ಮುದ್ದೇಬಿಹಾಳ: ಪಟ್ಟಣದ ವಿದ್ಯಾನಗರದಲ್ಲಿರುವ ಧರ್ಮಸ್ಥಳ ಸಂಸ್ಥೆಯ ಕಾರ್ಯಾಲಯದ ಪಕ್ಕದ ಮತ್ತು ಅದರ ನಂತರದ ಎರಡೂ ಬದಿಯ ರಸ್ತೆಗಳಲ್ಲಿ ಸಿಸಿರಸ್ತೆ ನಿರ್ಮಿಸುತ್ತಿದ್ದು ಸಂಪೂರ್ಣ ಕಾನೂನು ಬಾಹಿರವಾಗಿವೆ. ನಿಯಮಗಳ ಪ್ರಕಾರ ರಸ್ತೆ ನಿರ್ಮಿಸುವಂತೆ ಪುರಸಭೆಯವರು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಹೆಸರು ಹೇಳಲು ಇಚ್ಛಿಸದ ಹಿರಿಯ ನ್ಯಾಯವಾದಿಗಳೊಬ್ಬರು ಒತ್ತಾಯಿಸಿದ್ದಾರೆ.
ರಸ್ತೆ ನಿರ್ಮಿಸಬೇಕಾದರೆ ಕ್ರಿಯಾಯೋಜನೆಯ ಪ್ರಕಾರವೇ ನಿರ್ಮಿಸಬೇಕಾಗುತ್ತದೆ. ಆದರೆ ಇಲ್ಲಿ ಲೈನ್‌ಔಟ್ ಹಾಕದೇ, ರಸ್ತೆಯ ಆಕಾರವನ್ನು ರಚಿಸದೇ ಸಿಸಿರಸ್ತೆ ನಿರ್ಮಿಸುತ್ತಿದ್ದು ಇದು ಸಂಪೂರ್ಣ ಕಾನೂನು ಬಾಹಿರವಾಗಿದೆ. ಈ ಬಗ್ಗೆ ಈಗಾಗಲೇ ಗುತ್ತಿಗೆದಾರನ ಗಮನಕ್ಕೆ ತಂದರೂ ಯಾವುದೇ ಪ್ರಯೋಜವಾಗಿಲ್ಲ. ಇಲ್ಲಿನ ನಕಾಶೆಗಳನ್ನು ಗಮನಿಸಿದರೆ ದೊಡ್ಡದಾದ ರಸ್ತೆಗಳಿವೆ. ಆದರೆ ಹಲವು ನಿವಾಸಿಗಳು ಅತಿಕ್ರಮಿಸಿದ್ದು ಈ ರಸ್ತೆಯಲ್ಲಿ ತ್ರಿಚಕ್ರ ವಾಹನ ಓಡಾಡುವದೂ ಕಷ್ಟ ಸಾಧ್ಯವಾಗಿದೆ. ಅಂಬುಲೆನ್ಸ್ಗಳು, ನಾಲ್ಕು ಚಕ್ರದ ವಾಹನ ಸವಾರರಿಗೆ ಇಲ್ಲಿ ಬರಲು ಯಾವುದೇ ರಸ್ತೆಯೇ ಉಳಿದಿಲ್ಲ. ಹಾಗಾಗಿ ರಸ್ತೆಗೆ ಕಾಂಕ್ರೀಟ್ ಹಾಕುವ ಮೊದಲು ನಿಯಮಾನುಸಾರ ಅನುಸರಿಸಬೇಕಾದ ಕ್ರಮಗಳನ್ನು ಚಾಚೂ ತಪ್ಪದೇ ಪಾಲಿಸಿ ರಸ್ತೆ ನಿರ್ಮಾಣ ಮಾಡಬೇಕು. ನಿರ್ಲಕ್ಷಿಸಿ ಇದೇ ರೀತಿ ಮುಂದುವರೆಸಿದಲ್ಲಿ ಲೋಕಾಯುಕ್ತರಲ್ಲಿ ದೂರುವದಾಗಿ ತಿಳಿಸಿದ್ದಾರೆ.
Related Posts
Add A Comment