ಆಲಮೇಲ: ತಾಲ್ಲೂಕಿನ ಕಡಣಿ ಗ್ರಾಮದ ಕು. ನವ್ಯ ರಮೇಶ ಕತ್ತಿ ಅವರನ್ನು ಈ ಬಾರಿಯ ವಿಶ್ವವಿಖ್ಯಾತ ಮೈಸೂರು ದಸರಾ ಕವಿಗೋಷ್ಠಿಗೆ ಆಯ್ಕೆ ಮಾಡಲಾಗಿದೆ.
ಅಕ್ಟೋಬರ್ ೧೮ರಂದು ಮೈಸೂರಿ ವಿವಿಯ ಸಭಾಂಗಣದಲ್ಲಿ ನಡೆಯುವ ಚಿಗುರು ಕವಿಗೋಷ್ಠಿಯಲ್ಲಿ ಕವಿತೆ ವಾಚಿಸಲು ಅವಕಾಶ ನೀಡಲಾಗಿದೆ ಎಂದು ದಸರಾ ಕವಿಗೋಷ್ಠಿ ಉಪಸಮಿತಿಯ ಕಾರ್ಯಾಧ್ಯಕ್ಷೆ ಡಾ.ವಿಜಯಕುಮಾರಿ ಕರಿಕಲ್ ತಿಳಸಿದ್ದಾರೆ.
ಕು.ನವ್ಯ ಕತ್ತಿ ಪ್ರಥಮ ಪಿಯುಸಿಯಲ್ಲಿ ಓದುತ್ತಿದ್ದು ಈಗಾಗಲೇ ನವ್ಯ ಸ್ಟೋರೀಸ್, ದ ಮ್ಯಾಜಿಕ್ ಕೇವ್ ಅಂಡ್ ಅದರ ಸ್ಟೋರೀಸ್ ಎಂಬ ಎರಡು ಮಕ್ಕಳ ಕಥಾ ಸಂಕಲನಗಳನ್ನು ಪ್ರಕಟಿಸಿದ್ದಾಳೆ.
Related Posts
Add A Comment