ವಿಜಯಪುರ: ಜಿಲ್ಲೆಯ ಗ್ರಾಮ ಪಂಚಾಯತಿಯಲ್ಲಿ ಬರುವ ಗ್ರಂಥಾಲಯಗಳಲ್ಲಿ ಖಾಲಿ ಇರುವ ೧೩ ಮೇಲ್ವಿಚಾರಕರ ಹುದ್ದೆಗಳ ಆಯ್ಕೆಗಾಗಿ ಅರ್ಜಿ ಆಹ್ವಾನಿಸಲಾಗಿದೆ.
ಜಿಲ್ಲೆಯ ವಿಜಯಪುರ ತಾಲೂಕಿನ ೦೧ ಗ್ರಾಮ ಪಂಚಾಯತ್, ಇಂಡಿ ತಾಲೂಕಿನ ೦೩, ನಿಡಗುಂದಿ ತಾಲೂಕಿನ ೦೩, ಮುದ್ದೇಬಿಹಾಳ ತಾಲೂಕಿನ ೦೧, ಸಿಂದಗಿ ತಾಲೂಕಿನ ೦೩ ಗ್ರಾಮ ಪಂಚಾಯತ್ ಗ್ರಂಥಾಲಯ ಸೇರಿದಂತೆ ಒಟ್ಟು ೧೧ ಹೊಸ ಗ್ರಾಮ ಪಂಚಾಯತ್ ಗ್ರಂಥಾಲಯಗಳು ಹಾಗೂ ಹಳೆಯ ೦೨ ಸಿಂದಗಿ ತಾಲುಕಿನ ಕನ್ನೊಳ್ಳಿ ಹಾಗೂ ತಾಳಿಕೋಟೆ ತಾಲೂಕಿನ ಕೊಣ್ಣೂರ ಗ್ರಾಮ ಪಂಚಾಯತ್ ಗ್ರಂಥಾಲಯಗಳಲ್ಲಿ ಖಾಲಿ ಇರುವ ಮೇಲ್ವಿಚಾರಕ ಆಯ್ಕೆಗೆ ಅರ್ಜಿ ಆಹ್ವಾನಿಸಲಾಗಿದೆ.
ಇಂಡಿ ತಾಲೂಕಿನ ಅರ್ಜುಣಗಿ ಬಿ.ಕೆ. ಮೇಲ್ವಿಚಾರಕ ಹುದ್ದೆಯನ್ನು ಪಜಾ (ಇತರೆ), ಸಿಂದಗಿ ತಾಲೂಕಿನ ಕಕ್ಕಳಮೇಲಿ ಮೇಲ್ವಿಚಾರಕ ಹುದ್ದೆ ಸಾ.ಅ.(ಇತರೆ), ವಿಜಯಪುರ ತಾಲೂಕಿನ ಕುಮಟಗಿ ಮೇಲ್ವಿಚಾರಕ ಹುದ್ದೆ ಪ.ಪಂ.(ಇತರೆ), ನಿಡಗುಂದಿ ತಾಲೂಕಿನ ಗಣಿ ಆರ್.ಸಿ. ಮೇಲ್ವಿಚಾರಕ ಹುದ್ದೆ ಪ್ರವರ್ಗ-೧(ಇತರೆ), ಮುದ್ದೇಬಿಹಾಳ ತಾಲೂಕಿನ ನಾಗರಬೆಟ್ಟ ಮೇಲ್ವಿಚಾರಕ ಹುದ್ದೆ ಸಾ.ಅ.(ಗ್ರಾ.ಅ), ಸಿಂದಗಿ ತಾಲೂಕಿನ ನಾಗಾವಿ ಬಿ.ಕೆ. ಮೇಲ್ವಿಚಾರಕ ಹುದ್ದೆ ಪ್ರವರ್ಗ-೨(ಎ)(ಇತರೆ), ನಿಡಗುಂದಿ ತಾಲೂಕಿನ ಬಳಬಟ್ಟಿ ಮೇಲ್ವಿಚಾರಕ ಹುದ್ದೆ ಸಾ.ಅ.(ಅಂ.ವಿ.)(ದೃ.ಮಾ), ಬೇನಾಳ ಆರ್.ಸಿ. ಮೇಲ್ವಿಚಾರಕ ಹುದ್ದೆ ಪ.ಜಾ.(ಮ.ಅ), ಸಿಂದಗಿ ತಾಲೂಕಿನ ರಾಮನಳ್ಳಿ ಮೇಲ್ವಿಚಾರಕ ಹುದ್ದೆ ಸಾ.ಅ.(ಮ.ಅ.), ಇಮಡಿ ತಾಲೂಕಿನ ಸಂಗೋಗಿ ಮೇಲ್ವಿಚಾರಕ ಹುದ್ದೆ ಪ್ರವರ್ಗ-೨(ಬಿ) (ಇತರೆ), ಹಾಗೂ ತಾಳಿಕೊಟೆ ತಾಲೂಕಿನ ಕೊಣ್ಣೂರ ಮೇಲ್ವಿಚಾರಕ ಹುದ್ದೆ ಪ್ರವರ್ಗ-೨(ಎ) (ಮ.ಅ) ವರ್ಗಕ್ಕೆ ಮೀಸಲಿರಿಸಲಾಗಿದೆ.
ಮೇಲ್ವಿಚಾರಕ ಹುದ್ದೆಗೆ ದ್ವೀತಿಯ ಪಿಯುಸಿಯಲ್ಲಿ ಉತ್ತೀರ್ಣರಾಗಿರಬೇಕು ಮತ್ತು ಸರ್ಟಿಫಿಕೇಶನ್ ಕೋರ್ಸ್ ಇನ್ ಲೈಬ್ರರಿ ಸೈನ್ಸ್ನಲ್ಲಿ ಪ್ರಮಾಣ ಪತ್ರ ಪಡೆದಿರಬೇಕು. ಹಾಗೂ ಕನಿಷ್ಠ ಮೂರು ತಿಂಗಳ ಮಾನ್ಯತೆ ಪಡೆದ ಸಂಸ್ಥೆಯಿಂದ ಕಂಪ್ಯೂಟರ್ ಕೊರ್ಸ್ನಲ್ಲಿ ಉತ್ತೀರ್ಣರಾಗಿರಬೇಕು. ಕನಿಷ್ಠ ೧೮ ವರ್ಷ ಹಾಗೂ ಸಾಮಾನ್ಯ ವರ್ಗ ಗರಿಷ್ಠ ೩೫ ವರ್ಷ, ೨ಎ,೨ಬಿ,೩ಎ,೩ಬಿ ೩೮ ವರ್ಷ ಹಾಗೂ ಪ.ಜಾ.ಪ.ಪಂ. ಪ್ರ-೧ ೪೦ ವರ್ಷ ವಯೋಮಿತಿಯೊಳಗಿರಬೇಕು.
ಭರ್ತಿ ಮಾಡಿದ ಅರ್ಜಿಯನ್ನು ಮುಚ್ಚಿದ ಲಕೋಟೆಯಲ್ಲಿ ಹಾಗೂ ಅರ್ಜಿ ಕವರ್ ಮೇಲೆ ಗ್ರಾಮ ಪಂಚಾಯತ್ ಹೆಸರನ್ನು ನಮೂದಿಸಿ ದಿನಾಂಕ : ೦೬-೧೧-೨೦೨೩ ರೊಳಗಾಗಿ ಉಪನಿರ್ದೇಶಕರು, ಜಿಲ್ಲಾ ಕೇಂದ್ರ ಗ್ರಂಥಾಲಯ, ವಿಜಯಪುರ ಕಚೇರಿಗೆ ಸಲ್ಲಿಸಬೇಕು. ಈ ಕುರಿತಂತೆ ಹೆಚ್ಚಿನ ಮಾಹಿತಿಗಾಗಿ ದೂ:೦೮೩೫೨-೨೫೦೬೪೪ ಸಂಖ್ಯೆಗೆ ಸಂಪರ್ಕಿಸುವಂತೆ ಗ್ರಂಥಾಲಯ ಇಲಾಖೆ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Subscribe to Updates
Get the latest creative news from FooBar about art, design and business.
Related Posts
Add A Comment
