ಬೆಂಗಳೂರು: ಇತ್ತೀಚಿನ ದಿನಗಳಲ್ಲಿ ಕೆಲವು ನಾಯಕರು ಪಕ್ಷ ತೊರೆದು ಕಾಂಗ್ರೆಸ್ ಸೇರುತ್ತಿರುವುದು ನಮ್ಮ ವೈಫಲ್ಯವಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಬಿಜೆಪಿ ಸಂಸದ ಡಿ.ವಿ. ಸದಾನಂದಗೌಡ ಬೇಸರ ವ್ಯಕ್ತಪಡಿಸಿದ್ದಾರೆ.
ಗುರುವಾರ ಬೆಂಗಳೂರಿನಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ‘ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಪಕ್ಷ ಸೋಲಿನ ನಂತರ ಎಲ್ಲರನ್ನೂ ಒಟ್ಟಿಗೆ ತೆಗೆದುಕೊಂಡು ಹೋಗಿ ಪಕ್ಷ ಕಟ್ಟಿವಲ್ಲಿ ವಿಫಲವಾಗಿದ್ದೇವೆ” ಎಂದು ಹೇಳಿದರು.
”ನಮ್ಮ ಕೆಲವು ನಾಯಕರು ಪಕ್ಷ ತೊರೆದು ಕಾಂಗ್ರೆಸ್ ಸೇರುತ್ತಿರುವುದು ನಮ್ಮ ವೈಫಲ್ಯವಾಗಿದೆ. ಸೋಲಿನ ನಂತರ ಪಕ್ಷ ಕಟ್ಟುವಲ್ಲಿ ನಾವು ವಿಫಲವಾಗಿದ್ದೇವೆ. ಅದರಿಂದಾಗಿಯೇ ನಾಯಕರು ಕಾಂಗ್ರೆಸ್‍ನತ್ತ ಮುಖ ಮಾಡಿದ್ದಾರೆ” ಎಂದರು.
ನಮ್ಮವರು ಅನೇಕರು ಬಿಜೆಪಿ ಬಿಟ್ಟು ಹೋಗುತ್ತಿರುವುದು ನಿಜ, ಅವರನ್ನು ಮನವರಿಕೆ ಮಾಡಿ ಪಕ್ಷದಲ್ಲೇ ಉಳಿಸಿಕೊಳ್ಳುವ ಪ್ರಯತ್ನ ನಡೆಯುತ್ತಿಲ್ಲ ಎಂದ ಅವರು, ನಮ್ಮ ಶಾಸಕರ ಅನುದಾನ ವಾಪಸ್ ಪಡೆದಿರೋದು ಸರಿಯಲ್ಲ. ಅನುದಾನ ವಾಪಸ್ಸು ಪಡೆದಿರುವ ಹಿಂದೆ ಕಮಿಷನ್ ಪಡೆಯುವ ಉದ್ದೇಶವಿದೆ. ಇನ್ನೂ ಹೆಚ್ಚಿನ ಕಮಿಷನ್ ಪಡೆಯುವ ಸಲುವಾಗಿ ಶಾಸಕರ ಅನುದಾನ ವಾಪಸ್ಸು ಪಡೆದಿರಬಹುದು ಎಂದು ದೂರಿದರು.
ಕೆಲವರು ಪಕ್ಷ ತೊರೆಯುತ್ತಿರುವುದಕ್ಕೆ ನಮ್ಮ ವೈಫಲ್ಯ ಕಾರಣ :ಸದಾನಂದಗೌಡ
Related Posts
Add A Comment