Author: editor.udayarashmi@gmail.com

ಸಿಂದಗಿ: ಪುರುಷರಿಗೆ ಮತ್ತು ಮಹಿಳೆಯರಿಗೆ ೩ ತಿಂಗಳಿಗೊಮ್ಮೆ ಬಿಪಿ ಮತ್ತು ಶುಗರ್ ತಪಾಸಣೆ ಮಾಡಬೇಕು. ಇತ್ತಿಚಿನ ದಿನಗಳಲ್ಲಿ ಮಹಿಳೆಯರಿಗೆ ಹೆಚ್ಚಿನ ಸಂಖ್ಯೆಯಲ್ಲಿ ಆರೋಗ್ಯದ ಸಮಸ್ಯೆಗಳಾಗುತ್ತಿವೆ. ಕಾರಣ ದೇಹಕ್ಕೆ ಸಾಕಷ್ಟು ವ್ಯಾಯಾಮ ಸಿಗದೇ ಇರುವುದೇ ಕಾರಣ ಎಂದು ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಎಸ್.ಡಿ ಕುಲಕರ್ಣಿ ಹೇಳಿದರು.ಪಟ್ಟಣದ ಸಂಗಮ ಸಂಸ್ಥೆಯಲ್ಲಿ ಹಮ್ಮಿಕೊಂಡ ಮಾಜಿ ದೇವದಾಸಿ ಮಹಿಳೆಯರಿಗೆ ಆರೋಗ್ಯದ ಕುರಿತು ಅರಿವು ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಇತ್ತೀಚಿನ ದಿನಮಾನಗಳಲ್ಲಿ ಸಣ್ಣ ಮಕ್ಕಳಿಗೆ ಆರೋಗ್ಯದ ಸಮಸ್ಯೆಗಳು ಬಹಳ ಆಗುತ್ತಿದೆ. ಆದ್ದರಿಂದ ಮನೆಯಲ್ಲಿ ತಯ್ಯಾರಿ ಮಾಡಿದ ಆಹಾರವನ್ನು ಮಕ್ಕಳಿಗೆ ಕೊಡಬೇಕು. ಸ್ತನ ಕ್ಯಾನ್ಸರ್ ಮತ್ತು ಗರ್ಭಕ್ಯಾನ್ಸರ್ ಬಗ್ಗೆ ಮಹಿಳೆಯರಿಗೆ ಮಾಹಿತಿ ನೀಡಿದರು. ಮಕ್ಕಳಿಗೆ ಕೊಡುವ ಚುಚ್ಚುಮದ್ದನ್ನು ಸರಿಯಾದ ಸಮಯಕ್ಕೆ ಕೊಡಿಸಬೇಕು ಎಂದು ತಿಳಿಸಿದರು.ಈ ವೇಳೆ ಸಂಸ್ಥೆಯ ಸಹನಿರ್ದೇಶಕ ಸಿಂತಿಯಾ ಡಿ,ಮೆಲ್ಲೊರ, ಹಣಮಂತ ಕಲಾಲ ಮಾತನಾಡಿದರು.ಇದೇ ಸಂದರ್ಭದಲ್ಲಿ ಬೌರವ್ವ ನಾಯ್ಕೋಡಿ, ಇಂದ್ರಾಬಾಯಿ ಮಾದರ್, ತೇಜಸ್ವಿನಿ ಹಳ್ಳದಕೆರಿ, ಬಸವರಾಜ್ ಬಿಸನಾಳ್, ಬಸಮ್ಮ ಅಲ್ಲಾಪುರ ಸೇರಿದಂತೆ ಮಹಿಳಾ ಸ್ವಸಹಾಯ ಸಂಘದ ಸದಸ್ಯರು ಮತ್ತು…

Read More

ಸಿಂದಗಿ: ಕಾಂತರಾಜ ಆಯೋಗದ ಜಾತಿ ಗಣತಿ ವರದಿಯನ್ನು ಅಂಗೀಕರಿಸಿ ಜಾರಿಗೆ ತರಬೇಕು. ಮುಸ್ಲಿಮರ ಮೀಸಲಾತಿ ೨ಬಿ ಪ್ರಮಾಣವನ್ನು ಶೇ. ೮ಕ್ಕೆರಿಸಬೇಕು ಎಂದು ಎಸ್‌ಡಿಪಿಐ ತಾಲೂಕಾಧ್ಯಕ್ಷ ಮೊಹ್ಮದ ಜಾಫರ್ ಇನಾಮದಾರ ಹೇಳಿದರು.ಪಟ್ಟಣದ ಅಂಬೇಡ್ಕರ್ ವೃತ್ತದಲ್ಲಿ ಹಮ್ಮಿಕೊಂಡ ಪ್ರತಿಭಟನೆಯಲ್ಲಿ ಮಾತನಾಡಿದ ಅವರು, ೨ಬಿ ಮೀಸಲಾತಿ ಹೆಚ್ಚಳ ಮಾಡಬೇಕು ಎನ್ನುವ ನಿಟ್ಟಿನಲ್ಲಿ ಅ.೧೩ರಂದು ರಾಜ್ಯಾದ್ಯಂತ ಜಿಲ್ಲೆ, ತಾಲೂಕು ಮತ್ತ ಹೋಬಳಿ ಮಟ್ಟದಲ್ಲಿ ಎಸ್‌ಡಿಪಿಐ ಪಕ್ಷದ ವತಿಯಿಂದ ಈ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿದೆ ಎಂದರು.ಇದೇ ಸಂದರ್ಭದಲ್ಲಿ ತಾಲೂಕಾ ಉಪಾಧ್ಯಕ್ಷ ಸಯ್ಯದ್ ನಾಗಾವಿ, ಸಾಮಾಜಿಕ ಹೋರಾಟಗಾರ ಸಲೀಂ ಅಲ್ದಿ, ಮಾಜಿ ಸೈನಿಕ ಸಂಘದ ಮುಖಂಡರ ಶಬ್ಬೀರಪಟೇಲ ಬಿರಾದಾರ, ಮೊಹಮ್ಮದ್ ಜಕರಿಯಾ, ಮೊಹಮ್ಮದ್‌ಹನೀಫ ಅಳ್ಳೋಳ್ಳಿ, ಮಶ್ಯಾಕ್ ವಡ್ಡಳ್ಳಿ, ತೌಸೀಫ್ ಭಾಗೇವಾಡಿ, ಜುಬೇರ ಮುರಡಿ, ಇರ್ಫಾನ ಅತ್ತಾರ ಸೇರಿದಂತೆ ಅನೇಕರು ಇದ್ದರು.

Read More

ಸಿಂದಗಿ: ರೈತನ ಮುಖದ ಮೇಲಿನ ನಗು ಅಳಿಸಿ ಕಣ್ಣೀರು ಹಾಕಿಸುತ್ತಿರುವ ಮಳೆರಾಯ. ಮುಂಗಾರು ಶುರುವಾಗಿ ಬಿತ್ತನೆ ಮಾಡಿದ ನಂತರ ಸಮಯಕ್ಕೆ ಸರಿಯಾಗಿ ಮಳೆ ಬಾರದೇ ಇರುವುದರಿಂದ ಬೆಳೆಗಳು ಸಂಪೂರ್ಣ ನಾಶವಾಗಿ ರೈತರ ಕಂಗಾಲಾಗುತ್ತಿದ್ದಾರೆ. ಇದನ್ನು ಗಮನಿಸಿ ರೈತರ ಉಳಿವಿಗಾಗಿ ಮೋರಟಗಿ ಗ್ರಾಮದ ಹತ್ತಿರದ ಹಂಚಿನಾಳ ಗ್ರಾಮದಲ್ಲಿ ಶ್ರೀ ಅಮೋಘಸಿದ್ದೇಶ್ವರ ಪರಮ ಭಕ್ತ ಭೂತಾಳಿಸಿದ್ದ ವಡೆಯರ ೧೧ ದಿನಗಳ ಕಾಲ ಉಪವಾಸ ಅನುಷ್ಠಾನಕ್ಕೆ ಕುಳಿತಿದ್ದಾರೆ.ಇವರು ಸೋಮವಾರದಿಂದ ಉಪವಾಸ ಕುಳಿತಿದ್ದು ಇಂದಿಗೆ ಐದು ದಿನಗಳು ಕಳೆದಿವೆ. ಶ್ರೀಗುರು ಸೋಮಲಿಂಗ, ಶ್ರೀ ಅಮೋಘಸಿದ್ಧ, ಶ್ರೀ ಶಾರಸಿದ್ದೇಶ್ವರ,ಶ್ರೀ ಗುರುಸಿದ್ದೇಶ್ವರ, ಶ್ರೀ ಭೂತಾಳಿಸಿದ್ದೇಶ್ವರ ಐದು ದೇವರುಗಳ ಮೇಲೆ ಹರಕೆ ಹೊತ್ತು ೧೧ ದಿನಗಳ ಯಾವುದೇ ರೀತಿಯ ಆಹಾರ ಸೇವನೆ ಮಾಡದೇ ಕೇವಲ ನೀರಿನ ಮೇಲೆ ಉಪವಾಸ ಮಾಡುತಿದ್ದೇನೆ. ಮಳೆ ಖಂಡಿತ ಬರುತ್ತೆ ದೇವರು ಒಳ್ಳೆಯದು ಮಾಡುತ್ತಾನೆ ಎಂದು ಮಾತನಾಡದೆ ಬಂದಂತ ಭಕ್ತರಿಗೆ ಬಿಳಿ ಹಾಳೆಯ ಮೇಲೆ ಬರೆಯುವ ಮೂಲಕ ಸಂದೇಶ ತಿಳಿಸುತಿದ್ದಾರೆ.ಹಂಚಿನಾಳ ಗ್ರಾಮದಲ್ಲಿ ಮಳೆಗಾಗಿ ಅನುಷ್ಠಾನ ಕುಳಿತಿರುವ ಸುದ್ದಿ…

Read More

ವಿಜಯಪುರ: ಕೆಎಸ್‌ಕ್ಯುಎಎಸಿ ವತಿಯಿಂದ ನ್ಯಾಷನಲ್ ಮೀನ್ಸ್-ಕಮ್ ಮೆರಿಟ್ ವಿದ್ಯಾರ್ಥಿವೇತನ ಎನ್‌ಎಂಎಂಎಸ್ ಪರೀಕ್ಷೆಯು ಡಿ.೧೭ರಂದು ನಡೆಯಲಿದ್ದು, ಈ ಪರೀಕ್ಷೆಗೆ ನೊಂದಾಯಿಸಲು ಶಾಲಾ ಲಾಗಿನ್‌ನಲ್ಲಿ ಆನ್‌ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.ಜಿಲ್ಲೆಯ ಸರ್ಕಾರಿ, ಅನುದಾನಿತ ಹಾಗೂ ಸ್ಥಳೀಯ ಸಂಸ್ಥೆಗಳಲ್ಲಿ ೮ನೇ ತರಗತಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ನೀಡುವ ಮೂಲಕ ಹಿಂದುಳಿದ ಪ್ರತಿಭಾವಂತ ವಿದ್ಯಾರ್ಥಿಗಳು ಮಾಧ್ಯಮಿಕ ಹಂತದಲ್ಲಿ ಶಾಲೆಯಿಂದ ಹೊರಗುಳಿಯುವಂತೆ ತಡೆಯುವುದು ಹಾಗೂ ವಿದ್ಯಾಬ್ಯಾಸದ ಮುಂದವರಿಕೆಗೆ ಪ್ರೇರೆಪಿಸುವುದು ಈ ಯೋಜನೆ ಉದ್ದೇಶವಾಗಿದೆ.ಆಸಕ್ತ ವಿದ್ಯಾರ್ಥಿಗಳು ಶಾಲೆಯ ಮುಖ್ಯ ಶಿಕ್ಷಕರು-ಪ್ರಾಂಶುಪಾಲಕರ ಮೂಲಕ ಅರ್ಜಿ ಸಲ್ಲಿಸಬೇಕು. ಅರ್ಜಿ ಸಲ್ಲಿಸಲು ದಿನಾಂಕ : ೧೭-೧೦-೨೦೨೩ ಕೊನೆಯ ದಿನಾಂಕವಾಗಿದ್ದು, ಈ ಕುರಿತಂತೆ ಹೆಚ್ಚಿನ ಮಾಹಿತಿಗಾಗಿ ಶ್ರೀಮತಿ ಎ.ಪಿ.ಚವ್ಹಾಣ ನೋಡಲ್ ಅಧಿಕಾರಿಗಳು ಮೊ: ೯೪೪೮೬೪೫೦೬೬ ಸಂಖ್ಯೆಗೆ ಸಂಪರ್ಕಿಸುವಂತೆ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ ಪ್ರಾಚಾರ್ಯರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Read More

ಅಧಿಕಾರಿಗಳಿಗೆ ಜಿಪಂ ಸಿಇಓ ರಾಹುಲ್ ಶಿಂಧೆ ಸೂಚನೆ ವಿಜಯಪುರ: ಜಿಲ್ಲಾ ಪಂಚಾಯತಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಹುಲ್ ಶಿಂಧೆ ಅವರು ಜಿಲ್ಲಾ ತೋಟಗಾರಿಕೆ ಉಪ ನಿರ್ದೇಶಕರ ಕಚೇರಿಗೆ ಧಿಡೀರ ಭೇಟಿ ನೀಡಿ, ಇಲಾಖೆಯ ವಿವಿಧ ಯೋಜನೆಗಳ ಪ್ರಗತಿಯನ್ನು ಪರಿಶೀಲನೆ ನಡೆಸಿದರು.ಮಹಾತ್ಮ ಗಾಂಧಿ ನರೇಗಾ ಯೋಜನೆ, ರಾಷ್ಟ್ರೀಯ ತೋಟಗಾರಿಕೆ ಮಿಷನ್, ಸಮಗ್ರ ತೋಟಗಾರಿಕೆ ಅಭಿವೃದ್ಧಿ ಯೋಜನೆ, ಮರುವಿನ್ಯಾಸಗೊಳಿಸಿದ ಹವಾಮಾನ ಆಧಾರಿತ ಬೆಳೆ ವಿಮೆ ಯೋಜನೆ (ದ್ರಾಕ್ಷಿ,ದಾಳಿಂಬೆ,ಲಿAಬೆ) ಪ್ರಧಾನ ಮಂತ್ರಿ ಫಸಲ ಭೀಮಾ ಯೋಜನೆ ಲಾಭವನ್ನು ಜಿಲ್ಲೆಯ ಅರ್ಹ ರೈತರಿಗೆ ತಲುಪಿಸಲು ಎಲ್ಲ ಅಧಿಕಾರಿಗಳು ಶ್ರಮಿಸಬೇಕು ಮತ್ತು ರೈತರ ಅನುಕೂಲಕ್ಕಾಗಿ ಕಾರ್ಯನಿರ್ವಹಿಸಬೇಕು ಎಂದು ಅಧಿಕಾರಿಗಳಿಗೆ ತಿಳಿಸಿದರು.ವಿಜಯಪುರ ಜಿಲ್ಲೆಯ ೧೨ ತಾಲೂಕುಗಳನ್ನು ಬರ ಘೋಷಣೆಯಾದ ಹಿನ್ನೆಲೆಯಲ್ಲಿ ರೈತರು ವಲಸೆ ಹೋಗದಂತೆ ತಡೆಯಲು ಹಾಗೂ ಅವರ ಜೀವನಮಟ್ಟ ಸುಧಾರಿಸುವ ನಿಟ್ಟಿನಲ್ಲಿ ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯಡಿ ಗುರಿಗಿಂತ ಹೆಚ್ಚಿನ ಮಾನವ ದಿನಗಳನ್ನು ಸೃಜಿಸುವ ಮೂಲಕ ಗ್ರಾಮೀಣ ಜನರಿಗೆ ಹೆಚ್ಚು ಅನುಕೂಲ ಕಲ್ಪಿಸಲು ಅಧಿಕಾರಿಗಳಿಗೆ ತಿಳಿಸಿದರು.ಸಮಗ್ರ…

Read More

ವಿಜಯಪುರ: ಇಸ್ರೇಲ್‌ನಿಂದ ಸುರಕ್ಷಿತವಾಗಿ ವಿಜಯಪುರಕ್ಕೆ ಮರಳಿದ ವಿಜಯಪುರದ ಕೃಷಿ ವಿಶ್ವವಿದ್ಯಾಲಯದ ಹವಾಮಾನ ವಿಭಾಗದ ಸಹಾಯಕ ಪ್ರಾಧ್ಯಾಪಕ ಸುಮೇಶ ಕೆ.ಜಿ.ಅವರನ್ನು ಶುಕ್ರವಾರ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಅಧ್ಯಕ್ಷರಾದ ಜಿಲ್ಲಾಧಿಕಾರಿ ಟಿ.ಭೂಬಾಲನ್ ಅವರು ಬರಮಾಡಿಕೊಂಡು ಕುಶಲೋಪರಿ ವಿಚಾರಿಸಿದರು.ಇಸ್ರೇಲ್‌ದಿಂದ ತಾಯ್ನಾಡಿಗೆ ಮರಳಲು ಯುದ್ಧಪೀಡಿತ ಪ್ರದೇಶದಿಂದ ವಿವರಗಳನ್ನು ಪಡೆದುಕೊಂಡು, ಸುರಕ್ಷಿತವಾಗಿ ಆಗಮಿಸಲು ಸಹಾಯ ಮಾಡಿದ ವಿಜಯಪುರ ಜಿಲ್ಲಾಡಳಿತ ಹಾಗೂ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರಕ್ಕೆ ಸುಮೇಶ ಕೆ.ಜಿ.ಅವರು ಕೃತಜ್ಞತೆ ಸಲ್ಲಿಸಿದರು.

Read More

ಆಲಮೇಲ: ತಾಲ್ಲೂಕಿನ ಕಡಣಿ ಗ್ರಾಮದ ಕು. ನವ್ಯ ರಮೇಶ ಕತ್ತಿ ಅವರನ್ನು ಈ ಬಾರಿಯ ವಿಶ್ವವಿಖ್ಯಾತ ಮೈಸೂರು ದಸರಾ ಕವಿಗೋಷ್ಠಿಗೆ ಆಯ್ಕೆ ಮಾಡಲಾಗಿದೆ.ಅಕ್ಟೋಬರ್ ೧೮ರಂದು ಮೈಸೂರಿ ವಿವಿಯ ಸಭಾಂಗಣದಲ್ಲಿ ನಡೆಯುವ ಚಿಗುರು ಕವಿಗೋಷ್ಠಿಯಲ್ಲಿ ಕವಿತೆ ವಾಚಿಸಲು ಅವಕಾಶ ನೀಡಲಾಗಿದೆ ಎಂದು ದಸರಾ ಕವಿಗೋಷ್ಠಿ ಉಪಸಮಿತಿಯ ಕಾರ್ಯಾಧ್ಯಕ್ಷೆ ಡಾ.ವಿಜಯಕುಮಾರಿ ಕರಿಕಲ್ ತಿಳಸಿದ್ದಾರೆ.ಕು.ನವ್ಯ ಕತ್ತಿ ಪ್ರಥಮ ಪಿಯುಸಿಯಲ್ಲಿ ಓದುತ್ತಿದ್ದು ಈಗಾಗಲೇ ನವ್ಯ ಸ್ಟೋರೀಸ್, ದ ಮ್ಯಾಜಿಕ್ ಕೇವ್ ಅಂಡ್ ಅದರ ಸ್ಟೋರೀಸ್ ಎಂಬ ಎರಡು ಮಕ್ಕಳ ಕಥಾ ಸಂಕಲನಗಳನ್ನು ಪ್ರಕಟಿಸಿದ್ದಾಳೆ.

Read More

ಬಸವನಬಾಗೇವಾಡಿ: ಬರದ ನಾಡು ಎಂದು ಕುಖ್ಯಾತಿ ಪಡೆದಿರುವ ವಿಜಯಪುರ ಜಿಲ್ಲೆಗೆ ಈಗ ಕರೆಂಟಿಗೂ ಬರ ಬಂದೊದಗಿದೆ. ಈ ವರ್ಷ ಬೀಕರ ಬರಗಾಲ ಆವರಿಸಿ ಮುಂಗಾರು ಬೆಳೆ ಹಾಳಾಗುತ್ತಿದ್ದರೂ ಸಹ ಸಮರ್ಪಕ ವಿದ್ಯುತ್ ಕೊಡದೆ ಸರಕಾರ ರೈತರ ಬದುಕಿನೊಂದಿಗೆ ಚೆಲ್ಲಾಟವಾಡುತ್ತಿದೆ. ಕೂಡಲೆ ಹೊರರಾಜ್ಯದಿಂದಾದರೂ ಖರೀದಿಸಿ ಕೃಷಿಗೆ ನೀರುಣಿಸಲು ಸಮರ್ಪಕ ವಿದ್ಯುತ್ ಒದಗಿಸಬೇಕೆಂದು ಅಖಂಡ ಕರ್ನಾಟಕ ರೈತ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅರವಿಂದ ಕುಲಕರ್ಣಿ ರಾಜ್ಯ ಸರಕಾರದ ವಿರುದ್ದ ಹರಿ ಹಾಯ್ದಿದ್ದಾರೆ.ಮನಗೂಳಿ ಹೆಸ್ಕಾಂ ಇಲಾಖೆಗೆ ರೈತರೊಂದಿಗೆ ತೆರಳಿ ಇಲಾಖೆಯ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರಾದ ಜಿ.ವ್ಹಿ.ಸಂಪನ್ನವರ ಇವರಿಗೆ ಶುಕ್ರವಾರದಂದು ಮನವಿ ಸಲ್ಲಿಸಿದರು.ಈ ಸಂದರ್ಭದಲ್ಲಿ ಮಾತನಾಡಿದ ಅವರು, ಈಗ ಕಾಲುವೆಗಳಿಗೆ ನೀರು ಹರಿಸಲು ಐ.ಸಿ.ಸಿ ಅಧ್ಯಕ್ಷ ಆರ್.ಬಿ.ತಿಮ್ಮಾಪುರ ರವರು ಎಲ್ಲಾ ಕಾಲುವೆಗಳಿಗೆ ನೀರು ಹರಿಸಲು ವಾರಬಂದಿ ಬದಲಾಯಿಸಿ ಒಂದು ಕಡೆ ಆದೇಶ ನೀಡಿದ್ದಾರೆ. ಇನ್ನೊಂದು ಕಡೆ ಮಸೂತಿ ಜಾಕವೇಲ್ ಬಳಿ ವಿದ್ಯುತ್ ಸರಬರಾಜು ಮಾಡುವ ಸಿಟಿ ಉಪಕರಣ ಸುಟ್ಟಿದೆ ಎಂದು ನೀರಾವರಿ ಇಲಾಖೆ ಅಧಿಕಾರಿಗಳು ಸಬೂಬು…

Read More

ವಿಜಯಪುರ: ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಉತ್ತಮ ಸಾಧನೆ ಮಾಡಿದ ಕ್ರೀಡಾಪಟುಗಳಿಗೆ ಸರಕಾರ ನೇಮಕಾತಿಯಲ್ಲಿ ಹೆಚ್ಚಿನ ಆದ್ಯತೆ ನೀಡಬೇಕು ಎಂದು ವಿಜಯಪುರ ಜಿಲ್ಲಾ ವ್ಹಾಲಿಬಾಲ್ ಅಸೋಸಿಯೇಷನ್ ಅಧ್ಯಕ್ಷ ಬಿ. ಎಂ. ಕೋಕರೆ ಆಗ್ರಹಿಸಿದ್ದಾರೆ.ವಿಜಯಪುರ ನಗರದ ಬಿ.ಎಲ್.ಡಿ.ಇ ಸಂಸ್ಥೆಯ ಶ್ರೀ ಸಂಗನಬಸವ ಮಹಾಸ್ವಾಮೀಜಿ ಔಷಧಿಯ ಮಹಾವಿದ್ಯಾಲಯ ಮತ್ತು ಸಂಶೋಧನೆ ಕೇಂದ್ರದ ಆಶ್ರಯದಲ್ಲಿ ಬುಧವಾರ ಪ್ರಾರಂಭವಾದ ರಾಜೀವ ಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯದ ಕಲಬುರಗಿ ವಲಯ ಪುರುಷರ ಹಾಗೂ ಮಹಿಳೆಯರ ವಿಭಾಗದ ವ್ಹಾಲಿಬಾಲ್ ಪಂದ್ಯಾವಳಿ ಉದ್ಘಾಟಿಸಿ ಅವರು ಮಾತನಾಡಿದರು.ವಿಜಯಪುರ ಜಿಲ್ಲೆಯ ಜನ ವ್ಹಾಲಿಬಾಲ್ ಪ್ರೀಯರಾಗಿದ್ದಾರೆ. ಈ ಹಿಂದೆಯೂ ವಿಜಯಪುರದಲ್ಲಿ ಆರೇಳು ರಾಷ್ಟ್ರೀಯ ವ್ಹಾಲಿಬಾಲ್ ಪಂದ್ಯಾವಳಿಗಳನ್ನು ಯಶಸ್ವಿಯಾಗಿ ಸಂಘಟಿಸಿದ್ದೇವೆ.  ಈಗ ಬಿ.ಎಲ್.ಡಿ.ಇ ಸಂಸ್ಥೆಯೂ ಕೂಡ ಅತ್ಯುತ್ತಮ ಪಂದ್ಯಾವಳಿ ಆಯೋಜಿಸಿದೆ. ಎಲ್ಲ ಕ್ರೀಡಾಪಟುಗಳು ಮತ್ತು ತರಬೇತುದಾರರು ದೇಶದ ಸಲುವಾಗಿ ಆಟವಾಡಬೇಕು.  ವೈಯಕ್ತಿಕ ಹಿತಾಸಕ್ತಿಗಿಂತ ದೇಶದ ಹಿತಾಸಕ್ತಿಯನ್ನು ಗಮನದಲ್ಲಿ ಇಟ್ಟುಕೊಳ್ಳಬೇಕು. ಇದೇ ರೀತಿ ರಾಜ್ಯ ಸರಕಾರ ಕೂಡ ಪಂಜಾಬ ಮಾದರಿಯಲ್ಲಿ ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಉತ್ತಮ ಸಾಧನೆ…

Read More

ಬೆಂಗಳೂರು: ಆಮ್ ಆದ್ಮಿ ಪಕ್ಷದ ರಾಜ್ಯಾಧ್ಯಕ್ಷ ಡಾ.ಮುಖ್ಯಮಂತ್ರಿ ಚಂದ್ರು ಅವರು ಇದೇ ಅ.15ರಂದು ವಿಜಯಪುರ ಜಿಲ್ಲೆಗೆ ಆಗಮಿಸಲಿದ್ದು, ದೇವರಹಿಪ್ಪರಗಿ ತಾಲೂಕಿನ ಸುಕ್ಷೇತ್ರ ಕೊಂಡಗುಳಿ ಗ್ರಾಮದಲ್ಲಿ ಶ್ರೀ ದೇವಿ ಪುರಾಣ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ವಿಜಯಪುರ ಜಿಲ್ಲಾ ಆಪ್ ಜಿಲ್ಲಾಧ್ಯಕ್ಷ ಭೋಗೇಶ್ ಸೋಲಾಪುರ್ ತಿಳಿಸಿದ್ದಾರೆ.ಶುಕ್ರವಾರ ನಗರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂದು ಮುಖ್ಯಮಂತ್ರಿ ಚಂದ್ರು ಅವರ ಅಧ್ಯಕ್ಷತೆಯಲ್ಲಿ ನಡೆಯುವ ಈ ಕಾರ್ಯಕ್ರಮದಲ್ಲಿ ಆಮ್ ಆದ್ಮಿ ಪಾರ್ಟಿಯ ರಾಜ್ಯ ಸಂಘಟನಾ ಕಾರ್ಯದರ್ಶಿ ಹಾಗೂ ಉತ್ತರ ಕರ್ನಾಟಕ ವಲಯದ ಉಸ್ತುವಾರಿ ಅರ್ಜುನ್ ಹಲಗಿಗೌಡರ್, ರಾಜ್ಯ ಉಪಾಧ್ಯಕ್ಷರು ಹಾಗೂ ವಿಜಯಪುರ ಜಿಲ್ಲಾ ಉಸ್ತುವಾರಿಗಳಾದ ರೋಹನ್ ಐನಾಪುರ್ ಮತ್ತಿತರ ಮುಖಂಡರು ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದರು.ಅ.15 ರವಿವಾರ ಬೆಳಗ್ಗೆ 11:00 ಗಂಟೆಗೆ ಮುಖ್ಯಮಂತ್ರಿ ಚಂದ್ರು ಅವರು,ನಗರದ ಜಲನಗರದಲ್ಲಿರುವ ಪಕ್ಷದ ಕಚೇರಿಯಲ್ಲಿ ಪತ್ರಿಕಾಗೋಷ್ಠಿ ನಡೆಸಲಿದ್ದಾರೆ. ತದನಂತರ ಜಿಲ್ಲೆಯ ಆಪ್ ಪಕ್ಷದ ನೂತನ ಪದಾಧಿಕಾರಿಗಳನ್ನ ಉದ್ದೇಶಿಸಿ ಸಭೆ ನಡೆಸಲಿದ್ದಾರೆ. ಮಧ್ಯಾಹ್ನ 3:00 ಘಂಟೆಗೆ ದೇವರಹಿಪ್ಪರಗಿ ತಾಲೂಕು ಕೊಂಡಗುಳಿ…

Read More