ಸಿಂದಗಿ: ಕಾಂತರಾಜ ಆಯೋಗದ ಜಾತಿ ಗಣತಿ ವರದಿಯನ್ನು ಅಂಗೀಕರಿಸಿ ಜಾರಿಗೆ ತರಬೇಕು. ಮುಸ್ಲಿಮರ ಮೀಸಲಾತಿ ೨ಬಿ ಪ್ರಮಾಣವನ್ನು ಶೇ. ೮ಕ್ಕೆರಿಸಬೇಕು ಎಂದು ಎಸ್‌ಡಿಪಿಐ ತಾಲೂಕಾಧ್ಯಕ್ಷ ಮೊಹ್ಮದ ಜಾಫರ್ ಇನಾಮದಾರ ಹೇಳಿದರು.
ಪಟ್ಟಣದ ಅಂಬೇಡ್ಕರ್ ವೃತ್ತದಲ್ಲಿ ಹಮ್ಮಿಕೊಂಡ ಪ್ರತಿಭಟನೆಯಲ್ಲಿ ಮಾತನಾಡಿದ ಅವರು, ೨ಬಿ ಮೀಸಲಾತಿ ಹೆಚ್ಚಳ ಮಾಡಬೇಕು ಎನ್ನುವ ನಿಟ್ಟಿನಲ್ಲಿ ಅ.೧೩ರಂದು ರಾಜ್ಯಾದ್ಯಂತ ಜಿಲ್ಲೆ, ತಾಲೂಕು ಮತ್ತ ಹೋಬಳಿ ಮಟ್ಟದಲ್ಲಿ ಎಸ್‌ಡಿಪಿಐ ಪಕ್ಷದ ವತಿಯಿಂದ ಈ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿದೆ ಎಂದರು.
ಇದೇ ಸಂದರ್ಭದಲ್ಲಿ ತಾಲೂಕಾ ಉಪಾಧ್ಯಕ್ಷ ಸಯ್ಯದ್ ನಾಗಾವಿ, ಸಾಮಾಜಿಕ ಹೋರಾಟಗಾರ ಸಲೀಂ ಅಲ್ದಿ, ಮಾಜಿ ಸೈನಿಕ ಸಂಘದ ಮುಖಂಡರ ಶಬ್ಬೀರಪಟೇಲ ಬಿರಾದಾರ, ಮೊಹಮ್ಮದ್ ಜಕರಿಯಾ, ಮೊಹಮ್ಮದ್‌ಹನೀಫ ಅಳ್ಳೋಳ್ಳಿ, ಮಶ್ಯಾಕ್ ವಡ್ಡಳ್ಳಿ, ತೌಸೀಫ್ ಭಾಗೇವಾಡಿ, ಜುಬೇರ ಮುರಡಿ, ಇರ್ಫಾನ ಅತ್ತಾರ ಸೇರಿದಂತೆ ಅನೇಕರು ಇದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

