Subscribe to Updates
Get the latest creative news from FooBar about art, design and business.
Author: editor.udayarashmi@gmail.com
ತಮಿಳುನಾಡಿಗೆ ಅ.31ರವರೆಗೆ ನೀರು ಬಿಡುವಂತೆ ಕಾವೇರಿ ಜಲ ನಿಯಂತ್ರಣ ಸಮಿತಿ ಸೂಚನೆ ಬೆಂಗಳೂರು: ತಮಿಳುನಾಡಿಗೆ ಅ.16ರಿಂದ 31ರವರೆಗೆ ಪ್ರತಿನಿತ್ಯ 3,000 ಕ್ಯೂಸೆಕ್ ನೀರನ್ನು ಬಿಡುಗಡೆಗೊಳಿಸುವಂತೆ ಕಾವೇರಿ ಜಲ ನಿಯಂತ್ರಣ ಸಮಿತಿ ಕರ್ನಾಟಕಕ್ಕೆ ಬುಧವಾರ ಸೂಚಿಸಿದೆ.ಕರ್ನಾಟಕದಿಂದ ತಮಿಳುನಾಡಿಗೆ ಕಾವೇರಿ ನೀರು ಬಿಡುಗಡೆ ವಿಚಾರವಾಗಿ ದೆಹಲಿಯಲ್ಲಿ ಸಿಡಬ್ಲ್ಯುಸಿ ಸಭೆ ನಡೆದಿದ್ದು, ಸಭೆಯಲ್ಲಿ ಕರ್ನಾಟಕ 2023ರ ಅ.16ರಿಂದ 31ರವರೆಗೆ ಪ್ರತಿನಿತ್ಯ 3 ಸಾವಿರ ಕ್ಯೂಸೆಕ್ ನೀರನ್ನು ತಮಿಳುನಾಡಿಗೆ ಬಿಡುಗಡೆ ಮಾಡಬೇಕು. ಈ ಆದೇಶ ಅ.16ರ ಬೆಳಗ್ಗೆ 8:00 ಗಂಟೆಯಿಂದ ಅನ್ವಯವಾಗಲಿದ್ದು, ಅದನ್ನು 2023ರ ಅ.31ರವರೆಗೂ ಕಾಯ್ದುಕೊಳ್ಳಬೇಕು ಎಂದು ಕಾವೇರಿ ಜಲನಿಯಂತ್ರಣ ಪ್ರಾಧಿಕಾರವು ಹೇಳಿಕೆಯಲ್ಲಿ ತಿಳಿಸಿದೆ.ನೀರಿನ ಕೊರತೆಯನ್ನು ಎದುರಿಸುತ್ತಿರುವ ಹಿನ್ನೆಲೆಯಲ್ಲಿ ಬಿಳಿಗುಂಡ್ಲು ಜಲಾಶಯಕ್ಕೆ ನೀರು ಬಿಡುಗಡೆಗೊಳಿಸುವುದು ಅಸಾಧ್ಯವೆಂದು ಕರ್ನಾಟಕವು ಸಿಡಬ್ಲ್ಯುಆರ್ಸಿ ಮುಂದೆ ವಾದ ಮಂಡಿಸಿತ್ತು.ತಮಿಳುನಾಡಿಗೆ ನೀರು ಬಿಡುವ ಕುರಿತಾದ ಸುಪ್ರೀಂಕೋರ್ಟ್ ಹಾಗೂ ಕಾವೇರಿ ಜಲನಿರ್ವಹಣಾ ಪ್ರಾಧಿಕಾರದ ಆದೇಶದ ವಿರುದ್ಧ ಕರ್ನಾಟಕ ಮರು ಪರಿಶೀಲನಾ ಅರ್ಜಿಯನ್ನು ಸಲ್ಲಿಸಿತ್ತು. ರಾಜ್ಯದ ವಿವಿಧ ಭಾಗಗಳಲ್ಲಿ ತೀವ್ರ ಬರಪರಿಸ್ಥಿತಿ ಸೃಷ್ಟಿಯಾಗಿದ್ದು ತಮಿಳುನಾಡಿಗೆ ಕಾವೇರಿ…
ಬೆಂಗಳೂರು: ಇತ್ತೀಚಿನ ದಿನಗಳಲ್ಲಿ ಕೆಲವು ನಾಯಕರು ಪಕ್ಷ ತೊರೆದು ಕಾಂಗ್ರೆಸ್ ಸೇರುತ್ತಿರುವುದು ನಮ್ಮ ವೈಫಲ್ಯವಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಬಿಜೆಪಿ ಸಂಸದ ಡಿ.ವಿ. ಸದಾನಂದಗೌಡ ಬೇಸರ ವ್ಯಕ್ತಪಡಿಸಿದ್ದಾರೆ.ಗುರುವಾರ ಬೆಂಗಳೂರಿನಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ‘ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಪಕ್ಷ ಸೋಲಿನ ನಂತರ ಎಲ್ಲರನ್ನೂ ಒಟ್ಟಿಗೆ ತೆಗೆದುಕೊಂಡು ಹೋಗಿ ಪಕ್ಷ ಕಟ್ಟಿವಲ್ಲಿ ವಿಫಲವಾಗಿದ್ದೇವೆ” ಎಂದು ಹೇಳಿದರು.”ನಮ್ಮ ಕೆಲವು ನಾಯಕರು ಪಕ್ಷ ತೊರೆದು ಕಾಂಗ್ರೆಸ್ ಸೇರುತ್ತಿರುವುದು ನಮ್ಮ ವೈಫಲ್ಯವಾಗಿದೆ. ಸೋಲಿನ ನಂತರ ಪಕ್ಷ ಕಟ್ಟುವಲ್ಲಿ ನಾವು ವಿಫಲವಾಗಿದ್ದೇವೆ. ಅದರಿಂದಾಗಿಯೇ ನಾಯಕರು ಕಾಂಗ್ರೆಸ್‍ನತ್ತ ಮುಖ ಮಾಡಿದ್ದಾರೆ” ಎಂದರು.ನಮ್ಮವರು ಅನೇಕರು ಬಿಜೆಪಿ ಬಿಟ್ಟು ಹೋಗುತ್ತಿರುವುದು ನಿಜ, ಅವರನ್ನು ಮನವರಿಕೆ ಮಾಡಿ ಪಕ್ಷದಲ್ಲೇ ಉಳಿಸಿಕೊಳ್ಳುವ ಪ್ರಯತ್ನ ನಡೆಯುತ್ತಿಲ್ಲ ಎಂದ ಅವರು, ನಮ್ಮ ಶಾಸಕರ ಅನುದಾನ ವಾಪಸ್ ಪಡೆದಿರೋದು ಸರಿಯಲ್ಲ. ಅನುದಾನ ವಾಪಸ್ಸು ಪಡೆದಿರುವ ಹಿಂದೆ ಕಮಿಷನ್ ಪಡೆಯುವ ಉದ್ದೇಶವಿದೆ. ಇನ್ನೂ ಹೆಚ್ಚಿನ ಕಮಿಷನ್ ಪಡೆಯುವ ಸಲುವಾಗಿ ಶಾಸಕರ ಅನುದಾನ ವಾಪಸ್ಸು ಪಡೆದಿರಬಹುದು ಎಂದು ದೂರಿದರು.
ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ*- ವಿವೇಕಾನಂದ ಎಚ್.ಕೆ, ಬೆಂಗಳೂರು ತಮಿಳುನಾಡಿನ ಕರುಣಾನಿಧಿ ಕುಟುಂಬ, ಉತ್ತರ ಪ್ರದೇಶದ ಮುಲಯಾಂಸಿಂಗ್ ಕುಟುಂಬ, ಬಿಹಾರದ ಲಾಲೂ ಪ್ರಸಾದ್ ಕುಟುಂಬ, ಒರಿಸ್ಸಾದ ಬಿಜು ಪಾಟ್ನಾಯಕ್ ಕುಟುಂಬ, ಕಾಶ್ಮೀರದ ಷೇಕ್ ಅಬ್ದುಲ್ಲಾ ಕುಟುಂಬ, ಮುಪ್ತಿ ಮಹಮದ್ ಸಯೀದ್ ಕುಟುಂಬ, ಆಂಧ್ರ ಪ್ರದೇಶದ ರಾಜಶೇಖರ್ ರೆಡ್ಡಿ ಕುಟುಂಬ, ಮಹಾರಾಷ್ಟ್ರದ ಬಾಳಾ ಠಾಕ್ರೆ ಕುಟುಂಬ, ಜಾರ್ಖಂಡ್ ನ ಶಿಬು ಸೊರೇನ್ ಕುಟುಂಬ, ಪಂಜಾಬ್ ನ ಪ್ರಕಾಶ್ ಸಿಂಗ್ ಬಾದಲ್ ಕುಟುಂಬ, ಹರಿಯಾಣದ ಚೌಧರಿ ದೇವಿ ಲಾಲ್ ಚೌತಾಲ ಕುಟುಂಬ, ತೆಲಂಗಾಣದ ಚಂದ್ರಶೇಖರ್ ರಾವ್ ಕುಟುಂಬ ಹೀಗೆ ಕೆಲವು ಪ್ರಬಲ ಕುಟುಂಬಗಳು, ಒಂದಷ್ಟು ಜಾತಿಯ ಪ್ರಭಾವದಿಂದಾಗಿ ಭಾರತದ ರಾಜಕೀಯದಲ್ಲಿ ರಾಷ್ಟ್ರೀಯ ಪಕ್ಷಗಳಿಗೆ ಪರ್ಯಾಯ ಪ್ರಾದೇಶಿಕ ಪಕ್ಷಗಳಾಗಿ ಬೆಳವಣಿಗೆ ಹೊಂದಿವೆ..ಕರ್ನಾಟಕದಲ್ಲಿ ಮೊದಲ ಕಾಂಗ್ರೆಸ್ಸೇತರ ಸರ್ಕಾರದ ರಚನೆಯ ಜನತಾ ಪಕ್ಷದ ಮೂಲವನ್ನೇ ಹೊಂದಿರುವ ದೇವೇಗೌಡರ ನೇತೃತ್ವದ ಈಗಿನ ಜಾತ್ಯಾತೀತ ಜನತಾದಳ ಕರ್ನಾಟಕದ ಪ್ರಬಲ ಮೂರನೆಯ ರಾಜಕೀಯ ಶಕ್ತಿ…ಕಾಂಗ್ರೇಸ್ ಪಕ್ಷವನ್ನು ವಿರೋಧಿಸುತ್ತಿದ್ದ ಬಹಳಷ್ಟು ಸಮಾಜವಾದಿ ಹಿನ್ನಲೆಯ ನಾಯಕರು…
ಮಾಜಿ ಬಿಜೆಪಿ ಶಾಸಕ ರಾಮಣ್ಣ ಲಮಾಣಿ ಕಾಂಗ್ರೆಸ್ ಸೇರ್ಪಡೆ | ಆಮ್ ಆದ್ಮಿಯಿಂದ ಸ್ಪರ್ಧಿಸಿದ 100ಕ್ಕೂ ಹೆಚ್ಚು ಅಭ್ಯರ್ಥಿಗಳು ಕಾಂಗ್ರೆಸ್ಸಿನತ್ತ ಮುಖ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿಕೆ ಬೆಂಗಳೂರು: ಕಾಂಗ್ರೆಸ್ ನಾಯಕರಾದ ಎಂಎಲ್ಸಿ ಜಗದೀಶ್ ಶೆಟ್ಟರ್ ಮತ್ತು ಶಾಸಕ ಲಕ್ಷ್ಮಣ ಸವದಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆ ಮಾಡಿಕೊಳ್ಳಬಹುದಾದ ಉತ್ತರ ಮತ್ತು ದಕ್ಷಿಣ ಕರ್ನಾಟಕದ ನಾಯಕರ ದೊಡ್ಡ ಪಟ್ಟಿಯನ್ನೇ ತಂದು ಚರ್ಚೆ ಮಾಡಿದ್ದಾರೆ. ವಿವಿಧ ಪಕ್ಷಗಳ 42 ಕ್ಕೂ ಹೆಚ್ಚು ಮುಖಂಡರ ಅರ್ಜಿಗಳು ನನ್ನ ಮುಂದಿದೆ. ಆ ಹೆಸರುಗಳನ್ನು ಈಗ ಬಹಿರಂಗ ಮಾಡುವುದಿಲ್ಲ” ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ತಿಳಿಸಿದರು.ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ಗುರುವಾರ ನಡೆದ ಪಕ್ಷ ಸೇರ್ಪಡೆ ಕಾರ್ಯಕ್ರಮದಲ್ಲಿ ಮಾಜಿ ಬಿಜೆಪಿ ಶಾಸಕ ರಾಮಣ್ಣ ಲಮಾಣಿ ಅವರನ್ನುಪಕ್ಷಕ್ಕೆ ಸೇರ್ಪಡೆಗೊಳಿಸಿಕೊಂಡು ಅವರು ಮಾತನಾಡಿದರು.“ಸ್ಥಳೀಯ ನಾಯಕರುಗಳ ಜತೆ ಚರ್ಚೆ ಮಾಡಿ, ಒಮ್ಮತ ಮೂಡಿಸಿ ಅನ್ಯ ಪಕ್ಷಗಳ ನಾಯಕರುಗಳನ್ನು ಸೇರ್ಪಡೆ ಮಾಡಿಕೊಳ್ಳುವ ಪ್ರಕ್ರಿಯೆ ನಡೆಯುತ್ತಿದೆ. ವಿರೋಧ ಪಕ್ಷಗಳ ಮೈತ್ರಿಯನ್ನು ವಿರೋಧಿಸಿ ಕಾಂಗ್ರೆಸ್ ಪಕ್ಷವನ್ನು ಸೇರುತ್ತಿರುವುದರಿಂದ…
ಸಮರ್ಪಕ ನೀರು ಪೂರೈಕೆಗೆ ಡಿಸಿ ಟಿ.ಭೂಬಾಲನ್ ಕಟ್ಟುನಿಟ್ಟಿನ ಸೂಚನೆ ವಿಜಯಪುರ: ನಗರದ ಕುಡಿಯುವ ನೀರಿನ ಪೂರೈಕೆಯಲ್ಲಿ ಆಗುವ ವಿಳಂಬವನ್ನು ಸಹಿಸುವುದಿಲ್ಲ. ಯಾವುದೇ ತಾಂತ್ರಿಕ, ಸಿವಿಲ್ ಕಾಮಗಾರಿ ಸಮಸ್ಯೆ ನಿವಾರಿಸಿಕೊಂಡು ೧೦ ದಿನಗಳೊಳಗಾಗಿ ಸಮರ್ಪಕವಾಗಿ ಕುಡಿಯುವ ನೀರು ಪೂರೈಸಲು ಕ್ರಮ ಕೈಗೊಳ್ಳಬೇಕು. ಕುಡಿಯುವ ನೀರಿನ ವಿಷಯದಲ್ಲಿ ಲೋಪ-ವಿಳಂಬ ಅನುಸರಿಸಿದರೆ ಸಂಬAಧಿಸಿದ ಅಧಿಕಾರಿಗಳ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಟಿ.ಭೂಬಾಲನ್ ಎಚ್ಚರಿಕೆ ನೀಡಿದರು.ಗುರುವಾರ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ನಡೆದ ನಗರದ ಕುಡಿಯುವ ನೀರಿನ ಸಮಸ್ಯೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಜರುಗಿದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಕುಡಿಯುವ ನೀರಿನ ವಿಷಯದಲ್ಲಿ ನಿರ್ಲಕ್ಷ್ಯ ಸಲ್ಲದು. ವಾರ್ಡಗಳಲ್ಲಿರುವ ಕುಡಿಯುವ ನೀರಿನ ಸಮಸ್ಯೆ ಕುರಿತು ವಾರ್ಡ ಅಭಿಯಂತರರು ತಕ್ಷಣ ಸಮಸ್ಯೆ ಪರಿಹಾರಕ್ಕೆ ಕ್ರಮ ಕೈಗೊಳ್ಳಬೇಕು. ಸಮಸ್ಯೆ ಕುರಿತು ಮೇಲಾಧಿಕಾರಿಗಳಿಗೆ ಮಾಹಿತಿ ಒದಗಿಸಿ ಪರಿಹಾರ ಕಂಡುಕೊಳ್ಳಬೇಕು. ನಗರದಲ್ಲಿ ಕುಡಿಯುವ ನೀರು ಪೂರೈಕೆಗೆ ಸಂಬಂಧಿಸಿದ ಇಲಾಖೆ ಅಧಿಕಾರಿಗಳು ಸಮನ್ವಯತೆಯಿಂದ ಕಾರ್ಯನಿರ್ವಹಿಸಿ ನಿಗದಿತ ಅವಧಿಯಲ್ಲಿ ನೀರು…
ವಿಜಯಪರ: ಜಿಲ್ಲೆಯ ವಿಜಯಪುರ ತಾಲ್ಲೂಕಿನ ತೊರವಿ ಗ್ರಾಮ ಎಲ್.ಟಿ. ನಂ.೦೧, ಮರಗಮ್ಮ ದೇವಿ ದೇವಸ್ಥಾನದ ಆವರಣದಲ್ಲಿ ಯಾತ್ರಿನಿವಾಸ, ಜಿಮ್ ಬಿಲ್ಡಿಂಗ, ಮತ್ತು ಸಮುದಾಯ ಭವನ ನಿರ್ಮಾಣದಲ್ಲಿ ಭ್ರಷ್ಟಾಚಾರ ನಡೆದಿದ್ದು, ಈ ಮೂರು ಸ್ವಂತಕ್ಕೆ ಬಳಸಲು ಕೊಟ್ಟ ಅಧಿಕಾರಿಗಳ ಮೇಲೆ ಹಾಗೂ ಬಳಸಿಕೊಳ್ಳುತ್ತಿರುವ ಗೋಪಾಲ ನಂದು ಜಾಧವ (ಪೂಜಾರಿ) ವಿರುದ್ಧ ಕಾನೂನು ಕ್ರಮ ಜರಗಿಸುವಂತೆ ಆಗ್ರಹಿಸಿ ಕರ್ನಾಟಕ ಭೀಮ ಘರ್ಜನೆ ವತಿಯಿಂದ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.ಈ ಸಂದರ್ಭದಲ್ಲಿ ಸಂಘಟನೆಯ ರಾಜ್ಯಾಧ್ಯಕ್ಷ ರಮೇಶ ಬೋರಗಿ, ಸುನೀಲ ಹಾದಿಮನಿ, ಈಶ್ವರ ಸಂಜೀವಗೋಳ, ಅಜಯ ಬೋರಗಿ, ಅಭಿಷೇಕ ಬೋರಗಿ, ಆನಂದ ಅತಾಲಟ್ಟಿ, ರಾಹುಲ ಕಾಂಬಳೆ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
ಹೂವಿನಹಿಪ್ಪರಗಿ ಶಾಖಾ ಕಾಲುವೆ ಕೊನೆವರೆಗೆ ನೀರು ಹರಿಸಲು ಆಗ್ರಹ ಆಲಮಟ್ಟಿ: ಜನ, ಜಾನುವಾರುಗಳಿಗೆ ಕುಡಿಯಲು ನೀರು ಪೂರೈಸಲು ಹೂವಿನ ಹಿಪ್ಪರಗಿ ಶಾಖಾ ಕಾಲುವೆಯ ಕೊನೆ ಅಂಚಿನವರೆಗೂ ನೀರು ಹರಿಸಬೇಕು ಎಂದು ಆಗ್ರಹಿಸಿ ಹೂವಿನಹಿಪ್ಪರಗಿ ಶಾಖಾ ಕಾಲುವೆಯ ಹಿತರಕ್ಷಣಾ ವೇದಿಕೆಯ ನೇತೃತ್ವದಲ್ಲಿ ಹಲವು ರೈತರು ಗುರುವಾರ, ಇಲ್ಲಿಯ ಕೆಬಿಜೆಎನ್ ಎಲ್ ಮುಖ್ಯ ಎಂಜಿನಿಯರ್ ಕಚೇರಿ ಎದುರು ಪ್ರತಿಭಟಿಸಿದರು.ರೈತ ಮುಖಂಡ ಅರವಿಂದ ಕೊಪ್ಪ ಮಾತನಾಡಿ, ಈ ಶಾಖಾ ಕಾಲುವೆ ನಿರ್ಮಿಸಿ ಹಲವು ವರ್ಷಗಳಾಗಿವೆ. ಆದರೆ ಇದರ ಪ್ರಯೋಜನ ಕೆಲವೇ ಹಳ್ಳಿಗಳಿಗೆ ಮಾತ್ರ ಆಗಿದೆ. ಪ್ರಸ್ತುತ ಮಳೆಯ ಕೊರತೆಯ ಕಾರಣ, ಅಂತರ್ಜಲ ಮಟ್ಟವೂ ಕುಸಿದಿದೆ. ಈ ಅಚ್ಚುಕಟ್ಟು ಭಾಗದ ರೈತರ ಪರಿಸ್ಥಿತಿಯಂತೂ ಭೀಕರವಾಗಿದೆ. ಒಣ ಕಾಲುವೆಯಲ್ಲಿ ನೀರು ಬರಬಹುದು ಎಂಬ ಆಶಾ ಭಾವನೆಯೂ ಕಮರಿಹೋಗಿದೆ ಎಂದು ಅವರು ದೂರಿದರು.*ಕೇವಲ ೩೫ ಕಿ.ಮೀ ವರೆಗೆ ಮಾತ್ರ ನೀರು:*ಮುಳವಾಡ ಏತ ನೀರಾವರಿ ಯೋಜನೆಯಡಿ ಬರುವ ಹೂವಿನ ಹಿಪ್ಪರಗಿ ಶಾಖಾ ಕಾಲುವೆ ೬೩ ಕಿ.ಮೀ ಉದ್ದವಿದ್ದರೂ ಮೊದಲ ೩೫ ಕಿ.ಮೀವರೆಗೆ…
ವಿಜಯಪುರ: ಜಿಲ್ಲೆಯ ಗ್ರಾಮ ಪಂಚಾಯತಿಯಲ್ಲಿ ಬರುವ ಗ್ರಂಥಾಲಯಗಳಲ್ಲಿ ಖಾಲಿ ಇರುವ ೧೩ ಮೇಲ್ವಿಚಾರಕರ ಹುದ್ದೆಗಳ ಆಯ್ಕೆಗಾಗಿ ಅರ್ಜಿ ಆಹ್ವಾನಿಸಲಾಗಿದೆ.ಜಿಲ್ಲೆಯ ವಿಜಯಪುರ ತಾಲೂಕಿನ ೦೧ ಗ್ರಾಮ ಪಂಚಾಯತ್, ಇಂಡಿ ತಾಲೂಕಿನ ೦೩, ನಿಡಗುಂದಿ ತಾಲೂಕಿನ ೦೩, ಮುದ್ದೇಬಿಹಾಳ ತಾಲೂಕಿನ ೦೧, ಸಿಂದಗಿ ತಾಲೂಕಿನ ೦೩ ಗ್ರಾಮ ಪಂಚಾಯತ್ ಗ್ರಂಥಾಲಯ ಸೇರಿದಂತೆ ಒಟ್ಟು ೧೧ ಹೊಸ ಗ್ರಾಮ ಪಂಚಾಯತ್ ಗ್ರಂಥಾಲಯಗಳು ಹಾಗೂ ಹಳೆಯ ೦೨ ಸಿಂದಗಿ ತಾಲುಕಿನ ಕನ್ನೊಳ್ಳಿ ಹಾಗೂ ತಾಳಿಕೋಟೆ ತಾಲೂಕಿನ ಕೊಣ್ಣೂರ ಗ್ರಾಮ ಪಂಚಾಯತ್ ಗ್ರಂಥಾಲಯಗಳಲ್ಲಿ ಖಾಲಿ ಇರುವ ಮೇಲ್ವಿಚಾರಕ ಆಯ್ಕೆಗೆ ಅರ್ಜಿ ಆಹ್ವಾನಿಸಲಾಗಿದೆ.ಇಂಡಿ ತಾಲೂಕಿನ ಅರ್ಜುಣಗಿ ಬಿ.ಕೆ. ಮೇಲ್ವಿಚಾರಕ ಹುದ್ದೆಯನ್ನು ಪಜಾ (ಇತರೆ), ಸಿಂದಗಿ ತಾಲೂಕಿನ ಕಕ್ಕಳಮೇಲಿ ಮೇಲ್ವಿಚಾರಕ ಹುದ್ದೆ ಸಾ.ಅ.(ಇತರೆ), ವಿಜಯಪುರ ತಾಲೂಕಿನ ಕುಮಟಗಿ ಮೇಲ್ವಿಚಾರಕ ಹುದ್ದೆ ಪ.ಪಂ.(ಇತರೆ), ನಿಡಗುಂದಿ ತಾಲೂಕಿನ ಗಣಿ ಆರ್.ಸಿ. ಮೇಲ್ವಿಚಾರಕ ಹುದ್ದೆ ಪ್ರವರ್ಗ-೧(ಇತರೆ), ಮುದ್ದೇಬಿಹಾಳ ತಾಲೂಕಿನ ನಾಗರಬೆಟ್ಟ ಮೇಲ್ವಿಚಾರಕ ಹುದ್ದೆ ಸಾ.ಅ.(ಗ್ರಾ.ಅ), ಸಿಂದಗಿ ತಾಲೂಕಿನ ನಾಗಾವಿ ಬಿ.ಕೆ. ಮೇಲ್ವಿಚಾರಕ ಹುದ್ದೆ ಪ್ರವರ್ಗ-೨(ಎ)(ಇತರೆ), ನಿಡಗುಂದಿ…
ವಿಜಯಪುರ: ಸಾಂಪ್ರದಾಯಿಕ ಕುಟುಂಬ ವ್ಯವಸ್ಥೆಯಲ್ಲಿ ಹೆಣ್ಣು ಮತ್ತು ಗಂಡಿನ ಮಧ್ಯೆ ಸಮಾನತೆ ತರಲು ಪ್ರತಿ ಮನೆಯ ಗೃಹಿಣಿ ಪ್ರಯತ್ನಿಸಬೇಕು. ಕುಟುಂಬದಿಂದಲೇ ಸಮಾನತೆ ಅರಿವು ಪ್ರಾರಂಭವಾಗಬೇಕು ಎಂದು ಹಿರಿಯ ಸಿವಿಲ್ ನ್ಯಾಯಾಧೀಶರೂ ಆದ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಸಂತೋಷ ಕುಂದರ್ ಹೇಳಿದರು.ಅವರು ಜಿಲ್ಲಾಡಳಿತ, ಜಿಲ್ಲಾ ಪಂಚಾಯತಿ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ವಿಜಯಪುರ ನಗರ ಶಿಶು ಅಭಿವೃದ್ಧಿ ಯೋಜನಾ ಇಲಾಖೆ ಇವರ ಸಹಯೋಗದಲ್ಲಿ ನಗರದ ಕಕ್ಕಯ್ಯ ಕಾಲೋನಿಯಲ್ಲಿ ಬುಧವಾರ ಹಮ್ಮಿಕೊಂಡ ”ಹೆಣ್ಣನ್ನು ರಕ್ಷಿಸಿ ಹೆಣ್ಣು ಮಕ್ಕಳಿಗೆ ಕಲಿಸಿ” ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.ಮಹಾನಗರ ಪಾಲಿಕೆ ಮಾಜಿ ಸದಸ್ಯ ಉಮೇಶ ವಂದಾಲ ಮಾತನಾಡಿದರು.ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಕೆ.ಕೆ.ಚವ್ಹಾಣ “ಬೇಟಿ ಬಚಾವೋ, ಬೇಟಿ ಪಡಾವೋ” ಕಾರ್ಯಕ್ರಮದ ಗುರಿ ಮತ್ತು ಉದ್ದೇಶ, ವಕೀಲರಾದ ಎಂ.ಸಿ.ಲೋಗಾಂವ್ ಬಡತನದಲ್ಲಿರುವಂತಹ ಹೆಣ್ಣು ಮಕ್ಕಳಿಗೆ ಉಚಿತ ಕಾನೂನಿನ ಬಗ್ಗೆ ಮಾತನಾಡಿದರು.ಈ ಸಂದರ್ಭದಲ್ಲಿ ತಾಯಂದಿಯರಿಗೆ ಸನ್ಮಾನ ಹಾಗೂ ಮಕ್ಕಳಿಂದ…
ಬಸವನಬಾಗೇವಾಡಿ: ಗ್ರಾಮ ಪಂಚಾಯಿತಿಯಲ್ಲಿ ನಡೆಯುವ ಸಾಮಾಜಿಕ ಲೆಕ್ಕ ಪರಿಶೋಧನೆಯನ್ನು ಪ್ರಾಮಾಣಿಕವಾಗಿ ಕೈಗೊಳ್ಳಬೇಕೆಂದು ತಾಲೂಕು ಪಂಚಾಯಿತಿ ಇಓ ಡಾ.ಯುವರಾಜ ಹನಗಂಡಿ ಹೇಳಿದರು.ಪಟ್ಟಣದ ತಾಲೂಕು ಪಂಚಾಯಿತಿಯ ರಾಜೀವಗಾಂಧಿ ಸೇವಾ ಸಭಾಭವನದಲ್ಲಿ ೨೦೨೩-೨೪ ನೇ ಸಾಲಿನ ಸಾಮಾಜಿಕ ಪರಿಶೋಧನೆ ನಡೆಸಲು ಗ್ರಾಮ ಪಂಚಾಯಿತಿ ಸಂಪನ್ಮೂಲ ವ್ಯಕ್ತಿಗಳಿಗೆ ಎರಡು ದಿನಗಳ ಕಾಲ ಹಮ್ಮಿಕೊಂಡಿರುವ ತರಬೇತಿ ಕಾರ್ಯಾಗಾರವನ್ನು ಗುರುವಾರ ಸಸಿಗೆ ನೀರುಣಿಸುವ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು, ಆಯಾ ಗ್ರಾಮ ಪಂಚಾಯಿತಿಯಲ್ಲಿ ಅ.೧೬ ರಿಂದ ಸಾಮಾಜಿಕ ಲೆಕ್ಕ ಪರಿಶೋಧನೆ ಆರಂಭವಾಗುತ್ತಿದೆ. ಇದರಲ್ಲಿ ಮಹಾತ್ಮಾಗಾಂಽಜಿ ಉದ್ಯೋಗ ಖಾತ್ರಿ ಯೋಜನೆ ಮತ್ತು ೧೫ ನೇ ಹಣಕಾಸಿನ ಲೆಕ್ಕ ಪರಿಶೋಧನೆ ಕೈಗೊಳ್ಳಬೇಕು. ಕಳೆದ ಎರಡು ವರ್ಷಗಳಿಂದ ಸಾಮಾಜಿಕ ಲೆಕ್ಕ ಪರಿಶೋಧನೆ ಕುರಿತು ತರಬೇತಿ ನಡೆದಿರಲಿಲ್ಲ. ಇದೀಗ ಎರಡು ದಿನಗಳ ಕಾಲ ತರಬೇತಿ ಹಮ್ಮಿಕೊಂಡಿದ್ದು. ಸಂಪನ್ಮೂಲ ವ್ಯಕ್ತಿಗಳು ತರಬೇತಿಯ ಸದುಪಯೋಗ ಪಡೆದುಕೊಳ್ಳಬೇಕೆಂದರು.ತಾಲೂಕು ಪಂಚಾಯಿತಿ ಸಹಾಯಕ ನಿರ್ದೇಶಕ ಪ್ರಕಾಶ ದೇಸಾಯಿ ಅವರು ಮಹಾತ್ಮಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯ ಬಗ್ಗೆ ಮಾಹಿತಿಯನ್ನು ಶಿಬಿರಾರ್ಥಿಗಳಿಗೆ ನೀಡಿದರು.ಚಿದಾನಂದ ಕೋಲಾರ,…
