ವಿಜಯಪುರ: ಇಸ್ರೇಲ್‌ನಿಂದ ಸುರಕ್ಷಿತವಾಗಿ ವಿಜಯಪುರಕ್ಕೆ ಮರಳಿದ ವಿಜಯಪುರದ ಕೃಷಿ ವಿಶ್ವವಿದ್ಯಾಲಯದ ಹವಾಮಾನ ವಿಭಾಗದ ಸಹಾಯಕ ಪ್ರಾಧ್ಯಾಪಕ ಸುಮೇಶ ಕೆ.ಜಿ.ಅವರನ್ನು ಶುಕ್ರವಾರ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಅಧ್ಯಕ್ಷರಾದ ಜಿಲ್ಲಾಧಿಕಾರಿ ಟಿ.ಭೂಬಾಲನ್ ಅವರು ಬರಮಾಡಿಕೊಂಡು ಕುಶಲೋಪರಿ ವಿಚಾರಿಸಿದರು.
ಇಸ್ರೇಲ್‌ದಿಂದ ತಾಯ್ನಾಡಿಗೆ ಮರಳಲು ಯುದ್ಧಪೀಡಿತ ಪ್ರದೇಶದಿಂದ ವಿವರಗಳನ್ನು ಪಡೆದುಕೊಂಡು, ಸುರಕ್ಷಿತವಾಗಿ ಆಗಮಿಸಲು ಸಹಾಯ ಮಾಡಿದ ವಿಜಯಪುರ ಜಿಲ್ಲಾಡಳಿತ ಹಾಗೂ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರಕ್ಕೆ ಸುಮೇಶ ಕೆ.ಜಿ.ಅವರು ಕೃತಜ್ಞತೆ ಸಲ್ಲಿಸಿದರು.
Related Posts
Add A Comment