್ಲಕ್ಷಿಸಿ ಇದೇ…

Read More

ವಿಜಯಪುರ ಜಿಲ್ಲಾ ಕೇಂದ್ರ ಸಹಕಾರಿ ಬ್ಶಾಂಕಿನ ನಿದೇ೯ಶರಾಗಿ ಆಯ್ಕೆಯಾದ ಶಿವಾನಂದ ಪಾಟೀಲರಿ ಸನ್ಮಾನಬ್ರಹ್ಮದೇವನಮಡು : ವಿಜಯಪುರ ಜಿಲ್ಲಾ ಕೇಂದ್ರ ಸಹಕಾರಿ ಬ್ಶಾಂಕಿಗೆ ನೂತನ ನಿದೇ೯ಶಕರಾಗಿ ಅವಿರೋಧವಾಗಿ ಆಯ್ಕೆಯಾದ ಸಚಿವರಾದ ಶಿವಾನಂದ ಪಾಟೀಲರಿಗೆ ಗೋಲಗೇರಿಯ ಕಾಂಗ್ರೆಸ್ ಯುವ ಮುಖಂಡ, ಕೆಎಂಎಫ್ ಮಾಜಿ ನಿದೇ೯ಶಕ ಬಸವರಾಜ ಮಾರಲಭಾವಿ ಅಭಿನಂದಿಸಿದರು.ಈ ವೇಳೆ ಭೀಮನಗೌಡ ಬಿರಾದಾರ, ಮಂಜುನಾಥ ನಾಯ್ಕೋಡಿ ಇದ್ದರು.

Read More

ವಿಜಯಪುರ: ಜಿಪಿಟಿಆರ್-೨೦೨೨ನೇ ಸಾಲಿನ ಪದವಿಧರ ಪ್ರಾಥಮಿಕ ಶಾಲಾ ಶಿಕ್ಷಕರ ನೇಮಕಾತಿ ಸಂಬಂಧ ೧:೧ ಅಂತಿಮ ಆಯ್ಕೆ ಪಟ್ಟಿಯಲ್ಲಿನ ಅಭ್ಯರ್ಥಿಗಳು ಇತರೆ ಮೀಸಲಾತಿ ಕೋರಿ ಸಾಮಾನ್ಯ ವರ್ಗದಡಿಯಲ್ಲಿ ಆಯ್ಕೆಯಾದ ಅಭ್ಯರ್ಥಿಗಳ ಸಿಂಧುತ್ವ ಪ್ರಮಾಣ ಪತ್ರ ಪಡೆಯಲು ದಿನಾಂಕ ನಿಗದಿಗೊಳಿಸಲಾಗಿದೆ ಎಂದು ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕರು ತಿಳಿಸಿದ್ದಾರೆ.ತಂಡ ೧ರಲ್ಲಿ ಇಂಗ್ಲೀಷ್ ವಿಷಯದ ಅನುಕ್ರಮ ಸಂಖ್ಯೆ ೧ ರಿಂದ ೮೨ ಹಾಗೂ ಸಮಾಜ ಪಾಠಗಳು (ಕನ್ನಡ) ಅನುಕ್ರಮ ಸಂಖ್ಯೆ ೧ ರಿಂದ ೧೧೨, ತಂಡ-೨ ರಲ್ಲಿ ಗಣಿತ ಮತ್ತು ವಿಜ್ಞಾನ (ಉರ್ದು) ಅನುಕ್ರಮ ಸಂಖ್ಯೆ ೧ ರಿಂದ ೩೩, ಜೀವ ವಿಜ್ಞಾನ (ಉರ್ದು) ಅನುಕ್ರಮ ಸಂಖ್ಯೆ ೧ ರಿಂದ ೧೪ ಹಾಗೂ ಸಮಾಜ ಪಾಠಗಳು (ಉರ್ದು) ಅನುಕ್ರಮ ಸಂಖ್ಯೆ ೧ರಿಂದ ೧೭ರವರೆಗೆ.ತಂಡ-೩ರಲ್ಲಿ ಗಣಿತ ಮತ್ತು ವಿಜ್ಞಾನ (ಕನ್ನಡ) ಅನುಕ್ರಮ ಸಂಖ್ಯೆ ೧ ರಿಂದ ೧೫೦ ಹಾಗೂ ಜೀವ ವಿಜ್ಞಾನ (ಕನ್ನಡ) ಅನುಕ್ರಮ ಸಂಖ್ಯೆ ೧ರಿಂದ೧೦೮ರವರೆಗೆ ಮತ್ತು ತಂಡ-೪ ರಲ್ಲಿ ಗಣಿತ ಮತ್ತು ವಿಜ್ಞಾನ (ಕನ್ನಡ)…

Read More

ವಿಜಯಪುರ: ಪ್ರಸಕ್ತ ೨೦೨೨ನೇ ಸಾಲಿನಲ್ಲಿ ನೊಂದಣಿಯಾಗಿ ಎಂಫಿಲ್ ಹಾಗೂ ಪಿಎಚ್‌ಡಿ ವ್ಯಾಸಂಗ ಮಾಡುತ್ತಿರುವ ಅಲ್ಪಸಂಖ್ಯಾತರ ಸಮುದಾಯದ ಅಭ್ಯರ್ಥಿಗಳಿಂದ ಫೆಲೋಶಿಪ್ ಪಡೆಯಲು ಸೇವಾ ಸಿಂಧು ಪೋರ್ಟಲ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.ಅಲ್ಪಸಂಖ್ಯಾತ ಸಮುದಾಯದ ಮುಸ್ಲಿಂ, ಕ್ರಿಶ್ಚಿಯನ್, ಜೈನ್, ಸಿಖ್, ಬೌದ್ಧ ಹಾಗೂ ಪಾರ್ಸಿ ವಿದ್ಯಾರ್ಥಿಗಳಿಗೆ ಅಂಗೀಕೃತವಾದ ವಿಶ್ವವಿದ್ಯಾಲಯಳಲ್ಲಿ ಪೂರ್ಣಕಾಲಿಕವಾಗಿ ಪಿಎಚ್‌ಡಿ ಪದವಿಯಲ್ಲಿ ವ್ಯಾಸಂಗ ಮಾಡುತ್ತಿರುವ ಅಲ್ಪಸಂಖ್ಯಾತರ ವಿದ್ಯಾರ್ಥಿಗಳಿಗೆ ೩ ವರ್ಷಗಳ ಅವಧಿಗೆ ಹಾಗೂ ಎಂಫಿಲ್ ವ್ಯಾಸಂಗ್ ಮಾಡುತ್ತಿರುವ ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗೆ ಜೆಆರ್‌ಎಫ್ ಮಾದರಿಯಲ್ಲಿ ೨ ವರ್ಷದ ಅವಧಿಗೆ ಪ್ರತಿ ತಿಂಗಳ ೨೫ ಸಾವಿರ ರೂ. ಮತ್ತು ಪ್ರವರ್ಷಕ್ಕೆ ಒಂದು ಬಾರಿ ೧೦ ಸಾವಿರ ರೂ. ನಿರ್ವಹಣಾ ವೆಚ್ಚ ನೀಡಲಾಗುತ್ತದೆ.ಅರ್ಜಿ ಸಲ್ಲಿಸುವ ಅವಧಿಯನ್ನು ದಿನಾಂಕ : ೩೧-೧೦-೨೦೨೩ರವರೆಗೆ ವಿಸ್ತರಿಸಲಾಗಿದ್ದು, ಅರ್ಹ ವಿದ್ಯಾರ್ಥಿಗಳು ಸೇವಾಸಿಂಧು ಪೋರ್ಟಲ್ ಮೂಲಕ ಆನ್‌ಲೈನ್ ಅರ್ಜಿ ಸಲ್ಲಿಸಿ, ಅಗತ್ಯ ದಾಖಲೆಗಳನ್ನು ದೃಢೀಕೃತ ಪ್ರತಿಗಳೊಂದಿಗೆ ಜಿಲ್ಲಾ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ, ವಿಜಯಪುರ ಕಚೇರಿಗೆ ಸಲ್ಲಿಸಬೇಕು. ಈ ಕುರಿತಂತೆ ಹೆಚ್ಚಿನ ಮಾಹಿತಿಗಾಗಿ ದೂ: ೦೮೩೫೨-೨೯೫೫೨೩ ಸಂಖ್ಯೆಗೆ…

Read More

ವಿಜಯಪುರ: ನೇರ, ನಡೆ-ನುಡಿಯ ದಿಟ್ಟ ಪತ್ರಕರ್ತ ಶರಣು ಪಾಟೀಲ ನಿಧನಕ್ಕೆ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಶ್ರದ್ದಾಂಜಲಿ ಸಲ್ಲಿಸಿತು.ಪತ್ರಿಕಾ ಭವನದಲ್ಲಿ ಇಂದು ಸಾಂಯಕಾಲ ನಡೆದ ಶ್ರದ್ದಾಂಜಲಿ ಸಭೆಯಲ್ಲಿ ಜಿಲ್ಲಾಧ್ಯಕ್ಷ ಸಂಗಮೇಶ ಚೂರಿ ಅವರು ಮಾತನಾಡಿ, ಸಹೃದಯಿ ಶರಣು ಪಾಟೀಲರ ಒಡನಾಟ ಸ್ಮರಿಸಿ ಅವರೊಬ್ಬ ನಿಗರ್ವಿ ಪತ್ರಕರ್ತರಾಗಿದ್ದರು. ಸಿಂದಗಿ ತಾಲೂಕಿನ ಯಂಕಂಚಿ ಗ್ರಾಮದ ಗೌಡಕಿ ಮನೆತನದವರಾಗಿದ್ದರೂ ಗೌಡಕಿ ಗತ್ತು ತೋರದೇ ಸರಳ ಸಜ್ಜನಿಕೆ ವ್ಯಕ್ತಿಯಾಗಿದ್ದರು. ಅವರು ಕೆಲ ಕಾಲ ಅನಾರೋಗ್ಯ ಪೀಡಿತರಾಗಿ ದಿ. ೮ ರಂದು ನಮ್ಮನಗಲಿರುವುದರಿಂದ ಜಿಲ್ಲೆಯ ಮಾಧ್ಯಮಲೋಕ ಬಡವಾಗಿದೆ ಎಂದು ಕಂಬನಿ ಮಿಡಿದರು.ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಸಹಾಯಕ ನಿರ್ದೇಶಕ ಅಮರೇಶ ದೊಡಮನಿ ಅವರು ಮಾತನಾಡಿ, ಕಳೆದೊಂದು ವರ್ಷದಿಂದ ಶರಣು ಪಾಟೀಲರು ಪರಿಚಿತರಾಗಿದ್ದರು. ಈಗ ವಿಜಯವಾಣಿ ಪತ್ರಿಕೆ ಜಿಲ್ಲಾ ವರದಿಗಾರಾಗಿ ಕೆಲಸ ನಿರ್ವಹಿಸುತ್ತಿದ್ದ ಪಾಟೀಲರು ಹೆಸರಾಂತ ಪತ್ರಿಕೆಗಳಲ್ಲಿ ತಮ್ಮದೇಯಾದ ಛಾಪು ಮೂಡಿಸಿ ಹೋಗಿದ್ದಾರೆ ಅವರ ಕುಟುಂಬ ವರ್ಗಕ್ಕೆ ಅವರ ಅಗಲಿಕೆ ದುಃಖವನ್ನು ತಡೆದುಕೊಳ್ಳುವ ಶಕ್ತಿ ಪರಮಾತ್ಮ ನೀಡಲಿ ಎಂದರು.ಪತ್ರಕರ್ತರಿಗೆ…

Read More

ಡೆಂಗೀ ರಥ ಅಭಿಯಾನಕ್ಕೆ ಜಿಲ್ಲಾಧಿಕಾರಿ ಟಿ. ಭೂಬಾಲನ್ ಚಾಲನೆ ವಿಜಯಪುರ: ಜಿಲ್ಲಾಡಳಿತ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಜಿಲ್ಲಾ ರೋಗವಾಹಕ ಅಶ್ರಿತ ರೋಗಗಳ ನಿಯಂತ್ರಣಾದಿಕಾರಿಗಳ ಕಾರ್ಯಾಲಯ ವಿಜಯಪುರ ವತಿಯಿಂದ ಆಯೊಜಿಸಲಾಗಿರುವ ಡೆಂಗೀ ರಥ ಅಭಿಯಾನಕ್ಕೆ ಜಿಲ್ಲಾಧಿಕಾರಿ ಟಿ. ಭೂಬಾಲನ್ ಚಾಲನೆಯನ್ನು ನೀಡಿದರು.ಈ ಸಂದರ್ಭದಲ್ಲಿ ಮಾತನಾಡಿದ ಅವರು, ಡೆಂಗೀ ರೋಗ ನಿಯಂತ್ರಣದಲ್ಲಿ ಸಾರ್ವಜನಿಕರ ಪಾತ್ರ ಅತಿಮುಖ್ಯವಾಗಿದೆ. ಸಾರ್ವಜನಿಕರೂ ಸಹ ತಮ್ಮ ಅಕ್ಕ-ಪಕ್ಕದ ಪರಿಸರದಲ್ಲಿ ಸ್ವಚ್ಛತೆ ಕಾಪಾಡಿಕೊಳ್ಳಬೇಕು. ಡೆಂಗೀ ರೋಗ ಹರಡದಂತೆ ಎಲ್ಲ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕು ರೋಗ ಕುರಿತು ಜಾಗೃತಿ ಮೂಡಿಸಲು ರಥ ಅಭಿಯಾನ ಹಮ್ಮಿಕೊಂಡಿದ್ದು, ಜಿಲ್ಲೆಯಾದ್ಯಂತ ಸಂಚರಿಸಿ ಈ ರಥ ಜಾಗೃತಿ ಮೂಡಿಸಲಿದೆ ಎಂದು ಹೇಳಿದರು.ಜಿಲ್ಲಾ ಆರೋಗ್ಯಾಧಿಕಾರಿ ಬಸವರಾಜ ಹುಬ್ಬಳ್ಳಿ ಮಾತನಾಡಿ, ಡೆಂಗೀ ಜಾಗೃತಿ ರಥವು ಜಿಲ್ಲೆಯ ಎಲ್ಲ ಕಡೆ ಸಂಚರಿಸಿ ಡೆಂಗೀ ರೋಗ ಲಕ್ಷಣಗಳು ರೋಗ ಬರುವ ಕುರಿತು ರೋಗ ಬಾರದಂತೆ ತೆಗೆದುಕೊಳ್ಳಬಹುದಾದ ಮುಂಜಾಗ್ರತಾ ಕ್ರಮಗಳ ಕುರಿತು ಮಾಹಿತಿ ನೀಡಲಿದೆ ಸಾರ್ವಜನಿಕರು ಇದರ ಕುರಿತು ತಿಳಿದುಕೊಂಡು…

Read More

ವಿಜಯಪುರ: ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಾಹುಲ್ ಶಿಂಧೆ ಜಿಲ್ಲೆಯ ಬಸವನಬಾಗೇವಾಡಿ ತಾಲೂಕಾ ಪಂಚಾಯತಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.ಸೋಮವಾರ ತಾಲೂಕಾ ಪಂಚಾಯತಿಯ ವಿವಿಧ ವಿಭಾಗಗಳ ಪರಿಶೀಲನೆ ನಡೆಸಿದ ಅವರು, ಕಚೇರಿಗೆ ವಿವಿಧ ಕಾರ್ಯಗಳಿಗಾಗಿ ಬರುವ ಸಾರ್ವಜನಿಕರೊಂದಿಗೆ ಸೌಜನ್ಯದಿಂದ ವರ್ತಿಸಬೇಕು. ಯಾವುದೇ ಕಾರ್ಯಕ್ಕಾಗಿ ವಿಳಂಭ ಧೋರಣೆ ಅನುಸರಿಸದೇ ನಿಗದಿತ ಕಾಲಾವಧಿಯಲ್ಲಿ ಸಾರ್ವಜನಿಕರ ಕೆಲಸ ಮಾಡಿಕೊಡಬೇಕು. ಎಲ್ಲ ಅಧಿಕಾರಿ-ಸಿಬ್ಬಂದಿಗಳು ಯಾವುದೇ ದೂರುಗಳಿಗೆ ಆಸ್ಪದ ನೀಡದೆ ಸಮರ್ಪಕವಾಗಿ ಕಾರ್ಯನಿರ್ವಹಿಸಬೇಕು ಎಂದು ಹೇಳಿದರು.ನಂತರ ತಾಲೂಕು ಸರ್ಕಾರಿ ಆಸ್ಪತ್ರೆಗೆ ಬೇಟಿ ನೀಡಿದ ಅವರು, ಆಸ್ಪತ್ರೆಯ ವಿವಿಧ ವಿಭಾಗಗಳಾದ ಪ್ರಯೋಗಾಲಯ, ರಕ್ತ ಶೇಖರಣೆ ಕೇಂದ್ರ, ಡಯಾಲಸಿಸ್, ನೋಂದಣಿ ವಿಭಾಗ, ಆಪರೇಷನ್ ಕೊಠಡಿ, ಚಿಕ್ಕಮಕ್ಕಳ ಪ್ರಸೂತಿ ಕೇಂದ್ರ, ಹೀಗೆ ಆಸ್ಪತ್ರೆಯ ವಿವಿಧ ವಿಭಾಗಗಳಿಗೆ ಭೇಟಿ ನೀಡಿ ಪರಿಶೀಲನೆ ಮಾಡಿದರು. ಮತ್ತು ಆಸ್ಪತ್ರೆಗೆ ಅವಶ್ಯಕತೆ ಇರುವ ಮೂಲಭೂತ ಸೌಕರ್ಯಗಳ ಕುರಿತು ಪಂಚಾಯತ ರಾಜ್ ಇಂಜಿನಿಯರ ವಿಭಾಗಕ್ಕೆ ಬೇಡಿಕೆ ಸಲ್ಲಿಸುವಂತೆ ತಾಲೂಕ ಅರೋಗ್ಯ ಅಧಿಕಾರಿಗಳಿಗೆ ಸೂಚಿಸಿದರು. ಆಸ್ಪತ್ರೆಯಲ್ಲಿ ನೋಂದಣಿಯಾದ ರೋಗಿಗಳ ಜೊತೆ ಆಸ್ಪತ್ರೆಯಲ್ಲಿ…

Read More

ವಿಜಯಪುರ: ವಿಜಯಪುರ ಲೋಕಾಯುಕ್ತ ಪೋಲಿಸ್ ಅಧಿಕಾರಿಗಳಿಂದ ಅಕ್ಟೋಬರ್ ೧೧ ರಂದು ವಿಜಯಪುರ ಜಿಲ್ಲೆಯ ಚಡಚಣ ತಾಲೂಕಾ ಕೇಂದ್ರದಲ್ಲಿ ಸಾರ್ವಜನಿಕರ ಅಹವಾಲು ಸ್ವೀಕಾರ ಕಾರ್ಯಕ್ರಮ ನಡೆಯಲಿದೆ.ಅಂದು ಬೆಳಿಗ್ಗೆ ೧೦-೩೦ ಗಂಟೆಯಿಂದ ಪೋಲಿಸ್ ಅಧೀಕ್ಷಕರು (ಮೊ:೯೩೬೪೦೬೨೫೨೮), ಪೋಲಿಸ್ ಉಪಾಧೀಕ್ಷಕರು (ಮೊ:೯೩೬೪೦೬೨೫೫೭), ಪೋಲಿಸ್ ಇನ್ಸಪೆಕ್ಟರ್-೧ (ಮೊ:೯೩೬೪೦೬೨೬೪೦), ಪೋಲಿಸ್ ಇನ್ಸಪೆಕ್ಟರ್-೨(ಮೊ:೯೩೬೪೦೬೨೬೩೯) ಚಡಚಣ ತಾಲೂಕಾ ಪಂಚಾಯತ್ ಸಭಾ ಭವನದಲ್ಲಿ ಲೋಕಾಯುಕ್ತ ಕಾಯ್ದೆ ಮತ್ತು ಭ್ರಷ್ಟಾಚಾರ ನಿಯಂತ್ರಣ ಕಾಯ್ದೆಯಡಿಯಲ್ಲಿ ಸಾರ್ವಜನಿಕರಿಂದ ಭರ್ತಿ ಮಾಡಿದ ಮತ್ತು ನೋಟರಿಯಿಂದ ಅಫಿಡವಿಟ್ ಮಾಡಿಸಿದ ಅರ್ಜಿಗಳನ್ನು ಸ್ವೀಕರಿಸಲಿದ್ದಾರೆ.ಸರ್ಕಾರಿ ಕಚೇರಿಗಳಲ್ಲಿ ಅಧಿಕೃತವಾಗಿ ಕೆಲಸಗಳನ್ನು ಮಾಡಿಕೊಡುವಲ್ಲಿ ವಿಳಂಬ ಹಾಗೂ ಲಂಚದ ಬೇಡಿಕೆ, ಇನ್ನಿತರೆ ತೊಂದರೆ ನೀಡುತ್ತಿರುವ ಅಧಿಕಾರಿ-ನೌಕರರ ವಿರುದ್ದ ಸಾರ್ವಜನಿಕರು ದೂರುಗಳನ್ನು ನೀಡಬಹುದಾಗಿದ್ದು, ಸ್ಥಳದಲ್ಲಿ ಪರಿಹಾರ ಕಂಡುಕೊಳ್ಳಬಹುದಾದ ದೂರುಗಳನ್ನು ಸ್ಥಳೀಐ ಅಧಿಕಾರಿಗಳ ಸಹಕಾರದೊಂದಿಗೆ ಇತ್ಯರ್ಥಪಡಿಸಲು ಪ್ರಯತ್ನಿಸಲಾಗುವುದು. ಸರ್ಕಾರಿ ಅಧಿಕಾರಿಗಳ ಅಕ್ರಮ ಆಸ್ತಿ ಸಂಪಾದನೆ ಸರಕಾರಿ ಹಣದ ದುರುಪಯೋಗ, ಕಳಪೆ ಕಾಮಗಾರಿ ಹಾಗೂ ಇತರೆ ಯಾವುದೇ ರೀತಿಯ ಭ್ರಷ್ಟಾಚಾರ ದೂರುಗಳಿದ್ದಲ್ಲಿ ಹೆಚ್ಚಿನ ಮಾಹಿತಿಗಾಗಿ ಲೋಕಾಯುಕ್ತ ಕಚೇರಿ ದೂ: ೦೮೩೫೨-೨೫೫೩೩೩, ೨೫೭೭೮೬,…

Read More

ದೇವರಹಿಪ್ಪರಗಿ: ಸಮಾಜದ ಪರಿವರ್ತನೆ ಹಾಗೂ ಕುಟುಂಬದ ಬೆಳವಣಿಗೆಯಲ್ಲಿ ಮಹಿಳೆಯರ ಪಾತ್ರ ಅತ್ಯಂತ ಹಿರಿದಾದುದಾಗಿದೆ ಎಂದು ಸದಯ್ಯನಮಠದ ವೀರಗಂಗಾಧರಶ್ರೀಗಳು ಹೇಳಿದರು.ಪಟ್ಟಣದ ಕಲ್ಮೇಶ್ವರ ದೇವಸ್ಥಾನದ ಆವರಣದಲ್ಲಿ ಶನಿವಾರ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಹಾಗೂ ಪ್ರಗತಿ ಬಂಧು ಸ್ವಸಹಾಯ ಸಂಘಗಳ ಒಕ್ಕೂಟ ದೇವರಹಿಪ್ಪರಗಿ ಹಾಗೂ ಜಾಲವಾದ ವಲಯಗಳ ಅಡಿಯಲ್ಲಿ ಜರುಗಿದ ಗಾಂಧಿ ಸ್ಮರಣೆ ಮತ್ತು ದುಶ್ಚಟಗಳ ವಿರುದ್ಧ ಜಾಗೃತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ಮಹಿಳೆ ಮನೆಯ ಮಗಳಾಗಿ, ಒಡತಿಯಾಗಿ, ಸೊಸೆಯಾಗಿ ಕಾರ್ಯನಿರ್ವಹಿಸುವುದರ ಜೊತೆಗೆ ದುಶ್ಚಟಗಳಿಗೆ ಬಲಿಯಾದ ಸಹೋದರ, ಗಂಡ ಸೇರಿದಂತೆ ಮನೆಯ ಸದಸ್ಯನ ಜವಾಬ್ದಾರಿ ನಿರ್ವಹಿಸಿ ಮನೆಯ ನಿರ್ವಹಣೆಯ ಜೊತೆಗೆ ಅವರು ಸರಿಯಾದ ಮಾರ್ಗದಲ್ಲಿ ಸಾಗಲು ಸಹಕಾರ ನೀಡುತ್ತಾಳೆ ಎಂದರು.ಜಿಲ್ಲಾ ಜನಜಾಗೃತಿ ವೇದಿಕೆಯ ಉಪಾಧ್ಯಕ್ಷ ಅಶೋಕ ಅಲ್ಲಾಪೂರ ಮಾತನಾಡಿದರು.ನಿವೃತ್ತ ನೌಕರರ ಸಂಘದ ತಾಲ್ಲೂಕು ಅಧ್ಯಕ್ಷ ಸಿ.ಕೆ.ಕುದರಿ, ಜಿಲ್ಲಾ ಜನಜಾಗೃತಿ ಸಮಿತಿ ಸದಸ್ಯರಾದ ಪಂಚಾಕ್ಷರಿ ಮಿಂಚನಾಳ ಮಾತನಾಡಿ, ಜೀವನದಲ್ಲಿ ಉತ್ತಮ ಹವ್ಯಾಸಗಳು ಹಾಗೂ ದುಶ್ಚಟಗಳ ಪಾತ್ರದ ಕುರಿತು ವಿವರಿಸಿದರು.ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಎಲ್.ಡಿ.ಮುಲ್ಲಾ, ತಾಲ್ಲೂಕು…

Read More

ಮುದ್ದೇಬಿಹಾಳ: ಭಾರತ ಸೇರಿದಂತೆ ಕೆಲವು ದೇಶಗಳಲ್ಲಿ ರಾಮನ ನಾಮವನ್ನು ಪ್ರತಿ ನಿತ್ಯ ಸ್ಮರಣೆ ಮಾಡಲಾಗುತ್ತಿದೆ. ಆದರೆ ದೇಶದಲ್ಲಿನ ಕೆಲವು ಕಾಂಜಿ-ಪೀಂಜಿ ರಾಜಕಾರಣಿಗಳು ತಮ್ಮ ಬೇಳೆಯನ್ನು ಬೇಯಿಸಿಕೊಳ್ಳಲು ಹಿಂದುತ್ವವನ್ನು ಬಲಿ ಕೊಡುತ್ತಿದ್ದಾರೆ ಎಂದು ಬಿಜೆಪಿ ಮಂಡಲದ ನಿಕಟಪೂರ್ವ ಅಧ್ಯಕ್ಷ ಪರಶುರಾಮ ಪವಾರ ಹೇಳಿದರು.ಪಟ್ಟಣದ ಬಸವೇಶ್ವರ ವೃತ್ತದಲ್ಲಿ ಬಜರಂಗದಳದ ಶೌರ್ಯ ಜಾಗರಣ ರಥಯಾತ್ರೆಯಲ್ಲಿ ಭಾಗಿಯಾಗಿ ಅವರು ಮಾತನಾಡಿದರು.ಎಡಪಂಥಿಯರು ನಮ್ಮ ದೇಶದ ಮೇಲೆ ಅಕ್ರಮಣಗಳನ್ನು ಮಾಡುತ್ತಲೇ ಇದ್ದಾರೆ. ಇನ್ನೂ ಕೆಲವರು ಹಿಂದುಗಳನ್ನು ಡೆಂಗ್ಯೂ, ಮಲೇರಿಯಾ ಅಂತ ಅಪಹಾಸ್ಯ ಮಾಡುತ್ತಿದ್ದಾರೆ. ಇಂಥವರ ಮಧ್ಯೆಯೂ ಇವತ್ತು ನಮ್ಮ ದೇಶದಲ್ಲಿ ಒಳ್ಳೆಯ ವಾತಾವರಣ ಮತ್ತು ಕೆಲವೇ ದಿನಗಳಲ್ಲಿ ಅಯೋಧ್ಯೆಯಲ್ಲಿ ಭವ್ಯವಾದ ರಾಮ ಮಂದಿರ ನಿರ್ಮಾಣವಾಗುತ್ತಿದೆ. ಇದರ ಮೂಲಕ ಇಡೀ ವಿಶ್ವದಲ್ಲಿ ಹಿಂದುತ್ವ ಬೆಳೆಯಬೇಕು. ಧರ್ಮ ಜಾಗೃತಿಯಾಗಬೇಕು. ಹಿಂದುಗಳಿಗೆ ಇಂಥದ್ದೇ ಜಾತಿ, ಇಂಥದ್ದೇ ಭಾಷೆ ಇಲ್ಲ. ನಾವೆಲ್ಲರೂ ಒಂದು ನಾವೆಲ್ಲರೂ ಹಿಂದು ಎಂದು ಬದುಕಬೇಕು ಎಂದರು.ಹಿಂದೂ ಪರ ಸಂಘಟನೆಯ ಮುಖಂಡ ಉದಯ ರಾಯಚೂರ ಮಾತನಾಡಿ, ಜಗತ್ತಿನಲ್ಲಿರುವ ಹಿಂದೂಗಳೆರಲ್ಲರೂ ಸೇರಿ ಕಟ್ಟಿರುವ ಸಂಘಟನೆಯೇ…

Read More