ವಿಜಯಪರ: ಜಿಲ್ಲೆಯ ವಿಜಯಪುರ ತಾಲ್ಲೂಕಿನ ತೊರವಿ ಗ್ರಾಮ ಎಲ್.ಟಿ. ನಂ.೦೧, ಮರಗಮ್ಮ ದೇವಿ ದೇವಸ್ಥಾನದ ಆವರಣದಲ್ಲಿ ಯಾತ್ರಿನಿವಾಸ, ಜಿಮ್ ಬಿಲ್ಡಿಂಗ, ಮತ್ತು ಸಮುದಾಯ ಭವನ ನಿರ್ಮಾಣದಲ್ಲಿ ಭ್ರಷ್ಟಾಚಾರ ನಡೆದಿದ್ದು, ಈ ಮೂರು ಸ್ವಂತಕ್ಕೆ ಬಳಸಲು ಕೊಟ್ಟ ಅಧಿಕಾರಿಗಳ ಮೇಲೆ ಹಾಗೂ ಬಳಸಿಕೊಳ್ಳುತ್ತಿರುವ ಗೋಪಾಲ ನಂದು ಜಾಧವ (ಪೂಜಾರಿ) ವಿರುದ್ಧ ಕಾನೂನು ಕ್ರಮ ಜರಗಿಸುವಂತೆ ಆಗ್ರಹಿಸಿ ಕರ್ನಾಟಕ ಭೀಮ ಘರ್ಜನೆ ವತಿಯಿಂದ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಸಂಘಟನೆಯ ರಾಜ್ಯಾಧ್ಯಕ್ಷ ರಮೇಶ ಬೋರಗಿ, ಸುನೀಲ ಹಾದಿಮನಿ, ಈಶ್ವರ ಸಂಜೀವಗೋಳ, ಅಜಯ ಬೋರಗಿ, ಅಭಿಷೇಕ ಬೋರಗಿ, ಆನಂದ ಅತಾಲಟ್ಟಿ, ರಾಹುಲ ಕಾಂಬಳೆ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
Related Posts
Add A Comment