ವಿಜಯಪುರ: ಜಿಪಿಟಿಆರ್-೨೦೨೨ನೇ ಸಾಲಿನ ಪದವಿಧರ ಪ್ರಾಥಮಿಕ ಶಾಲಾ ಶಿಕ್ಷಕರ ನೇಮಕಾತಿ ಸಂಬಂಧ ೧:೧ ಅಂತಿಮ ಆಯ್ಕೆ ಪಟ್ಟಿಯಲ್ಲಿನ ಅಭ್ಯರ್ಥಿಗಳು ಇತರೆ ಮೀಸಲಾತಿ ಕೋರಿ ಸಾಮಾನ್ಯ ವರ್ಗದಡಿಯಲ್ಲಿ ಆಯ್ಕೆಯಾದ ಅಭ್ಯರ್ಥಿಗಳ ಸಿಂಧುತ್ವ ಪ್ರಮಾಣ ಪತ್ರ ಪಡೆಯಲು ದಿನಾಂಕ ನಿಗದಿಗೊಳಿಸಲಾಗಿದೆ ಎಂದು ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕರು ತಿಳಿಸಿದ್ದಾರೆ.
ತಂಡ ೧ರಲ್ಲಿ ಇಂಗ್ಲೀಷ್ ವಿಷಯದ ಅನುಕ್ರಮ ಸಂಖ್ಯೆ ೧ ರಿಂದ ೮೨ ಹಾಗೂ ಸಮಾಜ ಪಾಠಗಳು (ಕನ್ನಡ) ಅನುಕ್ರಮ ಸಂಖ್ಯೆ ೧ ರಿಂದ ೧೧೨, ತಂಡ-೨ ರಲ್ಲಿ ಗಣಿತ ಮತ್ತು ವಿಜ್ಞಾನ (ಉರ್ದು) ಅನುಕ್ರಮ ಸಂಖ್ಯೆ ೧ ರಿಂದ ೩೩, ಜೀವ ವಿಜ್ಞಾನ (ಉರ್ದು) ಅನುಕ್ರಮ ಸಂಖ್ಯೆ ೧ ರಿಂದ ೧೪ ಹಾಗೂ ಸಮಾಜ ಪಾಠಗಳು (ಉರ್ದು) ಅನುಕ್ರಮ ಸಂಖ್ಯೆ ೧ರಿಂದ ೧೭ರವರೆಗೆ.
ತಂಡ-೩ರಲ್ಲಿ ಗಣಿತ ಮತ್ತು ವಿಜ್ಞಾನ (ಕನ್ನಡ) ಅನುಕ್ರಮ ಸಂಖ್ಯೆ ೧ ರಿಂದ ೧೫೦ ಹಾಗೂ ಜೀವ ವಿಜ್ಞಾನ (ಕನ್ನಡ) ಅನುಕ್ರಮ ಸಂಖ್ಯೆ ೧ರಿಂದ೧೦೮ರವರೆಗೆ ಮತ್ತು ತಂಡ-೪ ರಲ್ಲಿ ಗಣಿತ ಮತ್ತು ವಿಜ್ಞಾನ (ಕನ್ನಡ) ಅನುಕ್ರಮ ಸಂಖ್ಯೆ ೧೫೧ ರಿಂದ ೩೦೪ ಹಾಗೂ ಜೀವ ವಿಜ್ಞಾನ (ಕನ್ನಡ) ಅನುಕ್ರಮ ಸಂಖ್ಯೆ ೧೦೧ ರಿಂದ ೧೨೯ರವರೆಗೆ.
ಅಂತಿಮ ಆಯ್ಕೆ ಪಟ್ಟಿಯಲ್ಲಿನ ಅಭ್ಯರ್ಥಿಗಳು ಆಯುಕ್ತರ ಕಚೇರಿಯಿಂದ ನೀಡಿರುವ ಸೂಚನೆಗಳನ್ವಯ ದಿನಾಂಕ : ೧೨-೧೦-೨೦೨೩ ರಂದು ಬೆಳಿಗ್ಗೆ ೧೧ ರಿಂದ ಸಂಜೆ ೪ ಗಂಟೆವರೆಗೆ ವಿಷಯಕ್ಕನುಗುಣವಾಗಿ ಅನುಕ್ರಮ ಸಂಖ್ಯೆವಾರು ಉಪನಿರ್ದೇಶಕರ ಕಾರ್ಯಾಲಯ ಶಾಲಾ ಶಿಕ್ಷಣ ಇಲಾಖೆ ವಿಜಯಪುರದಲ್ಲಿ ತಮ್ಮ ಮೂಲ ದಾಖಲೆಗಳೊಂದಿಗೆ ಹಾಜರಾಗುವಂತೆ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಜಿಪಿಟಿಆರ್ ನೇಮಕಾತಿ ಆಯ್ಕೆ: ಸಿಂಧುತ್ವ ಪಡೆಯಲು ದಿನಾಂಕ ನಿಗದಿ
Related Posts
Add A Comment