ಮುದ್ದೇಬಿಹಾಳ: ಭಾರತ ಸೇರಿದಂತೆ ಕೆಲವು ದೇಶಗಳಲ್ಲಿ ರಾಮನ ನಾಮವನ್ನು ಪ್ರತಿ ನಿತ್ಯ ಸ್ಮರಣೆ ಮಾಡಲಾಗುತ್ತಿದೆ. ಆದರೆ ದೇಶದಲ್ಲಿನ ಕೆಲವು ಕಾಂಜಿ-ಪೀಂಜಿ ರಾಜಕಾರಣಿಗಳು ತಮ್ಮ ಬೇಳೆಯನ್ನು ಬೇಯಿಸಿಕೊಳ್ಳಲು ಹಿಂದುತ್ವವನ್ನು ಬಲಿ ಕೊಡುತ್ತಿದ್ದಾರೆ ಎಂದು ಬಿಜೆಪಿ ಮಂಡಲದ ನಿಕಟಪೂರ್ವ ಅಧ್ಯಕ್ಷ ಪರಶುರಾಮ ಪವಾರ ಹೇಳಿದರು.
ಪಟ್ಟಣದ ಬಸವೇಶ್ವರ ವೃತ್ತದಲ್ಲಿ ಬಜರಂಗದಳದ ಶೌರ್ಯ ಜಾಗರಣ ರಥಯಾತ್ರೆಯಲ್ಲಿ ಭಾಗಿಯಾಗಿ ಅವರು ಮಾತನಾಡಿದರು.
ಎಡಪಂಥಿಯರು ನಮ್ಮ ದೇಶದ ಮೇಲೆ ಅಕ್ರಮಣಗಳನ್ನು ಮಾಡುತ್ತಲೇ ಇದ್ದಾರೆ. ಇನ್ನೂ ಕೆಲವರು ಹಿಂದುಗಳನ್ನು ಡೆಂಗ್ಯೂ, ಮಲೇರಿಯಾ ಅಂತ ಅಪಹಾಸ್ಯ ಮಾಡುತ್ತಿದ್ದಾರೆ. ಇಂಥವರ ಮಧ್ಯೆಯೂ ಇವತ್ತು ನಮ್ಮ ದೇಶದಲ್ಲಿ ಒಳ್ಳೆಯ ವಾತಾವರಣ ಮತ್ತು ಕೆಲವೇ ದಿನಗಳಲ್ಲಿ ಅಯೋಧ್ಯೆಯಲ್ಲಿ ಭವ್ಯವಾದ ರಾಮ ಮಂದಿರ ನಿರ್ಮಾಣವಾಗುತ್ತಿದೆ. ಇದರ ಮೂಲಕ ಇಡೀ ವಿಶ್ವದಲ್ಲಿ ಹಿಂದುತ್ವ ಬೆಳೆಯಬೇಕು. ಧರ್ಮ ಜಾಗೃತಿಯಾಗಬೇಕು. ಹಿಂದುಗಳಿಗೆ ಇಂಥದ್ದೇ ಜಾತಿ, ಇಂಥದ್ದೇ ಭಾಷೆ ಇಲ್ಲ. ನಾವೆಲ್ಲರೂ ಒಂದು ನಾವೆಲ್ಲರೂ ಹಿಂದು ಎಂದು ಬದುಕಬೇಕು ಎಂದರು.
ಹಿಂದೂ ಪರ ಸಂಘಟನೆಯ ಮುಖಂಡ ಉದಯ ರಾಯಚೂರ ಮಾತನಾಡಿ, ಜಗತ್ತಿನಲ್ಲಿರುವ ಹಿಂದೂಗಳೆರಲ್ಲರೂ ಸೇರಿ ಕಟ್ಟಿರುವ ಸಂಘಟನೆಯೇ ವಿಶ್ವ ಹಿಂದೂ ಪರಿಷದ್. ನಮ್ಮ ಗುರುತು ಬೃಹದಾಕಾರಾದ ಆಲದ ಮರ. ಅದನ್ನ ಯಾರೂ ಅಲ್ಲಾಡಿಸಲು ಸಾಧ್ಯವಿಲ್ಲ. ಜಗತ್ತು ಎಷ್ಟು ದಿನಗಳವರೆಗೆ ಬೆಳಗುವದೋ, ಸೂರ್ಯ ಚಂದ್ರರು ಎಷ್ಟು ದಿನಗಳ ವರೆಗೆ ಇರುವರೋ ಅಲ್ಲಿಯವರೆಗೆ ಹಿಂದೂ ಧರ್ಮವೂ ಕೂಡ ಇರುವದು ಸತ್ಯ ಎಂದರು.
ತಾಲೂಕಿನ ಬಸರಕೋಡ ಗ್ರಾಮದಿಂದ ಆಗಮಿಸಿದ ರಥವನ್ನು ಪಟ್ಟಣದ ಹೇಮರಡ್ಡಿ ದೇವಸ್ಥಾನದಲ್ಲಿ ಮಾತೆಯರು ಆರತಿ ಬೆಳಗುವ ಮೂಲಕ ಬರಮಾಡಿಕೊಂಡರು. ನಂತರ ಅಂಬೇಡ್ಕರ ವೃತ್ತಕ್ಕೆ ಆಗಮಿಸಿ ಡಾ|| ಬಾಬಾ ಸಹೇಬರಿಗೆ ಮಾಲಾರ್ಪಣೆ ಮಾಡಿ ಸಂಗೊಳ್ಳಿ ರಾಯಣ್ಣ ವೃತ್ತ, ಕಿತ್ತೂರು ರಾಣಿ ಚನ್ನಮ್ಮ ವೃತ್ತ ಮಾರ್ಗವಾಗಿ ಬಸವೇಶ್ವರ ವೃತ್ತ ತಲುಪಿ ಅಲ್ಲಿ ಬಹಿರಂಗ ಸಭೆ ನಡೆಸಲಾಯಿತು. ನಂತರ ಮುಖ್ಯ ಬಜಾರ, ಹಳೆಯ ತಹಶೀಲ್ದಾರ ಕಚೇರಿ, ಬಜಾರ ನ ಹನುಮಾನ ದೇವಸ್ಥಾನ, ಇಂದಿರಾ ವೃತ್ತ ಮಾರ್ಗವಾಗಿ ನಾತವಾಡ ಪಟ್ಟಣದ ಕಡೆಗೆ ಯಾತ್ರೆ ಸಾಗಿತು.
ಯಾತ್ರೆಯಲ್ಲಿ ವಿಶ್ವ ಹಿಂದೂ ಪರಿಷತ್ ಜಿಲ್ಲಾ ಕಾರ್ಯದರ್ಶಿ ಸಂತೋಷ ನಾಯಕ, ವಿಭಾಗ ವಿಶೇಶ ಸಂಪರ್ಕ ಪ್ರಮುಖ ಶಿವಾನಂದ ನಾಗರಾಳ, ಜಿಲ್ಲಾ ಸಹ ಕಾರ್ಯದರ್ಶಿ ಸುನೀಲ ಜಮಖಂಡಿ, ತಾಲೂಕು ಅಧ್ಯಕ್ಷ ಶಿವಯೋಗಪ್ಪ ರಾಂಪೂರ, ಉಪಾಧ್ಯಕ್ಷ ಡಾ||ವಿಜಯಕುಮಾರ ನಾಯಕ, ಮುಖಂಡರಾದ ಏಕನಾಥ ಗೆದ್ದಲಮರಿ, ರಾಜು ರಾಯಗೊಂಡ, ಜಗನ್ನಾಥ ಗೌಳಿ, ಲಿಂಗರಾಜ ಮಹೇಂದ್ರಕರ, ರಾಜು ಬಳ್ಳೊಳ್ಳಿ, ಪರಶುರಾಮ ನಾಲತವಾಡ, ಶೇಖರ ಢವಳಗಿ, ಮದನಸ್ವಾಮಿ ಬಸರಕೋಡ, ವಿನೋದ ಮಡಿವಾಳರ, ಸಂಜು ಬಾಗೇವಾಡಿ, ಪುನೀತ ಹಿಪ್ಪರಗಿ, ವಿರೇಶ ಢವಳಗಿ, ಅಶೋಕ ರಾಠೋಡ, ಜಗದೀಶ ಪಂಪಣ್ಣವರ ಸೇರಿದಂತೆ ಮತ್ತೀತರರು ಇದ್ದರು.
Related Posts
Add A Comment