ವಿಜಯಪುರ: ನೇರ, ನಡೆ-ನುಡಿಯ ದಿಟ್ಟ ಪತ್ರಕರ್ತ ಶರಣು ಪಾಟೀಲ ನಿಧನಕ್ಕೆ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಶ್ರದ್ದಾಂಜಲಿ ಸಲ್ಲಿಸಿತು.
ಪತ್ರಿಕಾ ಭವನದಲ್ಲಿ ಇಂದು ಸಾಂಯಕಾಲ ನಡೆದ ಶ್ರದ್ದಾಂಜಲಿ ಸಭೆಯಲ್ಲಿ ಜಿಲ್ಲಾಧ್ಯಕ್ಷ ಸಂಗಮೇಶ ಚೂರಿ ಅವರು ಮಾತನಾಡಿ, ಸಹೃದಯಿ ಶರಣು ಪಾಟೀಲರ ಒಡನಾಟ ಸ್ಮರಿಸಿ ಅವರೊಬ್ಬ ನಿಗರ್ವಿ ಪತ್ರಕರ್ತರಾಗಿದ್ದರು. ಸಿಂದಗಿ ತಾಲೂಕಿನ ಯಂಕಂಚಿ ಗ್ರಾಮದ ಗೌಡಕಿ ಮನೆತನದವರಾಗಿದ್ದರೂ ಗೌಡಕಿ ಗತ್ತು ತೋರದೇ ಸರಳ ಸಜ್ಜನಿಕೆ ವ್ಯಕ್ತಿಯಾಗಿದ್ದರು. ಅವರು ಕೆಲ ಕಾಲ ಅನಾರೋಗ್ಯ ಪೀಡಿತರಾಗಿ ದಿ. ೮ ರಂದು ನಮ್ಮನಗಲಿರುವುದರಿಂದ ಜಿಲ್ಲೆಯ ಮಾಧ್ಯಮಲೋಕ ಬಡವಾಗಿದೆ ಎಂದು ಕಂಬನಿ ಮಿಡಿದರು.
ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಸಹಾಯಕ ನಿರ್ದೇಶಕ ಅಮರೇಶ ದೊಡಮನಿ ಅವರು ಮಾತನಾಡಿ, ಕಳೆದೊಂದು ವರ್ಷದಿಂದ ಶರಣು ಪಾಟೀಲರು ಪರಿಚಿತರಾಗಿದ್ದರು. ಈಗ ವಿಜಯವಾಣಿ ಪತ್ರಿಕೆ ಜಿಲ್ಲಾ ವರದಿಗಾರಾಗಿ ಕೆಲಸ ನಿರ್ವಹಿಸುತ್ತಿದ್ದ ಪಾಟೀಲರು ಹೆಸರಾಂತ ಪತ್ರಿಕೆಗಳಲ್ಲಿ ತಮ್ಮದೇಯಾದ ಛಾಪು ಮೂಡಿಸಿ ಹೋಗಿದ್ದಾರೆ ಅವರ ಕುಟುಂಬ ವರ್ಗಕ್ಕೆ ಅವರ ಅಗಲಿಕೆ ದುಃಖವನ್ನು ತಡೆದುಕೊಳ್ಳುವ ಶಕ್ತಿ ಪರಮಾತ್ಮ ನೀಡಲಿ ಎಂದರು.
ಪತ್ರಕರ್ತರಿಗೆ ಎಷ್ಟೇ ಒತ್ತಡ ಕೆಲಸ ಕಾರ್ಯಗಳಿದ್ದರೂ ಕೂಡಾ ಅವರ ಆರೋಗ್ಯದ ಕಡೆಗೆ ಹೆಚ್ಚು ಕಾಳಜಿ ವಹಿಸುವದು ಅಗತ್ಯವಾಗಿದೆ ಎಂದು ಪತ್ರಕರ್ತ ಅಶೋಕ ಯಡಹಳ್ಳಿ ಕಿವಿಮಾತು ಹೇಳಿ ಶರಣು ಪಾಟೀಲರ ಕುಟುಂಬಕ್ಕೆ ಪರ್ತಕರ್ತರ ಸಂಘದಿಂದ ಹಾಗೂ ಸರ್ಕಾರದಿಂದ ಆರ್ಥಿಕ ಸೌಲಭ್ಯ ಕಲ್ಪಿಸುವುದು ತೀರ ಅಗತ್ಯವಾಗಿದೆ ಎಂದರು.
ಪತ್ರಕರ್ತರಾದ ಸುನೀಲ ಭಾಸ್ಕರ, ಮಹೇಶ ಶೆಟಗಾರ, ಶರಣು ಮಸಳಿ, ಬಸವರಾಜ ಉಳ್ಳಾಗಡ್ಡಿ, ರಾಜು ಪಾಟೀಲ, ದೇವೇಂದ್ರ ಹೆಳವರ ಮುಂತಾದವರು ಮಾತನಾಡಿದರು.
ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮೋಹನ ಕುಲಕರ್ಣಿ, ಗುರು ಗದ್ದನಕೇರಿ, ಷಡಕ್ಷರಿ ಕಂಪೂನವರ, ಶ್ರೀಶೈಲ ಕೊಟ್ಟಲಗಿ, ಸಮೀರ ಇನಾಮದಾರ, ಸೀತಾರಾಮ ಕುಲಕರ್ಣಿ, ರಾಹುಲ ಆಪ್ಟೆ, ವಿಠ್ಠಲ ಲಂಗೋಟಿ, ದೇವೇಂದ್ರ ಮುಂತಾದವರು ಉಪಸ್ಥಿತರಿದ್ದರು.
ಇದಕ್ಕೂ ಮೊದಲು ನಮ್ಮನಗಲಿದ ನಾಡಿನ ಜನರ ಹೆಸರಾಂತ ಪತ್ರಕರ್ತರಾದ
ಪ್ರಜಾವಾಣಿಯ ರಂಗನಾಥರಾವ್, ವಿಜಯ ಕರ್ನಾಟಕದ ನಾಗಣ್ಣ ಬಡಿಗೇರ, ಶರಣು ಪಾಟೀಲ ಮೂವರು ದಿಗ್ಗಜ ಪತ್ರಕರ್ತರಿಗೆ ಸಭೆಯಲ್ಲಿ ಮೌನ ಆಚರಿಸಿ ಗೌರವ ಸಲ್ಲಿಸಲಾಯಿತು.
Subscribe to Updates
Get the latest creative news from FooBar about art, design and business.
ದಿಟ್ಟ ಪತ್ರಕರ್ತ ಶರಣು ಪಾಟೀಲ ನಿಧನಕ್ಕೆ ಕಾನಿಪ ಶ್ರದ್ದಾಂಜಲಿ
Related Posts
Add A Comment